ನಾಪೋಕ್ಲು ಸೆ.26 NEWS DESK : ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಸುಕುಮಾರ ಅವರ ಕುಟುಂಬಕ್ಕೆ ನಾಪೋಕ್ಲು ಇಂದಿರಾ ನಗರ ವಿವೇಕಾನಂದ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಬಾವಲಿ ಗ್ರಾಮದ ಮುಖಂಡಬಾಣೆ ಪೈಸಾರಿ ನಿವಾಸಿ ಟ್ರ್ಯಾಕ್ಟರ್ ಡ್ರೈವರ್ ಸುಕುಮಾರ ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿ, ಅವರ ಪತ್ನಿ ಚಿತ್ರ ಮತ್ತು ಮಗ ನವೀನ್ ಅವರಿಗೆ ರೂ.20 ಸಾವಿರ ಸಹಾಯಧನವನ್ನು ಹಸ್ತಾಂತರಿಸದರು. ಈ ಸಂದರ್ಭ ವಿವೇಕಾನಂದ ಸಂಘದ ಖಜಾಂಚಿ ಜಲೆಂದ್ರ, ಉಪಾಧ್ಯಕ್ಷ ಶಶಿ, ಸದಸ್ಯರಾದ ಪ್ರಕಾಶ್, ಸುನಿ, ಪಟ್ಟಬಿ ಪ್ರಕಾಶ್, ಶ್ರೀಧರ, ಗಣೇಶ, ಸಂದೇಶ ಹಾಗೂ ನಾರಾಯಣ ಸೇರಿದಂತೆ ಇನ್ನಿತರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ಮಡಿಕೇರಿ ಸೆ.26 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡಸ್೯ ಪ್ರಶಸ್ತಿಗಳನ್ನು ಮುಳ್ಳೂರು ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್.ಸತೀಶ್ ಮತ್ತು ನಾಪೋಕ್ಲು ರಾಮಟ್ರಸ್ಟ್ ನ ಶಿಕ್ಷಕಿ ಶೋಭಾಗೆ ಪ್ರದಾನ ಮಾಡಲಾಯಿತು. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. ಈ ಸಂದಭ೯ ಮಾತನಾಡಿದ ಸತೀಶ್, ಕೋವಿಡ್ ಸಂದಭ೯ದಲ್ಲಿ ಶಾಲಾ ವಿದ್ಯಾಥಿ೯ಗಳಿಗೆ ಅಟ್ಟಣಿಗೆ ನಿಮಿ೯ಸಿ ಮೊಬೈಲ್ ಸಿಗ್ನಲ್ ಸಿಗುವಂತೆ ಮಾಡಿ ಶಿಕ್ಷಣ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಕಾರಣವಾಯಿತು. ತನ್ನ ಸೇವೆಗೆ ಸಾವ೯ಜನಿಕರು ನೀಡುತ್ತಿರುವ ಶ್ಲಾಘನೆ ತನ್ನಲ್ಲಿ ಮತ್ತಷ್ಟು ಛಲವನ್ನು ತಂದಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾವಿಜಯ, ರೋಟರಿ ಮಿಸ್ಟಿ ಹಿಲ್ಸ್ ಶ್ರೀರಾಮಟ್ರಸ್ಟ್ ನಲ್ಲಿ ಮೊದಲು ಪ್ರಾರಂಭಿಸಿದ ಇಂಟರ್ಯಾಕ್ಟ್ ಕ್ಲಬ್ ನಿಂದಾಗಿ ವಿದ್ಯಾಥಿ೯ಗಳಲ್ಲಿ ಸಮಾಜಸೇವಾ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನೆರವಾಗಿದೆ. ನಾಯಕತ್ವ ಗುಣ ಬೆಳೆಸುವಲ್ಲಿ…
ನಾಪೋಕ್ಲು ಸೆ.26 NEWS DESK : ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್.ಸುಧೀರ್ ಅಯ್ಯಪ್ಪ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ ಕವಿ ಸಭಾಂಗಣದಲ್ಲಿ ನಡೆದ ಆರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಪ್ರಸ್ತುತ 751 ಸದಸ್ಯರಿದ್ದು ಈ ವರ್ಷ ಸಂಘವು 3.1 0 ಲಕ್ಷ ರೂ. ಲಾಭಗಳಿಸಿದೆ. ಸಂಘವು ಅಭಿವೃದ್ಧಿಯಿಂದ ಸಾಗುತಿದ್ದು ಸಂಘದ ಏಳಿಗೆಗಾಗಿ ಸರ್ವ ಸದಸ್ಯರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಚರ್ಚಿಸಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಬೊಳ್ಳಿಯಂಡ ಪಿ.ಹರೀಶ್ ಕಾರ್ಯಪ್ಪ, ಕನ್ನಂಬಿರ ಸಿ.ತಿಮ್ಮಯ್ಯ, ಕುಂಡ್ಯೋಳಂಡ.ಸಿ.ಪೂವಯ್ಯ, ಕಾಟುಮಣಿಯಂಡ ಎಂ.ಉಮೇಶ್, ಅರೆಯಡ ಎಂ.ಅಶೋಕ್, ಚೋಕಿರ ಎಸ್.ಚಿಣ್ಣಪ್ಪ, ಚೇನಂಡ.ಈ.ಗಿರೀಶ್ ಪೂಣಚ್ಚ, ಕುಲ್ಲೇಟಿರ ಎಂ.ದೇವಯ್ಯ, ಪಾಡೆಯಂಡ ಸಿ.ಕುಶಾಲಪ್ಪ,…
ನಾಪೋಕ್ಲು ಸೆ.26 NEWS DESK : ಮರಗೋಡಿನ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಡಿಕೇರಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ವರದಿ : ದುಗ್ಗಳ ಸದಾನಂದ.
ವಿರಾಜಪೇಟೆ ಸೆ.26 NEWS DESK : ವಿರಾಜಪೇಟೆ ವಿವೇಕ ಜಾಗೃತ ಬಳಗ ವತಿಯಿಂದ ಸೆ.29 ರಂದು ದೇವಣಗೇರಿ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಆತ್ಮೋನ್ನತಿ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ಶಿಬಿರ ನಡೆಯಲಿದ್ದು, ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಳಗದ ಅಧ್ಯಕ್ಷ ಹೆಚ್.ಡಿ.ಲೋಕೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ನಾಪೋಕ್ಲು ಸೆ.26 NEWS DESK : ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಗುಣಮಟ್ಟದ ಆಹಾರ ನೀಡುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ಹೇಳಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ನಾಪೋಕ್ಲುವಿನ ಹಳೆ ತಾಲೂಕು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಿದೆ ಎಂದರು. ಇತ್ತೀಚಿನ ದಿನಗಳ ಜೀವನ ಶೈಲಿಯಲ್ಲಿನ ಬದಲಾವಣೆ, ಗುಣಮಟ್ಟದ ಆಹಾರ ಪಡೆಯದಿರುವುದು ಮತ್ತಿತರ ಕಾರಣವಾಗಿದೆ. ಆದ್ದರಿಂದ ಸರ್ಕಾರದಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಅಪೌಷ್ಟಿಕತೆ ತಡೆಯಬೇಕು ಎಂದರು. ಅಪೌಷ್ಟಿಕತೆಯು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ರೋಗಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ. ಸಮತೋಲಿತ ಆಹಾರವಾದ ಹಸಿರು ಎಲೆಯುಕ್ತ ತರಕಾರಿ…
ಮಡಿಕೇರಿ ಸೆ.26 NEWS DESK : ಗ್ರಾಮ ಆಡಳಿತ ಅಧಿಕಾರಿಗಳ ಹಾಗೂ ಗ್ರಾಮ ಸಹಾಯಕರ ಕುಂದುಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ, ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ. ಜಿಲ್ಲಾಧಿಕಾರಿ, ಕೊಡಗು ಉಪವಿಭಾಗಾಧಿಕಾರಿ ಹಾಗೂ ಜಿಲ್ಲೆಯ ಐದು ತಾಲ್ಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಘಟದ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಸಂಘದ ಕೇಂದ್ರ ಸಂಘದ ಕಾರ್ಯಕಾರಿಣಿ ನಿರ್ಣಯದಂತೆ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ 17 ಅಧಿಕ ತಂತ್ರಾಂಶಗಳನ್ನು ಮೊಬೈಲ್, ಲ್ಯಾಪ್ ಟಾಪ್, ಇಂಟರ್ನೆಟ್ ಹಾಗೂ ಅವಶ್ಯ ಸೌಲಭ್ಯಗಳನ್ನು ನೀಡದೆ ಅವುಗಳನ್ನು ನಿರ್ವಹಿಸಲು ಒತ್ತಡ ಹೆರುತ್ತಿರುವ ಬಗ್ಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಒದಗಿಸಬೇಕು, ಗ್ರಾಮ ಸಹಾಯಕರ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ ಅವರು, ತಪ್ಪಿದ್ದಲ್ಲಿ ಬೇಡಿಕೆಗಳು ಈಡೇರಿವವರೆಗೂ ಮುಷ್ಕರ ಹೂಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಸುಂಟಿಕೊಪ್ಪ ಸೆ.26 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಕುರಿತು ಮಾಹಿತಿ ನೀಡಲಾಯಿತು. ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‍ಐ ಸೈಮನ್ ಡಿಕುನ್ನ, ದುಶ್ಚಟಗಳಿಂದ ಮಕ್ಕಳ ಆರೋಗ್ಯದ ಮೇಲೆ ಬೀರುವ ದುಷ್ಪಾರಿಣಾಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ತಾಲ್ಲೂಕು ಜ್ಞಾನವಿಕಾಸ ಅಧಿಕಾರಿ ಮಾಲಿನಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಲ ವಿತರಿಸುವುದು ವಸೂಲಾತಿ ಮಾಡುವುದಕ್ಕೆ ಮಾತ್ರ ಸಂಘವು ಸಿಮೀತಗೊಳ್ಳದೆ ವ್ಯಕ್ತಿಗಳ ವೈಯಕ್ತಿಕ ಅಭಿವೃದ್ಧಿಗೆ ಬೇಕಾದ ತರಬೇತಿಗಳನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳ ಜೀವನವು ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮಾಜದ ಉತ್ತಮ ಪ್ರಜೆಗಳಾಗಬೇಕೆಂದು…
ಸುಂಟಿಕೊಪ್ಪ ಸೆ.25 NEWS DESK : ರಂಗಸಮುದ್ರ, ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 86ನೇ ವಾರ್ಷಿಕ ಮಹಾಸಭೆಯು ದವಸ ಭಂಡಾರ “ಎ” ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪಿ.ಎಸ್.ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಕೆಳೆದ ಅವಧಿಯ ಮಹಾಸಭೆಯ ವರದಿಯನ್ನು ಹಾಗೂ ಸಭೆಯಲ್ಲಿ 2023-24ರ ಸಾಲಿನ ಜಮಾ-ಖರ್ಚು ಕರಡು ಪ್ರತಿಯನ್ನು ವಾಚಿಸುವ ಮೂಲಕಸಭೆಯ ಅಂಗೀಕಾರ ಪಡೆಯಲಾಯಿತು. ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು. ಪ್ರಸ್ತುತ ಕಾರ್ಯನಿರ್ಸುತ್ತಿರುವ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕಾರಿ ಮಂಡಳಿಯನ್ನು ಯಥವತ್ತಾಗಿ ಮುಂದುವರಿಸಲು ಸದಸ್ಯರಾದ ಬಸಪ್ಪ ಹಾಗೂ ನಂದಿನೆರವಂಡ ಅಚ್ಚಯ್ಯ ಸೇರಿದಂತೆ ಮತ್ತಿತರರು ಸಲಹೆ ನೀಡಿದರು. ಮಹಾಸಭೆಯಲ್ಲಿ ಸದಸ್ಯರುಗಳು ನೀಡಿದ ಅನೇಕ ಅಭಿವೃದ್ಧಿಪರ ಅಂಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವುದಾಗಿ ದವಸ ಭಂಡಾರದ ಅಧ್ಯಕ್ಷ ಪಿ.ಎಸ್. ಬಸಪ್ಪ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ನಿರ್ದೇಶಕ ಎಂ.ಸಿ.ದಾಮೋದರ, ಹೆಚ್.ಬಿ.ರುದ್ರಪ್ಪ, ಎ.ಎಂ.ಲೋಕನಾಥ, ಪಿ.ಬಿ.ಆಶೋಕ, ಬಿ.ಎಸ್.ಧನಪಾಲ, ಟಿ.ಸಿ.ಶಿವಕುಮಾರ್, ಜಿ.ಆರ್.ಶಾರದ, ಕೆ.ಕೆ.ಲೀಲಾವತಿ, ಡಬ್ಲ್ಯೂ.ಪಿ.ಶಿವಕುಮಾರ್ ಮತ್ತಿತರರು…
ಮಡಿಕೇರಿ ಸೆ.26 NEWS DESK : ನಿರಂತರವಾಗಿ ಕ್ರೀಡೆ, ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ತೊಡಗಿಕೊಂಡಿರುವ ಚೆಟ್ಟಳ್ಳಿ ಸಮೀಪದ ಕಂಡಕರೆಯ ಗಾಂಧಿ ಯುವಕ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಪುನರಾಯ್ಕೆಯಾಗಿದ್ದಾರೆ. ಸೆ. 23ರಂದು ಕಂಡಕರೆಯ ಬ್ರೈಟ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆದ ಗಾಂಧಿ ಯುವಕ ಸಂಘದ ಮಹಾಸಭೆಯಲ್ಲಿ 2024-26ನೇ ಅವಧಿಗೆ ಇಸ್ಮಾಯಿಲ್ ಕಂಡಕರೆ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಸಂಘದ ನೂತನ ಹಿರಿಯ ಉಪಾಧ್ಯಕ್ಷರಾಗಿ ಷರೀಫ್ ಪಿ.ಎಂ,ಉಪಾಧ್ಯಕ್ಷರಾಗಿ ಇರ್ಷಾದ್ ಕೆ.ಎಂ,ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಉಸ್ಮಾನ್, ಕಾರ್ಯದರ್ಶಿಯಾಗಿ ಪಿ.ಎಂ.ಅಜಿನಾನ್, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಎ.ಉವೈಸ್, ಕೆ.ಜೆ.ಮೊಹಮ್ಮದ್ ಶಿಬಲ್, ಖಜಾಂಚಿಯಾಗಿ ಒ.ಎಸ್.ಸುಹೈಲ್ ಆಯ್ಕೆಯಾಗಿದ್ದಾರೆ. ಸಂಘದ ನೂತನ ನಿರ್ದೇಶಕರಾಗಿ ಉನೈಸ್ ಕೆ.ಎಂ,ಅಫ್ನಾನ್ ಪಿ.ಎಂ,ಶಮ್ಮಾಸ್,ಹರ್ಷಾದ್, ಸಿ.ಎಸ್.ಅಫ್ಸಲ್ , ಇಮ್ರಾನ್ ಆಲಿ ಹಾಗೂ ಮೊಹಮ್ಮದ್ ಸಿದ್ದೀಖ್ ಆಯ್ಕೆಯಾಗಿದ್ದಾರೆ. ಮಹಾಸಭೆಯಲ್ಲಿ ಗಾಂಧಿ ಯುವಕ ಸಂಘದ ಮುಂದಿನ ಎರಡು ವರ್ಷಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ಅ.2 ರಂದು ಕಂಡಕರೆ ಸರ್ಕಾರಿ ಹಿರಿಯ…






