ಮಡಿಕೇರಿ NEWS DESK ಆ.11 : ವಿಶ್ವದೆಲ್ಲೆಡೆ ಹಿಂದೂಗಳನ್ನು ಸಂಘಟಿಸುವ ಕಾರ್ಯದಲ್ಲಿ ಸಕ್ರಿಯವಾಗಿರುವ ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಾಲಯದ ನೂತನ ಭವನ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಆರ್ಟ್ ಆಫ್ ಲೀವಿಂಗ್‌ನ ಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹಾಗೂ ವಿಶ್ವ ಹಿಂದೂ ಪರಿಷದ್ ನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬೆಂಗಳೂರಿನ ಚಾಮರಾಜಪೇಟೆ ಶಂಕರಮಠದ ಸಮಾನಾಂತರ ರಸ್ತೆಯಲ್ಲಿರುವ ವಿಹಿಂಪ ಕಚೇರಿ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಯಾಲಯದ ಕಟ್ಟಡಕ್ಕೆ “ಧರ್ಮಶ್ರೀ” ಎಂದು ನಾಮಕರಣ ಮಾಡಲಾಗಿದೆ. ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಪ್ರಚಾರಕ್ಕಾಗಿ ಜಗತ್ತಿನಾದ್ಯಂತ ಇರುವ ಹಿಂದುಗಳನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿರುವ ವಿಶ್ವ ಹಿಂದು ಪರಿಷದ್ ನ ವಿವಿಧ ವಿಭಾಗಗಳು ನೂತನ ಭವನ “ಧರ್ಮಶ್ರೀ” ಯಲ್ಲಿ ಕಾರ್ಯನಿರ್ವಸಲಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೊಡಗು ಜಿಲ್ಲೆಯ…
ಲೇಖಕ: admin
ಮಾದಾಪುರ NEWS DESK ಆ.10 : ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಪ್ರಕೃತಿಯ ಮೇಲಿನ ದಾಳಿಯೇ ಇತ್ತೀಚೆಗೆ ಸಂಭವಿಸಿದ ವಿಕೋಪಗಳಿಗೆ ಕಾರಣ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಉತ್ತರ ಕೊಡಗಿನ ಮಾದಾಪುರದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟಿçÃಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿAದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. ಸೂರ್ಲಬ್ಬಿ ನಾಡಿನ ಪಕ್ಕದಲ್ಲೇ ಇರುವ…
ಗೋಣಿಕೊಪ್ಪ NEWS DESK ಆ.10 : ಕಾಫಿ ಮಂಡಳಿ ಗೊಣಿಕೊಪ್ಪಲು ವತಿಯಿಂದ ಬಾಳೆಲೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬಾಳೆಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅ.13 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಮರ್ಥ್ಯ ನಿರ್ಮಾಣ ಕಾರ್ಯಗಾರ ನಡೆಯಲಿದೆ. ಈ ವರ್ಷದ ಅಧಿಕ ಮಳೆಯಿoದಾಗಿ ಕಾಫಿ ಗಿಡಗಳಲ್ಲಿ ಕಾಣಿಸಿಕೊಂಡಿರುವ ಕೊಳೆರೋಗ ಕಾಫಿ ಉದುರುವಿಕೆ, ಮರು ನಾಟಿ, ಗೋದಾಮು, ಕಾಫಿ ಕಣ, ಹೊಸ ಕೆರೆ, ಬಾವಿ, ಹನಿ ನೀರಾವರಿ ಉಪಕರಣ, ಮೋಟಾರ್ ಸಬ್ಸಿಡಿ ಮತ್ತಿತರ ವಿಚಾರಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು. ಬೆಳೆಗಾರರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಕಾಫಿ ಮಂಡಳಿ ಮನವಿ ಮಾಡಿದೆ.
ಕೊಡ್ಲಿಪೇಟೆ NEWS DESK ಆ.10 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಶೀರ್ಷಿಕೆಯೊಂದಿಗೆ ಆಗಸ್ಟ್ 15 ರಂದು ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಸಂಜೆ 4 ಗಂಟೆಗೆ ಸುಂಟಿಕೊಪ್ಪದಲ್ಲಿ ನಡೆಯುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದ ಪ್ರಚಾರ ಕೊಡ್ಲಿಪೇಟೆ ಎಸ್ ಕೆ ಎಸ್ ಎಸ್ ಎಫ್ ಶಾಖಾ ಕಚೇರಿಯಲ್ಲಿ ನಡೆಯಿತು. ಪ್ರಚಾರ ಕಾರ್ಯಕ್ರಮದಲ್ಲಿ SYS ಕೊಡಗು ಉಪಾಧ್ಯಕ್ಷರಾದ ಹಂಸ ಹಾಜಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ, ಪ್ರಮುಖರಾದ ಹಮೀದ್ ಮೌಲವಿ, ಜಿಲ್ಲಾ ನಾಯಕರುಗಳು, ಎಸ್ ವೈ ಎಸ್ ಆಮಿಲಾ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್, ಸದಸ್ಯರುಗಳಾದ ಉಮ್ಮರ್, ಶೇಖಬ್ಬ, ಎಸ್ ಕೆ ಎಸ್ ಎಸ್ ಎಫ್ ಜೊತೆ ಕಾರ್ಯದರ್ಶಿ ಮುಸ್ತಫಾ ಸಬ್ಬಿ ಹಾಗೂ ಶಾಖೆಯ ಇತರ ಸದಸ್ಯರುಗಳು ಭಾಗವಹಿಸಿದ್ದರು.
ವಿರಾಜಪೇಟೆ NEWS DESK ಆ.10 : ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕರಾದ ಸಂತೋಷ್ ಹೆಬ್ಬಾರ್ ಮತ್ತು ಪವನ್ ಕುಮಾರ್ ಭಟ್ ಸಾರಥ್ಯದಲ್ಲಿ ಗಣಪತಿ ಹೋಮ, ನವಗ್ರಹ ಪೂಜೆ, ಶನಿ ಶಾಂತಿ,ಶನಿ ಜಪ, ರಾಹು ಕೇತು ಜಪ, ಕುಂಕುಮಾರ್ಚನೆ, ಮೃತ್ಯುಂಜಯ ಜಪ ಪೂಜಾದಿಗಳು ಜರುಗಿತು. ಮಧ್ಯಾಹ್ನ ಶ್ರೀ ಶನೀಶ್ವರ ಸ್ವಾಮಿಗೆ ಮಹಾ ಮಂಗಳಾರತಿ, ಮಾಹಾಪೂಜೆ ನೆರವೇರಿತು. ದೇಗುಲ ತಕ್ಕರಾದ ಚೊಕಂಡ ರಮೇಶ್ ಮತ್ತು ಕುಟುಂಬಸ್ಥರು, ಪುರೋಹಿತ ವರ್ಗ, ಗ್ರಾಮಸ್ಥರು, ನಗರ ಮತ್ತು ಸ್ಥಳೀಯ ಗ್ರಾಮಗಳಿಂದ ಅಧಿಕ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ತಾ 17 ,24, 31 ರಂದು ಶ್ರಾವಣ ಶನಿವಾರದ ವಿಶೇಷ ಪೂಜೆಗಳು ನಡೆಯಲಿದೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಚಾಮರಾಜನಗರ NEWSDESKಆ.10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ” ವನ್ನು ಉದ್ಘಾಟಿಸಿ ಮಾತನಾಡಿದರು. ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದರಾದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಸಿದ್ದಾಪುರ NEWS DESK ಆ.10 : ತಿತಿಮತಿ ಅರಣ್ಯ ವಲಯದ ಚೆನ್ನಂಗಿ ವ್ಯಾಪ್ತಿಯ ಬಾಡಗಬಾಣಂಗಾಲ, ಹುಂಡಿ, ಮಠ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ 32 ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಸಫಲರಾದರು. ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳನ್ನು ಓಡಿಸಿದರು. ಸುಮಾರು 8 ಕೀಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ 32 ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಈ ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದವು. ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಮತ್ತು ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ.ಟಿ, ದೇವರಾಜ್ ಡಿ., ಅರಣ್ಯ ಪಾಲಕ ರಾಜೇಶ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಚಿನ್, ಶಂಕರ್,…
ಮಡಿಕೇರಿ ಆ.10 NEWS DESK : ಗ್ರಾಮೀಣ ಸೊಗಡಿನ ಜಾನಪದ ಕಲೆಯ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ ಸಮೀಪ ಕಗ್ಗೋಡ್ಲುವಿನ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು. ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾದ ಮಡಿಕೇರಿ ಘಟಕ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೊಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಜಿಲ್ಲೆಯ ಹಲವು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ, ಸಾರ್ವಜನಿಕ ಪುರುಷರ ವಾಲಿಬಾಲ್, ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್, ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ, ಪ್ರೌಢಶಾಲಾ ಬಾಲಕ-ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು, ಅದರಲ್ಲೂ ಹಗ್ಗಜಗ್ಗಾಟ ಸ್ಪರ್ಧೆ ಅತ್ಯಂತ ಕುತೂಹಲಕಾರಿಯಾಗಿ ನಡೆದು ಗಮನ ಸೆಳೆಯಿತು. ಉದ್ಘಾಟನೆ :: ಕ್ರೀಡಾಕೂಟವನ್ನು ಕ್ರೀಡಾ ಇಲಾಖೆ ಅಧಿಕಾರಿ…
ಮಡಿಕೇರಿ ಆ.10 NEWS DESK : ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜರ್ಕಿನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಳೆ ಮತ್ತು ಚಳಿ ಯಿಂದ ಮಕ್ಕಳಿಗೆ ರಕ್ಷಣೆಯನ್ನು ನೀಡುವ ಉದ್ದೇಶದಿಂದ ರೋಟರಿ ವುಡ್ಸ್ ವತಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು 47 ವಿದ್ಯಾರ್ಥಿಗಳು ಈ ಯೊಜನೆಯ ಉಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ರೊಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್ ವಿದ್ಯಾರ್ಥಿಗಳು ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆಯೂ, ಮಕ್ಕಳು ಆರೋಗ್ಯವನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಆರೋಗ್ಯವಂತ ಪ್ರಜೆಗಳಾಗುವಂತೆ ಕರೆ ನೀಡಿದರು. ಜರ್ಕಿನ್ ಗಳನ್ನು ಕೊಡುಗೆಯಾಗಿ ನೀಡಿದ ರೋಟರಿ ವುಡ್ಸ್ ಸಂಸ್ಥೆಯ ನಿದೇ೯ಶಕ .ಬಾಲಸುಬ್ರಹ್ಮಣ್ಯ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಣ ಬಹಳ ಮುಖ್ಯ. ಭವಿಷ್ಯದಲ್ಲೂ ಶಾಲೆಗೆ ಕೊಡುಗೆಗಳನ್ನು ನೀಡಲು ತಾನು ಸಿದ್ಧ ಎಂದು ಘೋಷಿಸಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸವಿತ, ರೋಟರಿ ಮಡಿಕೇರಿ ವುಡ್ಸ್ ನಿದೇ೯ಶಕರಾದ ಭಗತ್ ರಾಜ್, ರಂಜಿತ್ ಕಿಗ್ಗಾಲ್, ಪಿ.ರವಿ, ಲೋಕೇಶ್, ಕಶ್ಯಪ್,…
ಮಡಿಕೇರಿ ಆ.10 NEWS DESK : ಕೊಡಗು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಮತ್ತು ಮಹಾಮೈತ್ರಿ ಬೌದ್ಧ ವಿಹಾರ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಪರಿಕಲ್ಪನೆಯಂತೆ ಬಸವ ಪಂಚಮಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಹಾಗೂ ನಿಲಯದ ವಿದ್ಯಾರ್ಥಿಗಳು ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್, ಬಸವಣ್ಣನವರ ವೈಚಾರಿಕ ದೃಷ್ಟಿಕೋನದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಪರಿಕಲ್ಪನೆಯಂತೆ ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡುವ ಬದಲು ಹಸಿದ ಮಕ್ಕಳಿಗೆ ಹಾಲುಣಿಸುವ ಬಸವ ತತ್ವ ಪರಿಪಾಲನೆಗೆ ಇಡೀ ರಾಜ್ಯ ಮಾದರಿಯಾಯಿತು ಎಂದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್.ಪಾಲಾಕ್ಷ ಮಾತನಾಡಿ, ವಿದ್ಯಾರ್ಥಿಗಳು ಮೌಡ್ಯಾಚಾರಣೆಗಳಿಂದ ದೂರ ಉಳಿದು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಮತ್ತು ವೈಚಾರಿಕತೆಯ…






