ಲೇಖಕ: admin

ಮಡಿಕೇರಿ NEWS DESK ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.20 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಕೊಡಂದೇರ, 10.30ಕ್ಕೆ ತಂಬುಕುತ್ತೀರ ಮತ್ತು ಚೇಂದoಡ, ಮಧ್ಯಾಹ್ನ 12ಕ್ಕೆ ಬೊಜ್ಜಂಗಡ ಮತ್ತು ಚಿರಿಯಾಪಂಡ ಹಾಗೂ 2.30 ಗಂಟೆಗೆ ಕನ್ನಂಡ ಮತ್ತು ಅಲ್ಲಂಗಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ಚೀಕಂಡ, 10ಕ್ಕೆ ಬಲ್ಲಚಂಡ ಮತ್ತು ಸಿದ್ದಂಡ, 11ಕ್ಕೆ ಬೊಳ್ಳೇರ ಮತ್ತು ಅಣ್ಣಳಮಾಡ (ಪೂಕೊಳ) ಹಾಗೂ ಮಧ್ಯಾಹ್ನ 2 ಗಂಟೆಗೆ ಐಚೋಡಿಯಂಡ ಮತ್ತು ಚೆಕ್ಕೇರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 9.45 ಗಂಟೆಗೆ ಮಲಚ್ಚೀರ ಮತ್ತು ಕಟ್ಟೆರ (ಅರಮೇರಿ), 10.30 ಕ್ಕೆ ಮಾಚಿಮಂಡ ಮತ್ತು ಕೊಕ್ಕೆಂಗಡ, 11 ಕ್ಕೆ ಅಚ್ಚಪಂಡ ಮತ್ತು ಚೇಂದಿರ, ಮಧ್ಯಾಹ್ನ 12ಕ್ಕೆ ಮೀದೇರಿರ ಮತ್ತು ಮುಕ್ಕಾಟಿರ (ಮೂವತ್ತೊಕ್ಲು), 1ಕ್ಕೆ ಕುಪ್ಪಂಡಮಾಡ ಮತ್ತು…

Read More

ಮಡಿಕೇರಿ NEWS DESK ಏ.19 : ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ ಮುಕಳಮಾಡ ರತು ಕಾಯಿಮನೆ, ಪೊನ್ನಂಪೇಟೆ ತಾಲೂಕು, ಇವರ ಕುಟುಂಬದವರಿಗೆ ಸರಕಾರದಿಂದ ನೀಡುವ ಪರಿಹಾರ ಮತ್ತದ ಉಳಿಕೆ ₹15 ಲಕ್ಷಗಳ ಚೆಕ್ಕನ್ನು ಇಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಸ್ತಾಂತರಿಸಿದರು.   ಈ ಹಿಂದೆ ಆನೆ ದಾಳಿಯಾದ ಸಂದರ್ಭದಲ್ಲಿ ಮೃತನ ಕುಟುಂಬಕ್ಕೆ ರೂ 5 ಲಕ್ಷದ ಚೆಕ್ಕನ್ನು ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭ ಮಿದೇರಿರ ನವೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.19 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಕೂತಂಡ ಮತ್ತು ಅಪ್ಪುಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡಕ್ಕೆ 7 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪುಮಣಿಯಂಡ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಗಳಿಸಿತು. ಕೂತಂಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. ಕಂಗಾoಡ ಮತ್ತು ಮಾದೆಯಂಡ (ಎಂ.ಬಾಡಗ) ನಡುವಿನ ಪಂದ್ಯದಲ್ಲಿ ಕಂಗಾoಡ ತಂಡ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾದೆಯಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಸೇರಿಸಿತು. ಕಂಗಾAಡ 4.4 ಓವರ್ ಗಳಲ್ಲಿ…

Read More

ಮಡಿಕೇರಿ NEWS DESK ಏ.19 : ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೋಷಪೂರಿತ ವಿಚಾರ ಮಂಡನೆ ಅಸಾಧ್ಯ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಜಿ.ಆರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂದಿಗೂ ಇಂಡಿಯಾ ಒಕ್ಕೂಟ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ದೋಷಪೂರಿತ ಕ್ಷೇತ್ರ ಪುನರ್ ವಿಂಗಡಣೆೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2010 ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರಾದರೂ ಸಫಲರಾಗಿರಲಿಲ್ಲ. 2023 ರಲ್ಲಿ ಅಂಗೀಕಾರವಾಗಿದ್ದ 543 ಲೋಕಸಭೆ ಸ್ಥಾನಗಳಿಗೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದರೆ ಇಂದಿನ ಇಂಡಿಯಾ ಒಕ್ಕೂಟ ಬೆಂಬಲ ನೀಡುತ್ತಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರ ಸರಕಾರ 2011 ರಲ್ಲಿ ನಡೆಸಿದ ಜಾತಿ…

Read More

ಮಡಿಕೇರಿ ಏ.18 NEWS DESK :  ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುವಲ್ಲಿ ಯುಕೊ ಸಂಘಟನೆಯ ಪಾತ್ರವನ್ನು ಪರಿಗಣಿಸಿ ಪೊನ್ನಂಪೇಟೆಯ ವಸಂತನಗರದ ಶ್ರೀ ಇಗ್ಗುತ್ತಪ್ಪ ಕೊಡವ ಕೂಟದ ವತಿಯಿಂದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಅರುವತೊಕ್ಲುವಿನ ಭರಣಿ ಸಭಾಂಗಣದಲ್ಲಿ ಕೂಟದ ಅಧ್ಯಕ್ಷರಾದ ಚೇಂದಿರ ಅಪ್ಪಯ್ಯ ಅವರ ನೇತೃತ್ವದಲ್ಲಿ ನಡೆದ ಕೂಟದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಂಜು ಚಿಣ್ಣಪ್ಪ ಅವರಿಗೆ ಚಿನ್ನದ ಸ್ಮರಣಿಕೆ ನೀಡಿ ಸನ್ಮಾನಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಚೇಂದಿರ ಅಪ್ಪಯ್ಯ, ಎಲ್ಲರೂ ಸ್ವಂತಕ್ಕಾಗಿ ದುಡಿಯುವಲ್ಲಿ ನಿರತರಾಗಿರುವಾಗ ಸಮಾಜ ಹಾಗು ಜನಾಂಗಕ್ಕಾಗಿ ದುಡಿಯುವವರನ್ನು ಗೌರವದಿಂದ ಕಾಣಬೇಕಿದೆ. ಈ ನಿಟ್ಟಿನಲ್ಲಿ ಕೊಡವ ಜನಾಂಗದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಮಂಜು ಚಿಣ್ಣಪ್ಪ ಹಾಗೂ ಅವರ ಬಳಗದ ಕೊಡುಗೆ ಅಪಾರವಾದುದು. ಕೊಡವ ಅಭಿವೃದ್ಧಿ ನಿಗಮದ ಯಶಸ್ಸು ಸಾಮಾನ್ಯ ವಿಷಯವಲ್ಲ, ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ನಮಗೆ ಹೆಮ್ಮೆಯೆನಿಸಿದೆ ಎಂದು ಹೇಳಿದರು. ಹಿರಿಯರಾದ ಕಳ್ಳೆಂಗಡ ಶಂಬು ಮಾತನಾಡಿ, ಕೊಡವ ಅಭಿವೃದ್ಧಿ…

Read More

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ ಇಂದಿನ ಆಧುನಿಕರಣದ ಸಾಧನೆಗಳ ಮೇಲೆ ಮಾತ್ರ ಆಧಾರವಾಗಿಲ್ಲ, ಅದು ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ‘ಪರಂಪರೆಯ’ ಮೇಲೆಯು ಕಟ್ಟಲಾಗಿದೆ. ಈ ‘ಪರಂಪರೆ’ ಎಂಬ ಪದವು ನಮ್ಮ ಪೂರ್ವಿಕರಿಂದ ನಮಗೆ ಬಂದಿರುವ ಸಂಪತ್ತು ಎಂಬ ಅರ್ಥವನ್ನು ಒಳಗೊಂಡಿದೆ. ಇದು ಕೇವಲ ಕಟ್ಟಡಗಳು ಅಥವಾ ಸ್ಮಾರಕಗಳಷ್ಟೇ ಅಲ್ಲ, ಸಂಸ್ಕೃತಿ, ಭಾಷೆ, ಆಚರಣೆಗಳು, ಕಲೆ, ಸಾಹಿತ್ಯ ಮತ್ತು ನೈಸರ್ಗಿಕ ಸಂಪತ್ತುಗಳನ್ನೂ ಒಳಗೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು “ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ”ಎಂದೂ ಕರೆಯಲಾಗುತ್ತದೆ.ಈ ದಿನವನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಿಂದ ಗುರುತಿಸಲ್ಪಟ್ಟ ಅದ್ಭುತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿಸಲಾಗಿದೆ.  ಈ ವಿಶ್ವ…

Read More

ಮಡಿಕೇರಿ ಏ.18 NEWS DESK : ಜಾಗತಿಕ ಮಟ್ಟದಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ, ಅವರ ಉದ್ಯೋಗ ನೇಮಕಾತಿಗೆ ನೆರವಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ವೃತ್ತಿಪರ ಸಂಸ್ಥೆ ಅಡೆಕೊ ಗ್ರೂಪ್‍ನ ಅಂಗ ಸಂಸ್ಥೆಯಾಗಿರುವ ಅಡೆಕೊ ಇಂಡಿಯಾ ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಕರ್ನಾಟಕದಲ್ಲಿ ಬಹು ಹಂತಗಳ ಗ್ರಾಮೀಣ ಉದ್ಯೋಗ ಅವಕಾಶ ಉಪಕ್ರಮಕ್ಕೆ ಚಾಲನೆ ನೀಡಿದೆ. ಮುಂದಿನ ಮೂರು ತಿಂಗಳಲ್ಲಿ 2500 ರಿಂದ 3000 ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಅಡೆಕೊ ಇಂಡಿಯಾ ಕಾರ್ಯಪ್ರವೃತ್ತವಾಗಿದ್ದು, ಕೊಡಗು ಸಮಾಜದ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಚಾಲನೆ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ಸ್, ತಯಾರಿಕೆ, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‍ಎಸ್‍ಐ), ದೂರಸಂಪರ್ಕ, ಎಂಜಿನಿಯರಿಂಗ್ ಮತ್ತು ಇತರ ಪ್ರಮುಖ ವಲಯಗಳಲ್ಲಿ 450-500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿದೆ. ಎರಡು ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ನಿರ್ಮಲಾ ಎಚ್.ಪಿ, ಗೋಣಿಕೊಪ್ಪಲಿನ…

Read More

ಕುಶಾಲನಗರ ಏ.18 NEWS DESK :  ಕುಶಾಲನಗರ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಅವರ 300 ನೇ ಜಯಂತಿ ಆಚರಿಸಲಾಯಿತು. ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿದರು. ಕೈವಾರ ತಾತಯ್ಯ ಅವರ ಕುರಿತು ಪ್ರವಚನ ಮಾಡಿದ ಕೈವಾರ ಕ್ಷೇತ್ರದ ಮಂಕಾಲ ಶ್ರೀ ಹರಿಶರ್ಮ ಅವರು, ಪರಹಿತಕ್ಕಾಗಿ ಜೀವಿಸಿದ ಬುದ್ದ, ಬಸವ, ಕೈವಾರ ತಾತಯ್ಯ, ಮಹಾವೀರ ಮೊದಲಾದ ಮಹಾತ್ಮರನ್ನು ಪೀಳಿಗೆಯಿಂದ ಪೀಳಿಗೆಗೆ ಜನಸಮುದಾಯ ಅರಿಯಬೇಕು. ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಪಾಲಿಸಬೇಕು. ಅಹಿಂಸೆಯ ಜೀವನ ಕಟ್ಟಬೇಕು ಎಂಬುದು ಪ್ರಾತಸ್ಮರಣೀಯರ ಆಶಯವಾಗಿತ್ತು ಎಂದು ಶ್ರೀಹರಿಶರ್ಮಾ ಹೇಳಿದರು. ಕುಶಾಲನಗರ ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಆರ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಿಜ ಸಮಾಜದ ಮಂದಿ ಒಗ್ಗಟ್ಟಾಗಬೇಕಾಗಿದೆ ಎಂದರು. ಬಲಿಜ ಸಂಘದ ಗೌರವ ಅಧ್ಯಕ್ಷ ಆರ್.ಬಾಬು ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚಿನ ಬಲಿಜ ಕುಟುಂಬಗಳಿವೆ. ಕುಶಾಲನಗರದಲ್ಲಿ ಪ್ರತ್ಯೇಕ…

Read More

ಕುಶಾಲನಗರ ಏ.18 NEWS DESK  :  ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕುಶಾಲನಗರ ಘಟಕ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಲೆ ಅಗ್ನಿಶಾಮಕ ಠಾಣಾಧಿಕಾರಿ ಎನ್.ಎ.ರಂಜಿತ್ ಚಾಲನೆ ನೀಡಿದರು. ಅಗ್ನಿ ಅನಾಹುತಗಳ ವಿಧಗಳು, ಅವುಗಳನ್ನು ನಿಯಂತ್ರಿಸುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಠಾಣೆಯ ಸಹಾಯಕ ಅಧಿಕಾರಿ ಲತೇಶ್ ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಥಳೀಯ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯಕ. ಅಪಾಯ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೂಡಲೆ ಮಾಹಿತಿ ನೀಡಬಹುದಾಗಿದೆ. ಅಗ್ನಿ ಅನಾಹುತಗಳನ್ನು ಎದುರಿಸುವ ವಿಧಾನಗಳ ಬಗ್ಗೆ ಕನಿಷ್ಠ ಅರಿವು ಹೊಂದುವ ಅಗತ್ಯವಿದೆ ಎಂದು ತಿಳಿಸಿದ ಅವರು, ಸಾಮಾನ್ಯ ಅಗ್ನಿ‌ ಅನಾಹುತ, ಅನಿಲಗಳಿಂದ ಉಂಟಾಗುವ ಅನಾಹುತ ಸೇರಿದಂತೆ ವಿವಿಧ ಬಗೆಯ ಅಗ್ನಿ ‌ಅವಘಡಗಳ‌…

Read More

ಮಡಿಕೇರಿ ಏ.18 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.19 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 8.30 ಗಂಟೆಗೆ ಕೂತಂಡ ಮತ್ತು ಅಪ್ಪುಮಣಿಯಂಡ, 10ಕ್ಕೆ ಕಾಂಗಂಡ ಮತ್ತು ಮಾದೆಯಂಡ (ಎಂ.ಬಾಡಗ), ಮಧ್ಯಾಹ್ನ 12ಕ್ಕೆ ಮೂಕೊಂಡ ಮತ್ತು ಅಯ್ಯಲಾಪಂಡ, 1ಕ್ಕೆ ಮಲ್ಲಜ್ಜೀರ ಮತ್ತು ಚಾರಿಮಂಡ, 2ಕ್ಕೆ ಪೆಬ್ಬಟ್ಟಿರ ಮತ್ತು ಅಪ್ಪುಡ ಹಾಗೂ 3 ಗಂಟೆಗೆ ಮುಂಡಚಾಡಿರ ಮತ್ತು ಮುಕ್ಕಾಟಿರ (ಹರಿಹರ ಬೆಳ್ಳೂರು) *ಮೈದಾನ 2*  ಬೆಳಿಗ್ಗೆ 9 ಗಂಟೆಗೆ ಬೋವೇರಿಯಂಡ ಮತ್ತು ಮುಕ್ಕಾಟಿರ (ಕುಂಜಿಲಗೇರಿ), 10ಕ್ಕೆ ಮಾದೇಟಿರ ಮತ್ತು ಬೊಳ್ಳಚೆಟ್ಟಿರ, 11ಕ್ಕೆ ಕರವಂಡ ಮತ್ತು ಅರಮಣಮಾಡ (ಬೇಗೂರು), ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತ ತೀತಿರ (ಹುದಿಕೇರಿ), 1ಕ್ಕೆ ಮುಂಡ್ಯೋಳಂಡ ಮತ್ತು ಮಾಚೆಟ್ಟಿರ (ಬಾಳುಗೋಡು), 2ಕ್ಕೆ ಸಣ್ಣುವಂಡ ಮತ್ತು ಬಡುಮಂಡ ಹಾಗೂ 3 ಗಂಟೆಗೆ ಮಲ್ಲಚ್ಚಿರ ಮತ್ತು ಬೇರೆರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 10…

Read More