ಲೇಖಕ: admin

ಮಡಿಕೇರಿ ಜೂ.3 NEWS DESK : ಇದೇ ಜೂನ್ 21 ರಂದು ನಡೆಯುವ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಬುಧವಾರ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವ ಅರಿತು ಸಂಬಂಧಪಟ್ಟ ವಿವಿಧ ಇಲಾಖೆಗಳು ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕು. ಶಾಲಾ, ಕಾಲೇಜು ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮತ್ತು ಬರಲು ಅಗತ್ಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಆಯುಷ್ ಇಲಾಖೆಯಿಂದ ಯೋಗಾಭ್ಯಾಸ ಮಾಡಿಸಬೇಕು ಮತ್ತು ಆಯುಷ್ ಇಲಾಖೆಯಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು. ಯೋಗ ಮತ್ತು ಪ್ರವಾಸೋದ್ಯಮದ ಸಹಯೋಗದಿಂದ ಜಿಲ್ಲೆಗೆ ಪ್ರವಾಸಿಗರು ಆಕರ್ಷಿಸುತ್ತಾರೆ. ಆ ಮೂಲಕ ಪ್ರವಾಸೋದ್ಯಮದ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಆಯುಷ್…

Read More

ಮಡಿಕೇರಿ ಮೇ 3 NEWS DESK : ಕಳೆದ ಹಲವು ದಿನಗಳಿಂದ ಸಾರ್ವಜನಿಕರು ಹಾಗೂ ಸಂಚಾರಕ್ಕೆ ಸವಾಲಾಗಿದ್ದ ಮಡಿಕೇರಿ ನಗರದ ರಾಜಾಸೀಟು ರಸ್ತೆಯ ಗುಂಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಆಟೋ ಚಾಲಕ ಮುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಗಮನ ಹರಿಸದಿದ್ದರೂ, ತಮ್ಮ ಆಟೋದಲ್ಲಿ ಇಟ್ಟಿಗೆ ತುಂಡುಗಳು ಮತ್ತು ಮಣ್ಣನ್ನು ತಂದುಕೊಟ್ಟರು ಗುಂಡಿಗಳನ್ನ ಮುಚ್ಚಿ ಸವಾರರಿಗೆ ನೆರವಾದರು. ವರದಿ : ಸುಮನ್ ಸುರೇಶ್ ಲಾಲಿಪಾಳ್ಯ   

Read More

     ಮಡಿಕೇರಿ ಜೂ.3 NEWS DESK : ಮನ-ಮನೆಯಲ್ಲಿ ಸರಸ್ವತಿ ನೆಲೆಸಿದರೆ ಲಕ್ಷ್ಮಿ ತನಿಷ್ಟಕ್ಕೆ ಒಲಿಯುವಳು. ಲಕ್ಷ್ಮಿ ಖಾಲಿಯಾದರೂ ಸರಸ್ವತಿ ಸಂಪನ್ನಳು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ದೃಢವಾದ ನುಡಿಗಳನ್ನಾಡಿದರು.  ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಮುಂದುಮನೆಯಲ್ಲಿ ನಡೆದ ಕೊಡವ ಪುಸ್ತಕ ಪತ್ತಾಯದ 11 ನೇ ಆವೃತ್ತಿಯನ್ನು ತೆರೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಚಯ್ಯ, ನಮ್ಮ ಬದುಕಿನಲ್ಲಿ ಓದಿ, ಕೇಳಿ, ತಿಳಿದು ಕಲಿತದ್ದು ಎಂದಿಗೂ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ. ಇದರೊಂದಿಗೆ ಪುಸ್ತಕಗಳಲ್ಲಿ ಅಡಗಿರುವ ಅಗಾದವಾದ ಜ್ಞಾನ ಎಂದಿಗೂ ಮಾಸುವುದಿಲ್ಲ. ಆದ್ದರಿಂದ ಪುಸ್ತಕದ ಜ್ಞಾನ ಎಂಬುವುದು ಒಳ್ಳೆಯ ಸಂಸ್ಕಾರ-ಸಂಸ್ಕೃತಿಗೆ ದಾರಿ ತೋರಿಸಬಲ್ಲದು. ಕೊಡವರ ವಿಶೇಷ ಸಂಸ್ಕೃತಿ ಇಡೀ ಜನಾಂಗದ ಹೆಸರನ್ನು ಎತ್ತಿ ಹಿಡಿಯಲು ಕಾರಣವಾಗಿದೆ. ಹೀಗಿರುವಾಗ ದಿನಕ್ಕೆ ಅರ್ಧ ಗಂಟೆಗಳ ಸಮಯವಾದರೂ ಮೊಬೈಲನ್ನು ದೂರವಿಟ್ಟು ಪುಸ್ತಕ ಓದುವ ಸಂಸ್ಕøತಿ ಬೆಳೆಸಿಕೊಳ್ಳುವುದು ಉತ್ತಮ ಎಂದರು. ಮುಂದುವರಿದು ಮಾತನಾಡಿದ ಅವರು, ಪಾಲಂದಿರ ಕುಟುಂಬದ ಹಿನ್ನಲೆ, ಹಿರಿಯರ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ನೀಡಿರುವ…

Read More

ಮಡಿಕೇರಿ NEWS DESK ಜೂ.3 : ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ‘ವಿಶೇಷ ತೀವ್ರ ಪರಿಷ್ಕರಣೆ’ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು, 2027ರ ಜನಗಣತಿ ಹಾಗೂ ರಾಷ್ಟಿçÃಯ ಜಾತಿ ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು. ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮತದಾರರ ಪಟ್ಟಿಯಲ್ಲಿ ಸಂಶಯಾಸ್ಪದ ಪೌರತ್ವ ಹೊಂದಿರುವವರನ್ನು ಸೇರ್ಪಡೆಗೊಳಿಸುತ್ತಿರುವುದರಿಂದ ಕೊಡವ ಭೂಮಿಯು ದೊಡ್ಡ ಪ್ರಮಾಣದ ಜನಸಂಖ್ಯಾ ಬದಲಾವಣೆಯನ್ನು ಎದುರಿಸುತ್ತಿದೆ. ಈ ಅಕ್ರಮ ಮತದಾರರ ಗುರುತಿನ ಚೀಟಿಗಳೇ ಕೊಡವರ ರಾಜಕೀಯ ಅಸ್ತಿತ್ವದ ವಿರೂಪಕ್ಕೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮತದಾರನನ್ನು ಭೌತಿಕವಾಗಿ ಪರಿಶೀಲಿಸಲು ಕೊಡಗು ಜಿಲ್ಲೆಯಲ್ಲಿ ಬೂತ್ ಮಟ್ಟದ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಬೇಕು. ಕೊಡವ ಭೂಮಿಯ ಮಣ್ಣಿಗೆ ಸಂಬAಧಿಸಿದ 1971ರ ಪೂರ್ವದ ಸಿಂಧು ಪೌರತ್ವ/ಪೂರ್ವಜರ ದಾಖಲೆಗಳನ್ನು…

Read More

ಮಡಿಕೇರಿ NEWS DESK ಜೂ.3 : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆ ಮಡಿಕೇರಿ ನಗರ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಇಂದಿರಾಗಾoಧಿ ವೃತ್ತ ಚೌಕಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಕಾಂಗ್ರೆಸ್ ನಗರಾಧ್ಯಕ್ಷ ಎ.ಎಸ್.ಪ್ರಕಾಶ್ ಆಚಾರ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರ ಘೋಷಣೆಗಳನ್ನು ಕೂಗಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಶಿಕಲಾ, ಕಾಂಗ್ರೆಸ್ ಮುಖಂಡರುಗಳಾದ ಕಲೀಲ್ ಬಾಷಾ, ಯಶ್ ದೋಲ್ಪಾಡಿ, ಫ್ಯಾನ್ಸಿ ಪಾರ್ವತಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಆರ್.ಪಿ, ಮುದ್ದುರಾಜು, ರವುಫ್ ಅಹಮದ್, ಕೋಚನ ಚೇತನ್, ಪುಷ್ಪ ಪೂರ್ಣಚ್ಚ, ನಂದ, ಸುಬ್ರಮಣಿ ಎಚ್.ಕೆ, ಜಿ.ಆರ್.ರಾಜು, ವಿ.ಕೆ.ನಜಿರ್ ಹುಸೇನ್, ಸದಾ ಮುದ್ದಪ್ಪ, ಜಗದೀಶ್ ಜಿ.ಸಿ, ಪವಿತ್ರ, ವಿಮಲಾ, ಪ್ರೇಮಾ, ಲೀಲಾ ಶೇಷಮ್ಮ,…

Read More

ಮಡಿಕೇರಿ NEWS DESK ಜೂ.3 : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಮಂತ್ರಿಮoಡಲದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಂಚೆಟ್ಟಿರ ಮನು ಮುದ್ದಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಹಾಗೂ ಕೊಡಗಿನ ಜನರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕದ್ವಯರನ್ನು ಸಚಿವರನ್ನಾಗಿ ಮಾಡುವ ಮೂಲಕ ಕಾವೇರಿ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಬೇಕು. ಜನಸ್ನೇಹಿ ಗುಣದ, ಅಭಿವೃದ್ಧಿಪರ ಚಿಂತನೆಯ ಇಬ್ಬರು ಶಾಸಕರು ಸಚಿವ ಸ್ಥಾನವನ್ನು ಹೊಂದಲು ಸಮರ್ಥರಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಜಿಲ್ಲೆಗೆ ಸಚಿವ ಸ್ಥಾನ ದೊರೆತ್ತಿಲ್ಲ ಎನ್ನುವ ಕೊರಗಿದೆ. ಪ್ರಸ್ತುತ ಬಹುಮತ ಹೊಂದಿರುವ ಕಾಂಗ್ರೆಸ್ ಸರಕಾರದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಲಭಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ…

Read More

ಮಡಿಕೇರಿ NEWS DESK ಜೂ.3 : ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ದಕ್ಷ ನಾಯಕ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಹಾಗೂ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ಯು.ಹ್ಯಾರೀಶ್ ಚೆಟ್ಟಿಮಾನಿ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ರಾಜ್ಯ ಮಟ್ಟದ ಸೇವೆಗಾಗಿ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಪ್ರಬಲ ಖಾತೆಯನ್ನು ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷಕ್ಕಾಗಿ ಹಗಲಿರುಳು ದುಡಿದ ನಿಷ್ಠಾವಂತ ನಾಯಕ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಈ ಸಂದರ್ಭ ನೂತನ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅಲ್ಲದೆ ವಿರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕ, ಅಭಿವೃದ್ಧಿಪರ ಚಿಂತನೆಯ ಜನಸೇವಕ ಎ.ಎಸ್.ಪೊನ್ನಣ್ಣ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ…

Read More

ಮಡಿಕೇರಿ NEWS DESK ಜೂ.3 : ಕರ್ನಾಟಕ ರಾಜಕೀಯದ ಮಹತ್ವದ ಘಟ್ಟದಲ್ಲಿ, ಜನಪರ ಆಡಳಿತದ ಶಕ್ತಿಯಾಗಿ ನಿಂತಿರುವ ಕಾಂಗ್ರೆಸ್ ಪಕ್ಷದ ನಾಯಕತ್ವ ಹೊಸ ದಿಕ್ಕಿನತ್ತ ಸಾಗುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಈ ಸುಸಂದರ್ಭದಲ್ಲಿ ಕೊಡಗು ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಮುಸ್ಲಿಮರಿಗೆ ವಿಧಾನ ಪರಿಷತ್ ನಲ್ಲಿ ಮತ್ತು ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಡವರ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕ, ನುಡಿದಂತೆ ನಡೆದ ಜನನಾಯಕ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲಿ ಮೂಡಿಸಿರುವ ಛಾಪು ಸದಾ ಅಜರಾಮರ. ಅವರ ಅನುಭವ, ದೂರದೃಷ್ಟಿ ಮತ್ತು ಜನಪರ ಚಿಂತನೆ ಮುಂದಿನ ದಿನಗಳಲ್ಲಿಯೂ ಕರ್ನಾಟಕಕ್ಕೆ ದಾರಿದೀಪವಾಗಿರಲಿ ಎಂಬುವುದು ನಮ್ಮ ಹಾರೈಕೆಯಾಗಿದೆ ಎಂದು ತಿಳಿಸಿದ್ದಾರೆ. ಸಂಕಷ್ಟದ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಮುನ್ನಡೆಸಿದ, ಸಂಘಟನೆಯ ಶಕ್ತಿಯಾಗಿ ದುಡಿದ, ಕಾರ್ಯಕರ್ತರ ನಂಬಿಕೆಯ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ನಾಯಕತ್ವದ ಅವಕಾಶ…

Read More

ವಿರಾಜಪೇಟೆ ಜೂ.3 NEWS DESK : ಕಾನೂನು ಮತ್ತು ಆಡಳಿತಾತ್ಮಕವಾಗಿ ಉತ್ತಮ ತಿಳುವಳಿಕೆ ಹೊಂದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ನೂತನ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲು ಕೊಡಗು ಜಿಲ್ಲಾ ಕಾಂಗ್ರೇಸ್ ಸಮಿತಿ ಸದಸ್ಯ ಮಾಳೇಟಿರ ಬೆಲ್ಲು ಬೋಪಯ್ಯ ಅವರು ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕ್ಷೇತ್ರವನ್ನು ಶಾಸಕ ಪೊನ್ನಣ್ಣ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದು, ಸರಕಾರಕ್ಕೆ ಮತ್ತು ರಾಜ್ಯದ ಹಿತಾಸಕ್ತಿಗೆ ಸಮಸ್ಯೆ ಬಂದಾಗ ನಿಭಾಯಿಸುವ ಸಾಮಥ್ರ್ಯ ಅವರಿಗಿದೆ. ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ಅವರು ತೋರಿದ್ದಾರೆ. ಸಚಿವರಾಗಿ ಪೊನ್ನಣ್ಣ ಅವರು ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರಕಾರದೊಂದಿಗೆ ಸಮಾಲೋಚಿಸುವ, ವ್ಯವಹಾರ ಮಾಡುವ, ಮನವರಿಕೆ ಮಾಡುವ, ನಿಭಾಯಿಸುವ ಸ್ವಂತ ಚಿಂತನೆ ಹೊಂದಿದ್ದಾರೆ. ಆದರೇ ಇವೆಲ್ಲವನ್ನು ನಿರ್ವಹಿಸಲು ಸೂಕ್ತ ಸಚಿವ ಸ್ಥಾನದ ಮೂಲಕ ಪೊನ್ನಣ್ಣ ಅವರಿಗೆ ಅಧಿಕಾರ ನೀಡಬೇಕು ಎಂದು ಬೆಲ್ಲು ಬೋಪಯ್ಯ ಆಗ್ರಹಿಸಿದ್ದಾರೆ.

Read More

ವಿರಾಜಪೇಟೆ ಜೂ.3 NEWS DESK : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮುಕ್ಕಾಟಿರ ವಿನಿತ ಕಾವೇರಮ್ಮ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೇಸ್ ಪಕ್ಷದ ಶಾಸಕರುಗಳು, ಜಿಲ್ಲಾ ಅಧ್ಯಕ್ಷರು, ಹಿರಿಯ ಕಾಂಗ್ರೇಸ್ ನಾಯಕರುಗಳ ಸಲಹೆಯ ಮೇರೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿಯವರ ಆದೇಶದ ಮೇರೆಗೆ ವಿನಿತಾ ಕಾವೇರಮ್ಮ ಅವರನ್ನು ಪ್ರಧಾನ ಕಾರ್ಯದರ್ಶೀಯಾಗಿ ನೇಮಿಸಲಾಗಿದೆ. ಇವರು ಮೂಲತಃ ವಿರಾಜಪೇಟೆ ತಾಲೂಕಿನ ಕಡಂಗ ಮರೂರು ಗ್ರಾಮದ ಮುಕ್ಕಾಟಿರ ಕರುಂಬಯ್ಯ ಅವರ ಪತ್ನಿ. ಇವರು ಹಲವಾರು ವರ್ಷಗಳೀಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರಲ್ಲದೆ, ಪ್ರಸ್ತುತ ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Read More