ಲೇಖಕ: admin

ವಿರಾಜಪೇಟೆ ಸೆ.29 NEWS DESK :  ಇಂದಿನ ಸ್ಪರ್ಧಾತ್ಮಕ ಹಾಗೂ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾನೂನಿನ ಪ್ರಾಥಮಿಕ ಅರಿವು ಮತ್ತು ದೃಢವಾದ ಆರೋಗ್ಯಕ್ಕಾಗಿ ಪೌಷ್ಠಿಕಾಂಶದ ಮಹತ್ವವನ್ನು ಅರಿಯುವುದು ಅತ್ಯಂತ ಅವಶ್ಯಕ ಎಂದು ಕೊಡಗು ಮಡಿಕೇರಿಯ 2ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್. ನಟರಾಜು ಅವರು ಅಭಿಪ್ರಾಯಪಟ್ಟರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಜಂಟಿ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು ಮತ್ತು ಪೌಷ್ಠಿಕಾಂಶ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. :: ಗುಡ್ ಟಚ್, ಬ್ಯಾಡ್ ಟಚ್ ಹಾಗೂ ಪೋಕ್ಸೊ ಕಾಯಿದೆ ಕುರಿತು ಜಾಗೃತಿ :: ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಎದುರಾಗಬಹುದಾದ…

Read More

ವಿರಾಜಪೇಟೆ ಸೆ.29 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ವಲಯದ ವತಿಯಿಂದ ಮೂರ್ನಾಡಿನ ಕಿಗ್ಗಾಲು ಸಮುದಾಯ ಭವನದಲ್ಲಿ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಇತ್ತೀಚಿಗೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಶುವೈದ್ಯರಾದ ಡಾ. ಶಿಲ್ಪ ಅವರು ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳ ತಳಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಎಚ್‍ಎಫ್ (ಊಈ) ಹಾಗೂ ಜರ್ಸಿ ಮುಂತಾದ ಮಿಶ್ರತಳಿಗಳ ಆಯ್ಕೆ, ಉತ್ತಮ ಹಾಲು ಉತ್ಪಾದನೆಗೆ ಜಾನುವಾರುಗಳಿಗೆ ಗುಣಮಟ್ಟದ ಹಸಿರು ಮೇವು ಮತ್ತು ಅಜೋಲಾ ಮುಂತಾದ ಜಲಸಸ್ಯಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಜಾನುವಾರುಗಳಿಗೆ ವಿಮೆ ಮಾಡಿಸುವುದು ಹಾಗೂ ಕರುಗಳ ಸಮರ್ಪಕ ಪಾಲನೆ ಅತ್ಯಂತ ಅಗತ್ಯ ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಜಪೇಟೆ ತಾಲೂಕಿನ ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಹೈನುಗಾರಿಕೆಗೆ ಆರ್ಥಿಕ ನೆರವು ದೊರೆಯುತ್ತಿದ್ದು,…

Read More

ವಿರಾಜಪೇಟೆ ಸೆ.29 NEWS DESK : ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸದಸ್ಯರು ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಯನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ಅರಮನೆ ಮೈದಾನದಿಂದ ಬನ್ನಿಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವ ಸಂಸ್ಕೃತಿಯ ಪ್ರತೀಕವಾದ ತಳಿಯತಕ್ಕಿ ಬೊಳ್ಚ ಹಿಡಿದು, ತಾಳ, ದುಡಿ ಹಾಗೂ ಕೊಟ್ಟ್‌ಪಾಟ್‌ನೊಂದಿಗೆ ಕೊಡವ ಸಂಪ್ರದಾಯವನ್ನು ಬಿಂಬಿಸಲಾಯಿತು. ಕೊಡವರ ಸಾಂಪ್ರದಾಯಿಕ ಆಯುಧಗಳಾದ ಒಡಿಕತ್ತಿ ಹಾಗೂ ಬರ್ಜಿ ಹಿಡಿದು, ವಾಲಗದ ನಾದಕ್ಕೆ ಹೆಜ್ಜೆ ಹಾಕಿದ ಸದಸ್ಯರು ಕೊಡಗಿನ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ಕೊಡವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ವಾಲಗದ ನಾದ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷೆ ಮಾತಂಡ ಕುಶಿ ಉನ್ನತಿ, ಕಾರ್ಯದರ್ಶಿ ಮಾಚಂಗಡ ಸಚಿನ್ ತಿಮ್ಮಯ್ಯ, ಸಹ ಕಾರ್ಯದರ್ಶಿ ಅಳ್ಳಂಡ ಶಹನಾ ಚೋಂದಮ್ಮ, ನಿರ್ದೇಶಕರಾದ ಚೈಯ್ಯಂಡ ಕೀರ್ತನ್ ಅಯ್ಯಪ್ಪ,…

Read More

ಮಡಿಕೇರಿ ಸೆ.28 NEWS DESK : ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾ ಕೂಟ ಅ.4 ರಂದು ಭಾನುವಾರ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಅಧ್ಯಕ್ಷ ಎಂ.ಕೆ.ಸಂತೋಷ್ ವಹಿಸಲಿದ್ದು, ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ.ದೇವಪ್ಪ ಕಟ್ಟೆಮಾಡು ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ, ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾ ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ನರಸಿಂಹ, ಜಿಲ್ಲಾ ಕಾರ್ಯದರ್ಶಿ ಹೊವಮ್ಮ ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.…

Read More

ಮಡಿಕೇರಿ ಸೆ.28 NEWS DESK : 2030ಕ್ಕೆ ದೇಶದಲ್ಲಿ ಮಲೇರಿಯಾ ರೋಗ ಪ್ರಕರಣವನ್ನು ಕೊನೆಗಾಣಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು ದೇಶಾದ್ಯಂತ ಆರೋಗ್ಯ ಸಂಸ್ಥೆಗಳಲ್ಲಿ ರೋಗ ಪ್ರಕರಣಗಳ ಚಿಕಿತ್ಸೆ ಅನುಸರಣೆ, ದಾಖಲಾತಿ ನಿರ್ವಹಣೆ ಪರಿಶೀಲಿಸಲು ಕೇಂದ್ರ ಪರಿಶೀಲನ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದರು. ಕೊಡಗು ಜಿಲ್ಲೆಗೆ ಕಳೆದ 3 ದಿನಗಳಿಂದ ಸಬ್ ನ್ಯಾಷನಲ್ ಮಲೇರಿಯಾ ಎಲಿಮಿನೇಷನ್ ವ್ಯಾಲಿಡೇಶನ್ ರಾಷ್ಟ್ರೀಯ ತಂಡ ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಸಿದ್ದಾಪುರ, ಉಪಕೇಂದ್ರ ಸುಂಟಿಕೊಪ್ಪ, ಮತ್ತು ಮಡಿಕೇರಿ ತಾಲೂಕಿನ ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ಭೇಟಿ ನೀಡಿ ಮಲೇರಿಯಾ ಮುಕ್ತ ಮಾಡಲು ಕಳೆದ 5 ವರ್ಷಗಳಿಂದ ಅನುಸರಿಸಿರುವ ದಾಖಲಾತಿ ನಿರ್ವಹಣೆ ಮತ್ತು ರೋಗಿಗಳ ಚಿಕಿತ್ಸೆ ಅನುಸರಣೆ ಪರಿಶೀಲನೆ ನಡೆಸಿದರು. ಈ ತಂಡದ ನೇತೃತ್ವವನ್ನು…

Read More

ಮಡಿಕೇರಿ, ಸೆ.28 NEWS DESK : ಪೋಷಣ್ ಮಾಸಾಚರಣೆಯ ಅಂಗವಾಗಿ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಮಕ್ಕಳಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಲು ಸಮತೋಲನ ಆಹಾರ ಸೇವನೆ ಅತ್ಯಗತ್ಯ ಎಂದು ಹೇಳಿದರು. ಸಿರಿಧಾನ್ಯಗಳು, ಸ್ಥಳೀಯವಾಗಿ ದೊರೆಯುವ ಹಣ್ಣುಗಳು, ಸೊಪ್ಪುಗಳು, ವಿಶೇಷವಾಗಿ ನುಗ್ಗೆ ಸೊಪ್ಪು ಹಾಗೂ ವಿವಿಧ ತರಕಾರಿಗಳನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಮಹಿಳೆಯರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು. ಮಕ್ಕಳಲ್ಲಿ ಜಂತುಹುಳುವಿನ ಬಾಧೆಯಿಂದಲೂ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಮಾತ್ರೆಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕು ಎಂದು ತಿಳಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ…

Read More

ಮಡಿಕೇರಿ ಸೆ.28 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ ಮ್ಯಾಪಿಂಗ್ ಆಗದಿರುವ, ಮ್ಯಾಪಿಂಗ್‍ನಲ್ಲಿ ವ್ಯತ್ಯಾಸವಾಗಿದ್ದ ಸುಮಾರು 58,883 ಮತದಾರರಲ್ಲಿ, 44,444 ಮಂದಿಯ ಮಾಹಿತಿ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಉಳಿದಂತೆ 14,439 ಮಂದಿ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ ನೀಡಿ ದಾಖಲೆಗಳನ್ನು ಪಡೆದು ಇಸಿಐ ನೆಟ್‍ನಲ್ಲಿ ಅಪ್‍ಲೋಡ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಈಗಾಗಲೇ ಮ್ಯಾಪಿಂಗ್‍ನಲ್ಲಿ ವ್ಯತ್ಯಾಸ ಆಗಿರುವ ಸಂಬಂಧ ಪರಿಶೀಲನಾ ಕಾರ್ಯವು ನಡೆಯುತ್ತಿದ್ದು, ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ ನೀಡಿ ಮಾಹಿತಿ ಪಡೆಯಲಿದ್ದು, ಈ ಅವಕಾಶವನ್ನು ಪಡೆದುಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ವಿವಿಧ ರಾಜಕೀಯ…

Read More

ನಾಪೋಕ್ಲು, NEWS DESK ಸೆ.28: ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) 2026-27ನೇ ಸಾಲಿನ ಘಟಕದ ಉದ್ಘಾಟನೆ ಹಾಗೂ ‘ಕಾವೇರಿ ದರ್ಶಿನಿ’ ವಾರ್ಷಿಕ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ, ಕೊಡಗು ಸಪೋರ್ಟ್ ಹೋಪ್ ಫಂಡ್ ಸೇವಾ ಆ್ಯಪ್‌ನ ಸ್ಥಾಪಕರಾದ ನಾಪೋಕ್ಲುವಿನ ನಿವಾಸಿ ಕೇಳೇಟಿರ ದೀಪು ದೇವಯ್ಯ ಅವರ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾವೇರಿ ಎಜುಕೇಶನ್ ಸೊಸೈಟಿಯ ಖಜಾಂಚಿ ಸಿ.ಡಿ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ. ಕಾವೇರಪ್ಪ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್. ಮಾದಯ್ಯ, ವಾರ್ಷಿಕ ಸಂಚಿಕೆಯ ಸಂಚಾಲಕರಾದ ಮತಿ ಪಿ.ಸಿ. ಮೀನಾಕ್ಷಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಯಾದ ವಿಪ್ರಾ ನೀಲಮ್ಮ ಹಾಗೂ ಚೇತನ್ ಚಿನ್ನಪ್ಪ ಉಪಸ್ಥಿತರಿದ್ದರು. ಶ್ರೇಯಾ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕಿ ಜಶ್ಮಿ ಕೆ.ಎ. ಹಾಗೂ ವಿದ್ಯಾರ್ಥಿನಿ ಫಿಧಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಕರೀಷ್ಮಾ ಸುಧೀರ್…

Read More

ನಾಪೋಕ್ಲು, NEWS DESK ಸೆ.28: ಸ್ಥಳೀಯ ‘ನಾಪೋಕ್ಲು ಕ್ಲೀನ್ ಅಪ್’ ಸಂಸ್ಥೆಯ ವತಿಯಿಂದ ನಾಪೋಕ್ಲು–ಹಳೆ ತಾಲೂಕು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ತೆರವುಗೊಳಿಸುವ ಬೃಹತ್ ಸ್ವಚ್ಛತಾ ಅಭಿಯಾನವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ‘ಟೀಮ್ ನ್ಯಾಷನಲ್ ನಾಪೋಕ್ಲು’ ಹಾಗೂ ‘ಭಗವತಿ ಹಾಕಿ ಕ್ಲಬ್ ನಾಪೋಕ್ಲು’ ಸಂಘಟನೆಗಳ ಸಕ್ರಿಯ ಸಹಕಾರದೊಂದಿಗೆ ನಡೆದ ಅಭಿಯಾನದಲ್ಲಿ ಸದಸ್ಯರು ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು ಹಾಗೂ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಪ್ರಮುಖರು, ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮನಬಂದಂತೆ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯದಂತೆ ಮನವಿ ಮಾಡಿದರು. ‘ಸ್ವಚ್ಛ ನಾಪೋಕ್ಲು–ನಮ್ಮೆಲ್ಲರ ಜವಾಬ್ದಾರಿ’ ಎಂಬ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು. ನಾಪೋಕ್ಲುವನ್ನು ಸುಂದರ ಹಾಗೂ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರು ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಮುಂದಿನ…

Read More

ವಿರಾಜಪೇಟೆ, NEWS DESK ಸೆ.28: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ, ವಿರಾಜಪೇಟೆ ಇವರ ಆಶ್ರಯದಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವು ಅಕ್ಟೋಬರ್ 20ರಂದು ಮಂಗಳವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜೂಡಿವಾಸ್ ತಿಳಿಸಿದ್ದಾರೆ. ಈ ಕುರಿತು ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವತಿಯಿಂದ 19ನೇ ವರ್ಷದ ಆಯುಧಪೂಜೆ ಸಮಾರಂಭವನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಸಂಘದ ಕಚೇರಿಯಲ್ಲಿ ಆಯುಧಪೂಜೆ ನೆರವೇರಲಿದೆ. ಬೆಳಿಗ್ಗೆ 10.30ರಿಂದ ಸ್ಥಳೀಯ ಕಲಾ ಪ್ರತಿಭೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗುಂಪು ನೃತ್ಯ, ಸ್ಥಳೀಯ ಚಂಡೆಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಸಂಘದ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪ್ರಖ್ಯಾತ ಬೈಕ್ ಸವಾರರಿಂದ ಸಾಹಸ ಪ್ರದರ್ಶನ ನಡೆಯಲಿದೆ. ಈ ಸಂದರ್ಭದಲ್ಲಿ ಸ್ಥಳೀಯ ಕಲಾ ಪ್ರತಿಭೆಗಳಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ…

Read More