ಮಡಿಕೇರಿ ಮೇ 12 NEWS DESK : ಕೇರಳದ ಕ್ಯಾಲಿಕಟ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಾದಾಪುರದ ಇಗ್ಗೋಡ್ಲು ಗ್ರಾಮದ ರಾಘವೇಂದ್ರ ಎಚ್.ಎಸ್ ಅವರ ಪುತ್ರಿ ಬೃಂದಾ ಎಚ್.ಆರ್ ಬೆಳ್ಳಿಯ ಪದಕ ಹಾಗೂ ಸತೀಶ್ ಕುಮಾರ್ ಅವರ ಪುತ್ರಿ ಸಾತ್ವಿಕ ಬಿ.ಎಸ್ ಕಂಚಿನ ಪದಕ ಗೆದ್ದಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರಿಗೆ ಸುದರ್ಶನ್ ಮಕ್ಕಂದೂರು ಅವರು ತರಬೇತಿ ನೀಡಿದ್ದಾರೆ.
ಲೇಖಕ: admin
ACCIDENT ಪಾವಗಡ ಮೇ 12 NEWS DESK : ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಮುಖ್ಯ ಶಿಕ್ಷಕರು ಮೃತಪಟ್ಟಿರುವ ಘಟನೆ ಪಾವಗಡ ತುಮಕೂರು ಮಾರ್ಗದ ಕಣಿವೆನಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಪಾವಗಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಓ.ಧನಂಜಯ ಹಾಗೂ ಗೌಡೇಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ ಮೃತ ದುರ್ದೈವಿಗಳು. ಇದೇ ವಾಹನದಲ್ಲಿದ್ದ ಶಿಕ್ಷಕರಗಳಾದ ಆರ್.ಎಂ.ನರಸಿಂಹ ಹಾಗೂ ವೆಂಕಟಾಚಲಪತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ತುಮಕೂರಿನಲ್ಲಿ ಶಿಕ್ಷಕಿ ಶೋಭಾ ಎನ್ನುವವರ ಪುತ್ರಿಯ ವಿವಾಹದ ಆರಕ್ಷತೆಯನ್ನು ಮುಗಿಸಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಮೇ 12 NEWS DESK : ವಿಶಿಷ್ಠ ಆಚರಣೆಯ ಹಳ್ಳಿಗಟ್ಟು ಬೋಡ್ ನಮ್ಮೆಗೆ ಇಂದು ಮೇ-11ನೇ ಶನಿವಾರ ಮೂಕಳೇರ ಬಲ್ಯಮನೆ ಸಮೀಪದ ಊರಿನ ಅಂಬಲದಲ್ಲಿ ದೇವಕಟ್ಟ್ ಬೀಳುವ ಮೂಲಕ ಹಳ್ಳಿಗಟ್ಟು ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಯಿತು. ಮೇ 18 ರಂದು ದೇವಕಟ್ಟನ್ನು ಸಡಿಲಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಯತನಕ ಹಳ್ಳಿಗಟ್ಟು ಊರಿನಲ್ಲಿ ಹಸಿರು ಮರಗಿಡಗಳನ್ನು ಕುಡಿಯುವಂತಿಲ್ಲ, ಪ್ರಾಣಿ ವಧೆ ಮಾಡುವಂತಿಲ್ಲ, ಮಾಂಸಕ್ಕಾಗಿ ಬಳಸುವ ಪ್ರಾಣಿಗಳು ಮಾತ್ರವಲ್ಲ, ಯಾವುದೇ ರೀತಿಯ ಹಿಂಸೆ ಮಾಡುವಂತಿಲ್ಲ, ಹಸಿ ಮೊಟ್ಟೆಯನ್ನು ಒಡೆಯುವಂತಿಲ್ಲ, ಪ್ರಾಣಿ ಬೇಟೆ ನಿಷೇಧ, ಗುಂಡಿನ ಶಬ್ದ ಹಾಗೂ ಊರಿನೊಳಗೆ ವಾಲಗದ ಶದ್ದು ನಿಷೇಧ, ರೊಟ್ಟಿ-ದೋಸೆ ಮಾಡುವಂತಿಲ್ಲ, ಸಾಂಬಾರು ಮಾಡುವಾಗ ಅದಕ್ಕೆ ಒಗ್ಗರಣೆ ಹಾಕಬಾರದು ಹೀಗೆ ನಾನಾರೀತಿಯ ಕಟ್ಟುಪಾಡುಗಳನ್ನು ಊರಿನೊಳಗೆ ಪಾಲಿಸಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಈ ಬಗ್ಗೆ ತಿಳಿಯದೆ ತಪ್ಪು ನಡೆದು ಹೋದರೆ ಅದಕ್ಕೆ ಪರಿಹಾರವಾಗಿ ಹಬ್ಬದ ದಿವಸ ತಪ್ಪೊಪ್ಪಿಕೊಂಡು ತಪ್ಪು ಹಣ ಹಾಕಬೇಕು, ತಿಳಿದು ತಿಳಿದು ತಪ್ಪು…
ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತೆಯ ಹತ್ಯೆ ಪ್ರಕರಣದ ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಬಾಲಕಿಯೊಂದಿಗೆ ವಿವಾಹ ಸಾಧ್ಯವಾಗದ ಹಿನ್ನೆಲೆ ಹತಾಶೆಯಿಂದ ಆರೋಪಿ ಪ್ರಕಾಶ್ ದುಷ್ಕö್ಯತ್ಯ ಎಸಗಿದ್ದಾನೆ ಎಂದು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ಪಿ, ಬಂಧಿತ ಆರೋಪಿ ಪ್ರಕಾಶ್ (ಓಂಕಾರಪ್ಪ)ನನ್ನು ವಿಚಾರಣೆಗೆ ಒಳಪಡಿಸಿ, ಹತ್ಯೆಗೊಳಗಾದ ಮೀನಾಳ ರುಂಡವನ್ನು ಕುಂಬಾರಗಡಿಗೆಯ ಆಕೆಯ ಮನೆಯಿಂದ ಸುಮಾರು 50 ರಿಂದ 100 ಮೀಟರ್ ದೂರದ ಮರಕಾಡುಗಳ ನಡುವೆ ಪತ್ತೆ ಮಾಡಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಕತ್ತಿ ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. 10ನೇ ತರಗತಿ ಪರೀಕ್ಷಾ ಫಲಿತಾಂಶದ ದಿನವಾದ ಮೇ 9 ರಂದೇ ಕುಂಬಾರಗಡಿಗೆಯ ಸುಬ್ರಹ್ಮಣ್ಯ ಹಾಗೂ ಜಾನಕಿ ದಂಪತಿಯ ಕಿರಿಯ ಪುತ್ರಿ ಮೀನಾ ಹಾಗೂ ಪ್ರಕಾಶ್ ನ ವಿವಾಹ ನಿಶ್ಚಿತಾರ್ಥವಿತ್ತು. ಮಗಳಿಗೆ ಇನ್ನೂ 16 ವರ್ಷವಾಗಿದ್ದು,…
ಮಡಿಕೇರಿ ಮೇ 11 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಶನಿವಾರದ ಮೊದಲ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡ ಕೂರ್ಗ್ ಬ್ಲಾಸ್ಟರ್ಸ್ ವಿರುದ್ಧ 89 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಕೂರ್ಗ್ ಯುನೈಟೆಡ್ ಫೈನಲ್ ಪ್ರವೇಶಿಸಿತು. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೂರ್ಗ್ ಯುನೈಟೆಡ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 12.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳನ್ನಷ್ಟೇ ಗಳಿಸಿ ಸೋಲು ಒಪ್ಪಿಕೊಂಡಿತು. ಕೂರ್ಗ್ ಯುನೈಟೆಡ್ ತಂಡದ ಅಯ್ಯಪ್ಪ ಸಿ.ಆರ್ 52 ಬಾಲ್ ಗಳಲ್ಲಿ ಭರ್ಜರಿ 93 ರನ್ ಗಳನ್ನು ದಾಖಲಿಸಿ, 12 ಬಾಲ್ ಗಳಲ್ಲಿ 4 ವಿಕೆಟ್ ಗಳನ್ನು…
ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯಲ್ಲಿ ನಡೆದ ವಿದ್ಯಾರ್ಥಿನಿ ಮೀನಾಳ ಹತ್ಯೆ ಖಂಡನೀಯ ಮತ್ತು ಇದೊಂದು ಹೇಯ ಕೃತ್ಯವೆಂದು ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತೀಯ ಕಾನೂನಿನಡಿ ಮದುವೆ ಮಾಡಿಕೊಳ್ಳಲು ಪುರುಷರಿಗೆ ಕನಿಷ್ಠ 21 ವರ್ಷ ಹಾಗೂ ಯುವತಿಯರಿಗೆ ಕನಿಷ್ಠ 18ವರ್ಷ ಪೂರ್ಣಗೊಂಡಿರಬೇಕು. ಆದರೆ ಎರಡು ವರ್ಷ ಕಾಯುವ ತಾಳ್ಮೆಯಿಲ್ಲದ 32 ವರ್ಷದ ಆರೋಪಿ 16 ವರ್ಷದ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಖ್ಯಾತಿಯ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಸಜ್ಜನ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದುಷ್ಕೃತ್ಯ ಎಸಗಿರುವ ಆರೋಪಿಗೆ ಕಾನೂನಿನಡಿ ಶಿಕ್ಷೆ ವಿಧಿಸಬೇಕು ಮತ್ತು ಪೊಲೀಸ್ ಇಲಾಖೆ ನಾಗರೀಕ ಸಮಾಜಕ್ಕೆ ಅಭಯ ನೀಡಬೇಕೆಂದು ಅಜಿತ್ ಒತ್ತಾಯಿಸಿದ್ದಾರೆ.
ಮಡಿಕೇರಿ ಮೇ 11 NEWS DESK : ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ಜನರು ಹಾಗೂ ಕೃಷಿಕ ವರ್ಗ ನಿಟ್ಟುಸಿರು ಬಿಡುವಂತಾಗಿದೆ. ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಸಮುದಾಯ ಹಾಗೂ ಜಾನುವಾರುಗಳಿಗೆ ಮಳೆರಾಯನ ಆಗಮನ ಸಂತಸ ಮೂಡಿಸಿದೆ. ಕೂಡಿಗೆಯ ವ್ಯಾಪ್ತಿಯಲ್ಲಿ ಮುಂಜಾನೆ ಕೆಲಹೊತ್ತು ಬಿಸಿಲಿನ ವಾತಾವರಣ ಇತ್ತಾದರೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡುಬಂದಿತು. ಸಂಜೆ ಆರು ಗಂಟೆಯ ನಂತರ ಬಿರುಗಾಳಿ ಸಹಿತ ಆರಂಭವಾದ ಮಳೆಗೆ ಕೂಡಿಗೆಯಲ್ಲಿ ನಡೆಯುವ ಸಂತೆ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ನಿರಂತರವಾದ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮನೆಒಳಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ವರದಿ : ಕೆ.ಆರ್.ಗಣೇಶ್-ಕೂಡಿಗೆ
ಮಡಿಕೇರಿ ಮೇ 11 NEWS DESK : ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಛಾಯಾಗ್ರಾಹಕರಿಗೆ “ಪ್ರಜಾಪ್ರಭುತ್ವದ ಮಹದಾದ ಹಬ್ಬವಾದ ಮತದಾನ” ಎಂಬ ವಿಷಯದ ಕುರಿತು ಡೆಮಾಕ್ರಸಿ ಇನ್ ಆಕ್ಷನ್ ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮಡಿಕೇರಿ ಮೇ 11 NEWS DESK : ಅಂಗಡಿಯೊಂದಕ್ಕೆ ನುಗ್ಗಿದ ಚೋರರು ನಗದು ದೋಚಿರುವ ಪ್ರಕರಣ ನಗರದ ಶಾಂತಿನಿಕೇತನ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಸರಕಾರಿ ಬಸ್ ಡಿಪೋ ಸಮೀಪದ ಬಡಾವಣೆಯಲ್ಲಿರುವ ಲೋಬೋ ಎಂಬುವವರ ಅಂಗಡಿಯ ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು 1.25 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವನ್ನು ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ. ಶನಿವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ಪಡಿತರ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಮನೆಗಳಿರುವ ಬಡಾವಣೆಯಲ್ಲೇ ಕಳ್ಳತನ ನಡೆದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಮೇ 11 NEWS DESK : ಹುದಿಕೇರಿ ಟೀ ಎಸ್ಟೇಟ್ ಮತ್ತು ಕೆ ಕೆ ಆರ್ ಟೀ ಎಸ್ಟೇಟ್ ನಲ್ಲಿರುವ ಮಾರಿಯಮ್ಮ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.






