ಗೋಣಿಕೊಪ್ಪ ಸೆ.10 NEWS DESK : ಗೋಣಿಕೊಪ್ಪ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ (ಕೆ.ಎನ್.ಎಸ್.ಎಸ್) ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಮೆನೋನ್, ಕಾರ್ಯದರ್ಶಿಯಾಗಿ ಸರಳ ಮಣಿ ಲಾಲ್ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪ ಹೋಟೆಲ್ ಪ್ರಕಾಶ್ ಇಂಟನ್ರ್ಯಾಷನಲ್ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಸಿ.ಮೋಹನ್, ಜಂಟಿ ಕಾರ್ಯದರ್ಶಿ ಬಿ.ಎಸ್.ವಿಜಯಕುಮಾರ್, ಖಜಾಂಚಿಯಾಗಿ ಉತ್ತಮನ್, ನಿರ್ದೇಶಕರುಗಳಾಗಿ. ಪಿ.ಭಾಸ್ಕರ್, ಅಜಿತ್ ವೇಣುಕಣ್ಣನ್, ಉಣ್ಣಿ ಕೃಷ್ಣನ್, ಟಿ.ವಿ.ವಿಜಯಕುಮಾರ್, ಪಿ.ವಿ.ಚಂದ್ರ, ವಿನೋದ್‍ಕುಮಾರ್, ಸುರೇಶ್ ಬಾಬು, ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಲೇಖಕ: admin
ಮಡಿಕೇರಿ NEWS DESK ಸೆ.10 : ಬೆಂಗಳೂರಿನ ಗ್ಲೋಬಲ್ ಜ್ಞಾನ್ ಅಕಾಡೆಮಿಯ 5 ನೇ ಜಾಗತಿಕ ಅತ್ಯುತ್ತಮ ಸಮುದಾಯ ಶಿಕ್ಷಕಿ ಪ್ರಶಸ್ತಿಗೆ ಮಡಿಕೇರಿಯ ವಿ.ಎ.ನಮ್ರೀನ್ ಆಸಿಫ್ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿ.ಎ.ನಮ್ರೀನ್ ಆಸಿಫ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಉಪಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಗ್ಲೋಬಲ್ ಜ್ಞಾನ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ರುಕ್ಸಾನಾ ಹಾಸನ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸುಮಾರು ಒಂದು ಸಾವಿರ ಶಿಕ್ಷಕರಲ್ಲಿ 100 ಮೆರಿಟ್ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡ ವಿ.ಎ.ನಮ್ರೀನ್ ಆಸಿಫ್ ಅವರು, ಇದರಲ್ಲಿ ಆಯ್ಕೆಯಾದ 15 ಅತ್ಯುತ್ತಮ ಶಿಕ್ಷಕರಲ್ಲಿ ಮೊದಲ ಸ್ಥಾನ ಗಳಿಸಿದರು. ನಮ್ರೀನ್ ಆಸಿಫ್ ಅವರು ದಕ್ಷಿಣ ಕನ್ನಡ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ವಾಂಸಕಿಯಾಗಿದ್ದು, ಇವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್.ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್.ನಸೀಮಾ ದಂಪತಿಗಳ ಪುತ್ರಿ.
ನಾಪೋಕ್ಲು ಸೆ.9 NEWS DESK : ಯಾವುದೇ ಜನಾಂಗ ಭೌತಿಕವಾಗಿ ಅಭಿವೃದ್ಧಿ ಹೊಂದುವುದಕ್ಕಿಂತಲೂ ಬೌದ್ಧಿಕವಾಗಿ ಅಭಿವೃದ್ಧಿ ಹೊಂದಲು ಗಮನಹರಿಸಬೇಕು. ಬೌದ್ಧಿಕವಾಗಿ ಅಭಿವೃದ್ಧಿ ಹೊಂದಿದಾಗ ಮುಂದಿನ ತಲೆಮಾರು ಸುಸಂಸ್ಕೃತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಭಿಪ್ರಾಯಪಟ್ಟರು. ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ನಡೆದ ಕೈಲ್ ಮುಹೂರ್ತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗೌಡ ಜನಾಂಗಕ್ಕೆ ವಿಶಿಷ್ಟವಾದ ಭಾಷೆ ಇರುವುದೇ ಹೆಮ್ಮೆ. ಅಂತಹ ಭಾಷೆಯನ್ನು ಉಳಿಸಿ ಬೆಳೆಸಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎಂದರು. ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ದಯಾನಂದ ಮಾತನಾಡಿ, ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತವನ್ನು ಕೊಡಗಿನ ಹೊರಗಡೆ ನೆಲೆಸಿರುವ ಗೌಡ ಸಮಾಜದವರು ಆಚರಿಸಿಕೊಂಡು ಬರುವುದರಿಂದ ಸಮುದಾಯದ ಜನರಲ್ಲಿ ಬಾಂಧವ್ಯ ಬೆಳೆಸಲು ಸಾಧ್ಯವಾಗುತ್ತದೆ ಎಂದರು. ಗೌಡ ಸಮಾಜದ ಹಿರಿಯರು ಬೇರೆ ಬೇರೆ ಊರುಗಳಲ್ಲಿ ಸಮಾಜ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಅದರ…
ನಾಪೋಕ್ಲು ಸೆ.10 NEWS DESK : ಬಕ್ಕದ ಕೈಲ್‍ಮುಹೂರ್ತ (ಕೈಲ್‍ಪೊಳ್ದ್) ಕ್ರೀಡಾ ಮಂಡಳಿ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಕೈಲ್‍ಮುಹೂರ್ತ (ಕೈಲ್‍ಪೊಳ್ದ್) ಕ್ರೀಡಾಕೂಟವನ್ನು ಸೆ.29 ರಂದು ಬಕ್ಕದಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಕ್ರೀಡಾಮಂಡಳಿ ವತಿಯಿಂದ ಕ್ರೀಡಾ ಮಂಡಳಿಯ ಅಧ್ಯಕ್ಷರಾದ ಬೈತಡ್ಕ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಬಕ್ಕದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಂದು ಬೆಳಿಗ್ಗೆ 10 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಕ್ರೀಡಾಕೂಟದಲ್ಲಿ ಕಿರಿಯರಿಂದ ವಯಸ್ಕರ ವರೆಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ , ಬಹುಮಾನ ವಿತರಣೆ ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಹಿರಿಯರಾದ ಹೊಸೊಕ್ಲು ಮೊಣ್ಣಪ್ಪ, ನೈಯ್ಯಣಿ ಹೇಮಕುಮಾರ್, ಹೊಸೊಕ್ಲು ಕಿಶೋರ್, ಯಶೋದ, ಪುದಿಯನೆರವನ ವೆಂಕಟೇಶ್, ಸದ, ಅರುಣ, ನೈಯ್ಯಣಿ ಶಾರದಾ ,ಶಾಂತಿ, ಉಮೇಶ್ ನೆಯ್ಯಣಿ, ಸೂದನ ಸುಜಿ , ಕುಂಜಿಲನ ಲೋಕನಾಥ್, ಬಾಡನ ಸತೀಶ್, ಕಡ್ಲೇರ ತುಳಸಿ ಮೋಹನ್ , ಸ್ಥಳೀಯ ಸ್ವಸಹಾಯ ಸಂಘಗಳು ಸ್ತ್ರೀ…
ನಾಪೋಕ್ಲು ಸೆ.10 NEWS DESK : ಕಕ್ಕುಂದಕಾಡಿನ ಶ್ರೀ ವೆಂಕಟೇಶ್ವರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಕ್ಕುಂದ ಕಾಡುವಿನಲ್ಲಿರುವ ಬಾಳೆಯಡ ಶ್ಯಾಮ್ ಮಂದಪ್ಪ ಅವರ ಗದ್ದೆಯಲ್ಲಿ ಸಾರ್ವಜನಿಕರಿಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಬಾಳೆಯಡ ಶಾರದಾ ಸುಬ್ರಮಣಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಾರ್ವಜನಿಕರಿಗೆ ಆಯೋಜಿಸಿದ ಪುರುಷರ ಕಬಡ್ಡಿಯಲ್ಲಿ ಮೊದಲ ಬಹುಮಾನವನ್ನ ಬೆಟ್ಟಗೇರಿ ತಂಡ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಇಂದಿರಾನಗರದ ತಂಡ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಬೆಟ್ಟಗೇರಿ ತಂಡ ಮೊದಲ ಸ್ಥಾನ ಮತ್ತು ವೆಂಕಟರಮಣ ತಂಡ ಎರಡನೇ ಸ್ಥಾನವನ್ನ ಪಡೆದುಕೊಂಡಿತು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಚೆರಿಯಾಪರಂಬು ತಂಡ ಮೊದಲ ಸ್ಥಾನ ಪಡೆದುಕೊಂಡರೆ, ವೆಂಕಟರಮಣ ತಂಡ ಎರಡನೇ ಸ್ಥಾನವನ್ನ ಪಡೆದುಕೊಂಡಿತು. ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಯುವಕ ಯುವತಿಯರು ಮತ್ತು ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ವೆಂಕಟೇಶ್ವರ ದೇವಾಲಯದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು…
ಮಡಿಕೇರಿ ಸೆ.10 NEWS DESK : ಪ್ರಯಾಣಿಕರೊಬ್ಬರು ಬಿಟ್ಟು ಹೋದ ಮೊಬೈಲ್‍ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದ್ದಾರೆ. ಚಾಲಕ ಅಮಿತ್ ತನ್ನ ಆಟೋದಲ್ಲಿ ಮಡಿಕೇರಿಯ ಹಳೆ ಬಸ್ ನಿಲ್ದಾಣದಿಂದ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಮಹದೇವಪೇಟೆಗೆ ಕರೆದೊಯ್ದಿದ್ದಾರೆ. ಆ ಪ್ರಯಾಣಿಕ ಆಟೋದಲ್ಲೇ ತಮ್ಮ ಮೊಬೈಲ್‍ನ್ನು ಬಿಟ್ಟುಹೋಗಿದ್ದಾರೆ. ಆಟೋ ಚಾಲಕ ಅಮಿತ್ ಅವರು ಮಾದಾಪುರಕ್ಕೆ ಬಾಡಿಗೆಗೆ ಹೋಗಿ ಹಿಂತಿರುಗಿ ಬರುವಾಗ ಆಟೋದಲ್ಲಿ ಮೊಬೈಲ್ ಕಂಡಿದೆ. ಇದೇ ಸಂದರ್ಭ ಮೊಬೈಲ್‍ಗೆ ಕರೆ ಬಂದಿದ್ದು, ಕರೆ ಸ್ವೀಕರಿಸಿ ಸರಿಯಾದ ಮಾಹಿತಿ ಪಡೆದು ಪ್ರಯಾಣಿಕರ ಮನೆಗೆ ತೆರಳಿ ಮೊಬೈಲ್‍ನ್ನು ಮರಳಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸುಂಟಿಕೊಪ್ಪ ಸೆ.10 NEWS DESK : ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಸಭೆಯು ಕುಶಾಲನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಬ್ದುಲ್ ರಜಾಕ್, ನೂತನ ಸಮಿತಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಭೆಯೊಂದನ್ನು ಏರ್ಪಡಿಸುವ ಮೂಲಕ ಶಾಸಕರ ಹಾಗೂ ಬ್ಲಾಕ್ ಅಧ್ಯಕ್ಷರ ಸಮ್ಮುಖದಲ್ಲಿ ನೂತನವಾಗಿ ಆಯ್ಕೆ ಮಾಡಲಾಡಲಾದ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಲಾಗುವುದು ಎಂದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಅಲ್ಲದೇ ಪಕ್ಷದ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭ ಸಮತಿಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಭಾವ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಪ್ಪನ್ ಹಾಗೂ ಸಮಿತಿಗೆ ನೂತನ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಹಾಜರಿದ್ದರು.
ಮಡಿಕೇರಿ ಸೆ.10 NEWS DESK : ಪೊನ್ನಂಪೇಟೆ 66/11 ಕೆವಿ ಹಾಗೂ ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆ ಸೆಪ್ಟೆಂಬರ್, 11 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಉಪ-ವಿಭಾಗ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿನ ವಿದ್ಯುತ್ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ದೇವರಪುರ, ಮಾಯಮುಡಿ, ಕುಂದ, ಕಿರಗೂರು, ಹಾತೂರು, ಕಳತ್ಮಾಡು, ಹೊಸೂರು, ಬಾಳೆಲೆ, ದೇವನೂರು, ಕಾನೂರು, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಿರುನಾಣಿ, ಬೀರುಗ, ನಾಲ್ಕೇರಿ, ಟಿ.ಶೆಟ್ಟಿಗೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ನಾಪೋಕ್ಲು ಸೆ.10 NEWS DESK : ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023- 24ನೇ ಸಾಲಿನಲ್ಲಿ 25.04 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ತಿಳಿಸಿದರು. ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1137 ಜನ ಸದಸ್ಯರಿದ್ದು, 103.36 ಲಕ್ಷ ಪಾಲು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ರೂ.17 32.91 ಲಕ್ಷ ಗಳಾರುತ್ತವೆ ಎಂದ ಅವರು ಸಂಘದಿಂದ 339 ಜನ ರೈತರಿಗೆ ಕೆಸಿಸಿ ಸಾಲ 780.54 ಲಕ್ಷ ವಿತರಿಸಲಾಗಿದೆ. ಜಾಮೀನು ಸಾಲ 7450 ಲಕ್ಷ ರೂ,ಗೊಬ್ಬರ ಸಾಲ 35.66 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಟ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದ್ದು ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ, ಕೃಷಿ ಉಪಕರಣ ಮುಂತಾದ ಸಾಮಗ್ರಿಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು. ಸಂಘದ ಮಹಾಸಭೆಯು ಸೆ.23 ರಂದು ಸಂಘದ ಸಭಾಂಗಣದಲ್ಲಿ ಜರುಗಲಿದ್ದು, ಸಂಘದ…
ನಾಪೋಕ್ಲು ಸೆ.10 NEWS DESK : ಭಾಗಮಂಡಲ ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ (ಎಇಒS) ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1 ರಿಂದ 4ನೇ ತರಗತಿಯ ವಿಭಾಗದಲ್ಲಿ ಹಮ್ನ (ಮಣ್ಣಿನ ಮಾದರಿ ತಯಾರಿ ), ಹವ್ಯ (ಕಥೆ ಹೇಳುವುದು ), ಪ್ರಣಾಮ್ಯ (ಚಿತ್ರಕಲೆ ), ತನ್ವಿಕ ( ಛದ್ಮವೇಷ ), ನೆಬೀಲ್ ( ಹಿಂದಿ ಕಂಠಪಾಠ ) ದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ನಿಕ್ಕಿ ನಂಜಪ್ಪ (ಆಶುಭಾಷಣ ), ಮಿಸ್ಬ ( ಧಾರ್ಮಿಕ ಪಠಣ ಅರೇಬಿಕ್ ) ದ್ವಿತೀಯ ಬಹುಮಾನವನ್ನೂ, ಪೊನ್ನಮ್ಮ ( ಅಭಿನಯ ಗೀತೆ ), ದೀಪಾಲಿ ( ಭಕ್ತಿ ಗೀತೆ )ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 5ರಿಂದ 7ನೇ ತರಗತಿ ವಿಭಾಗದಲ್ಲಿ ರೀತಿಶ್ರೀ ( ಭಾವಗೀತೆ ), ಯುಕ್ತ ( ಮಿಮಿಕ್ರಿ ) ಯಲ್ಲಿ ಪ್ರಥಮ ಬಹುಮಾನವನ್ನನ್ನೂ, ಮೇಘನಾ ( ಚಿತ್ರಕಲೆ…






