ಮಡಿಕೇರಿ NEWS DESK ಜು.29 : ಕರ್ನಾಟಕ ಜೂನಿಯರ್ ಫುಟ್ಬಾಲ್ ತಂಡಕ್ಕೆ ಕುಂಜಿಲ ಗ್ರಾಮದ ಕುಂಡಂಡ ಯೂಸುಫ್ ಮತ್ತು ನಸೀಮಾ ಅವರ ಮಗ ನಿಯಾಬ್ ಆಯ್ಕೆಯಾಗಿದ್ದಾರೆ, ತಾ ಜುಲೈ 27ರಿಂದ ಆಗಸ್ಟ್ 12ರ ವರೆಗೆ ಛತ್ತೀಸ್ಗಡದಲ್ಲಿ ನಡೆಯಲಿರುವ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್ ಬಿಸಿ ರಾಯ್ ಟ್ರೋಫಿ ಪಂದ್ಯಾವಳಿಯಲ್ಲಿ ಕೊಡಗಿನ ನಿಯಾಬ್ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ, ನಿಯಾಬ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಕಕ್ಕಬೆಯ ಕೆಸಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪಡೆದು ಸದ್ಯ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಡಿ ವೈ ಈ ಎಸ್ ಕ್ರೀಡಾ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.
ಲೇಖಕ: admin
ಮಡಿಕೇರಿ NEWS DESK ಜು.29 : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಎಲ್.ಅನಂತರಾವ್ ನೇಮಕಗೊಂಡಿದ್ದಾರೆ. ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ ಹಾಗೂ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುನೀಲ್ ಚವ್ಹಾಣ್ ಅವರು ಅನಂತರಾವ್ ಅವರಿಗೆ ನೇಮಕಾತಿ ಪತ್ರ ನೀಡಿದರು. ಈ ಸಂದರ್ಭ ರಾಜ್ಯ ಖಜಾಂಚಿ ಟಿ.ಆರ್.ವೆಂಕಟ ರಾವ್ ಚವ್ಹಾಣ್, ಸಲಹೆಗಾರ ವಿಠ್ಠಲ ರಾವ್ ಗಾಯಕ್ವಾಡ್, ವ್ಯವಸ್ಥಾಪಕ ಶ್ರೀನಿವಾಸ ಮಗರ್ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಜು.29 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಸಂಪಾಜೆ ಸ್ಥಳೀಯ ಸಂಸ್ಥೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ ರಕ್ತನಿಧಿ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜು.31 ರಂದು ಚೆಂಬು ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಧನAಜಯ ತಿಳಿಸಿದ್ದಾರೆ. ಚೆಂಬು ಸರಕಾರಿ ಪ್ರೌಢಶಾಲೆ, ಭಗವಾನ್ ಸಂಘ, ಗರುಡ ಯುವ ಬಳಗ, ಸ್ವಾಮಿ ವಿವೇಕಾನಂದ ಯುವಕ ಮಂಡಳಿ, ದಬ್ಬಡ್ಕ ಶ್ರೀ ರಾಮ ಯುವಕ ಮಂಡಳಿ, ಕುದ್ರೆಪಾಯ ಶ್ರೀ ದೇವಿ ಭಜನಾ ಮಂಡಳಿ, ಕಲೇರಿ ಫ್ರೆಂಡ್ಸ್, ಚೆಂಬು ಮಿತ್ರಕೂಟ ಕ್ರೀಡಾ ಸಂಘ, ಗೆಳೆಯರ ಬಳಗ, ಬಾಲಂಬಿ ಕೇಸರಿ ಯುವ ಬಳಗ, ಚೆಂಬು ಗ್ರಾಮಸ್ಥರ ಸಹಕಾರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚೆಂಬು ಒಕ್ಕೂಟದ ಸಹಯೋಗದೊಂದಿಗೆ ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1…
ಮಡಿಕೇರಿ ಜು.29 NEWS DESK : ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣ ಅವರ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಜು.24 ರಂದು ಕುಶಾಲನಗರದ ಕೊಪ್ಪ ಸೇತುವೆ ಬಳಿ ಅರುಣ (52) ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಉಪ ವಿಭಾಗಾಧಿಕಾರಿಗಳ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅರುಣ ಅವರು ಮಧ್ಯಾಹ್ನದ ನಂತರ ಕೊಪ್ಪಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕುಶಾಲನಗರದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ನುರಿತ ಈಜು ತಜ್ಞರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದರು.
ಮಡಿಕೇರಿ NEWS DESK ಜು.29 : ವಾಯುಸೇನೆಯ ನಿವೃತ್ತ ಅಧಿಕಾರಿ, ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯ ನಿವಾಸಿ ಬೈತಡ್ಕ ಬೆಳ್ಳಿಯಪ್ಪ (81) ಅವರು ನಿಧನ ಹೊಂದಿದ್ದಾರೆ. ಹಾವು ಕಡಿತಕ್ಕೆ ಒಳಗಾಗಿದ್ದ ಅವರನ್ನು ಚಿಕಿತ್ಸೆಗೆಂದು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಾಲುಜಾರಿ ಬಿದ್ದಿದ್ದರು ಎಂದು ತಿಳಿದು ಬಂದಿದೆ. ಚಿಕಿತ್ಸೆ ಫಲಕಾರಿಯಾಗದೆ ಬೆಳ್ಳಿಯಪ್ಪ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಹಿರಿಯ ಸಾಹಿತಿ ಬೈತಡ್ಕ ಜಾನಕಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೈತಡ್ಕ ಬೆಳ್ಳಿಯಪ್ಪ ಅವರು ಸೇನಾ ಸೇವೆಯ ನಂತರ ಜೀವವಿಮಾ ನಿಗಮದಲ್ಲೂ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೈಸೂರು ಜು.29 NEWS DESK : ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಎನ್.ಚೆಲುವರಾಯಸ್ವಾಮಿ, ವೆಂಕಟೇಶ್, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಪೋಕ್ಲು ಜು.29 NEWS DESK : ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾರೆ. ಸೈನಿಕರ ತ್ಯಾಗ ಬಲಿದಾನವನ್ನು ಪ್ರತಿದಿನ ಸ್ಮರಿಸಬೇಕಾಗಿದೆ ಎಂದು ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು. ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂರ‍್ಭ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಬಿದ್ದಾಟಂಡವ ಮೇರಿ ಚಿಟ್ಟಿಯಪ್ಪ, ಕರ‍್ಯರ‍್ಶಿ ಕುಂಚಟ್ಟಿರ ರೇಷ್ಮಾ ಉತ್ತಪ್ಪ, ಕೋಶಾಧಿಕಾರಿ ಕಾಂಡಂಡ ರೇಖಾ ಪೊನ್ನಣ್ಣ ಪೇರೂರು ಗ್ರಾಮದ ನಿವೃತ್ತ ಸುಬೇದಾರ್ ಪಾಲೆಯಡ ಡಾಲು ಪೂಣಚ್ಚ ಅವರ ನಿವಾಸಕ್ಕೆ ತೆರಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬೇದಾರ್ ಡಾಲು ಪೂಣಚ್ಚ ತಮ್ಮ ಸೇವೆಯ ಸಿಹಿಕಹಿ ಅನುಭವಗಳನ್ನು ಮೆಲುಕು ಹಾಕಿದರು. ಕರ‍್ಯಕ್ರಮದಲ್ಲಿ ಸನ್ಮಾನಿತರ ಕುಟುಂಬಸ್ಥರು, ಲಯನ್ಸ್ ಕ್ಲಬ್ ನ ಸದಸ್ಯರಾದ ಮುಕ್ಕಾಟಿರ ವಿನಯ್, ಮಾದೆಯಂಡ ಬಿ.ಕುಟ್ಟಪ್ಪ, ಅಪ್ಪಚೆಟ್ಟೋಳಂಡ ಪಿ.ಮುತ್ತಪ್ಪ, ಕುಂಡ್ಯೋಳಂಡ ಮುತ್ತಪ್ಪ, ಅಪ್ಪಾರಂಡ ಎಸ್.ಶುಭಾಷ್ ತಿಮ್ಮಯ್ಯ,…
ನಾಪೋಕ್ಲು ಜು.29 NEWS DESK : ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಮಂಡಲದ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯ ಕಾರ್ಯಕಾರಣಿ ಸದಸ್ಯ ಮನು ಮುತ್ತಪ್ಪ, ಪ್ರಮುಖರಾದ ರಾಬಿನ್ ದೇವಯ್ಯ, ಕಾಂಗೀರ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಂಡಲ ಪ್ರಧಾನ ಕಾರ್ಯದರ್ಶಿ ನೆಲ್ಲಚಂಡ ಕಿರಣ್ ಕರ‍್ಯಪ್ಪ ಮತ್ತು ಡಿನ್ ಬೋಪಣ್ಣ, ಜಿಲ್ಲಾ ವಕ್ತಾರ ತಳೂರ್ ಕಿಶೋರ್ ಕುಮಾರ್ ಉಪಸ್ಥಿತರಿದ್ದು, ಕೆಲವು ಪ್ರಮುಖ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ದುರಸ್ತಿ ಕಾರ್ಯಗಳನ್ನು ವಿದ್ಯುತ್ ಇಲಾಖೆ ಸರಿಯಾಗಿ ಮಾಡದೆ ಇರುವುದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಒದಗಿಸಬೇಕು, ಗ್ರಾಮೀಣ ರಸ್ತೆಗಳು ತೀವ್ರ ಹದಗೆಟ್ಟಿದ್ದು ದುರಸ್ತಿ ಕಾಣದೆ ಸರ‍್ವಜನಿಕರಿಗೆ ಓಡಾಟಕ್ಕೆ ತುಂಬಾ ಕಷ್ಟಕರವಾಗಿರುವುದರಿಂದ ಆದಷ್ಟು…
ನಾಪೋಕ್ಲು ಜು.29 NEWS DESK : ಅಯ್ಯ೦ಗೇರಿ ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿದೆ. ಕಡವಡಿರ ತಮ್ಮಯ್ಯ ಹಾಗೂ ಸುತ್ತಮುತ್ತಲ ಕಾಫಿ ತೋಟಗಳಿಗೆ ಧಾಳಿ ಮಾಡಿರುವ ಕಾಡಾನೆಗಳು. ಕಾಫಿಯ ಗಿಡಗಳ ರೆಂಬೆಗಳನ್ನು ಮುರಿದು ನಷ್ಟಪಡಿಸಿವೆ . ಕಾಫಿ ತೋಟಗಳಲ್ಲೇ ಕಾಡಾನೆಗಳು ಬೀಡುಬಿಟ್ಟಿದ್ದು, ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿ ಸುತ್ತಾಡುವ ಕಾಡಾನೆಗಳಿಂದಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಆತಂಕದಲ್ಲೇ ಶಾಲಾ, ಕಾಲೇಜುಗಳಿಗೆ ತೆರಳುವಂತಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. – ವರದಿ : ದುಗ್ಗಳ ಸದಾನಂದ.
ಮಡಿಕೇರಿ ಜು.29 NEWS DESK : ದೇಚೂರು ಶ್ರೀರಾಮ ಮಂದಿರದ 106 ನೇ ವರ್ಷದ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಆರ್.ಪಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ್ ಕೆ.ಆರ್, ನಿರಂಜನ್ ಪಿ.ಜೆ, ಖಜಾಂಚಿಯಾಗಿ ಕೆ.ಎಸ್.ವಾಸುದೇವ್, ಉಪಾಧ್ಯಕ್ಷರಾಗಿ ದೇವರಾಜ್, ಪಾಪು ರವಿ, ಉಮೇಶ್ ಗೌಡ, ಕಾರ್ಯದರ್ಶಿಗಳಾಗಿ ಧನುಷ್, ಹರ್ಷಿತ್, ಕಿರಣ್, ರಾಹುಲ್, ಗೌರವ್, ಅರುಣ್ ಗೌಡ ಹಾಗೂ ಗೌರವ ಅಧ್ಯಕ್ಷರಾಗಿ ವಿಜಯಕುಮಾರ್ (ಬಾಬು) ನೇಮಕಗೊಂಡಿದ್ದಾರೆ. ದೇಚೂರು ಶ್ರೀರಾಮ ವಿದ್ಯಾಗಣಪತಿ ದೇವಾಲಯದ ಅಧ್ಯಕ್ಷ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.






