ಮಡಿಕೇರಿ ಜ.16 : ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು 29 ರಿಂದ 25 ಕ್ಕೆ ಇಳಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪಂಚಾಯತ್ ರಾಜ್ ನಿರ್ದೇಶಕರು ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಹಾಗೂ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿಗಳಿಗೆ ಆಕ್ಷೇಪ ಸಲ್ಲಿಸಿದೆ. ಈ ಹಿಂದೆ ಇದ್ದ 29 ಕ್ಷೇತ್ರಗಳಿಗೆ 5 ನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ 34 ಜಿ.ಪಂ ಕ್ಷೇತ್ರಗಳನ್ನು ರಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಖ್ಯೆಯೂ ಕೂಡ ಚದುರಿರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರವನ್ನು ವಿಂಗಡಿಸುವ ಸಂದರ್ಭ ಮತದಾರರು ಬಹಳಷ್ಟು ದೂರ ಕ್ರಮಿಸುವುದು ಅವೈಜ್ಞಾನಿಕ ರೀತಿಯ ಪ್ರಕ್ರಿಯೆಯಾಗಿರುತ್ತದೆ. ಭೌಗೋಳಿಕ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ 29 ಕ್ಷೇತ್ರಗಳನ್ನು ಪರಿಷ್ಕರಿಸುವ ಸಂದರ್ಭ ಕನಿಷ್ಟ 5 ಸ್ಥಾನಗಳನ್ನು ಹೆಚ್ಚುವರಿ ಮಾಡಿ ಒಟ್ಟು 34 ಕ್ಷೇತ್ರವನ್ನು ಮಾಡಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆಯನ್ನು ಪರಿಗಣಿಸದೇ ಇದ್ದು 29…
ಲೇಖಕ: admin
ಮಡಿಕೇರಿ ಜ.16 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ , ಎನ್.ಎಸ್.ಎಸ್ ಘಟಕ , ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿ ಡಿವೈನ್ ಪಾರ್ಕ್ ಟ್ರಸ್ಟ್ , ವಿವೇಕ ಜಾಗೃತ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ‘ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ ರಾಷ್ಟ್ರೀಯ ಯುವ ದಿನ ‘ ಹಾಗೂ ‘ ಯುವ ಸಪ್ತಾಹದ ‘ಪ್ರಯುಕ್ತ ವಿದ್ಯಾರ್ಥಿಗಳಿಗೆ ‘ಕಿವಿಮಾತು’ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಉಪನ್ಯಾಸಕರು ಹಾಗೂ ಡಿವೈನ್ ಪಾರ್ಕ್ ಟ್ರಸ್ಟನ H2 ಅಧಿಕಾರಿ ಪದ್ಮಲತಾ ರಾವ್ ಮಾತನಾಡಿ, ” ದೇಶ ಭಕ್ತ ಸಂತ ಎಂದು ಹೆಮ್ಮೆಯಿಂದ ಕರೆಸಿ ಕೊಳ್ಳುವ ಸ್ವಾಮಿ ವಿವೇಕಾನಂದರ ಜೀವನ , ಆದರ್ಶಗಳು , ಯುವ ಜನಾಂಗದ ಬೆಳವಣಿಗೆ, ವಿದ್ಯಾರ್ಥಿಗಳ ಕಲಿಕೆ, ಏಕಾಗ್ರತೆ, ವೈಚಾರಿಕತೆಗಳಿಗೆ ವಿವೇಕವಾಣಿ, ವಿವೇಕ ಸಂದೇಶಗಳ…
ಮಡಿಕೇರಿ ಜ.16 : ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ವಾಯುಪುತ್ರ ಭವನದಲ್ಲಿ “ಶ್ರೀಪಂಚಮುಖಿ ವಾಯುಪುತ್ರ” ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಸುಮಾರು 9 ಅಡಿ ಎತ್ತರದ ಆಂಜನೇಯನಿಗೆ ಮಕ್ಕಳಿಂದ ಅಭಿಷೇಕ ಮತ್ತು ಅರ್ಚಕರಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಶೈಕ್ಷಣಿಕ ಪ್ರಗತಿಗೆ ಊರಿನಲ್ಲಿ ಜ್ಞಾನದೇಗುಲವಿರಬೇಕು, ಅದೇ ರೀತಿ ಊರು ಸುಭಿಕ್ಷವಾಗಿರಲು ದೇವಾಲಯಗಳಿರಬೇಕು ಎಂದರು. ಒಗ್ಗಟ್ಟಿನ ಬಲದಿಂದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಅಭ್ಯುದಯವನ್ನು ಸಾಧಿಸುತ್ತಿದೆ. ಸಂಘದ ಮೂಲಕ ದೇವರ ಮೂರ್ತಿಗಳನ್ನು ಸ್ಥಾಪಿಸಿ ಶ್ರದ್ಧೆ ಮತ್ತು ಭಕ್ತಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವೆಂದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಮಾತನಾಡಿ ಉತ್ತಮ ಕಾರ್ಯಗಳ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. “ಶ್ರೀ ಪಂಚಮುಖಿ ವಾಯುಪುತ್ರ” ಮೂರ್ತಿಯನ್ನು ಕೆತ್ತಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕಾರ್ಕಳದ ಗುಣವಂತೇಶ್ವರ ಭಟ್…
ನಾಪೋಕ್ಲು ಜ.16 : ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಮನ್ವಯತೆಯಿಂದ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ಕೊಡವ ಸಮಾಜದಲ್ಲಿ ನಡೆದ ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದಿನದ ಹೆಚ್ಚಿನ ಸಮಯವನ್ನು ಮಕ್ಕಳು ಪೋಷಕರೊಂದಿಗೆ ಕಳೆಯುತ್ತಾರೆ. ಹೀಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರಿಗಿಂತಲೂ ಪೋಷಕರ ಪಾತ್ರ ಮಹತ್ವದ್ದು ಎಂದರು. ಪೋಷಕರು ಮಕ್ಕಳು ಕಲಿಯುವ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಗೌರವವನ್ನು ಹೊಂದಿರಬೇಕು. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದ ಬಳಿಕ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಪೋಷಕರು ಸುಮ್ಮನಾಗಬಾರದು. ಶಾಲೆಗೆ ಕಳುಹಿಸಿದ ನಂತರ ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಿದರೆ ಮಾತ್ರ ಜವಾಬ್ದಾರಿಯುತ ಪೋಷಕರಾಗಲು ಸಾಧ್ಯ. ಗುರು ಹಿರಿಯರನ್ನು ಗೌರವಿಸುವಂತೆ ಮಕ್ಕಳಿಗೆ ತಿಳಿ ಹೇಳುವ ಕರ್ತವ್ಯ ಪೋಷಕರದ್ದು ಎಂದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ…
ಮಡಿಕೇರಿ ಜ.16 : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಾವೀನ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವೈದ್ಯ ಅಮೃತ್ ನಾಣಯ್ಯ ಹೇಳಿದರು. ಜೆಸಿ ವಿದ್ಯಾ ಸಂಸ್ಥೆಯ 33ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಷಕರಿಗೂ, ಶಿಕ್ಷಕರಿಗೂ ತಮ್ಮ ಅನುಭವದ ಮೂಲಕ ಜ್ಞಾನದ ಬೆಳಕನ್ನು ಚೆಲ್ಲಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಬೆಳಗಿ ಮಾತನಾಡಿ, ಸಮಯದ ಮಹತ್ವವನ್ನು ಅರಿತು ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೋಟ್ರಂಗಡ ಸುಬ್ರಮಣಿ, (ಕರೆಸ್ಪಾಂಡೆಂಟ್ ) ವರದಿಗಾರ ಮಚ್ಚಮಾಡ ಸುರೇಶ್, ಆಡಳಿತಾಧಿಕಾರಿ ಕೋಟ್ರಂಗಡ ತಿಮ್ಮಯ್ಯ , ಟ್ರಸ್ಟಿಗಳಾದ ಕೋಟ್ರಂಗಡ ಯಶೋಧ, ಕೋಟ್ರಂಗಡ ಸುನಿಲ್ ಸುಬ್ಬಯ್ಯ, ಮಚ್ಚಮಾಡ ಅಪ್ಪಣ್ಣ , ಮುಖ್ಯಶಿಕ್ಷಕ ಎನ್. ಬಿ. ಸತೀಶ್ ಹಾಗೂ ಕೆ.ಕೆ. ಸಿಂಧೂರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನರ ಮನಸೂರೆಗೊಂಡಿತು. ಕೋಟ್ರಂಗಡ ತಿಮ್ಮಯ್ಯ ಸರ್ವರಿಗೂ ಸ್ವಾಗತ ಕೋರಿದರು. ಮಕ್ಕಳ ಕಾರ್ಯಕ್ರಮಕ್ಕೆ ಜನರಿಂದ ಪ್ರಶಂಸೆಗಳ ಸುರಿಮಳೆಯೇ ಸುರಿಯಿತು. ಶಿಕ್ಷಕ ವೃಂದದವರು ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕ ಪ್ರಸನ್ನ ಹಾಗೂ ಚಂಚಲ ಕಾರ್ಯಕ್ರಮದ …
ಮಡಿಕೇರಿ ಜ.16 : ಕೊಡಗು ಮಹಾಬೋದಿ ಪತ್ತಿನ ಸಹಕಾರ ಸಂಘದ ವತಿಯಿಂದ 2023 ರ ಕ್ಯಾಲಂಡರ್ ನ್ನು ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಸಿ.ಸತೀಶ್ ಬಿಡುಗಡೆ ಗೊಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಸಿ.ಸತೀಶ್, ಸಂಘ ಪ್ರಸ್ತುತ 1850 ಸದಸ್ಯರನ್ನು ಹೊಂದಿದ್ದು, ಸದಸ್ಯರಿಗೆ ಅನೇಕ ಸೌಲಭ್ಯ ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವ ಆಂದೋಲನ ನಡೆಸಿ ಸದಸ್ಯರ ಸಂಖ್ಯೆಯನ್ನು 25,000 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು. ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಎಸ್.ಬಿ.ಜಯಪ್ಪ, ಕೆ.ಬಿ.ರಾಜು, ಎಸ್.ಎ.ಪ್ರತಾಪ್, ಹೆಚ್.ಎನ್.ಶಾರದ, ಗಾಯಿತ್ರಿ, ನರಸಿಂಹ, ಜೆ.ಎಲ್.ಜನಾರ್ದನ, ಎನ್.ಎಸ್.ಗೀತಾ, ಮೋಹನ್ ಮೌರ್ಯ, ಹೆಚ್.ಎಂ.ಕೃಷ್ಣ, ಕೆ.ಪಳನಿ ಪ್ರಕಾಶ್, ಶೋಭಾ ದೊರೈ ಹಾಜರಿದ್ದರು.
ಮಡಿಕೇರಿ ಜ.16 : ಯಾವುದೇ ಒಂದು ಜನಾಂಗದ ಜೀವಸೆಲೆಯೇ ಅದರ ಭಾಷೆ. ಭಾಷೆ ಉಳಿದರೆ ಮಾತ್ರ ಜನಾಂಗದ ಉಳಿವು ಸಾಧ್ಯ ಎಂದು ಬೆಂಗಳೂರು ಕೊಡವ ಸಾಮಾಜ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ಹನ್ನೆರಡನೇ ವೆಬಿನಾರ್’ನಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಂತ ಪುರಾತನ, ವಿಶಿಷ್ಟವಾದ ಕೊಡವ ಭಾಷೆಯು, ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ ಎಂದರು. ಜನಾಂಗ ಉಳಿಯಬೇಕಾದರೆ ಭಾಷೆಯನ್ನು ಬೆಳೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಬ್ಬ ಕೊಡವರೂ ಜಾಗರೂಕರಾಗಿ ತಮ್ಮ ಮನೆಗಳಲ್ಲಿ ಬಂದುಗಳ ಜೊತೆಯಲ್ಲಿ ಕೊಡವ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಮಕ್ಕಳಲ್ಲಿ ಭಾಷೆಯ ಅಭಿಮಾನವನ್ನು ಜಾಗೃತಿಗೊಳಿಸುವತ್ತ ಪೋಷಕರು ಗಮನ ಹರಿಸಬೇಕು ಎಂದರು. ಕೊಡವರು ಎಲ್ಲೇ ನೆಲೆಸಿದ್ದರೂ ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪಾಲನೆಗೆ ಒತ್ತುಕೊಡಬೇಕು. ಸಾಧ್ಯವಾದಷ್ಟು ಹಬ್ಬಗಳ ಆಚರಣೆಗೆ ತಮ್ಮ ಗುರುಮನೆಗೆ ಬರುವಂತಾಗಬೇಕು. ಹೀಗಾದಾಗ ಮಾತ್ರ ಮುಂದಿನ ಪೀಳಿಗೆಗೆ ಶ್ರೀಮಂತ ಕೊಡವ ಸಂಸ್ಕೃತಿಯನ್ನು ಉಳಿಸಿಕೊಡಲು ಸಾಧ್ಯ ಎಂದರು. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ…
ಸುಂಟಿಕೊಪ್ಪ, ಜ.16 : ಸುಂಟಿಕೊಪ್ಪದ ತಮಿಳು ಸಂಘ ಹಾಗೂ ಪೊಂಗಲ್ ಹಾಗೂ ಸಂಕ್ರಾಂತಿ ಆಚರಣಾ ಸಮಿತಿಯ ವತಿಯಿಂದ 23ನೇ ವರ್ಷದ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾದಾಪುರದ ಮಧುರಮ್ಮ ಬಡಾವಣೆಯ ಶ್ರೀವೃಕ್ಷೋದ್ಭವ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಅಲಂಕೃತ ಭವ್ಯಮಂಟಪದಲ್ಲಿ ಕುಳ್ಳಿರಿಸಿ, ಕಳಶವನ್ನು ಹೊತ್ತ ಮಹಿಳೆಯರು ಹಾಗೂ ಪುರುಷರು ಮತ್ತು ನಾದಸ್ವರದೊಂದಿಗೆ ನಗರ ಪ್ರದಕ್ಷಿಣೆ ನಡೆಯಿತು. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ತೆರಳಿದ್ದರು. ಪಟಾಕಿ ಸಿಡಿಸಿ ಪೊಂಗಲ್ ಆಚರಣೆಗೆ ಮೆರಗು ನೀಡಿದ್ದರು. ದೇವಸ್ಥಾನ ಟ್ರಸ್ಟಿ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್, ಆಚರಣಾ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ತಮಿಳ್ ಸಂಘದ ಅಧ್ಯಕ್ಷ ವಿಘ್ನೇಶ್ ಸೇರಿದಂತೆ ಪದಾಧಿಕಾರಿಗಳು ಕಳಸಗಳನ್ನು ಮಹಿಳೆಯರಿಗೆ ಹೊತ್ತು ಕೊಡುವ ಮೂಲಕ ಚಾಲನೆ ನೀಡಿದರು. ಸುಂಟಿಕೊಪ್ಪದ ಶ್ರೀಚಾಮುಂಡೇಶ್ವರಿ ದೇವಾಲಯವನ್ನು ತಳಿರು ತೊರಣಗಳಿಂದ ಅಲಂಕರಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜಾ ಕೈಂಕರ್ಯವನ್ನು ಆರ್ಚಕರಾದ ಮಂಜುನಾಥ ಉಡುಪ ಅವರ ನೇತೃತ್ವದಲ್ಲಿ ನಡೆಸಲಾಯಿತು. ಮಹಾಮಂಗಳಾರತಿ ನಂತರ…
ಮಡಿಕೇರಿ ಜ.16 : ಮೂರ್ನಾಡು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೂರ್ನಾಡುವಿನ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಮಡಿಕೇರಿ ಕ್ಷೇತ್ರದ ಮತ್ತೊಬ್ಬ ಆಕಾಂಕ್ಷಿ ಯುವ ಮುಖಂಡ ಡಾ.ಮಂಥರ್ ಗೌಡ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಯನ್ನು ಮಾಡದೆ ಬಿಜೆಪಿ ಕಡೆಗಣಿಸಿದೆ. ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಮತದಾರರು ಬದಲಾವಣೆ ತರಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಆಕಾಂಕ್ಷಿ ಸಮಾಜ ಸೇವಕ ಹರಪನಹಳ್ಳಿ ರವೀಂದ್ರ ಮಾತನಾಡಿ, ಕೊಡಗು ಜಿಲ್ಲೆ ಪಕೃತಿದತ್ತ ಸಂಪನ್ಮೂಲಗಳನ್ನು ಹೊಂದಿದ್ದು, ಅವನ್ನು ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ಬಳಕೆ ಮಾಡಲು ಯೋಜನೆ ರೂಪಿಸುವಲ್ಲಿ ಈಗಿನ ಜನಪ್ರತಿನಿಧಿಗಳು ವಿಫಲರಾಗಿದ್ದು, ಈ ನಿಟ್ಟಿನಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಬದಲಾವಣೆ ತರಬೇಕು ಎಂದು…
ಮಡಿಕೇರಿ ಜ.16 : ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಆರತಿ(24) ಮೃತ ಯುವತಿ. ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯೊಬ್ಬರ ಹೆಲ್ಮೆಟ್ ಮತ್ತು ಅನತಿ ದೂರದಲ್ಲಿ ಬೈಕ್ ಕೂಡ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.






