ಲೇಖಕ: admin

ಕುಶಾಲನಗರ ಸೆ.16 NEWS DESK : ಪ್ರವಾದಿ ಮುಹಮ್ಮದ್ ಪೈಗಂಬರ್ ರ 1499ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆ ಕುಶಾಲನಗರದ ಮುಸಲ್ಮಾನ ಸಹೋದರರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌಹಾರ್ದ ಜಾಥಾ ನಡೆಯಿತು. ಮೆರವಣಿಗೆಯಲ್ಲಿ ಶಾಂತಿ ಸೌಹಾರ್ದತೆಯ ಘೋಷಣೆಗಳನ್ನು ಕೂಗುವ ಮೂಲಕ ಸಮಾಜಕ್ಕೆ ಸಾಹೋದರ್ಯತೆ ಹಾಗೂ ಸಾಮರಸ್ಯದ ಸಂಕೇತವನ್ನು ಸಾರಿದರು. ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ದಫ್ ಪ್ರದರ್ಶಿಸಲಾಯಿತು. ಮೆರವಣಿಗೆಯು ದಾರುಲ್ ಮದ್ರಸದಿಂದ ಪ್ರಾರಂಭವಾಗಿ ಕಾರ್ಯಪ್ಪ ವೃತ್ತದ ಮೂಲಕ ಹಾದುಹೋಗಿ, ದಂಡಿನ‌ಪೇಟೆಗೆ ತೆರಳಿ ನಂತರ ದಾರುಲ್ ಉಲೂಂ ಮದ್ರಸಕ್ಕೆ ಹಿಂದಿರುಗಲಾಯಿತು. ಈ ಸಂದರ್ಭ ದಾರುಲ್‌ ಉಲೂಂ ಮದ್ರಸದ ಅಧ್ಯಕ್ಷರು, ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ನೂರುಲ್ ಇಹ್ಸಾನ್ ಯೂತ್ ಕಮಿಟಿ ಬಾರವಾಹಿಗಳು, ಊರಿನ ಪ್ರಮುಖರು ಹಾಗೂ ಮುಸಲ್ಮಾನ ಸಹೋದರರು ಇದ್ದರು.

Read More

ಮಡಿಕೇರಿ ಸೆ.16 NEWS DESK : ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿ ಗ್ರಾಮದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಜನ್ಮ ದಿನಾಚರಣೆಯ ಈದ್ ಮಿಲಾದನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Read More

ಪೊನ್ನಂಪೇಟೆ ಸೆ.16 NEWS DESK : ವಿರಾಜಪೇಟೆ ತಾಲೂಕು ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ.) ಸಮಿತಿಗೆ ನೂತನ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ 6 ಪ್ರಮುಖರನ್ನು ಸರ್ಕಾರದಿಂದ ನಾಮನಿರ್ದೇಶನಗೊಳಿಸಲಾಗಿದೆ. ಕೆದಮುಳ್ಳೂರು ಗ್ರಾಮದ ಮಾಳೇಟ್ಟಿರ ಪ್ರಶಾಂತ್ ಉತ್ತಪ್ಪ, ವಿರಾಜಪೇಟೆ ವಿಜಯನಗರದ ಮರ್ವಿನ್ ಲೋಬೊ (ಸಾಮಾನ್ಯ), ಐಮಂಗಲ ಗ್ರಾಮದ ಕೋಳುಮಂಡ ರಫೀಕ್ (ಅಲ್ಪಸಂಖ್ಯಾತ), ಆರ್ಜಿ ಗ್ರಾಮದ ಪಿ.ಎನ್. ಶಶಿಧರನ್ (ಹಿಂದುಳಿದ ವರ್ಗ), ಚೆನ್ನಯ್ಯನಕೋಟೆಯ ಹೆಚ್‌.ಬಿ. ಗಣೇಶ್ (ಪರಿಶಿಷ್ಟ ಜಾತಿ)ಮತ್ತು ವಿರಾಜಪೇಟೆಯ ತೋರೆರ ಜಿ.ಪೊನ್ನಕ್ಕಿ (ಮಹಿಳೆ)  ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕೆಡಿಪಿ ಸದಸ್ಯರಾಗಿದ್ದಾರೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಸರಕಾರದ 20 ವಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಈ ಸಮಿತಿಗೆ ಇವರನ್ನು ಅಧಿಕಾರೇತರ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನಗೊಳಿಸಲಾಗಿದೆ. ಈ ಕುರಿತು ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಸೆ.11 ರಿಂದ ಜಾರಿಗೆ ಬರುವಂತೆ ಇವರ ಅಧಿಕಾರಾವಧಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Read More

ನಾಪೋಕ್ಲು ಸೆ.16 NEWS DESK : ಎಮ್ಮೆಮಾಡು ವ್ಯಾಪ್ತಿಯಲ್ಲಿನ ಅರಬ್ ಒಕ್ಕೂಟ ದಿಂದ ದುಬೈ ನಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈದ್ ಆಚರಣೆಯಲ್ಲಿ ಪ್ರವಾದಿಯ ಜೀವನದ ಕುರಿತು ಹಾಜಿ ಅಹ್ಮದ್ ಉಸ್ತಾದ್ ಜಲೀಲ್ ನಿಝಾಮಿ ಹಂಝ ಬಾರಕೊಲ್ಲಿ ಸಂದೇಶ ಭಾಷಣ ಮಾಡಿದರು. ನಂತರ ಎಮ್ಮೆಮಾಡು ವಿನ ದಫ್ ತಂಡದಿಂದ ದಫ್ ಪ್ರದರ್ಶನ ನೀಡಿಸಲಾಯಿತು. ಈ ಸಂದರ್ಭ ಈ.ಸಿ.ಕಾರ್ಗೋ ಮಾಲೀಕ ಕೆ.ಎಂ.ಅಶ್ರಫ್, ಅಧ್ಯಕ್ಷರಾದ ಬಿ.ಯು.ಹಂಝ ಸೇರಿದಂತೆ ಎಮ್ಮೆಮಾಡು ವಿನ ಅನಿವಾಸಿ ಒಕ್ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು ಸೆ.16 NEWS DESK : ಸೋಮವಾರಪೇಟೆ ಯ ಚೌಡ್ಲು ಸ.ಹಿ.ಪ್ರಾ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ದಿ ತಿರ್ಪೂಗಾರರಾದ ಯಡೂರು ಆನಂದ ಅವರನ್ನು ಸನ್ಮಾನಿಸಲಾಯಿತು. ಚೌಡ್ಲು ಸಾಂದೀಪಿನಿ ಶಾಲೆಯಲ್ಲಿ ನಡೆದ ಸೋಮವಾರಪೇಟೆ ವಲಯ ಮಟ್ಟದ ಕ್ರೀಡಾಕೂಟದ ಸಭಾ ಕರ್ಯಕ್ರಮದಲ್ಲಿ ಗಣ್ಯರು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಾಂದೀಪನಿ ಶಾಲೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರುಗಳು, ಶಿಕ್ಷಕ ವೃಂದ, ಚೌಡ್ಲು ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ವಲಯದ ಅಧ್ಯಕ್ಷರು, ಕಾರ್ಯದಶಿ೯, ದೈಹಿಕ ಶಿಕ್ಷಣ ಶಿಕ್ಷಕರು ಮಾತನಾಡಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ವರದಿ : ದುಗ್ಗಳ ಸದಾನಂದ.  

Read More

ಮಡಿಕೇರಿ ಸೆ.16 NEWS DESK : ಕುಶಾಲನಗರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ರಚಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲಾಯಿತು. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಟರಾಜ್, ಸಹಾಯಕ ಕೃಷಿ ಅಧಿಕಾರಿ ವೀರಣ್ಣ ಕುಮಾರ್, ಕೂಡುಮಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ್ ನಾಯಕ್ , ಪಿಡಿಓ ಎಂ.ಆರ್. ಸಂತೋಷ್ ಹಾಗೂ ಸಿ.ಆರ್.ಪಿ.ಶಾಂತಕುಮಾರ್ ಅವರ ನೇತೃತ್ವದಲ್ಲಿ ಹಾಗೂ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಡಿಗೆ ಡಯಟ್ ಪ್ರಾಂಶುಪಾಲ ಎಂ.ಚಂದ್ರಕಾಂತ್, ಬಿಇಓ ಎಸ್.ಭಾಗ್ಯಮ್ಮ, ಗ್ರಾ.ಪಂ.ಅಧ್ಯಕ್ಷ ಗಿರೀಶ್, ಪಿಡಿಓ ಮಂಜುಳಾ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಪ್ರಚುರಪಡಿಸಲಾಯಿತು. ಗ್ರಾ.ಪಂ. ಸದಸ್ಯರು ಮತ್ತು ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಕಾಲೇಜಿನ‌‌ ಮುಖ್ಯಸ್ಥರು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಜತೆಗೂಡಿ ಮಾನವ ಸರಪಳಿ ರಚಿಸಿದರು.…

Read More

ನಾಪೋಕ್ಲು ಸೆ.16 NEWS DESK : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಕೆಪಿಎಸ್ ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷ ಎನ್.ಎಸ್.ಉದಯಶಂಕರ್ ಹೇಳಿದರು. ಕೆಪಿಎಸ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ 2024-25ರ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ವಿಷಯಗಳಷ್ಟೇ ಪ್ರಾಮುಖ್ಯವಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು. ಬಿ.ಆರ್.ಸಿ.ಮಂಜುಳ ಚಿತ್ರಾಪುರ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಜುಳ ಚಿತ್ರಾಪುರ ತಿಳಿಸಿದರು. ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಕೆಪಿಎಸ್, ಶ್ರೀರಾಮ ಟ್ರಸ್ಟ್, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಸೇಕ್ರೆಡ್ ಹಾರ್ಟ್, ಎಮ್ಮೆಮಾಡು, ನೇತಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ನೃತ್ಯ, ಕವ್ವಾಲಿ, ರಸಪ್ರಶ್ನೆ, ಕಂಠಪಾಠ, ಮಣ್ಣಿನ ಮಾದರಿ ತಯಾರಿ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದರು.…

Read More

ಸೋಮವಾರಪೇಟೆ ಸೆ.16 NEWS DESK : ತೋಳೂರು ಶೆಟ್ಟಳ್ಳಿ ಗ್ರಾಮದ ನಡ್ಲಕೊಪ್ಪ ಸಮಿತಿಯ ಸಭೆ ಗ್ರಾಮದ ಸಮುದಾನಭವನದಲ್ಲಿ ನಡೆಯಿತು. ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಕೆ.ಮಾಚಯ್ಯ ಮಾತನಾಡಿ, ಕೃಷಿಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ವಿದ್ಯೆ ನಿಜವಾದ ಆಸ್ತಿಯಾಗಿದ್ದು, ವಿದ್ಯಾವಂತ ದೇಶದ ಸಂಪತ್ತು ಎಂದು ಅಭಿಪ್ರಾಯಿಸಿದರು. ಕುಡಿಯುವ ನೀರಿನ ವ್ಯವಸ್ಥೆ ತಲೆದೋರಿದೆ ಈ ಬಗ್ಗೆ ಶಾಸಕರ ಗಮನ ಸೆಳೆಯಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾಮ ಸಮಿತಿಯ ಕಾರ್ಯದರ್ಶಿ, ವಿ.ವಿ.ಸೋಮಯ್ಯ ಖಜಾಂಚಿ ಎಂ.ಕೆ.ಧರ್ಮಪ್ಪ ಗ್ರಾಮದ ಪ್ರಮುಖರಾದ ಟಿ.ಕೆ.ಸುಬ್ಬಯ್ಯ, ಎಂ.ಬಿ.ರಾಜಪ್ಪ, ಹೆಚ್.ಎ. ಗಣೇಶ್, ಕುಮಾರಪ್ಪ, ಶಾಂತಪ್ಪ, ಶಿವಕುಮಾರ್ ಇದ್ದರು. ಸಭೆಯಲ್ಲಿ ಗ್ರಾಮ ನಿವಾಸಿ ಮಾಜಿ ಸೈನಿಕ ಹೆಚ್.ಎ.ವೆಂಕಟೇಶ್, ತೋಳೂರು ಶೆಟ್ಟಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಕೆ.ಶೇಖರ್, ಪ್ರಸಕ್ತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಕಾಸ್ ಅವರುಗಳನ್ನು ಸನ್ಮಾನಿಸಿಗೌರ ವಿಸಲಾಂಯಿತು.

Read More

ಸೋಮವಾರಪೇಟೆ ಸೆ.16 NEWS DESK : ಶಿಕ್ಷಣದಿಂದ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ತೋಳೂರು ಶೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷರಾದ ಭವಾನಿ ಮಂಜುನಾಥ್ ಅಭಿಪ್ರಾಯಪಟ್ಟರು. ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದ ಶಾಂತಳ್ಳಿ, ಗೌಡಳ್ಳಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಿಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಶಾಲೆಗಳ ಸಂಘದ ಉಪಾಧ್ಯಕ್ಷರಾದ ಎಲ್.ಎಂ.ಪ್ರೇಮ, ಶಾಲೆಯ ಪ್ರಾಂಶುಪಾಲರಾದ ಚಂದ್ರಶೇಖರ ರೆಡ್ಡಿ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷೆ ಆರತಿ, ಕ್ಲಸ್ಟರ್ ಪ್ರಮುಖರಾದ ಚೈತ್ರ, ದೇವರಾಜೇಗೌಡ ಇದ್ದರು. ಸಮಾಜ ವಿಜ್ಞಾನ ಶಿಕ್ಷಕ ಶಬರಿಗಿರೀಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಶಭಾನ ಕಾರ್ಯಕ್ರಮವನ್ನು ನಿರೂಪಿಸಿದರು. ಪೂಜಾ ವಂದಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು.

Read More