ಲೇಖಕ: admin

ಮಡಿಕೇರಿ ಮೇ 15 NEWS DESK : ಹುಲಿದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ. ಹಾತೂರು ಗ್ರಾ.ಪಂ ವ್ಯಾಪ್ತಿಯ ಈಚೂರು ಕುಂದ ಗ್ರಾಮದ ತಾತೀರ ಎಸ್.ದೇವಯ್ಯ ಎಂಬವರ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿದಾಳಿ ನಡೆಸಿ ಕೊಂಡು ಹಾಕಿದೆ. ಅದೇ ಹುಲಿ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದ ಕಡೆಮಾಡ ಭೀಮಯ್ಯ ಎಂಬವರ ಹಸುವಿನ ಮೇಲೆ ಅದೇ ದಿನ ದಾಳಿ ನಡೆಸಿ ಕೊಂದು ಹಾಕಿದೆ. ಹುಲಿದಾಳಿಯಿಂದ ಹಸು ಕಳೆದಿಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದು, ಅರಣ್ಯ ಇಲಾಖೆ ಶೀಘ್ರವಾಗಿ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಘಟನೆ ನಡೆದ ಸ್ಥಳಗಳಿಗೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಉಪ ವಲಯ ಅರಣ್ಯಾಧಿಕಾರಿಗಳಾದ ದಿವಾಕರ್, ಸಚಿನ್ ಹಾಗೂ ಆರ್‍ಆರ್‍ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಮಡಿಕೇರಿ ಮೇ 15 NEWS DESK : ಉದಯೋನ್ಮುಖ ಕ್ರೀಡಾ ಪ್ರತಿಭೆ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇದೀಗ ತಮ್ಮ ಕ್ರೀಡಾ ಸಾಧನೆಗೆ ಹೊಸದೊಂದು ಗರಿ ಮೂಡಿಸಿಕೊಂಡಿದ್ದಾರೆ. 18ರ ವಯೋಮಿತಿಯಲ್ಲಿ ಉನ್ನತಿ ಇದೀಗ ಸೀನಿಯರ್ ವಿಮೆನ್ಸ್ ವಿಭಾಗದಲ್ಲಿ ಸ್ಪರ್ಧಿಸಿ 200 ಮೀಟರ್ ಹರ್ಡಲ್ಸ್‍ನಲ್ಲಿ ಸೀನಿಯರ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಭುವನೇಶ್ವರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕಪ್ ಕ್ರೀಡಾಕೂಟದಲ್ಲಿ ಉನ್ನತಿ ಸ್ಪರ್ಧಿಸಿ 200 ಮೀಟರ್ಸ್ ಹರ್ಡಲ್ಸ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಅಂತರವನ್ನು 23.85 ಸೆಕೆಂಡ್‍ನಲ್ಲಿ ಕ್ರಮಿಸುವ ಮೂಲಕ ವೃತ್ತಿ ಜೀವನದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ 2024ರ ಆಗಸ್ಟ್‍ನಲ್ಲಿ ಪೆರುವಿನಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ಗೆ ಇವರು ಅರ್ಹತೆಗಳಿಸಿದ್ದು, ದೇಶವನ್ನು ಪ್ರತಿನಿಧಿಸಲಿದ್ದಾರೆ. ಇತ್ತೀಚಿಗೆ ದುಬೈನಲ್ಲಿ ನಡೆದ ಜೂನಿಯರ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ 100 ಮೀಟರ್ ಹರ್ಡಲ್ಸ್‍ನಲ್ಲಿ ಇವರು ಕಂಚಿನ ಪದಕಗಳಿಸಿದ್ದರು. ಇದೀಗ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ…

Read More

ನಾಪೋಕ್ಲು ಮೇ 14 NEWS DESK : ಪ್ರತಿಯೊಬ್ಬ ಗುರು ತನ್ನ ನೋವನ್ನು ಮರೆತು ತನ್ನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುತ್ತಾರೆ. ಅಂತಹ ಗುರುಗಳನ್ನು ವಂದಿಸಿ ಅಭಿನಂದಿಸಿದಾಗ ವಿದ್ಯಾರ್ಥಿಯ ಜೀವನ ಸಾರ್ಥಕವಾಗುತ್ತದೆ ಎಂದು ಮೈಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟರು. ಮದೆನಾಡು ಗ್ರಾಮದ ಬೆಳಕುಮಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದರು. ವಿದ್ಯಾರ್ಥಿ ಎಷ್ಟು ಎತ್ತರಕ್ಕೆ ಏರುತಾನೋ ಅಷ್ಟೇ ವಿಧೇಯರಾಗಿ ಗುರುಗಳ ಮುಂದೆ ನಡೆದುಕೊಳ್ಳಬೇಕು. ಗುರುಗಳ ಮಾರ್ಗದರ್ಶನದಿಂದ ಜೀವನದಲ್ಲಿ ಎದುರಾಗುವ ಯಾವುದೇ ಸೋಲುಗಳನ್ನು ಹಿಮ್ಮಟಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಶಾಲೆಯ ಸ್ಥಾಪಕ ಶಿಕ್ಷಕಿ ಗೌರಮ್ಮ ಸಮಾರಂಭವನ್ನು ಉದ್ಘಾಟಿಸಿ, ತಮ್ಮ ಐವತ್ತು ವರ್ಷಗಳ ಹಿಂದಿನ ಸೇವೆಯನ್ನು ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮದೆಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಆರ್.ಜೋಯಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕ್ರಮೇಣ ಜನರು ಬಡತನದಿಂದ ಹೊರಬಂದು…

Read More

ಸುಂಟಿಕೊಪ್ಪ ಮೇ 15 NEWS DESK  : ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೇರವೇರಿತು. ಎರಡು ದಿನಗಳ ಕಾಲ ದೇವಾಲಯದ ಆವರಣದಲ್ಲಿ ದೇವಾಲಯದ ಅರ್ಚಕರಾದ ಮಂಜುನಾಥ್ ಉಡುಪ ಹಾಗೂ ಕೇರಳದ ತಂತ್ರಿಗಳಾದ ಶಂಕರ ನಂಬೂದರಿ ತಂಡದವರಿಂದ ವಿಶೇಷ ಪೂಜೆ ನಡೆಯಿತು. ಗಣಹೋಮ, ಕಳಶಾಭಿಷೇಕ, ತತ್ವಹೋಮ, ಮೃತ್ಯುಂಜಯ ಹೋಮ, ನವಗ್ರಹಗಳ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಸಮಿತಿ ಅಧ್ಯಕ್ಷರಾದ ಪಟ್ಟೆಮನೆ ಉದಯ, ಖಜಾಂಚಿ ರಮೇಶ್ ಪಿಳ್ಲೆ, ಕಾರ್ಯದರ್ಶಿ ಪಿ.ಸಿ.ಮೋಹನ, ಸಹ ಕಾರ್ಯದರ್ಶಿ ಯಂಕನ ಕೌಶಿಕ್, ಸಲಹೆಗಾರರಾದ ಕೆ.ಪಿ.ಜಗನ್ನಾಥ್, ಜಗದೀಶ್ ರೈ, ದೀನು ದೇವಯ್ಯ, ಜೆ.ಎನ್.ಚಂದ್ರ ಶೇಖರ್, ಬಿ.ವಿ.ಮಹೇಶ್ ರೈ, ಬಿ.ಡಿ. ರಾಜು ರೈ, ವೀಣಾ ಮಹೇಶ್, ರಮ್ಯಾ ಮೋಹನ್, ಪಿ.ಸಿ.ಸಂದರ್, ಶೈಲಾ ಸಂದರ್, ಪೂರ್ಣ ಸತೀಶ್, ಸೌಮ್ಯ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

Read More

ಸೋಮವಾರಪೇಟೆ ಮೇ 15 NEWS DESK : ರೋಟರಿ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ 100 ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಚ್.ಆರ್.ಕೇಶವ್ ಹೇಳಿದರು. ರೋಟರಿ ಹಾಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಅಂಗನವಾಡಿಗಳು ಮಗುವಿನ ಮೊದಲ ಪಾಠಶಾಲೆಯಾಗಿವೆ. ಅಂಗನವಾಡಿ ಶಿಕ್ಷಕಿಯೇ ಮೊದಲು ಗುರುವಾಗಿದ್ದಾರೆ. ಪೋಷಕರು ಕೆಲಸದ ಒತ್ತಡದಿಂದ ಒಂದು ವರ್ಷಕ್ಕೆ ಮಗುವನ್ನು ಅಂಗನವಾಡಿಗೆ ಸೇರಿಸುವಂತೆ ಪರಿಸ್ಥಿತಿ ಬಂದಿದ್ದು, ಅಂಗನವಾಡಿಗಳಿಗೆ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳ ಬೆಳವಣಿಗೆಗೆ ಉಪಯೋಗವಾಗಲಿದೆ ಎಂದು ಹೇಳಿದರು. ಅಂಗನವಾಡಿಗಳ ಕಟ್ಟಡ ದುರಸ್ತಿ, ಶೌಚಾಲಯ, ಪೀಠೋಪಕರಣ, ಕ್ರೀಡಾ ಆಟಿಕೆಗಳು, ಅಡಿಗೆಪಾತ್ರೆಗಳನ್ನು ಖರೀದಿಸಿ ಕೊಡಲಾಗುವುದು ಎಂದು ಹೇಳಿದರು. ಸೋಮವಾರಪೇಟೆ ರೋಟರಿ ಹಿಲ್ಸ್ ಅತ್ಯುತ್ತಮ ಕ್ಲಬ್ ಆಗಿದೆ. ಅನೇಕ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣ ಮಾಡಿದ್ದಾರೆ. ಬಜೆಗುಂಡಿಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಯಾಗಿದೆ. ಶವಪೆಟ್ಟಿಗೆ(ಐಸ್ ಬಾಕ್ಸ್) ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದು ಹೇಳಿದರು. ರೋಟರಿ ಸಂಸ್ಥೆಗೆ 120…

Read More

ಸೋಮವಾರಪೇಟೆ ಮೇ 14 NEWS DESK : ಕಾಡೆಮ್ಮೆ ದಾಳಿ ಮಾಡಿದ ಪರಿಣಾಮ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ನಡೆದಿದೆ.  ನಾಡ್ನಳ್ಳಿ ಮನೆ ಜೋಯಪ್ಪ ಅವರ ಪತ್ನಿ ಎನ್.ಜೆ.ಮನು ಅವರು ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುವಾಗ ಕಾಡೆಮ್ಮೆ ದಾಳಿ ಮಾಡಿದ್ದು, ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದೆ. ಬಡ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)

Read More

ಸೋಮವಾರಪೇಟೆ ಮೇ 14 NEWS DESK : ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ಕರೆದೊಯ್ಯುವ ಸಂದರ್ಭ ಮಹಿಳೆಯೊಬ್ಬರು ಮಾರ್ಗ ಮಧ್ಯೆ 108 ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣ ಮಂಗಳವಾರ ಬೆಳಿಗ್ಗೆ ನಡೆದಿದೆ. ಬಳಗುಂದ ಗ್ರಾಮದ ಕಾಫಿ ತೋಟದ ಲೈನ್‌ನಲ್ಲಿ ವಾಸವಾಗಿರುವ ಅಸ್ಸಾಂ ಮೂಲದ ಕಾರ್ಮಿಕ ಶಹಜಾನ್ ಅವರ ಪತ್ನಿ ಹಿರಾದನ್(37) ನಾಲ್ಕನೆ ಮಗುವಿಗೆ ಜನ್ಮ ನೀಡಿದ್ದಾರೆ. ರಕ್ತದೊತ್ತಡ ಹೆಚ್ಚಾಗಿದ್ದ ಕಾರಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂದರ್ಭ, ಹೊಸತೋಟದ ಬಳಿ ಹೆರಿಗೆ ನೋವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿಗಳು ಆಂಬುಲೆನ್ಸ್ ನಲ್ಲೇ ಹೆರಿಗೆ ಮಾಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

Read More

ಮಡಿಕೇರಿ ಮೇ 14 NEWS DESK : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾರಂಗಿ ನಾಲೆ ಸಮೀಪ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ವಾಸವಾಗಿರುವ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೆಳ್ಯಪ್ಪ (28) ಎಂಬುವವರೇ ಮೃತರು ಎಂದು ತಿಳಿದು ಬಂದಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಅವಿವಾಹಿತರಾಗಿದ್ದಾರೆ.

Read More

ಬೆಂಗಳೂರು ಮೇ 14 NEWS DESK : ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳದ ಸರಕಾರಿ ಶಾಲೆ ವಿದ್ಯಾರ್ಥಿನಿ ಅಂಕಿತಾಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 5 ಲಕ್ಷ ರೂ. ನೀಡಿ ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭ 3ನೇ ಸ್ಥಾನ ಪಡೆದ ಮಂಡ್ಯದ ಸರಕಾರಿ ಶಾಲೆಯ ವಿದ್ಯಾರ್ಥಿ ನವನೀತ್ ಗೆ 2 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದರು. ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಅಂಕಿತಾ, ಆಕೆಯ ಪೋಷಕರು, ಶಾಲೆಯವರು ಹಾಗೂ ನವನೀತ್, ಅವರ ಕುಟುಂಬದ ಸದಸ್ಯರು ಸದಾಶಿವನಗರದ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದರು. ಡಿಕೆಶಿ ಅವರು ಇಬ್ಬರೂ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಂಕಿತಾಗೆ 5 ಲಕ್ಷ ರೂ. ಚೆಕ್ ನೀಡಿದರು. ನವನೀತ್‌ಗೆ 2 ಲಕ್ಷ ರೂ. ಉಡುಗೊರೆ ಪ್ರಕಟಿಸಿ ಚೆಕ್ ನೀಡುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಉಪಮುಖ್ಯಮಂತ್ರಿಗಳು ಅಂಕಿತಾ 625 ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಯಿತು, ಬಹಳ ಹೆಮ್ಮೆ…

Read More

ಮಡಿಕೇರಿ ಮೇ 14 NEWS DESK : ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮದಿನದ ಅಂಗವಾಗಿ ಮುಂದಿನ ವರ್ಷ ಏಪ್ರಿಲ್‍ನಲ್ಲಿ ನಡೆಯುವ ಕೊಡವ ಜಾನಪದ ನಮ್ಮೆಗೆ ನಡಿಕೇರಿಯಂಡ ಬಲ್ಯಮನೆಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಚಾಲನೆ ನೀಡಿದರು. ಕೊಡವಾಮೆರ ಕೊಂಡಾಟ ಸಂಘಟನೆಯ ನೇತೃತ್ವದಲ್ಲಿ ಕರಡ ಗ್ರಾಮದ ನಡಿಕೇರಿಯಂಡ ಬಲ್ಯಮನೆಯಲ್ಲಿ ನೆಲ್ಲಕ್ಕಿ ನಡುಬಾಡೆಯಲ್ಲಿ ಒಕ್ಕಣೆ ಕಟ್ಟಿ ಅಕ್ಕಿ ಹಾಕುವ ಮೂಲಕ ಚಾಲನೆ ನೀಡಿದರು. ನಡಿಕೇರಿಯಂಡ ಒಕ್ಕ ಬಲ್ಯಮನೆಗೆ ಸೇರಿದ ಕೊಡವಾಮೆರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳನ್ನ ನಡಿಕೇರಿಯಂಡ ಒಕ್ಕ ಪ್ರಮುಖರು ಕೊಡವ ಸಂಪ್ರದಾಯಿಕವಾಗಿ ಸ್ವಾಗತಿಸಿದರು. ನಂತರ ನಡಿಕೇರಿಯಂಡ ಒಕ್ಕ ಕೈಮಡಕ್ಕೆ ತೆರಳಿ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಒಕ್ಕ ಸದಸ್ಯರು, ನಡಿಕೇರಿಯಂಡ ಗುರು ಕಾರೋಣರು, ಕೊಡಗಿನ ಎಲ್ಲಾ ಒಕ್ಕಕಾರೋಣರು, ಇಗ್ಗುತಪ್ಪ ಕಾವೇರಮ್ಮೆ ಮತ್ತು ಕೊಡವು ನಾಡಿನ ಎಲ್ಲಾ ದೇವಾನು ದೇವತೆಯರನ್ನ ಪ್ರಾರ್ಥಿಸಿ, ಕೊಡವ ಜಾನಪದ ನಮ್ಮೆಯ ಯಶಸ್ಸಿಗೆ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ…

Read More