ಮಡಿಕೇರಿ ಮೇ 15 NEWS DESK : ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಮೇ, 16 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಶಾಂತಳ್ಳಿ, ಗೌಡಳ್ಳಿ, ಸೋಮವಾರಪೇಟೆ ಪಟ್ಟಣ, ಅಬ್ಬೂರುಕಟ್ಟೆ, ಐಗೂರು, ಬಜೇಗುಂಡಿ, ಬೇಲೂರು, ಕುಂಬೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಲೇಖಕ: admin
ಮಡಿಕೇರಿ ಮೇ 15 NEWS DESK : ಶ್ರೀಮಂಗಲದ ಕುರ್ಚಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಚೋಕಿರ ಕಲ್ಪನ ತಿಮ್ಮಯ್ಯ ನೇತೃತ್ವದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ವಲಯ ಅಧ್ಯಕ್ಷ ಪೆಲ್ವಿನ್ ಪೂಣಚ್ಚ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭ ಮಾತನಾಡಿದ ಕಾರ್ಯಕರ್ತರು ಶಾಸಕ ಪೊನ್ನಣ್ಣ ಅವರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗ್ರಾ.ಪಂ ಸದಸ್ಯ ಸುದಿ ಪೊನ್ನಪ್ಪ, ಪ್ರಮುಖರಾದ ಚೋಕಿರ ತಿಮ್ಮಯ್ಯ, ಪ್ರಶಾಂತ್ ಕಾಳಿಮಾಡ, ಮುಕ್ಕಾಟ್ಟಿರ ಅಯ್ಯಪ್ಪ, ಬೋಸ್ ಮಾದಪ್ಪ, ಮಚ್ಚಮಾಡ ಉದಯ ಹಾಜರಿದ್ದರು.
ಪೊನ್ನಂಪೇಟೆ ಮೇ 15 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ನೂತನವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಸಂಸ್ಥೆಯ ನಾಲ್ವರು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿರಾಜಪೇಟೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟಮುಡಿ ಹಳೇ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡಿರುವ ಕೆ.ಎಂ.ಎ. ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎಂ.ಎ ಸಂಘಟನಾ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ 3ನೇ ಬಾರಿಗೆ ಆಯ್ಕೆಗೊಂಡಿರುವ ಮತ್ತು ಐಮಂಗಲ (ಕೊಮ್ಮೆತೋಡು) ಬದ್ರಿಯ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಕೋಳುಮಂಡ ರಫೀಕ್ ಮತ್ತು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೆ.ಎಂ.ಎ ನಿರ್ದೇಶಕ ಕುಂಡಂಡ ಎ. ರಜಾಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ…
ಪೊನ್ನಂಪೇಟೆ, ಮೇ 15 NEWS DESK : ಎಮ್ಮೆಮಾಡಿನ ಸೂಫಿ ಶಹೀದ್ ವಲಿಯುಲ್ಲಾರವರ ಹೆಸರಿನಲ್ಲಿ ವರ್ಷಂ ಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕುತ್ತುನಾಡ್ ಉರೂಸ್ ಮೇ 20ರಂದು ಜರುಗಲಿದೆ. ಹಿಂದೂ ಮತ್ತು ಮುಸ್ಲಿಂ ಮತ ಸೌಹಾರ್ದತೆಯ ಪ್ರತೀಕವಾಗಿ ಶತಮಾನಗಳಿಂದ ನಡೆದು ಬರುತ್ತಿರುವ ಈ ಸಾಮರಸ್ಯದ ಕುತ್ತುನಾಡ್ ಉರೂಸ್ ಸಮಾರಂಭವು ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿರುವ ಸೂಫಿ ಶಹೀದ್ ಅವರ ಬಿಡಾರದ ಆವರಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಕೊಂಗಣ ಗ್ರಾಮದ ಕರ್ತೂರ ಕುಟುಂಬದ ತಕ್ಕ ಮುಖ್ಯಸ್ಥ ಕೆ.ಕೆ.ದೇವಯ್ಯ ಮತ್ತು ಬೇಗೂರು-ಮಾಪಿಳ್ಳೆತೋಡು ಗ್ರಾಮದ ತಕ್ಕ ಮುಖ್ಯಸ್ಥ ಆಲೀರ ಎ.ಕುಟ್ಟಿಯಾಲಿ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಬೇಗೂರು-ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಜಾಕ್ ಸಖಾಫಿ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭಂಡಾರ ಜಮಾಯಿಸುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದಾದ ನಂತರ ಬೆಳಿಗ್ಗೆ 10 ಗಂಟೆಗೆ ಹಾಲು-ಅನ್ನ ಪ್ರಸಾದ ವಿತರಣೆ…
ಕುಶಾಲನಗರ ಮೇ 15 NEWS DESK : ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪಲು ಪ್ರಯತ್ನಿಸುವುದರೊಂದಿಗೆ ಇತರರ ಬೆಳವಣಿಗೆಯಲ್ಲಿ ಕೂಡ ಪಾತ್ರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಎಸ್.ಎಲ್.ಎನ್ ಕಾಫಿ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥನ್ ಕರೆ ನೀಡಿದರು. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ನಡೆದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವರ್ಷವಿಡಿ ವ್ಯಾಪಾರ ಉದ್ಯಮದ ನಡುವೆ ಜಂಜಾಟದಲ್ಲಿ ತೊಡಗಿರುವ ವರ್ತಕ ವೃಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ನೋವು ನಲಿವನ್ನು ಹಂಚಿಕೊಂಡಿರುವುದು ಶ್ಲಾಘನೀಯ ಅಂಶವಾಗಿದೆ ಎಂದರು. ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನಕ್ಕೆ ಭಾಜನರಾದ ಕುಶಾಲನಗರದ ಸಹಕಾರಿ ಧುರೀಣರಾದ ಟಿ.ಆರ್.ಶರವಣಕುಮಾರ್ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಕೂಡ ಸಂಘಟನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಒಗ್ಗಟ್ಟಿನ ಮೂಲಕ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಾಧ್ಯ ಎಂದರು. ಸಂಸ್ಥೆಯ ಮೂಲಕ ನೂತನವಾಗಿ ನಿರ್ಮಾಣವಾಗಲಿರುವ ಸ್ವಂತ ಭವನ ಕಟ್ಟಲು ಎಲ್ಲರೂ ಕೈಜೋಡಿಸುವಂತೆ ಅವರು ಕೋರಿದರು. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್…
ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಎನ್.ಎಸ್.ಯು.ಐ ಘಟಕದಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ಎಲ್ಲಾ ದಾನಕ್ಕಿಂತಲೂ ಅಮೂಲ್ಯವಾದ ರಕ್ತದಾನ. ಪ್ರತೀಯೋವ೯ರೂ ರಕ್ತದಾನ ಮಾಡುವ ಮೂಲಕ ರಕ್ತ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಹೇಳಿದರು. ಪ್ರಸ್ತುತ ರಕ್ತನಿಧಿ ಕೇಂದ್ರದಲ್ಲಿ ರಕ್ತ ಲಭ್ಯವಿದೆಯಾದರೂ ತುತು೯ ಸಂದಭ೯ದಲ್ಲಿ ರೋಗಿಗಳಿಗೆ ನೀಡಲು ರಕ್ತದ ಸಂಗ್ರಹ ಮತ್ತಷ್ಟು ಪ್ರಮಾಣದಲ್ಲಿ ಅಗತ್ಯವಿದೆ ಎಂದು ಡಾ.ಕರುಂಬಯ್ಯ ಹೇಳಿದರು. ವಾಹನ ಅಪಘಾತ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೂ ರಕ್ತದ ತೀವ್ರ ಅಗತ್ಯ ಕಂಡು ಬರುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತ ನೀಡಲು ಮುಂದಾಗುವಂತೆ ಮನವಿ ಮಾಡಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಎನ್ ಎಸ್ ಯು ಐ ಘಟಕದ ಜಿಲ್ಲಾಧ್ಯಕ್ಷ ರಾಶಿದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ಜಿಲ್ಲಾಧ್ಯಕ್ಷ ತೇನ್ನಿರಾ ಮೈನಾ, ಕಾಲೇಜಿನ…
ಮಡಿಕೇರಿ ಮೇ 15 NEWS DESK : ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2024-25ನೇ ಸಾಲಿಗೆ ರೈತರಿಗೆ ಕೆಸಿಸಿ ಫಸಲು ಸಾಲ ವಿತರಿಸಲಾಗುತ್ತಿದೆ. ಆದರೆ ಸಂಘದ ಕಾರ್ಯವ್ಯಾಪ್ತಿಗೆ ಬರುವ ಶೇ.40 ರಷ್ಟು ಸದಸ್ಯರುಗಳು ಜಂಟಿ ಪಹಣಿ ಹೊಂದಿರುವುದರಿಂದ ಇವರುಗಳು ಹೊಂದಿರುವ ನೈಜ ಆಸ್ತಿಯು ಫ್ರೂಟ್ ತಂತ್ರಾಂಶದಲ್ಲಿ ನಮೂದಾಗಿಲ್ಲ. ಇದರಿಂದ ಸಂಘದಿಂದ ನೀಡಲಾಗುತ್ತಿರುವ ಕೆಸಿಸಿ ಫಸಲು ಸಾಲದಿಂದ ಇವರು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಂಟಿ ಪಹಣಿಯಿಂದ ಫ್ರೂಟ್ ತಂತ್ರಾಂಶದಲ್ಲಿ ಆಸ್ತಿ ನಮೂದಾಗದ ಕಾರಣ ಕೃಷಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೂನ್ಯ ಬಡ್ಡಿ ದರದ ಸಾಲವನ್ನು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ್ರೂಟ್ ತಂತ್ರಾಂಶ ಪ್ರಕ್ರಿಯೆ ವಿಳಂಬವಾಗುತ್ತಿದೆ. ದಲ್ಲಾಳಿಗಳು ಏಕರೆಗೆ…
ಕಡಂಗ ಮೇ 15 NEWS DESK : ಮನ್ಶ ಉಲ್ ಉಲೂಂ ಕಡಂಗ ಮದ್ರಸ ವಿದ್ಯಾರ್ಥಿಗಳಿಗೆ ಯೂಸುಫ್ ಮುಸ್ಲಿಯಾರ್ ಕುಟುಂಬದ ವತಿಯಿಂದ ಉಚಿತ ಮದ್ರಸ ಪಠ್ಯ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಲ್ಲ್ ಖತೀಬ್ ರಫೀಖ್ ಲತೀಫಿ, ಸದರ್ ಮುಅಲ್ಲಿಂ ಸುಹೈಬ್ ಫೈಝಿ, ಯೂಸುಫ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಅಬ್ದುರ್ರಹ್ಮಾನ್, ಸಮಿತಿ ಸದಸ್ಯರಾದ ರಝಾಖ್ ಸಹ ಅಧ್ಯಾಪಕರುಗಳಾದ ಹನೀಫ್ ಮುಸ್ಲಿಯಾರ್, ಮಮ್ಮಿ ಉಸ್ತಾದ್, ನಾಸರ್ ಫೈಝಿ ಹಾಗೂ ಅಹ್ಮದ್ ಹಾಜರಿದ್ದರು. ವರದಿ : ನೌಫಲ್
ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲೆಯಲ್ಲಿ ಮರಗಳ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರೆಸಿದ್ದು, ಕೃಷಿಕ ವರ್ಗಕ್ಕೆ ಮಾರಕವಾಗಿರುವ ಆದೇಶವನ್ನು ಸರಕಾರ ಹಿಂಪಡೆಯುವವರೆಗೆ ವಿವಿಧ ಹಂತಗಳಲ್ಲಿ ಹೋರಾಟವನ್ನು ರೂಪಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ತೋಟಗಳಲ್ಲಿರುವ ಮರಗಳ ಗಣತಿ ಕಾರ್ಯ ಜಿಲ್ಲೆಗೆ ಮಾರಕವಾಗಿದೆ. ಗಣತಿ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಬೆಳೆಗಾರರ ಪರವಾಗಿ ಬಿಜೆಪಿ ಈ ಹಿಂದೆಯೇ ಆಗ್ರಹಿಸಿದ್ದರೂ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ಮೇ 17 ರಂದು ಮಡಿಕೇರಿಯ ಅರಣ್ಯ ಭವನದ ಎದುರು ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳೆಗಾರರು, ಸಾರ್ವಜನಿಕರು ಹಾಗೂ ದೇವಾಲಯ ಸಮಿತಿಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲೆಯ ಶಾಸಕರು ಮರಗಳ ಗಣತಿ ಕಾರ್ಯ ಮುಂದುವರೆಯುವುದಿಲ್ಲ ಎಂದು ಭರವಸೆ ನೀಡಿದ ಮಾರನೇಯ ದಿನವೇ ಸಂಪಾಜೆ ಮತ್ತು ಚೆಂಬು ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಮರಗಳ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು…
ಮಡಿಕೇರಿ ಮೇ 15 NEWS DESK : 2023-24 ನೇ ಸಾಲಿನ ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ [ಸಿ.ಬಿ.ಎಸ್.ಇ.] ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿಯ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿನಿ ಕೆ.ಕೆ.ಸರ್ವಿಕ ಶೇ. 97.16 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೆ.ಕೆ.ಸರ್ವಿಕ ಮೂಲತಃ ನಾಪೋಕ್ಲು ಬೇತು ಗ್ರಾಮದ ನಿವಾಸಿ ಪ್ರಸ್ತುತ ಮಡಿಕೇರಿಯ ತಾಳತ್ತಮನೆಯಲ್ಲಿ ವಾಸವಿರುವ ಕೊಂಡಿರ ಕಿಶನ್ ಕಾರ್ಯಪ್ಪ ಹಾಗೂ ಕಾವ್ಯ ಕಾವೇರಮ್ಮ[ ತವರುಮನೆ ಮೂಡೆರ] ಅವರ ಪುತ್ರಿ.






