ಲೇಖಕ: admin

ಮಡಿಕೇರಿ ಸೆ.26 NEWS DESK : ದಸರಾ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ ವೆಂಕಟರಾಜಾ ಮಡಿಕೇರಿ ದಸರಾ ಸಂಬಂಧಿಸಿದಂತೆ ಸ್ವಚ್ಛತೆ ಹಾಗೂ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಕೋರಿದರು. ಪ್ರಾಯೋಜಕತ್ವ ಬಗ್ಗೆ ಗಮನಹರಿಸಬೇಕು. ಈಗಾಗಲೇ ಯುವ ದಸರಾಗೆ ಪ್ರಸಿದ್ಧ ನಟರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾ, ಕಾಫಿ ದಸರಾ, ಹೀಗೆ ವಿವಿಧ ದಸರಾಗಳನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಕೋರಿದರು. ನಾಡಿನ ಖ್ಯಾತ ಹಿನ್ನೆಲೆ ಗಾಯಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣ ಸೇರಿದಂತೆ ಅನೇಕ ಖ್ಯಾತ ನಾಮರನ್ನು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಪ್ರಯತ್ನಗಳು ಸಾಗಿವೆ ಎಂದು ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜನೋತ್ಸವಕ್ಕೆ ಧಕ್ಕೆ ಬಾರದಂತೆ ಜನರ ಸಮಿತಿಯಿಂದಲೇ ಉತ್ಸವ ಸಾಂಪ್ರದಾಯಿಕವಾಗಿ ನಡೆಯುವಂತಾಗಲು…

Read More

ಮಡಿಕೇರಿ ಸೆ.26 NEWS DESK : ಮೈಸೂರಿನ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿಗೆ ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಭಾಜನರಾಗಿದ್ದಾರೆ. ಮೈಸೂರಿನ ದಿ ಇನ್ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅವರು ಸಂಪಾದಿಸಿರುವ ಅರಸು ಚುಟುಕು ಸ್ಪರ್ಶಗಳು ಕೃತಿ ಬಿಡುಗಡೆ ಮತ್ತು ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟಿ.ಪಿ.ರಮೇಶ್ ಸೇರಿದಂತೆ ಸಪ್ತ ಮಹಾಕಾವ್ಯಗಳ ಕರ್ತೃ, ಕವಯತ್ರಿ ಡಾ.ಲತಾ ರಾಜಶೇಖರ್, ಔಷಧ್ ಗ್ರೂಪ್ ಆಫ್ ಫಾರ್ಮಾಸಿಸ್ ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಗುಪ್ತ ವಿ.ಜೈನ್, ವಾಸವಿ ಪ್ರಕಾಶನದ ನಿರ್ದೇಶಕ ರಾಮನಾಥ ಗುಪ್ತ, ಅಂಚೆ ಕಚೇರಿಯ ನಿವೃತ್ತ ಹಿರಿಯ ಸೂಪರಿಡೆಂಟೆಂಡ್ ಕೆ.ಓಬಯ್ಯ ಹಾಗೂ ಪ್ರಗತಿಪರ ರೈತ ಪ್ರಕಾಶ್ ರಾಜೇ ಅರಸ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಿಸಲಿದ್ದು, ಮೈಸೂರು ಜಿಲ್ಲಾ ಕಾಂಗ್ರೆಸ್…

Read More

ಮಡಿಕೇರಿ NEWS DESK ಸೆ.26 : 2022ರ ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಕೊಡಗಿನ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜೇಶ್ (42) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಗ್ರಾಮದ ನಿವಾಸಿ ಪ್ರೇಮ ಎಂಬುವವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಲ್ಲದೆ ಜೊತೆಯಲ್ಲಿದ್ದ ಪ್ರೇಮಾ ಅವರ ಸಹೋದರಿ ವೀಣಾ ಅವರ ಮೇಲೂ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಆರೋಪ ರಾಜೇಶ್ ಮೇಲಿದೆ. ಮೊದಲು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಪ್ರೇಮಾ ಅವರನ್ನು ಕೊಲೆ ಮಾಡಲು ರಾಜೇಶ್ ಯತ್ನಿಸಿದ್ದ. ಈ ಪ್ರಯತ್ನ ವಿಫಲವಾದಾಗ ಪ್ರೇಮಾ ಅವರು ಟಿ.ಶೆಟ್ಟಿಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ನ್ನು ಬೈಕ್ ನಲ್ಲಿ ಹಿಂಬಾಲಿಸಿದ್ದ. ನಂತರ ನಿಗಧಿತ ಸ್ಥಳದಲ್ಲಿ ಪ್ರೇಮಾ ಹಾಗೂ ಅವರ ಸಹೋದರಿ ವೀಣಾ ಅವರು ಬಸ್ ನಿಂದ ಇಳಿದು ಹೋಗುತ್ತಿದ್ದಾಗ ರಾಜೇಶ್…

Read More

ವಿರಾಜಪೇಟೆ ಸೆ.26 NEWS DESK : ವ್ಯಾಯಾಮ, ಮಿತ ಆಹಾರ ಸೇವೆಯೊಂದಿಗೆ ಪ್ರತಿಯೊಬ್ಬರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಆರ್.ಐ.ಹೆಚ್.ಪಿ ಆಸ್ಪತ್ರೆಯ ಸರ್ಜನ್ ಡಾ. ಸಿ.ಕೆ.ಎನ್ ಚಂದ್ರು ಎಂದು ಸಲಹೆ ನೀಡಿದರು. ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆದಮುಳ್ಳೂರು ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಗುಂಡಿಕೆರೆ ಶಾಫಿ ಜಮಾಅತ್ ಮದ್ರಸಾ ಸಭಾಂಗಣದಲ್ಲಿ ಸಾರ್ವಜನಿಕರಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯಗಳು ಹೆಚ್ಚಾಗುತ್ತಿದ್ದು, ಆರೋಗ್ಯವನ್ನು ಕಾಪಾಡುವಲ್ಲಿ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯ ಎಂದರು. ಕೆ.ಡಿ.ಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ರಹಿತ ಆಹಾರ ಸೇವನೆ ಹಾಗೂ ಕೃಷಿ ಕೆಲಸ ಮಾಡಿಕೊಂಡು ಆರೋಗ್ಯವನ್ನು ಕಾಪಾಡುತ್ತಿದ್ದರು. ಇತ್ತೀಚೆಗೆ ಯಾಂತ್ರಿಕ ಕೆಲಸಗಳು ಹೆಚ್ಚಾಗುತ್ತಿದ್ದಂತೆ ಮಾನವನ ರೋಗಗಳು ಹೆಚ್ಚುತ್ತಿದೆ. ಆಗಿಂದಾಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಬೇಕು ಎಂದರು. ವಿರಾಜಪೇಟೆ…

Read More

ಮಡಿಕೇರಿ ಸೆ.26 NEWS DESK : ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬಸವೇಶ್ವರ ಗಿರಿಜನರ ಕಾಲೋನಿಯಲ್ಲಿ ಸ್ವಚ್ಚತಾ ಹೈ ಸೇವಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮಕ್ಕೆ ಹಾಡಿ ಮುಖಂಡ ಗಪ್ಪು ಚಾಲನೆ ನೀಡಿದರು. ಕಾವೇರಿ ಕಾಲೇಜು ವಿದ್ಯಾರ್ಥಿಗಳು ಹಾಡಿಯ ಮನೆ ಮನೆಗಳಿಗೆ ತೆರಳಿ ಆರ್ಥಿಕ ಸಮೀಕ್ಷೆ ನಡೆದರು. ನಂತರ ಹಾಡಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮಾಡಿ ಗಿಡನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ, ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತೊಡಗಿಕೊಂಡರೆ ಮಾತ್ರ ಮೇಲು ಕೀಳು ಎಂಬ ಅಂತರ ಕಡಿಮೆಯಾಗಿ ಎಲ್ಲಾರು ಸಮಾನರಂತೆ ಬಾಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಇದಕ್ಕೂ ಮೊದಲು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ.ಕಾವೇರಿಯಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎನ್.ಪಿ.ರೀತಾ, ಸಲಹಾ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರಾದ ಪೂಜಾ ಮತ್ತು ಸಂತೋಷ್, ಗ್ರಂಥಾಲಯ ಸಹಾಯಕ ಚನ್ನನಾಯಕ ಹಾಗೂ ಸುಮಾರು…

Read More

ಮಡಿಕೇರಿ ಸೆ.26 NEWS DESK : ಮೂರ್ನಾಡು ಪ್ರೌಢ ಶಾಲೆಯಲ್ಲಿ ನಡೆದ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಸಾಧನೆಗೈದಿದ್ದಾರೆ. 1 ರಿಂದ 4ನೇ ತರಗತಿ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಉಮೈಝ್ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ಲಾಜಿಯಾ ಫಾತಿಮಾ ಪ್ರಥಮ, ಆಶಯ ಭಾಷಣ ಜಿ.ಯು.ಜಿಯಾನ ತೃತೀಯ, ಛದ್ಮವೇಷ ಎಂ.ಎನ್.ರಾಹಿದ್ ತೃತೀಯ, ಹಿಂದಿ‌ ಕಂಠಪಾಠದಲ್ಲಿ ಎ.ಆರ್.ಸಫ್ವಾನ್ ತೃತೀಯ ಸ್ಥಾನಗಳಿಸಿದ್ದಾರೆ. 5 ರಿಂದ 7ನೇ ತರಗತಿ ವಿಭಾಗದಲ್ಲಿ ಅರೇಬಿಕ್ ಧಾರ್ಮಿಕ ಪಠಣ ಹೈಝ್ ಸಿ.ಎಚ್ ಪ್ರಥಮ, ಭಕ್ತಿಗೀತೆ ಫಾತಿಮತ್ ವಫಾ ಪ್ರಥಮ, ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ನಿಸಾಜ್ ತೃತೀಯ ಸ್ಥಾನಗಳಿಸಿದ್ದಾರೆ. 8ನೇ ತರಗತಿಯಿಂದ 12ನೇ ತರಗತಿ ವಿಭಾಗದಲ್ಲಿ ನಡೆದ ರಂಗೋಲಿ‌ ಸ್ಪರ್ಧೆಯಲ್ಲಿ ಪಿ.ಎಂ.ಫಜೀಲ  ತೃತೀಯ, ಹಿಂದಿ ಭಾಷಣ ಕೆ.ಆರ್.ಫೈಜಾ ತೃತೀಯ, ಆಶು ಭಾಷಣ ಅಸ್ಮತ್ ರುಮಾನ ತೃತೀಯ, ಕನ್ನಡ ಪ್ರಬಂಧ ಸಲ್ಮಾನ್ ಫಾರಿಸ್ ದ್ವಿತೀಯ, ಗಜಲ್…

Read More

ಪೊನ್ನಂಪೇಟೆ ಸೆ.26 NEWS DESK : ಇಸ್ಲಾಮಿನ ಇತಿಹಾಸದಲ್ಲಿ ಆದರ್ಶ ಧೀರರಾಗಿರುವ ವಿಶ್ವ ಪ್ರವಾದಿ ಪ್ರವಾದಿ ಮುಹಮ್ಮದ್ ರ ಜೀವನವು ಒಂದು ತೆರೆದ ಪುಸ್ತಕವಾಗಿದೆ. ತಮ್ಮ ಖಾಸಗಿ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಾಮಾಜಿಕ ಜೀವನವನ್ನು ಮಾದರಿಯಾಗಿ ಹಾಗೂ ಸಮುದಾಯವನ್ನು ಕಲ್ಯಾಣಕಾರಿಯನ್ನಾಗಿ ರೂಪಿಸಿದ ಪ್ರವಾದಿಯವರು ಜನಕೋಟಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಹೇಳಿದರು. ದುಬೈನ ಅನಿವಾಸಿ ಕೊಡಗಿನ ಕನ್ನಡಿಗರ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯು.ಎ.ಇ. ರಾಷ್ಟ್ರೀಯ ಸಮಿತಿ ವತಿಯಿಂದ ದುಬೈನ ದೇರಾದಲ್ಲಿ ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಅಂಗವಾಗಿ ‘ವಿಶ್ವ ವಿಮೋಚನೆಯ ಹಾದಿ -ಪ್ರವಾದಿ’ ಎಂಬ ಧ್ಯೇಯವಾಕ್ಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮಿಲಾದ್ ಸಮಾವೇಶ-2024 ರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾದಿತ್ವ ಲಭಿಸಿದ 23 ವರ್ಷಗಳಲ್ಲಿ ಇಸ್ಲಾಂ ಎಂಬ ಜೀವನಪದ್ಧತಿಯನ್ನು 12ಲಕ್ಷ ಚದರ ಮೈಲಿ ವಿಸ್ತೀರ್ಣದ ಭೂಪ್ರದೇಶದಲ್ಲಿ ವಿಸ್ತರಿಸಿದ ಯಶಸ್ವಿ ಮಹಾ…

Read More

ಮಡಿಕೇರಿ NEWS DESK ಸೆ.26 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕೊಡಗು ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ 17 ಅಧಿಕ ತಂತ್ರಾಂಶಗಳ ಮೊಬೈಲ್, ಲ್ಯಾಪ್ ಟಾಪ್, ಇಂಟರ್ನೆಟ್ ಹಾಗೂ ಕಾರ್ಯನಿರ್ವಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಇವುಗಳನ್ನು ಸಮರ್ಪಕವಾಗಿ ನೀಡದೆ ಕರ್ತವ್ಯದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಲಭೂತ ಸೌಲಭ್ಯಗಳನ್ನು ನೀಡಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸರ್ಕಾರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರಮುಖರು ತಿಳಿಸಿದರು. ::: ಗ್ರಾಮ…

Read More

ಮಡಿಕೇರಿ NEWS DESK ಸೆ.26 : ಮಡಿಕೇರಿ ದಸರಾ ಜನೋತ್ಸವ ಹಿನ್ನಲೆ ಮತ್ತು ನಾಡಹಬ್ಬದ ಮಹತ್ವ ತಿಳಿಸುವ ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕವು ಸೆ 29 ರಂದು ಭಾನುವಾರ ಮಡಿಕೇರಿಯಲ್ಲಿ ಲೋಕಾಪ೯ಣೆಯಾಗಲಿದೆ. ದಸರಾ ಜನೋತ್ಸವದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ  ಪತ್ರಕತ೯ ಅನಿಲ್ ಹೆಚ್ .ಟಿ ಪ್ರಕಟಿಸಿರುವ 132 ವಣ೯ಪುಟಗಳ ಸಂಗ್ರಹಯೋಗ್ಯ ಕೃತಿಯಾಗಿರುವ ಮಡಿಕೇರಿ ದಸರಾ ಜನೋತ್ಸವವನ್ನು ಸೆ 29 ರ ಭಾನುವಾರ ಸಂಜೆ 4 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಲೋಕಾಪ೯ಣೆ ಮಾಡಲಿದ್ದಾರೆ,  ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ.ಭೀಮ್ ಸಿಂಗ್ ಅವರ ಪುತ್ರಿ ಶಾರದಾಭಾಯಿ ಮತ್ತು ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಸನ್ಮಾನಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಎಂ ಪಿ ಸುಜಾಕುಶಾಲಪ್ಪ, ಮಾಜಿ ಸಚಿವ ಎಂ ಸಿ ನಾಣಯ್ಯ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ…

Read More

ಮಡಿಕೇರಿ ಸೆ.26 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 21ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಸೆ.24ರ ಸಂಜೆಯಿಂದ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ದುರ್ಗಾ ಸಪ್ತಶತಿ ಪಾರಾಯಣ, ಮಹಾಪೂಜೆ, ದೀಪರಾಧನೆ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೆ.25 ರಂದು ಮುಂಜಾನೆಯಿಂದ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಸಂಜೆ ವಾರ್ಷಿಕೋತ್ಸವ ಪ್ರಯುಕ್ತ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಕಳಶಸ್ಥಾಪನೆ, ದೀಪಾರಾಧನೆ, ಅಷ್ಠಾವಧಾನ ಸೇವೆ ಹಾಗೂ ತೀರ್ಥಪ್ರಸಾದ ವಿತರಿಸಲಾಯಿತು. ನಂತರ ಗುರುಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಕಲಾಹೋಮ, ತತ್ವಹೋಮ, ತತ್ವಶಾಂತಿ ಹೋಮ, ದುರ್ಗಾ ಹೋಮ, ತತ್ವಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ನಗರದ ವಿವಿಧ ಬಡಾವಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿತ್ತು.

Read More