ಲೇಖಕ: admin

ಸುಂಟಿಕೊಪ್ಪ ಸೆ.25 NEWS DESK : ರಂಗಸಮುದ್ರ, ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 86ನೇ ವಾರ್ಷಿಕ ಮಹಾಸಭೆಯು ದವಸ ಭಂಡಾರ “ಎ” ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪಿ.ಎಸ್.ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಕೆಳೆದ ಅವಧಿಯ ಮಹಾಸಭೆಯ ವರದಿಯನ್ನು ಹಾಗೂ ಸಭೆಯಲ್ಲಿ 2023-24ರ ಸಾಲಿನ ಜಮಾ-ಖರ್ಚು ಕರಡು ಪ್ರತಿಯನ್ನು ವಾಚಿಸುವ ಮೂಲಕಸಭೆಯ ಅಂಗೀಕಾರ ಪಡೆಯಲಾಯಿತು. ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು. ಪ್ರಸ್ತುತ ಕಾರ್ಯನಿರ್ಸುತ್ತಿರುವ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕಾರಿ ಮಂಡಳಿಯನ್ನು ಯಥವತ್ತಾಗಿ ಮುಂದುವರಿಸಲು ಸದಸ್ಯರಾದ ಬಸಪ್ಪ ಹಾಗೂ ನಂದಿನೆರವಂಡ ಅಚ್ಚಯ್ಯ ಸೇರಿದಂತೆ ಮತ್ತಿತರರು ಸಲಹೆ ನೀಡಿದರು. ಮಹಾಸಭೆಯಲ್ಲಿ ಸದಸ್ಯರುಗಳು ನೀಡಿದ ಅನೇಕ ಅಭಿವೃದ್ಧಿಪರ ಅಂಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವುದಾಗಿ ದವಸ ಭಂಡಾರದ ಅಧ್ಯಕ್ಷ ಪಿ.ಎಸ್. ಬಸಪ್ಪ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ನಿರ್ದೇಶಕ ಎಂ.ಸಿ.ದಾಮೋದರ, ಹೆಚ್.ಬಿ.ರುದ್ರಪ್ಪ, ಎ.ಎಂ.ಲೋಕನಾಥ, ಪಿ.ಬಿ.ಆಶೋಕ, ಬಿ.ಎಸ್.ಧನಪಾಲ, ಟಿ.ಸಿ.ಶಿವಕುಮಾರ್, ಜಿ.ಆರ್.ಶಾರದ, ಕೆ.ಕೆ.ಲೀಲಾವತಿ, ಡಬ್ಲ್ಯೂ.ಪಿ.ಶಿವಕುಮಾರ್ ಮತ್ತಿತರರು…

Read More

ಮಡಿಕೇರಿ ಸೆ.26 NEWS DESK : ನಿರಂತರವಾಗಿ ಕ್ರೀಡೆ, ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ತೊಡಗಿಕೊಂಡಿರುವ ಚೆಟ್ಟಳ್ಳಿ ಸಮೀಪದ ಕಂಡಕರೆಯ ಗಾಂಧಿ ಯುವಕ‌ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಪುನರಾಯ್ಕೆಯಾಗಿದ್ದಾರೆ.  ಸೆ. 23ರಂದು ಕಂಡಕರೆಯ ಬ್ರೈಟ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆದ ಗಾಂಧಿ ಯುವಕ ಸಂಘದ ಮಹಾಸಭೆಯಲ್ಲಿ 2024-26ನೇ ಅವಧಿಗೆ ಇಸ್ಮಾಯಿಲ್ ಕಂಡಕರೆ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಸಂಘದ ನೂತನ ಹಿರಿಯ ಉಪಾಧ್ಯಕ್ಷರಾಗಿ ಷರೀಫ್ ಪಿ.ಎಂ,ಉಪಾಧ್ಯಕ್ಷರಾಗಿ ಇರ್ಷಾದ್ ಕೆ.ಎಂ,ಪ್ರಧಾನ ಕಾರ್ಯದರ್ಶಿಯಾಗಿ ಸವಾದ್  ಉಸ್ಮಾನ್, ಕಾರ್ಯದರ್ಶಿಯಾಗಿ ಪಿ.ಎಂ.ಅಜಿನಾನ್, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಎ.ಉವೈಸ್, ಕೆ.ಜೆ.ಮೊಹಮ್ಮದ್ ಶಿಬಲ್, ಖಜಾಂಚಿಯಾಗಿ ಒ.ಎಸ್.ಸುಹೈಲ್ ಆಯ್ಕೆಯಾಗಿದ್ದಾರೆ.  ಸಂಘದ ನೂತನ ನಿರ್ದೇಶಕರಾಗಿ ಉನೈಸ್ ಕೆ.ಎಂ,ಅಫ್ನಾನ್ ಪಿ.ಎಂ,ಶಮ್ಮಾಸ್,ಹರ್ಷಾದ್, ಸಿ.ಎಸ್.ಅಫ್ಸಲ್ , ಇಮ್ರಾನ್ ಆಲಿ ಹಾಗೂ ಮೊಹಮ್ಮದ್ ಸಿದ್ದೀಖ್ ಆಯ್ಕೆಯಾಗಿದ್ದಾರೆ.  ಮಹಾಸಭೆಯಲ್ಲಿ ಗಾಂಧಿ ಯುವಕ ಸಂಘದ ಮುಂದಿನ ಎರಡು ವರ್ಷಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.  ಅ.2 ರಂದು ಕಂಡಕರೆ ಸರ್ಕಾರಿ ಹಿರಿಯ…

Read More

ಮಡಿಕೇರಿ NEWS DESK ಸೆ.26 : ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನ ಅವರು ಮೃತಪಟ್ಟಿದ್ದಾರೆ. ಬುಧವಾರ ತಮ್ಮ ಪುತ್ರನನ್ನು ಮೈಸೂರಿನ ಕಾಲೇಜ್ ಗೆ ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದ ಸಂದರ್ಭ ಬನ್ನಿಕುಪ್ಪೆ ಬಳಿ ಬೊಲೆರೋ ಡಿಕ್ಕಿಯಾಗಿ ಕ್ರಿಸ್ಟಲಿನ ಗಾಯಗೊಂಡಿದ್ದರು. ಇವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ನಿಧನ ಹೊಂದಿದರು. ಕ್ರಿಸ್ಟಲಿನ ಅವರು ವಿರಾಜಪೇಟೆ ಬೇಟೋಳಿ ನಿವಾಸಿ ಸಬಾಸ್ಟಿನ್ ಅವರ ಪತ್ನಿ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಮೃತ ಕ್ರಿಸ್ಟಲಿನ ಅವರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಸುಂಟಿಕೊಪ್ಪ ಸೆ.26 NEWS DESK : ಆಯುಷ್ಮಾನ್ ಯೋಜನೆಯಡಿಯಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಮೇಳ ನಡೆಯಿತು. ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‍ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ವರ್ಷವನ್ನು ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸೂಚಿಸಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಸುಸ್ಥಿರ ಆರೋಗ್ಯವನ್ನು ಹೊಂದುವಂತಾಗಬೇಕು ಎಂದರು. ‘ಆಯುಷ್ಮಾನ್’ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ವಾರ್ಡ್‍ಗಳಲ್ಲಿ ನಡೆಸಲಾಗುತ್ತಿದೆ. ಶಿಬಿರದಲ್ಲಿ ನುರಿತ ವೈದ್ಯರು ಹಾಗೂ ಸಿಬ್ಬಂದಿಗಳು ಆಗಮಿಸುತ್ತಿದ್ದು, ಎಲ್ಲಾ ತರಹದ ಕಾಯಿಲೆಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಪ್ರತಿಯೋರ್ವ ವ್ಯಕ್ತಿಯು ಉಚಿತ ತಪಾಸಣೆ ನಡೆಸಿಕೊಂಡು ಸಂಬಂಧಿಸಿದ ನುರಿತ ವೈದ್ಯರಿಂದ ಸ್ಥಳದಲ್ಲೇ ಚಿಕಿತ್ಸೆ ಪಡೆಯುವಂತಾಗಲಿ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸೆಯ ವೈದ್ಯರಾದ ನಂಜುಡಯ್ಯ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಚೇತನ್, ಮಡಿಕೇರಿ ಜಿಲ್ಲಾ ಸರ್ವೆಶಿಕ್ಷಣ ಘಟಕದ…

Read More

ಸೋಮವಾರಪೇಟೆ NEWS DESK ಸೆ.25 : ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆ ನಿವಾಸಿ ದಿವಂಗತ ವೆಂಕಟಪ್ಪ(ಬಾರ್ ವೆಂಕಟಪ್ಪ) ಅವರ ಪತ್ನಿ ಗೌರಮ್ಮ(76) ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೆ.26 ಗುರುವಾರ ಸಂಜೆ 3ಗಂಟೆಯ ನಂತರ ಕರ್ಕಳ್ಳಿಯಲ್ಲಿರುವ ಕುರುಹಿನ ಶೆಟ್ಟಿ ರುದ್ರಭೂಮಿಯಲ್ಲಿ ನಡೆಯಲಿದೆ.

Read More

ಕುಶಾಲನಗರ NEWS DESK ಸೆ.25 : ನ್ಯಾಯಾಲಯದ ಸೂಚನೆಯಂತೆ, ನ್ಯಾಯಸಮ್ಮತವಾಗಿ ಚುನಾವಣೆ ಪ್ರಕ್ರಿಯೆ ನಡೆದಿದೆ. ಇಲ್ಲಿ ನಮ್ಮ ಪರ ಆದೇಶ ಬಂದ ಕಾರಣ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ನ್ಯಾಯ ಎಲ್ಲರಿಗೂ ಒಂದೆ, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಂದ ತೀರ್ಪಿಗೆ ಸಂಭ್ರಮಿಸುವ ಬಿಜೆಪಿ ಮಂದಿ ಕುಶಾಲನಗರದ ವಿಚಾರದಲ್ಲಿ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಿನ ಚೌಕ್ಕಟ್ಟಿನಲ್ಲಿಯೇ ನಾಮನಿರ್ದೇಶನ ಪ್ರಕ್ರಿಯೆ ನಡೆದಿದ್ದು, ಮುಳ್ಳುಸೋಗೆ ಭಾಗದಿಂದ ಐವರನ್ನು ನೇಮಿಸಲಾಗಿದೆ. ಅಧಿಕಾರ ಕಳೆದುಕೊಂಡ ಇಬ್ಬರನ್ನು ಹೆಚ್ಚುವರಿ ಸೇರ್ಪಡೆ ಮಾಡಲಾಗಿದೆ. ಕಾನೂನಿನಲ್ಲಿದ್ದ ಅವಕಾಶದಂತೆ ನಾವು ಮಾಡಿದ್ದೇವೆ ಎಂದು ಶಾಸಕರು ಕುಶಾಲನಗರದಲ್ಲಿ ಸ್ಪಷ್ಟಪಡಿಸಿದರು.

Read More

ಮಡಿಕೇರಿ NEWS DESK ಸೆ.25 : ಜೆಡಿಎಸ್ ಬೆಂಬಲದಿಂದ ಕುಶಾಲನಗರ ಪುರಸಭೆಯ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಿ ಚಂದ್ರು ಹಾಗೂ ಉಪಾಧ್ಯಕ್ಷರಾಗಿ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಚುನಾವಣೆ ಬಹಿಷ್ಕರಿಸಿದ್ದರು. ಇದು ಅವಿರೋಧ ಆಯ್ಕೆಗೆ ದಾರಿ ಸುಗಮಗೊಳಿಸಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಪುರಸಭೆ ಸದಸ್ಯರಾದ ಕಲೀಮುಲ್ಲಾ ಚುನಾವಣಾಧಿಕಾರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು. ಪುರಸಭೆ ಕಛೇರಿ ಆವರಣಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಸದಸ್ಯರು ಚುನಾವಣೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ದಿಕ್ಕಾರ ಕೂಗಿದರು. ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿ ತಹಶೀಲ್ದಾರ್ ಗೆ ಪತ್ರ ಸಲ್ಲಿಸಿ ತೆರಳಿದರು. ನಿಗಧಿತ ಅವಧಿಯ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಕುರಿತು ಚುನಾವಣಾಧಿಕಾರಿ ಘೋಷಿಸಿದರು. ಕಾಂಗ್ರೆಸ್ ಮುಖಂಡರು,…

Read More

ಕುಶಾಲನಗರ NEWS DESK ಸೆ.25 : ರಾಷ್ಟ್ರ ಕಂಡ  ಮಹಾನ್ ಪತ್ರಕರ್ತರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಸ್ಥಳೀಯ ಎಪಿಸಿಎಂಎಸ್  ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ  ಮಹಾತ್ಮಗಾಂಧಿ ಪತ್ರಿಕೋದ್ಯಮದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಅದೇ ರೀತಿ ಡಾ.ಅಂಬೇಡ್ಕರ್ ಅವರು ಐದು ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.  ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಪತ್ರಿಕಾ ವಿತಕರರಾಗಿ ಹೋರಾಟದ ಬದುಕು,ಬೆಳೆದು ಬಂದ ದಾರಿ ನಮ್ಮೆಲ್ಲರ ಸ್ಪೂರ್ತಿಯಾಗಬೇಕು. ಇಂತಹ ಮಹಾನ್‌ ನಾಯಕರ ಆದರ್ಶ ನಮಗೆ ಬೆಳಕಾಗಲಿ ಎಂದು ಆಶಯ ವ್ಯಕ್ತಪಡಿಸಿದರು.  80 ರ ಕಾಲಘಟ್ಟದಲ್ಲಿ ಪತ್ರಿಕೆಗಳ ಸ್ವರೂಪ ಬದಲಾವಣೆ…

Read More

ಮಡಿಕೇರಿ NEWS DESK ಸೆ.25 : ಆಶುಕವಿತೆಯಲ್ಲಿ ದಾಖಲೆ ಬರೆದ ಪ್ರಿತುನ್ ಪೂವಣ್ಣ ಅಯ್ಯನೆರವಂಡ ಅವರನ್ನು ಕುಂಜಿಲ ಕಕ್ಕಬೆ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಧಕ್ಷರಾದ ಶಿಲ್ಪ, ಉಪಾಧ್ಯಕ್ಷೆ ಬೀನಾ, ಪಿಡಿಓ ಅಶೋಕ್ ಸದಸ್ಯರುಗಳಾದ ಕಲಿಯಂಡ ಸಂಪನ್ ಅಯ್ಯಪ್ಪ, ಕೋಡಿಮಣಿಯಂಡ ಬೋಪಣ್ಣ, ಭರತ್ ಚಂದ್ರ ದೇವಯ್ಯ, ಪ್ರಕಾಶ್, ಇಂದಿರಾ, ಶಾಫಿಯ ಹಾಗೂ ನೂಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಸೆ.25 NEWS DESK : ಮಡಿಕೇರಿ ದಸರಾ ಆಚರಣೆ ಸಂಬಂಧ ದಶ ಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆ ನಡೆಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಡಿಕೇರಿ ನಗರದಲ್ಲಿ ಮಂಟಪಗಳು ಸಾಗುವ ಮಾರ್ಗ ಹಾಗೂ ವೇಳಾಪಟ್ಟಿ ಬಗ್ಗೆ ಲಿಖಿತವಾಗಿ ಮಾಹಿತಿ ಒದಗಿಸುವಂತೆ ಸಲಹೆ ಮಾಡಿದರು. ದಸರಾದಂದು ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಯಾವ ಮಂಟಪ ಯಾವ ವೇಳೆಯಲ್ಲಿ ಎಲ್ಲಿಂದ, ಯಾವ ಮಾರ್ಗ ತೆರಳಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಜೊತೆಗೆ ನಿಗಧಿತ ವೇಳೆ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಿಂದ ನಿಗದಿತ ವೇಳೆ ಹಾಗೂ ಮಂಟಪಗಳ ಮೆರವಣಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇದ್ದಲ್ಲಿ ಸಾರ್ವಜನಿಕರಿಗೆ ಒಳಿತಾಗಲಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಮಡಿಕೇರಿ ಜನೋತ್ಸವ ದಸರಾವು ಪ್ರಮುಖವಾಗಿ ಕರಗ ಉತ್ಸವ ಹಾಗೂ ಮಂಟಪಗಳ ಮೆರವಣಿಗೆ ಅತೀ ಪ್ರಮುಖವಾಗಿದೆ. ಆ…

Read More