ಲೇಖಕ: admin

ಮಡಿಕೇರಿ ಮೇ 13 NEWS DESK : ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಮೇ 17 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಡಿಕೇರಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಿ, ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿ ಸ್ವೀಕರಿಸಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ ಮಡಿಕೇರಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Read More

ಮಡಿಕೇರಿ ಮೇ 13 NEWS DESK : ಪ್ರಸಕ್ತ(2024-25) ಸಾಲಿನ ಮೈಸೂರು ವಿಭಾಗ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮವು ಮೇ 17 ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಅವರ ಕಾರ್ಯಾಲಯದ ವಿ.ಸಿ.(ವಿಡಿಯೊ ಸಂವಾದ) ಸಭಾಂಗಣದಲ್ಲಿ ವೆಬಿನಾರ್ ಮೂಲಕ ನಡೆಯಲಿದೆ. ಈ ಸಂಬಂಧ ಕುಂದುಕೊರೆಗಳು ಇದ್ದಲ್ಲಿ, ನಿವೃತ್ತ ರಾಜ್ಯ ಸರ್ಕಾರಿ ನೌಕರರು ತಮ್ಮ ಅಹವಾಲುಗಳನ್ನು ಸೂಕ್ತ ದಾಖಲೆಗಳೊಂದಿಗೆ ಮೇ, 15 ರೊಳಗೆ ಕೊಡಗು ಜಿಲ್ಲೆಯ ಉಪ ನಿರ್ದೇಶಕರು, ಜಿಲ್ಲಾ ಖಜಾನೆ ಕೊಠಡಿ ಸಂಖ್ಯೆ 10, (ದೂ.ಸಂ.08272-225654) ಜಿಲ್ಲಾಡಳಿತ ಭವನ, ಮಡಿಕೇರಿ ಇವರಿಗೆ ಸಲ್ಲಿಸಲು ಹಾಗೂ ಅದಾಲತ್‍ನಲ್ಲಿ ಭಾಗವಹಿಸುವಂತೆ ಜಿಲ್ಲಾ ಖಜಾನೆಯ ಉಪ ನಿರ್ದೇಶಕರು ರಘುನಾಥ್ ತಿಳಿಸಿದ್ದಾರೆ. 

Read More

ಮಡಿಕೇರಿ ಮೇ 13 NEWS DESK : ಮೂರ್ನಾಡುವಿನಲ್ಲಿ ಕ್ರಿಕೆಟ್ ಪಂದ್ಯಾವಳಿಯ ಸಿದ್ಧತೆಯ ವೇಳೆ ವಿದ್ಯುತ್ ತಗುಲಿ ಮೃತಪಟ್ಟ ಆಸಿಫ್ ಎಂಬ ಯುವಕನ ಮನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Read More

ಕೂಡಿಗೆ ಮೇ 13 NEWS DESK : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಬಸವನತೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಚೌಡಮ್ಮ ದೇವಿಯ ವಾರ್ಷಿಕ ಪೂಜೋತ್ಸವವು ಮೇ 17 ರಂದು ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ. ಹೆಚ್ಚಿನ ಮಾಹಿತಿಗೆ ಪ್ರವೀಣ್ -9845667906, ಸುಮಂತ್ -9535043956, ಸತೀಶ್ -8105314959, ಕಿರಣ್ 7795553752 ಸಂಪರ್ಕಿಸಬಹದಾಗಿದೆ. ವರದಿ : ಕೆ.ಆರ್.ಗಣೇಶ್ ಕೂಡಿಗೆ 

Read More

ಕೂಡಿಗೆ ಮೇ 13 NEWS DESK : ಕೂಡಿಗೆ, ಕೊಪ್ಪಲು, ಹೆಗ್ಗಡಳ್ಳಿ, ಕೋಟೆ ಗ್ರಾಮ ದೇವತೆ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್ ರಾಯ ದೇವಾಲಯದ ಜಾತ್ರ ಮಹೋತ್ಸವವು ಮೇ 20 ರಿಂದ ಆರಂಭವಾಗಲಿದೆ. ಮೇ 20 ರಂದು ಸಂಜೆ 6 ಗಂಟೆಗೆ ಶ್ರೀ ಬಸವೇಶ್ವರ ದೇವರ ವಾನ್ಯ ಹಾಗೂ ಮೆರವಣಿಗೆ ನಡೆಯಲಿದೆ.  ಮೇ 24 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ದಂಡಿನಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ,  ಸಂಜೆ 8 ಗಂಟೆಯಿಂದ ಅಗ್ನಿ ಸ್ಥಾಪನೆ ನೆರವೇರಲಿದೆ. ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮಸ್ಥರುಗಳು ಹಾಗೂ ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಳಸ ಪೂಜೆ ನಡೆಯಲಿದೆ.  ಬಳಿಕ ಹಣ್ಣೆಡಗೆ ಉತ್ಸವ ಮತ್ತು ಕೊಂಡೋತ್ಸವ ನಡೆಯಲಿದ್ದು, ಮರುದಿನ ಮುಂಜಾನೆ ದೇವಾಲಯದ ಮುಂಭಾಗ ಉಯ್ಯಾಲೋತ್ಸವ ಜರುಗಲಿದೆ. ಹನ್ನೆಡೆಗೆ ಹಾಗೂ ಕಳಸ ಹೊತ್ತ ಮಹಿಳೆಯರು ಹಾಗೂ ಪುರುಷರು…

Read More

ಮಡಿಕೇರಿ ಮೇ 13 NEWS DESK : ರಾಜ್ಯ ವ್ಯಾಪಿ ಮೇ 13 ರಿಂದ 21 ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 19 ಮತ್ತು 20 ರಂದು, ದಕ್ಷಿಣ ಒಳನಾಡಿನ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾದ ಮಧ್ಯಮದಿಂದ ಭಾರೀ ಮಳೆ ಮತ್ತು ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Read More

ಮಡಿಕೇರಿ ಮೇ 13 NEWS DESK : ವಿರಾಜಪೇಟೆ ತಾಲ್ಲೂಕು ಗೇಟಾಡಿ ಮಾಲ್ದಾರೆ ಗ್ರಾಮದಲ್ಲಿ  “ಜೇನು ಕುರುಬ ಕಪ್” ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ, ತಂಡಗಳಿಗೆ ಶುಭಹಾರೈಸಿದರು.   

Read More

ಮಡಿಕೇರಿ ಮೇ 13 NEWS DESK : ವಿರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ಮೇ 18 ರಂದು ವಿರಾಜಪೇಟೆಯಲ್ಲಿ ಉಚಿತ ಕ್ಯಾನ್ಸರ್  ತಪಾಸಣಾ ಶಿಬಿರ ನಡೆಯಲಿದೆ. ವಿರಾಜಪೇಟೆ ರೋಟರಿ ಶಾಲೆಯಲ್ಲಿ ( ವಿರಾಜಪೇಟೆ ತಾಲೂಕು ಕಚೇರಿ ಬಳಿ) ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿಬಿರ ನಡೆಯಲಿದೆ, ಪರಿಣಿತ ವೈದ್ಯರಾದ ಡಾ. ರಘುನಾಥ್ , ಎಂ.ಎಸ್.ಬೆಳ್ಯಪ್ಪ, ಡಾ.ರವಿ, ಡಾ.ಸುನಿತಾ, ಡಾ.ಸಾಗರಿಕ, ಡಾ.ನಿತ್ಯಾನಂದ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡಲಿದ್ದಾರೆ ಎಂದು ವಿರಾಜಪೇಟೆ ರೋಟರಿ ಅಧ್ಯಕ್ಷರಾದ ಎಂ.ಎಂ. ಬನ್ಸಿ ಪೂವಣ್ಣ, ಬೆಂಗಳೂರು ಗ್ಲೋಬಲ್ ಫೌಂಡೇಶನ್ ಟ್ರಸ್ಟಿ ಕನ೯ಲ್ ಸಿ.ಎ. ಅಯ್ಯಪ್ಪ ತಿಳಿಸಿದ್ದಾರೆ ಕ್ಯಾನ್ಸರ್ ತಪಾಸಣೆ ಅಥವಾ ಚಿಕಿತ್ಸೆಗಾಗಿ ಶಿಬಿರಕ್ಕೆ ಬರುವವರು ಅವರಿಗೆ ಸಂಬಂಧಿಸಿದ ವೈದ್ಯಕೀಯ ಮಾಹಿತಿ ಕಡತ ತರುವಂತೆ ಕೋರಲಾಗಿದೆ, ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 7022924860, 9448448780 ಸಂಪರ್ಕಿಸಬಹುದಾಗಿದೆ.

Read More

ಪಾಟ್ನಾ ಮೇ 13 NEWS DESK : ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಸೋಮವಾರ ಭೇಟಿ ನೀಡಿದರು. ಬೆಳಿಗ್ಗೆ ಅವರು ಗುರುದ್ವಾರದಲ್ಲಿದ್ದ ಸಿಖ್ ಸಮುದಾಯದ ಜನರಿಗೆ ಆಹಾರ ಬಡಿಸುವ ಸೇವಾ ಕಾರ್ಯ ನಡೆಸಿದರು. ಗುರುದ್ವಾರದ ಸಿಖ್ ಸಮುದಾಯದ ಅಡುಗೆ ಹಾಲ್‌ಗೆ ತೆರಳಿದ ಅವರು ಸ್ಟೀಲ್ ಬಕೆಟ್‌ನಲ್ಲಿದ್ದ ಆಹಾರವನ್ನು ಸಾಲಿನಲ್ಲಿ ಕುಳಿತಿದ್ದ ಜನರಿಗೆ ಬಡಿಸಿದರು. ಅಲ್ಲದೆ ಅಡುಗೆ ಕೋಣೆಯಲ್ಲಿ ದಾಲ್ ಹಾಗೂ ಇತರೆ ಖಾದ್ಯ ತಯಾರಿಸುವ ಕಾರ್ಯದಲ್ಲಿಯೂ ನೆರವಾದರು. ಚಪಾತಿ ಕೂಡ ಲಟ್ಟಿಸಿ ಗಮನ ಸೆಳೆದರು.  

Read More

ಮಡಿಕೇರಿ ಮೇ 13 NEWS DESK : ಕರಿಕೆಯ ಆಡ್ಕ ಗ್ರಾಮದ ಪುರಾತನ ದೈವಸ್ಥಾನದಲ್ಲಿ ಪ್ರತಿ ವರ್ಷದಲ್ಲಿ ಈ ಬಾರಿಯೂ ಶ್ರದ್ಧಾಭಕ್ತಿಯಿಂದ ದೈವ ಕೋಲಗಳು ನಡೆಯಿತು. ಗ್ರಾಮದ ವನದೇವತಾರಾಧನ ಸಮಿತಿ ಮತ್ತು ಗ್ರಾಮಸ್ಥರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.  ನಂತರ ಚಾಮುಂಡಿ, ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲಗಳು ನೆರೆವೇರಿತು. ಗ್ರಾಮದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More