ಲೇಖಕ: admin

ಮಡಿಕೇರಿ ಜು.12 NEWS DESK : ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ನಡೆಯಲಿರುವ “ಮಿನಿ ಒಲಿಂಪಿಕ್ಸ್” ಫುಟ್ಬಾಲ್ ಅಂಡರ್-14 ಬಾಲಕ ಮತ್ತು ಬಾಲಕಿಯರ ಕೊಡಗು ಫುಟ್ಬಾಲ್ ತಂಡಕ್ಕೆ ಜು.14 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆಯು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಕ್ರಿಸ್ಟೋಫರ್ ನೇತೃತ್ವದಲ್ಲಿ ನಡೆಯಲಿದೆ. 2010ರ ನಂತರ ಜನಿಸಿರುವ ಯುವ ಫುಟ್ಬಾಲ್ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತರಬೇಕು. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ (ಈಶ್ವರ್ ತಿಳಿಸಿದ್ದಾರೆ).

Read More

ಕುಶಾಲನಗರ NEWS DESK : ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ವರದಿಗಳಿಗೆ ನೀಡಲಾಗುವ  ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳಿಗೆ 8 ಮಂದಿ ಆಯ್ಕೆಯಾಗಿದ್ದಾರೆ. ಸಂಘದ ಸದಸ್ಯರುಗಳಿಗೆ ಅತ್ಯುತ್ತಮ ವರದಿಗಳಿಗೆ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಘೋಷಣೆಯಾಗಿದ್ದು, ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಐನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ.ಐನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಶೈಕ್ಷಣಿಕ ವರದಿಗೆ ವಿಜಯ ಕರ್ನಾಟಕ ವರದಿಗಾರ ವಿನೋದ್ ಅವರು ಬರೆದ ‘ಕೊರತೆಯ ನಡುವೆಯೂ ಸಾಧನೆ ‘ ಎಂಬ ವರದಿ ಆಯ್ಕೆಯಾಗಿದೆ. ಪತ್ರಕರ್ತ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ, ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಶಕ್ತಿಯಲ್ಲಿ ಪ್ರಕಟಗೊಂಡ ಚಂದ್ರಮೋಹನ್ ಅವರ  ‘ಶುಂಠಿ ಬೆಳೆಯಲು 35 ಎಕರೆ ತೋಟದಲ್ಲಿ ಮರಗಳ ಮಾರಣಹೋಮ ‘ ವರದಿ ಆಯ್ಕೆಯಾಗಿದೆ. ಮಾಜಿ ಸಚಿವರು ಎಂ.ಪಿ.ಅಪ್ಪಚ್ಚು ರಂಜನ್ ಅವರು ಸ್ಥಾಪಿಸಿದ ಅತ್ಯುತ್ತಮ ರಾಜಕೀಯ ವರದಿಗೆ ಆಂದೋಲನ…

Read More

ಮಡಿಕೇರಿ ಜು.12 NEWS DESK : ಪ್ರಥಮ ಬಾರಿಗೆ ನಿಯೋಜನೆ ಗೊಂಡ ಮೈಸೂರು ಪ್ರಾಂತ್ಯದ ಪದಾಧಿಕಾರಿಗಳ ನಿರ್ಣಯ ಸಭೆ ಕೊಡಗಿನ ಮಡಿಕೇರಿಯಲ್ಲಿ ಜು.14 ರಂದು ನಡೆಯಲಿದೆ. ಮೈಸೂರು ಪ್ರಾಂತ್ಯಕ್ಕೆ ಸೇರುವ ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೀಮಾ ಪದಾಧಿಕಾರಿಗಳು, ಆಯುಷ್ ಅಧಿಕಾರಿಗಳು, ಆಯುಷ್ ಕಾಲೇಜಿನ ವ್ಯವಸ್ಥಾಪಕರು ಹಾಗೂ ಕೊಡಗಿನ ಆಯುಷ್ ವೈದ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಆಯುಷ್ ವೈದ್ಯರ ಕ್ಷೇಮ, ಅವರ ಸೇವೆಗಳಿಗೆ ಸಮಾಜದ ಗೌರವ, ಸಾರ್ವಜನಿಕರಿಗೆ ಸುಲಲಿತವಾಗಿ ಆರೋಗ್ಯ ಸೇವೆ ಕಲ್ಪಿಸಲು ವ್ಯವಸ್ಥೆ, ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮ, ಸರ್ಕಾರಿ ಆಯುಷ್ ವೈದ್ಯರಿಗೆ ಸಹಕಾರ, ಆಯುಷ್ ಕಾಲೇಜುಗಳಲ್ಲಿನ ಸಮಸ್ಯೆಗಳಿಗೆ ನೀಮಾ ರಾಷ್ಟ್ರೀಯ ಸಂಘದ ಸಹಕಾರ ಸಹಾಯ ಹಾಗೂ ಇನ್ನೂ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳ‌ ಬಗ್ಗೆ ಈ ಸಭೆ ನಿರ್ಣಯ ಕೈಗೊಳ್ಳಲಿದೆ. ಸಾರ್ವಜನಿಕರು ಆಯುಷ್ ವೈದ್ಯರಿಂದ ಯಾವ ರೀತಿಯ ಸೇವೆಗಳನ್ನು ಅಪೇಕ್ಷಿಸುತ್ತಾರೆ ಎಂಬ ಬಗ್ಗೆ ಹಾಗೂ ಸಾಮಾಜಿಕ ಸೇವೆಗೆ ಸಲಹೆಗಳಿದ್ದರೆ…

Read More

ಮಡಿಕೇರಿ ಜು.12 NEWS DESK : ರಾಜ್ಯ ಕಾಂಗ್ರೆಸ್ ಸರ್ಕಾರ ಅರಣ್ಯ ಭೂಮಿ, ಮರಗಳ ಹಕ್ಕು ಮತ್ತು ವನ್ಯಜೀವಿ ವಸ್ತುಗಳ ಕುರಿತು ಜನವಿರೋಧಿಯಾಗಿ ಹೊರಡಿಸಿರುವ ಸುತ್ತೋಲೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುವಷ್ಟರಲ್ಲೆ ಜಿಲ್ಲೆಯ ಜನತೆಗೆ ಮಾರಕವಾಗುವ ಸುತ್ತೋಲೆಗಳನ್ನು ಹೊರಡಿಸಿದೆ. ಜಿಲ್ಲೆಯ ಬೆಳೆಗಾರರ ಮರದ ಹಕ್ಕಿಗೆ ಚ್ಯುತಿಯನ್ನುಂಟು ಮಾಡುವ ಮತ್ತು ವನ್ಯಜೀವಿ ವಸ್ತುಗಳ ಕುರಿತು ಜನರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು. ಅರಣ್ಯ ಸಂಪತ್ತಿನ ರಕ್ಷಣೆಗಾಗಿ 1976 ರ ಮರಗಳ ಸಂರಕ್ಷಣಾ ಕಾಯ್ದೆ ಇದ್ದು, ಅದರಲ್ಲಿ ಅತ್ಯಂತ ವಿವರವಾಗಿ ಯಾವ ಮರಗಳನ್ನು ಕಡಿಯಬಹುದು, ಸಂರಕ್ಷಿಸಬೇಕೆನ್ನುವ ವಿವರಗಳಿದೆ. ಹೀಗಿರುವಾಗ ಅನಗತ್ಯವಾಗಿ ಮರಗಳ ಸರ್ವೇ ಸುತ್ತೋಲೆಯನ್ನು ಹೊರಡಿಸುವ ಮೂಲಕ ಜಿಲ್ಲೆಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು. ::: ಇಒ, ಪಿಡಿಒಗಳಿಗೆ…

Read More

ಮಡಿಕೇರಿ ಜು.12 NEWS DESK : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆ.ಇ.ಎ) ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ತರಲು ಉದ್ದೇಶಿಸಿದ್ದು, ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ.ದಯಾನಂದ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ.ಬಸವರಾಜು ಅವರನ್ನು ಪರೀಕ್ಷಾ ಪರಿವೀಕ್ಷಕರಾಗಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ನೇಮಕ ಮಾಡಿದ್ದಾರೆ.

Read More

ಮಡಿಕೇರಿ ಜು.12 NEWS DESK : ಮುಡಾ ಪ್ರಕರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕತೆ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನೀಡುತ್ತಿರುವ ಸ್ಪಷ್ಟೀಕರಣಗಳು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. 14 ನಿವೇಶನಗಳ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. 2020 ರ ನಿಯಮಾನುಸಾರ ಮುಡಾ ಯಾವುದೇ ನಿರ್ಣಯ ಕೈಗೊಂಡರು ಅದನ್ನು ಸರ್ಕಾರಕ್ಕೆ ಕಳುಹಿಸಿ ಅನುಮತಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಮುಡಾ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಯೇ ಇಲ್ಲ ಎಂದು ಆರೋಪಿಸಿದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಬಾರದು ಎಂದು ಆಗ್ರಹಿಸಿದರು. ಅಧಿಕಾರಿಗಳ ಮೂಲಕ ತನಿಖೆ ನಡೆಸುವುದಾಗಿ ಹೇಳುತ್ತಿದ್ದಾರೆ, ಮುಡಾ ಪ್ರಕರಣದಲ್ಲಿ ಸ್ವತ: ಮುಖ್ಯಮಂತ್ರಿಗಳ ಪತ್ನಿಯ…

Read More

ನಾಪೋಕ್ಲು ಜು.12 NEWS DESK : ನಾಪೋಕ್ಲು- ವಿರಾಜಪೇಟೆ ಮುಖ್ಯರಸ್ತೆಯ ಹಳೆ ತಾಲ್ಲೂಕು ಬಳಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಪಾದಾಚಾರಿಗಳು ಹಾಗೂ ವಾಹನ ಚಾಲಕರು ಪರದಾಡುವಂತಗಿದೆ. ಪಟ್ಟಣಕ್ಕೆ ಸಮೀಪದ ಹಳೆ ತಾಲೂಕು ಬಳಿಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಪಕ್ಕದ ರಸ್ತೆಯಲ್ಲಿ ಹೊಂಡವಾಗಿದ್ದು, ವಾಹನಗಳು ರಸ್ತೆಯ ಅವ್ಯವಸ್ಥೆಯಿಂದ ಒಂದು ಪಾಶ್ವದಲ್ಲಿ ಚಲಿಸಲಾರದೆ ಮತ್ತೊಂದು ಕಡೆಯಲ್ಲಿ ಚಲಿಸುತ್ತಿದ್ದು, ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಗಳು ಇಲ್ಲದೆ ರಸ್ತೆ ಗುಂಡಿಳಾಗಿದ್ದು ಕೆಸರು ನೀರು ತುಂಬಿಕೊಂಡಿದೆ. ಸಂತೆಯ ದಿನವಾದ ಸೋಮವಾರ ವಾಹನಗಳ ಸಂಖ್ಯೆ ಹೆಚ್ಚಿದ್ದು ಗುಂಡಿ ತಪ್ಪಿಸಲು ಹೋಗಿ ವಾಹನ ಚಾಲಕರು ಅಪಘಾತ ಸಂಭವಿಸಿರುವ ಘಟನೆಯೂ ನಡೆದಿದೆ. ಜನಪ್ರತಿನಿಧಿಗಳು ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು, ಚರಂಡಿ ಅವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲವು ದಿನಗಳಿಂದ ರಸ್ತೆ…

Read More

ನಾಪೋಕ್ಲು ಜು.12 NEWS DESK : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಕ್ಕಬ್ಬೆ ನಾಲಡಿ ಗ್ರಾಮ (ಮೇಕೆಕೊಪ್ಪ ) ದಲ್ಲಿನ ಕೆ.ಸಿ.ಪೊನ್ನಪ್ಪ ಎಂಬವರಿಗೆ ವೀಲ್‍ಚೇರ್ ವಿತರಿಸಲಾಯಿತು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷೆ ಸರೋಜಿನಿ, ಮೇಲ್ವಿಚಾರಕ ಸುನಿಲ್, ಸೇವಾಪ್ರತಿನಿಧಿ ಉಮಾಲಕ್ಷ್ಮಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು. ನಾಪೋಕ್ಲು ಸುಭಾಷ್ ನಗರ ಕಾರ್ಯಕ್ಷೇತ್ರದ ಪದಾಧಿಕಾರಿಗಳು ಪಾರ್ಶ್ಶ್ವ ವಾಯುವಿನಿಂದ ಬಳಲುತ್ತಿದ್ದ ಪೊನ್ನಪ್ಪ ಅವರಿಗೆ ವೀರ್‍ಚೇರ್ ಅಗತ್ಯ ಇರುವ ಬಗ್ಗೆ ವೀರೇಂದ್ರ ಹೆಗಡೆ ಅವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಅವರು ವೀಲ್‍ಚೇರ್ ಮಂಜೂರು ಮಾಡಿದ್ದರು. ವರದಿ : ದುಗ್ಗಳ ಸದಾನಂದ

Read More

(NEWS DESK) ಅಜೀರ್ಣ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡು ಬರುವ ತೊಂದರೆಯಾಗಿದೆ. ಎಲ್ಲರನ್ನೂ ಒಂದಲ್ಲ ಒಂದು ದಿನ ಈ ತೊಂದರೆ ಕಾಡಿಸಿಯೇ ಕಾಡಿಸಿರುತ್ತದೆ. ಪ್ರಾರಂಭದಲ್ಲಿ ಇದು ಅತ್ಯಂತ ಸರಳವಾಗಿ ಕಾಣಿಸಿದರೂ, ಸತತ ಕಾಡುವ ಅಜೀರ್ಣ, ಹೊಟ್ಟಯುಬ್ಬರ, ಹೈಪರ್ ಎಸಿಡಿಟಿ, ಮಲಬದ್ಧತೆ, ಗ್ಯಾಸ್ ಟ್ರಬಲ್ ಮುಂತಾದ ತೊಂದರೆಗಳಿಗೆ ನಾಂದಿಯಾಗಬಹುದು. ಪ್ರತಿನಿತ್ಯ ಒಂದು ಅಥವಾ ಎರಡು ಬಾರಿ ಖಾಲಿ ಹೊಟ್ಟ್ಟೆಯಲ್ಲಿ ತಂಪು ಪಟ್ಟಿಯನ್ನು 20 ನಿಮಿಷಗಳಕಾಲ ಹಾಕಿಕೊಳ್ಳಬೇಕು. (ತಣ್ಣಿರಿನಲ್ಲಿ ನೆನೆಸಿದ ಬಟ್ಟೆಯನ್ನು ಎರಡು ಮೂರು ಸುತ್ತ ಹೊಟ್ಟ್ಟೆಗೆ ಕಟ್ಟಿ ಹೊರಗಿನಿಂದ ಒಣ ಉಲ್ಲನ್ ಬಟ್ಟೆಯನ್ನು ಸುತ್ತಬೇಕು.) ಆಯಸ್ಕಾಂತದ ಮೇಲೆ ಗಾಜಿನ ಬಾಟ್ಲಿಯಲ್ಲಿ ನೀರನ್ನು ಇಟ್ಟು ಉತ್ತರ ಹಾಗೂ ದಕ್ಷಿಣ ಧ್ರ್ರುವಗಳಲ್ಲಿ ಬೇರೆ ಬೇರೆಯಾಗಿ ಛಾರ್ಜ ಆದ ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿ ಪ್ರತಿನಿತ್ಯ ಮೂರು ಬಾರಿ ಒಂದೊಂದು ಗ್ಲಾಸ್‍ನಂತೆ ಸೇವಿಸಬೇಕು. (ಪ್ರಕೃತಿ ಚಿಕಿತ್ಸಕರ ಸಲಹೆ ಪಡೆದು ಈ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ) ಮುಂಜಾನೆ ಎದ್ದ ಕೂಡಲೇ ಮೂರರಿಂದ ನಾಲ್ಕು ಲೋಟ ಶುದ್ಧವಾದ ನೀರನ್ನು ಸೇವಿಸುವುದರಿಂದ ಅಜೀರ್ಣ…

Read More

(NEWS DESK ) ಶಿವನಿಗೆ ಪವಿತ್ರವಾದ ಐದು ಪಂಚರಾಮ ಕ್ಷೇತ್ರಗಳಲ್ಲಿ ದ್ರಾಕ್ಷರಾಮ ಒಂದಾಗಿದೆ. ಈ ದೇವಾಲಯವು ಭಾರತದ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ದ್ರಾಕ್ಷಾರಾಮಮ್ ಪಟ್ಟಣದಲ್ಲಿದೆ. ಈ ದೇವಾಲಯದಲ್ಲಿ ಭೀಮೇಶ್ವರ ಸ್ವಾಮಿಯು ಶಿವನನ್ನು ಉಲ್ಲೇಖಿಸುತ್ತಾನೆ. ದೇವಾಲಯದ ಇತಿಹಾಸ :: ಈ ದೇವಾಲಯದಲ್ಲಿನ ಶಾಸನಗಳು ಇದನ್ನು ಕ್ರಿ.ಶ 9 ಮತ್ತು 10ನೇ ಶತಮಾನಗಳ ನಡುವೆ ಪೂರ್ವ ಚಾಲುಕ್ಯ ರಾಜ ಭೀಮನು ನಿರ್ಮಿಸಿದನೆಂದು ಬಹಿರಂಗಪಡಿಸುತ್ತದೆ. ದೇವಾಲಯದ ದೊಡ್ಡ ಮಂಟಪವನ್ನು ಒಡಿಶಾದ ಪೂರ್ವ ಗಂಗಾ ರಾಜವಂಶದ ಒಂದನೇ ನರಸಿಂಗ ದೇವನ ಸೊಸೆ ಗಂಗಾ ಮಹಾದೇವಿ ನಿರ್ಮಿಸಿದಳು.ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ, ದೇವಾಲಯವು ಚಾಲುಕ್ಯ ಮತ್ತು ಚೋಳ ಶೈಲಿಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ದೇವಾಲಯವು ಐತಿಹಾಸಿಕವಾಗಿ ಪ್ರಮುಖವಾಗಿದೆ. ಈ ಪ್ರದೇಶವನ್ನು ಆಳಿದ ಪೂರ್ವ ಚಾಲುಕ್ಯರು ಇದನ್ನು ನಿರ್ಮಿಸಿದರು. ಇದನ್ನು892 CE ಮತ್ತು 922 CE ರ ನಡುವೆ ನಿರ್ಮಿಸಲಾದ ಸಮರ್ಲಕೋಟದ (ಸಮಲ್ಕೋಟ್) ಭೀಮೇಶ್ವರಸ್ವಾಮಿ ದೇವಾಲಯಕ್ಕೆ ಮುಂಚಿತವಾಗಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ದಂತಕಥೆ :: ದಕ್ಷ ಯಜ್ಞ ನಡೆದ ಸ್ಥಳವನ್ನು ದಕ್ಷರಾಮ ಎಂದು…

Read More