ವಿರಾಜಪೇಟೆ ಫೆ.27 NEWS DESK : ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಬಿಟ್ಟಂಗಾಲದ ಬಿ.ಶೆಟ್ಟಿಗೇರಿ ಜಂಕ್ಷನ್‍ನಿಂದ ಶೋಭಾಯಾತ್ರೆ ಪ್ರಾರಂಭಗೊಂಡು ಆರ್‍ಕೆ.ಎಫ್ ಸಭಾಂಗಣದವರೆಗೆ ಸಾಗಿ ಬಂತು. ಶೋಭಾಯಾತ್ರೆಯಲ್ಲಿ ಕೇಸರಿ ಶಾಲು ಹಾಗೂ ಪೇಟ ಧರಿಸಿದ ಮಹಿಳೆಯರು ಪುರುಷರು ಸರತಿ ಸಾಲಿನಲ್ಲಿ, ಘೋಷಣೆಗಳನ್ನು ಕೂಗುತ್ತ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೇರಳದ ಚಂಡೆ ಮೇಳ, ತಮಟೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾರತಮಾತೆಯ ಭಾವಚಿತ್ರ ಹೊತ್ತಿರುವ ವಾಹನದೊಂದಿಗೆ ಮೆರವಣಿಗೆ ಆರ್.ಕೆ.ಎಫ್ ಸಭಾಂಗಣದವರೆಗೆ ನಡೆಸಿದರು. ನಂತರ ಹಿಂದೂ ಸಂಗಮದ ಸಮಾವೇಶದ ಸಭೆ ಜರುಗಿತು. ಈ ಸಂದರ್ಭ ಅತಿಥಿಗಳು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಿ.ಎನ್. ವಿನೋದ್ ಮಾತನಾಡಿ, ಭಾರತೀಯ ಸಂಸ್ಕøತಿಯನ್ನು ರಕ್ಷಿಸುವುದೊಂದೆ ನಮ್ಮ ಧರ್ಮ. ಸ್ವಯಂ ಸೇವಕ ಸಂಘದಲ್ಲಿರುವ ಸೇವಕರು ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಾರೆ.…
ಲೇಖಕ: admin
ವಿರಾಜಪೇಟೆ ಫೆ.27 NEWS DESK : ಮೂರ್ನಾಡುವಿನ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಬೃಹತ್ ಶೋಭಾಯಾತ್ರೆಯ ಮೂಲಕ ಹಿಂದುತ್ವದ ಬಲವರ್ಧನೆಗೆ ಸಾಕ್ಷಿಯಾಯಿತು. ಸಹಸ್ರ ಕೈಗಳಲ್ಲಿ ಕೇಸರಿ ಧ್ವಜಗಳ ಹಾರಟ, ರಾಮ ಸಹಸ್ರನಾಮದ ಕಂಠಗಳನ್ನು ಮುಗಿಲೆತ್ತರದ ಧ್ವನಿಯಾಗಿಸಿ ಹಿಂದೂ ಸಂಗಮದ ಶೋಭಾಯಾತ್ರೆ ನಡೆಯಿತು. ಪಟ್ಟಣದ ಮುಖ್ಯಬೀದಿಗಳಲ್ಲಿ ಸಂಚರಿಸಿದ ಶೋಬಾಯಾತ್ರೆ ಪಾಂಡಾಣೆ ಮಂದ್‍ನಲ್ಲಿ ಸೇರಿತು. ಶೋಭಾಯಾತ್ರೆ ಮೆರವಣಿಗೆ ಉದ್ದಕ್ಕೂ, ಕಾಡು ಮಕ್ಕಳ ಹಾಡು ಕುಣಿತ, ಕೇರಳದ ಮಹಿಳಾ ಚಂಡೆವಾದ್ಯ, ಭಜನಾ ನೃತ್ಯ, ಮಕ್ಕಳ ಚದ್ಮವೇಷಗಳು, ಗೊಂಬೆ ಕುಣಿತ ಕಾರ್ಯಕ್ರಮದ ಗಾಂಭೀರ್ಯತೆ ಮತ್ತು ಮೆರುಗು ಹೆಚ್ಚಿಸಿತ್ತು. ಮೆರವಣಿಗೆಯ ಉದ್ದಕ್ಕೂ ಪಾನಕ, ಮಜ್ಜಿಗೆ, ನೀರು, ಬಾಳೆಹಣ್ಣು ವಿತರಣೆ ನಡೆಯಿತು. ಮೂರ್ನಾಡಿನಲ್ಲಿರುವ ಏಳು ಗಣಪತಿ ಸಂಘಗಳು, ತ್ರಿನೇತ್ರ ವಾಹನ ಮಾಲೀಕರ ಸಂಘ, ನಕ್ಷತ್ರ ಆಟೋ ಮಾಲೀಕರ ಸಂಘ, ಆಪ್ತಮಿತ್ರ ಅಣ್ಣಪ್ಪ ಸ್ವಾಮಿ, ಸ್ವಸ್ಥಿಕ್ ಸ್ವಸಹಾಯ ಸಂಘ ಸೇರಿದಂತೆ ಹಲವು ಸಂಘಟನೆಗಳು ಮೆರವಣಿಗೆಯ ಭಾಗವಾಗಿದ್ದವು. ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ರಾಮನ ಹಾಗೂ…
ಮಡಿಕೇರಿ ಫೆ.27 NEWS DESK : ಅಂಚೆ ಇಲಾಖೆಯ ಆಡಳಿತಾತ್ಮಕ ಸುಧಾರಣೆ ಹಾಗೂ ಟಪಾಲು ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಠಿಯಿಂದ ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‍ಕೋಡ್ ಅನ್ನು ಬದಲಾವಣೆ ಮಾಡಲಾಗಿದೆ. ಮಡಿಕೇರಿ ಪ್ರಧಾನ ಅಂಚೆ ಕಚೇರಿ 571201-ಮಡಿಕೇರಿ ವ್ಯಾಪ್ತಿಗೆ ಬರುವ ಪ್ರದೇಶಗಳು, ವಿದ್ಯಾನಗರ ಉಪ ಅಂಚೆ ಕಚೇರಿ 571202 ಗಾಳಿಬೀಡು ಶಾಖಾ ಕಚೇರಿ, ಕಾಲೂರು ಶಾಖಾ ಕಚೇರಿ, ಕೆ.ನಿಡುಗಣೆ ಶಾಖಾ ಕಚೇರಿ, ಮಡಿಕೇರಿ ಡಿ.ಒ.ಸಿ ಉಪ ಅಂಚೆ ಕಚೇರಿ 571203 ಅರುವತೊಕ್ಲು ಶಾಖಾ ಕಚೇರಿ (ಮಡಿಕೇರಿ), ಅವಂದೂರು ಶಾಖಾ ಕಚೇರಿ, ಬೆಟ್ಟಗೇರಿ ಶಾಖಾ ಕಚೇರಿ, ಬಿಳಿಗೇರಿ ಶಾಖಾ ಕಚೇರಿ, ಬೋಯಿಕೇರಿ ಶಾಖಾ ಕಚೇರಿ, ಚೇರಾಂಬಾಣೆ ಶಾಖಾ ಕಚೇರಿ, ಹೆರವನಾಡು ಶಾಖಾ ಕಚೇರಿ, ಕಾಂಡನಕೊಲ್ಲಿ ಶಾಖಾ ಕಚೇರಿ, ಕಗ್ಗೋಡ್ಲು ಶಾಖಾ ಕಚೇರಿ, ಕೊಟ್ಟೂರು ಶಾಖಾ ಕಚೇರಿ, ಕೊಯ್ನಾಡ್ ಶಾಖಾ ಕಚೇರಿ, ಮದೇ ಶಾಖಾ ಕಚೇರಿ, ಮಕ್ಕಂದೂರು ಶಾಖಾ ಕಚೇರಿ, ತಾಳತ್ತಮನೆ ಶಾಖಾ ಕಚೇರಿಯ ಪಿನ್‍ಕೋಡ್ ಅನ್ನು ಬದಲಾವಣೆ ಮಾಡಲಾಗಿದೆ ಎಂದು…
ಮಡಿಕೇರಿ ಫೆ.27 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಮಾ.1 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಜರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.
ಗೋಣಿಕೊಪ್ಪ ಫೆ.27 NEWS DESK : ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. 2025-26ನೇ ಸಾಲಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುವ ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯವೈಖರಿಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಕ್ಕಳ ಭವಿಷ್ಯವನ್ನು ಸೃಷ್ಟಿಸುತ್ತಿರುವ ಶಾಲೆ 1916ರಲ್ಲಿ ಪ್ರಾರಂಭವಾದರೂ 1927ರಲ್ಲಿ ಸರಕಾರದ ಮಾನ್ಯತೆಯೊಂದಿಗೆ ಶಾಲೆ ನಡೆದು ಬಂದು. ಕಳೆದ ಅವಧಿಯಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಶಾಲೆ ಪ್ರಾರಂಭದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲೆ ಹೊಂದಿತ್ತು. ಪ್ರಸ್ತುತ ಒಂದರಿಂದ ಎಂಟನೇತರಗತಿಯನ್ನು ಉನ್ನತೀಕರಿಸಿದ ಶಾಲೆಯಾಗಿ 324 ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯ ಶಿಕ್ಷಕ ಸೇರಿದಂತೆ ಸುಮಾರು 15 ಸಹ ಶಿಕ್ಷಕರು ಇದ್ದಾರೆ. ಶಾಲೆಯಲ್ಲಿ ಸುಸಜ್ಜಿತವಾದ 28 ಕೊಠಡಿಗಳನ್ನು ಹೊಂದಿದೆ. 2.40 ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ಕಲಿಗೆ ಅನುಕೂಲಕರವಾದ ವಾತಾವರಣವನ್ನುಕಟ್ಟಿಕೊಡಲಾಗಿದೆ. 2015 ರಿಂದಎಲ್‍ಕೆಜಿ, ಯುಕೆಜಿ ಪ್ರಾರಂಭಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯುಕೋಕ್ಲಬ್, ಚಿತ್ರಕಲಾ ಸಂಘ, ವಿಜ್ಞಾನ…
ಮಡಿಕೇರಿ ಫೆ.27 NEWS DESK : ಶ್ರೀ ಯೋಗಿ ನಾರೇಯಣಿ ಬಲಿಜ ಸಂಘ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾ.3ರಂದು ನಗರದಲ್ಲಿ ಶ್ರೀ ಯೋಗಿ ನಾರೇಯಣಿ ಯತೀಂದ್ರರ 300ನೇ ಜಯಂತ್ಯುತ್ಸವ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಯೋಗಿ ನಾರೇಯಣಿ ಬಲಿಜ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ಅವರು, ಅಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ಶ್ರೀ ಯೋಗಿ ನಾರೇಯಣಿ ಯತೀಂದ್ರರ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ವ್ಯಾಪ್ತಿಯ ಸರ್ವ ಬಲಿಜ ಜನಾಂಗ ಬಾಂಧವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಪಾಲ್ಗೊಳ್ಳಲಿದ್ದಾರೆ. ಬಲಿಜ ಸಂಘದ ಪ್ರಮುಖರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಬ್ರಮಣಿ, ಸಹ ಕಾರ್ಯದರ್ಶಿ ಯಶ್ವಂತ್ ಕುಮಾರ್ ಹಾಗೂ…
ನವದೆಹಲಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ನರ್ಸಿಂಗ್ ಪದವೀಧರರಿಗೆ ಏಮ್ಸ್ (AIIMS) ಸುವರ್ಣಾವಕಾಶ ನೀಡಿದೆ. ನರ್ಸಿಂಗ್ ಅಧಿಕಾರಿ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET-10) ಅಡಿಯಲ್ಲಿ ಒಟ್ಟು 2,551 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ನೇಮಕಾತಿಯ ಪ್ರಮುಖ ವಿವರಗಳು: ಹುದ್ದೆಯ ಹೆಸರು: ನರ್ಸಿಂಗ್ ಅಧಿಕಾರಿ (Nursing Officer) ಒಟ್ಟು ಹುದ್ದೆಗಳು: 2,551 ಸೇವೆ ಸಲ್ಲಿಸುವ ಸ್ಥಳಗಳು: ದೇಶಾದ್ಯಂತ ಇರುವ ವಿವಿಧ ಏಮ್ಸ್ (AIIMS) ಸಂಸ್ಥೆಗಳು, ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆ (SJH) ಮತ್ತು ಇಎಸ್‌ಐಸಿ (ESIC) ಆಸ್ಪತ್ರೆಗಳು. ವಿದ್ಯಾರ್ಹತೆ ಮತ್ತು ವಯೋಮಿತಿ: ಶಿಕ್ಷಣ: ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಎಸ್ಸಿ ನರ್ಸಿಂಗ್ ಅಥವಾ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಅಥವಾ ಜಿಎನ್‌ಎಂ (GNM) ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷದ ಒಳಗಿರಬೇಕು (ಸರ್ಕಾರಿ ನಿಯಮಗಳಂತೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ). ಪರೀಕ್ಷಾ ವಿಧಾನ ಮತ್ತು ದಿನಾಂಕಗಳು: ಆಯ್ಕೆ ಪ್ರಕ್ರಿಯೆಯು…
ಮಡಿಕೇರಿ, NEWS DESK ಫೆ.27 : ಮಡಿಕೇರಿ ನಗರದ ಜ್ಯೋತಿ ನಗರ ಬಡಾವಣೆಯ ಶ್ರೀ ವನಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಂತ್ರಿ ಬ್ರಹ್ಮಶ್ರಿ ಶ್ರೀಕಾಂತ್ ಭಟ್ಟತಿರಿ ಚಾಲೋಡ್ ಅವರ ನೇತೃತ್ವದಲ್ಲಿ ನಡೆದ ಬ್ರಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು. ನಗರದ ಗಾಂಧಿ ಮೈದಾನದಿಂದ ದೇವಾಲಯದವರೆಗೆ ದೀಪಾಲಂಕೃತ ಮಂಟಪದಲ್ಲಿ ಭವ್ಯ ಕಳಸ ಮೆರವಣಿಗೆ ಸಾಗಿತು. ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ, ಪ್ರಸಾದ ಶುದ್ಧಿ, ವಾಸ್ತುಬಲಿ, ಭಗವತಿ ಸೇವೆ, ಮಹಾಗಣಪತಿ ಹೋಮ, ಉಷಾ ಪೂಜೆ, ಅನುಜ್ಞಾಕಲಶಾಭಿಷೇಕ, ಪ್ರಾರ್ಥನೆ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಬಿಂಭಪ್ರತಿಷ್ಠೆ, ಕಲಾಭಿಷೇಕ ಪೂಜೆ, ಮಹಾಪೂಜೆ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬೆಂಗಳೂರು, ಫೆಬ್ರವರಿ 27, 2026: ಸಿಲಿಕಾನ್ ಸಿಟಿಯ ಸಾಂಸ್ಕೃತಿಕ ಅಸ್ಮಿತೆಯಂತಿರುವ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆಯು ಈ ಬಾರಿಯ ಉತ್ಸವದ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬಾರಿಯ ವಿಶೇಷತೆಗಳೇನು? 16ನೇ ಬಾರಿಗೆ ಕರಗ ಹೊರುವ ಜ್ಞಾನೇಂದ್ರ ಸ್ವಾಮಿ: ದೇವಾಲಯದ ಪೂಜಾರಿ ಎ. ಜ್ಞಾನೇಂದ್ರ ಸ್ವಾಮಿ ಅವರು ಈ ಬಾರಿಯೂ ಕರಗ ಹೊರಲು ಆಯ್ಕೆಯಾಗಿದ್ದಾರೆ. ಇದು ಅವರು ಸತತವಾಗಿ ಹೊರುತ್ತಿರುವ 16ನೇ ಕರಗ ಎಂಬುದು ವಿಶೇಷ. 11 ದಿನಗಳ ಉತ್ಸವ: ಈ ಬಾರಿಯ ಕರಗ ಮಹೋತ್ಸವವು ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಪ್ರಮುಖ ದಿನಾಂಕಗಳು ಮತ್ತು ಕಾರ್ಯಕ್ರಮಗಳು: ಮಾರ್ಚ್ 24: ಧ್ವಜಾರೋಹಣದ ಮೂಲಕ ಅಧಿಕೃತವಾಗಿ ಕರಗ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಮಾರ್ಚ್ 30: ಮುಂಜಾನೆ 4:00 ಗಂಟೆಗೆ ಪವಿತ್ರ ‘ಹಸಿಕರಗ’ ಆಚರಣೆ ನಡೆಯಲಿದೆ. ಆದಿಶಕ್ತಿ ದ್ರೌಪದಿ ದೇವಿಯು ಈ…
ಮಡಿಕೇರಿ, NEWS DESK ಫೆ.27 : ಸ್ಕೂಟರ್ ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಆನಂದಪುರದ ನಿವಾಸಿ ಏನೋಸ್ ಮನೋಹರ್ ಮನು (43) ಎಂಬುವವರೇ ಮೃತ ದುರ್ದೈವಿಯಾಗಿದ್ದು, ಸ್ಕೂಟರ್ ಚಾಲಕ ನೆಲ್ಯಹುದಿಕೇರಿ ಗ್ರಾಮದ ಹಂಸ ತೀವ್ರವಾಗಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಏನೋಸ್ ಮನೋಹರ್ ಮನು ಅವರಿಗೆ ಸ್ಕೂಟರ್ ಡಿಕ್ಕಿಯಾಗಿದೆ. ಈ ಸಂದರ್ಭ ರಸ್ತೆಗೆ ಬಿದ್ದ ಅವರ ಮೇಲೆ ಕಾರು ಹರಿದಿದೆ ಎಂದು ಹೇಳಲಾಗಿದೆ. ಕಾರಿನ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






