ಮಡಿಕೇರಿ ಮೇ 14 NEWS DESK : ವಿದ್ಯಾರ್ಥಿಗಳ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. ಇದೇ ಮೇ 29 ರಿಂದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊಳ್ಳಲಿವೆ. 2024- 25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ 244 ದಿನ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ 121 ದಿನ ರಜೆ ಸಿಗಲಿದೆ. 18 ದಿನ ದಸರಾ ರಜೆ ಮತ್ತು 48 ದಿನ ಬೇಸಿಗೆ ರಜೆ ಇರುತ್ತದೆ.
ಲೇಖಕ: admin
ಸೋಮವಾರಪೇಟೆ ಮೇ 14 NEWS DESK : ಪಿಕ್ ಅಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದಿದೆ. ಬೈಕ್ ಸವಾರ ಮೋರಿಕಲ್ಲು ಬಸವನಹಳ್ಳಿ ಗ್ರಾಮದ ವಿಷ್ಣು ಗಾಯಾಳು. ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸೋಮವಾರಪೇಟೆ ಹಾಗೂ ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಗಾಯಾಳುವಿನ ಸಂಬಂಧಿ ಸಿ.ಎಚ್.ರದೀಶ್ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
HEAVY RAIN ಮುಂಬೈ ಮೇ 14 NEWS DESK : ಸುಮಾರು 100 ಅಡಿ ಎತ್ತರದ ಹೋರ್ಡಿಂಗ್ ಕುಸಿದು ಬಿದ್ದು 12 ಮಂದಿ ಮೃತಪಟ್ಟಿರುವ ಘಟನೆ ವಾಣಿಜ್ಯ ನಗರಿ ಮುಂಬೈಯ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಬಿರುಗಾಳಿ ಮತ್ತು ಅಕಾಲಿಕ ಮಳೆಗೆ ಜಾಹೀರಾತು ಫಲಕ ಹೋರ್ಡಿಂಗ್ ಕುಸಿದು ಬಿದ್ದಿದ್ದು, 12 ಮಂದಿ ಸಾವನ್ನಪ್ಪಿ, 74 ಜನರು ಗಾಯಗೊಂಡಿದ್ದಾರೆ.
ಮಡಿಕೇರಿ ಮೇ 14 NEWS DESK : ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ ದಿ ಎಂ.ಎಸ್.ಶಾಂತಪ್ಪ ಐದನೇ ಪುತ್ರ ಹಾಗೂ ಕಾಫಿ ಬೆಳೆಗಾರ ಎಂ.ಎಸ್.ಉಮೇಶ್ (61) ಇಂದು ಬೆಳಿಗ್ಗೆ ನಿಧನರಾದರು. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 4 ಗಂಟೆ ಸಮಾಜದ ವೀರಶೈವ ರುದ್ರ ಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಮಡಿಕೇರಿ ಏ.14 NEWS DESK : ಗಾಂಧಿ ಯುವಕ ಸಂಘ ಕಂಡಕರೆ ಮತ್ತು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿಯಿಂದ ಕೊಡಲಾಗುತ್ತಿರುವ “ಬಡವರ ಬೆಳಕು” ಪ್ರಶಸ್ತಿಗೆ ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ ಆಯ್ಕೆಯಾಗಿದ್ದಾರೆ. ಜಾಬಿರ್ ನಿಝಾಮಿ ಅವರು ಸೇವ್ ದಿ ಡ್ರೀಮ್ಸ್ ಮೂಲಕ ಸಾವಿರಾರು ಬಡಜೀವಗಳನ್ನು ರಕ್ಷಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅನಾರೋಗ್ಯ ಪೀಡಿತರ ಆಸ್ಪತ್ರೆ ವೆಚ್ಚವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವುದರ ಮೂಲಕ ಹಣ ಸಂಗ್ರಹಮಾಡಿ ಜಾಬಿರ್ ನಿಝಾಮಿ ಬಡವರ ಬೆಳಕಾಗಿದ್ದಾರೆ. ಈ ಎಲ್ಲಾ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್ ಕಂಡಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ವಿತರಣೆಯು ಜೂ.9 ರಂದು ಕಂಡಕರೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
ಮಡಿಕೇರಿ ಮೇ 13 NEWS DESK : ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿರುವ ಮೂರು ಪುಂಡಾನೆಗಳನ್ನು ಸೆರೆಹಿಡಿದು ‘ರೇಡಿಯೋ ಕಾಲರ್’ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆ ಮೇ 14 ರಿಂದ ಆರಂಭಗೊಳ್ಳಲಿದೆ. ವಿರಾಜಪೇಟೆ ವಿಭಾಗದ ತಿತಿಮತಿ ವಲಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಬಿಬಿಸಿಟಿ ಎಲಿಕಲ್ ಕಾಫಿ ತೋಟ ಸೇರಿದಂತೆ ಸುತ್ತಮುತ್ತಲ ತೋಟಗಳಲ್ಲಿ ನೆಲೆ ನಿಂತಿರುವ ಈ ಪುಂಡಾನೆಗಳು, ಕಳೆದ ಹಲ ಸಮಯಗಳಿಂದ ಕೃಷಿ ಫಸಲನ್ನು ಹಾಳು ಗೆಡಹಿ, ಜನ ಜಾನುವಾರುಗಗಳ ಮೇಲೆ ದಾಳಿ ನಡೆಸುತ್ತ ಆತಂಕ ಸೃಷ್ಟಿಸುತ್ತಿವೆ. ಗ್ರಾಮೀಣ ಜನರ ಆತಂಕಕ್ಕೆ ಕಾರಣವಾಗಿರುವ ಈ ಪುಂಡಾನೆಗಳನ್ನು ಸೆರೆಹಿಡಿದು, ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಸಂದರ್ಭ ಯಾವುದೇ ಅವಘಡಗಳು ಆಗದಂತೆ ಬಾಡಗ ಬಾಣಂಗಾಲ ಒಳಗೊಂಡಂತೆ ಮೇಕೂರು, ಹೊಸ್ಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ, ಕರಡಿಗೋಡು, ಪುಲಿಯೇರಿ, ಹೊಸೂರು, ಇಂಜಿಲಗೆರೆ ವ್ಯಾಪ್ತಿಯ ಗ್ರಾಮಸ್ಥರು, ಸಾರ್ವಜನಿಕರು, ತೋಟ ಮಾಲೀಕರು, ಕಾರ್ಮಿಕರು, ಶಾಲಾ ಮಕ್ಕಳು ಎಚ್ಚರಿಕೆಯಿಂದ…
ಸೋಮವಾರಪೇಟೆ ಮೇ 13 NEWS DESK : ಸೋಮವಾರಪೇಟೆ ತಾಲ್ಲೂಕಿನ ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್ ಕುಮಾರ್ ಆರೋಪಿಸಿದ್ದಾರೆ. ಹೋರಾಟ ಸಮಿತಿಯ ಪದಾಧಿಕಾರಿಗಳು ಕಂದಾಯ ಇಲಾಖೆಗೆ ತೆರಳಿ ಶಿರಸ್ತೇದಾರ್ ರಮೇಶ್ ಅವರನ್ನು ಭೇಟಿಯಾಗಿ ರೈತರಿಗೆ ಆಗುತ್ತಿರುವ ಕಿರುಕುಳದ ವಿವರಿಸಿ ಮನವಿ ಸಲ್ಲಿಸಿದರು. ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ತಾಲ್ಲೂಕಿನ ಕಂದಾಯ ಗ್ರಾಮಗಳ ವಿಸ್ತೀರ್ಣ, ಗ್ರ್ಯಾಂಟ್, ದುರಸ್ತಿಯಾಗಿರುವ ಜಾಗ, ಖಾಲಿಯಿರುವ ಜಾಗದ ವಿಸ್ತೀರ್ಣವನ್ನು ಏಕರೆಯಲ್ಲಿ ನೀಡಬೇಕೆಂದು 2 ತಿಂಗಳ ಹಿಂದೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ನಿಯಮದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಿಗಬೇಕು. ಬೇರೆ ಜಿಲ್ಲೆಯಿಂದ ಬಂದು ಹೋಗುವುದು ಸರಿಯಲ್ಲ. ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು. ಸಿ.ಸಿ.ಕ್ಯಾಮೆರಾ ಕಣ್ಗಾವಲಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯವಾಗಬೇಕು ಎಂದು…
ಮಡಿಕೇರಿ ಮೇ 13 NEWS DESK : ಜಿಲ್ಲೆಯಲ್ಲಿ ಇದೀಗ ಪೂರ್ವ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಕಾಲರಾ, ಶೀತ-ಜ್ವರ, ಕೆಮ್ಮು, ವಾಂತಿ, ಬೇದಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪೇಯಿಂಗ್‍ಗೆಸ್ಟ್, ಹೋಮ್-ಸ್ಟೇ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ/ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರು ನೀಡುವಂತೆ ಸೂಚಿಸಿದೆ. ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರಿತಿಯಲ್ಲಿ ಮುಚ್ಚಿಟ್ಟು ಸ್ವಚ್ಚವಾದ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆ ಮಾಡುವಂತೆ ತಿಳಿಸಿದೆ. ಆಹಾರ…
ಮಡಿಕೇರಿ ಮೇ 13 NEWS DESK : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ (ಎಫ್‍ಎಸ್‍ಎಸ್‍ಎಐ ಲೈಸನ್ಸ್) ಪಡೆದಿರುವ ತಯಾರಕರು/ ರೀ-ಪ್ಯಾಕರ್/ ರೀ-ಲೇಬರ್ ಪ್ರತಿ ವರ್ಷ ವಾರ್ಷಿಕ ವಹಿವಾಟಿನ ವಿವರವನ್ನು ಆಯಾಯ ಆರ್ಥಿಕ ವರ್ಷದ ಮೇ 31 ರ ಕಾಲಮಿತಿಯೊಳಗೆ https:\\foscos.fssai.gov.in ವೆಬ್‍ಸೈಟ್‍ನಲ್ಲಿ ತಪ್ಪದೇ ಸಲ್ಲಿಸುವುದು. ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗಧಿಯಾಗುವ ದಂಡವನ್ನು ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಅವರು ತಿಳಿಸಿದ್ದಾರೆ. ತಯಾರಕರು/ರೀ-ಪ್ಯಾಕರ್/ರೀ-ಲೇಬಲ್‍ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ 06 ತಿಂಗಳಿಗೊಮ್ಮ ಎನ್‍ಎಬಿಎಲ್ ಅಕ್ರಿಡಿಯೇಟೆಡ್/ಎಫ್‍ಎಸ್‍ಎಸ್‍ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂರ್ತಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್‍ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ ವಿವರವನ್ನು ಹಾಗೂ ಪ್ರಯೋಗಾಲಯದ ವಿಶ್ಲೇಷಣಾ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ತಯಾರಕರು/ರೀ-ಪ್ಯಾಕರ್/ರೀ-ಲೇಬಲ್…
ಮಡಿಕೇರಿ ಮೇ 13 NEWS DESK : ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜು ವತಿಯಿಂದ ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನಿಸಲಾಗಿದೆ. ಉಚಿತ ಊಟ, ವಸತಿ, ಸಿಇಟಿ, ನೀಟ್ ಕೋಚಿಂಗ್ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹತ್ತಿರದ ಕೊಡಗು ಜಿಲ್ಲೆಯ ಯಾವುದೇ ಮೊರಾರ್ಜಿ ವಸತಿ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ, 22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಅಟಲ್ ಬಿಹಾರಿ ವಾಜಪೇಯಿ ಕಾಲೇಜು, ಭಾಗಮಂಡಲ ಲೋಕೇಶ್ ದೂ.ಸಂ. 9611307646 ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.






