ಮಡಿಕೇರಿ ಮೇ 8 NEWS DESK : ಭೂಮಂಡಲದಲ್ಲಿ ನೀರು ಒಂದು ಅತ್ಯಾವಶ್ಯಕವಾಗಿರುವ ಒಂದು ವಸ್ತು. ನೀರಿಲ್ಲದ ಭೂಮಿಯನ್ನು ಊಹಿಸಲು ಅಸಾಧ್ಯ. ದಕ್ಷಿಣ ಆಫ್ರಿಕಾ ದೇಶದ ಕೇಪ್ ಟೌನ್ ನಗರದ ನೀರಿನ ಮಟ್ಟ ಶೂನ್ಯಕ್ಕೆ ಮುಟ್ಟಿದೆ. ಮುಂದಿನ ಅಂದರೆ 2030 ರ ವೇಳೆಗೆ ಬೆಂಗಳೂರು ಸೇರಿದಂತೆ ವಿಶ್ವದಲ್ಲಿ 16 ನಗರದ ನೀರಿನ ಮಟ್ಟ ಶೂನ್ಯಕ್ಕೆ ತಲುಪುತ್ತದೆ ಎಂಬ ಸಮೀಕ್ಷೆ 2016ರಲ್ಲಿ ವರದಿಯಾಗಿತ್ತು. ಇತೀಚೆಗೆ ಪತ್ರಿಕೆ ಒಂದರಲ್ಲಿ ಬೆಂಗಳೂರಿನ ಜಲಕ್ಷಮಕ್ಕೆ ಪರಿಹಾರವೆಂತು…? ಎಂಬ ಶ್ರೀರೋನಾಮೆಡಿಯಲ್ಲಿ ಪ್ರಕಟಗೊಂಡ ಲೇಖನ ಓದಿದಾಗ ಒಂದು ರೀತಿಯ ಭಯವಾಯಿತು. ಬೆಂಗಳೂರು ಬೆಳೆಯುವ ಪರಿ ನೋಡಿದರೆ ಮತ್ತು ಮುಂದಿನ ದಿನಗಳಲ್ಲಿ ಅದರ ನೀರಿನ ಬೇಡಿಕೆಯನ್ನು ಅಂದಾಜಿಸಿದರೆ ಕರ್ನಾಟಕದ ಎಲ್ಲಾ ನದಿಗಳನ್ನು ಬೆಂಗಳೂರಿಗೆ ತಿರುಗಿಸಿದರು. ನಗರದ ಕುಡಿಯುವ ನೀರಿನ ದಾಹವನ್ನು ನೀಗಿಸಲು ಸಾಧ್ಯವಿಲ್ಲ ಎನ್ನುವ ಪರಿಣಿತರ ಎಚ್ಚರಿಕೆಯಲ್ಲಿ ಅರ್ಥವಿಲ್ಲದಿಲ್ಲ. 1974 ರಲ್ಲಿ ಕಾವೇರಿ ಯೋಜನೆ ಅನಾವರಣಗೊಂಡಾಗ ಬೆಂಗಳೂರಿನ ಜನಸಂಖ್ಯೆ 22 ಲಕ್ಷ. ಅಂದು ಅಂದಿನ ಜನಸಂಖ್ಯೆ ಅನುಗುಣವಾಗಿ ಆ ಯೋಜನೆ ರೂಪಿಸಲಾಗಿತ್ತು.…
ಲೇಖಕ: admin
ಮಡಿಕೇರಿ ಮೇ 8 NEWS DESK : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಜಿ.ಟಿ.ರಸ್ತೆ ಮತ್ತು ಕೋಟೆ ಫೀಡರ್‍ನ ವಿದ್ಯುತ್ ಮಾರ್ಗದಲ್ಲಿ ಮಳೆಗಾಲದ ತುರ್ತು ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಬೇಕಿರುವುದರಿಂದ ಮೇ 9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಜಿ.ಟಿರಸ್ತೆ, ಚೈನ್‍ಗೇಟ್, ಪುಟಾಣಿನಗರ, ದೇಚೂರು, ಅಶೋಕಪುರ, ಜಯನಗರ, ಜಲಾಶಯ ಬಡಾವಣೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಡಿಕೇರಿ ಮೇ 7 NEWS DESK : ಸಣ್ಣಪುಲಿಕೋಟು ಗ್ರಾಮದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದ ರಸ್ತೆಯನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹಲವು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈಡೇರಿಸಿರುವ ಬಗ್ಗೆ ಭಕ್ತರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ದೇವರ ಉತ್ಸವ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬಾರಿಯೂ ಮೇ 9 ಮತ್ತು 10 ರಂದು ದೇವಾಲಯದ ಉತ್ಸವ ನಡೆಯಲಿದ್ದು, ಅದಕ್ಕೂ ಮೊದಲೇ ರಸ್ತೆ ಅಭಿವೃದ್ಧಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಈ ಹಿಂದೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಭಕ್ತರಿಗೆ ಅನಾನುಕೂಲವಾಗಿತ್ತು. ಇದನ್ನು ಮನಗಂಡ ಕುಯ್ಯಮುಡಿ ಹಾಗೂ ಕಡೋಡಿ ಕುಟುಂಬಸ್ಥರು, ಪ್ರಮುಖರಾದ ಹಾರಿಸ್ ಚೆಟ್ಟಿಮಾನಿ, ವಿಶು ಪ್ರವೀಣ್ ಕುಮಾರ್, ಲವ ಕುಯ್ಯಮುಡಿ, ಎಂ.ಬಿ.ಪ್ರೇಮ್‌ಕುಮಾರ್, ಮಂಗೇರಿರ ಜಗದೀಶ್,…
ಮಡಿಕೇರಿ ಮೇ 7 NEWS DESK : COORG CRICKET FOUNDATION : KODAVA PREMIER LEAGUE : LEATHER BALL CRICKET TOURNAMENT *KODAVA CUISINE CONTEST* *ಕೊಡವ ತೀನಿ ಪೈಪೋಟಿ* 11.05.2024 ಚೆನಿಯಾಚೆ 10.30 A.M ಜ.ತಿಮ್ಮಯ್ಯ ಸ್ಟೇಡಿಯಂ, ಮಡಿಕೇರಿ *ವಿಭಾಗ* *ಪುಟ್ಟ್/ ಕರಿ* (Combination ) (1 ಕರಿ, 1 ಪುಟ್ಟ್ ಕನಿಷ್ಠ 1/2 ಕೆ.ಜಿ ರಚ್ಚಕ್ ಕರಿ) (ಆದ್ಯ ಇನಾಂ -ರೂ.1000, ದಂಡನೆ- ರೂ.750, ಮೂಂದನೆ-ರೂ.500) 1) *ಕೋಳಿಕರಿ-ಪುಟ್ಟ್* 2) *ಪಂದಿಕರಿ-ಪುಟ್ಟ್/ಒಟ್ಟಿ* 3) *ಕೂಟ್‌ಕರಿ-ಪುಟ್ಟ್* 4) *ಪಜ್ಜಿ* (ಆದ್ಯ ಇನಾಂ -ರೂ.500, ದಂಡನೆ- ರೂ.300, ಮೂಂದನೆ-ರೂ.200) (ಮುದರೆ, ಎಳ್ಳ್ ಪಜ್ಜಿ ಚಕ್ಕೆ ಕುರು, ಇತರೆ) 5) *ತೊಪ್ಪು ಬರ್ತದ್* (ಆದ್ಯ ಇನಾಂ -ರೂ.500, ದಂಡನೆ- ರೂ.300, ಮೂಂದನೆ-ರೂ.200) (ಕಾಕೆ ತೊಪ್ಪು,ತೆರ್ಮೆ ತೊಪ್ಪು, ತಾತೆ ತೊಪ್ಪು , ಇತರೆ) 6) *ಬರ್ತ ಪುಟ್ಟ್* (ಆದ್ಯ ಇನಾಂ -ರೂ.500, ದಂಡನೆ- ರೂ.300, ಮೂಂದನೆ-ರೂ.200) ( ಬಡವ ಕಜ್ಜಾಯ, ಚಿಕ್ಕ್‌ಲುಂಡೆ,…
ಮಡಿಕೇರಿ ಮೇ 7 NEWS DESK : ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯ, ಜಾತಿ, ಧರ್ಮ, ವ್ಯಕ್ತಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುವುದು ಹಾಗೂ ತಮಾಷೆಗಾಗಿ ವಿಡಿಯೋಗಳನ್ನು ಮಾರ್ಪಡಿಸಿ ನಿಜ ಎಂಬುವುದಾಗಿ ನಂಬಿಸಿ ಸಮುದಾಯಗಳ ನಡುವೆ ಭೇದ-ಭಾವ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಕಂಡುಬAದಿದೆ. ಇಂತಹ ಪ್ರಯತ್ನಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚುವ ಮೂಲಕ ಧರ್ಮ-ಧರ್ಮಗಳ ನಡುವೆ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಪ್ರಚೋದನಾಕಾರಿ ಪದಗಳನ್ನು ಬಳಸಿ ಯಾವುದೇ ಸಮುದಾಯದ ವಿರುದ್ಧ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಅಪ ಪ್ರಚಾರ ಮಾಡುವ ವ್ಯಕ್ತಿಗಳ ವಿರುದ್ಧ ಈಗಾಗಲೇ 2024 ನೇ ಸಾಲಿನಲ್ಲಿ 35 ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕೋಮು ಸೌಹಾರ್ದತೆಯನ್ನು ಕದಡುವ ರೀತಿಯ ವಿಡಿಯೋಗಳನ್ನು ಮಾಡುವುದು ಹಾಗೂ ವಿಡಿಯೋಗಳಲ್ಲಿನ ಧ್ವನಿ ಬದಲಾಯಿಸಿ ಶಾಂತಿ ಕದಡುವ ರೀತಿಯಲ್ಲಿ…
ಮಡಿಕೇರಿ ಮೇ 7 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಮಂಗಳವಾರದ ಎರಡನೇ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಟೀಮ್ ವೈಲ್ಡ್ ಫ್ಲವರ್ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ 15 ಓವರ್ ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 86 ರನ್ ಗಳನ್ನು ಗಳಿಸಿತು. ಕೂರ್ಗ್ ಬ್ಲಾಸ್ಟರ್ಸ್ ತಂಡ 13 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 87 ರನ್ ಗಳನ್ನು ದಾಖಲಿಸಿ ವಿಜಯ ಸಾಧಿಸಿತು. ಕೂರ್ಗ್ ಬ್ಲಾಸ್ಟರ್ಸ್ ತಂದ ನಿಖಿಲ್ ಬೋಪಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.
ಪುತ್ತೂರು ಮೇ 7 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಎಂಡ್ ಎಂಜಿನಿಯರಿಂಗ್ (ಡಾಟಾ ಸೈನ್ಸ್) ವಿಭಾಗದ ಮುಖ್ಯಸ್ಥರಾಗಿ ಪ್ರೊ.ರೂಪಾ.ಜಿ.ಕೆ ಪದ ಸ್ವೀಕಾರ ಮಾಡಿದ್ದಾರೆ. ಹತ್ತೊಂಭತ್ತು ವರ್ಷಗಳ ಅಧ್ಯಾಪನದ ಅನುಭವವನ್ನು ಹೊಂದಿರುವ ಇವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್, ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್, ಬಿಗ್ ಡೇಟಾ ಎನಲಿಟಿಕ್ಸ್ ಮುಂತಾದ ವಿಷಯಗಳ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದಾರೆ. ಸುರತ್ಕಲ್ಲಿನ ಎನ್‌ಐಟಿಕೆಯಲ್ಲಿ ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಇವರು ಬರೆದಿರುವ 10 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಪದಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.
ಮಡಿಕೇರಿ ಮೇ 7 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಮಂಗಳವಾರದ ಮೊದಲ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡ ಪ್ರಗತಿ ಕ್ರಿಕೆಟರ್ಸ್ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಕೊಡವ ವಾರಿಯರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಗತಿ ಕ್ರಿಕೆಟರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 113 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ 15.3 ಓವರ್‍ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 114 ರನ್ ಗಳಿಸಿ ಗೆಲುವು ದಾಖಲಿಸಿತು. ಕೊಡವ ವಾರಿಯರ್ಸ್ ನ ಸಂಜಯ್ ಎಂ.ಎಂ 28 ಬಾಲ್ ಗಳಲ್ಲಿ 30 ರನ್ ಗಳನ್ನು ಗಳಿಸಿ, 14 ರನ್ ಗಳಲ್ಲಿ 4 ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.
ಮಡಿಕೇರಿ ಮೇ 7 NEWS DESK : 2024-25ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ, 21 ಕೊನೆಯ ದಿನವಾಗಿದೆ. 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಆಯ್ಕೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ ಶ್ರೀ ಸಾಯಿ ಶಂಕರ್ ಎಜುಕೇಷನಲ್ ಇನ್ಸ್‍ಟ್ಯೂಷನ್ಸ್, ಪ್ರಶಾಂತಿ ನಿಲಯ ಪೊನ್ನಂಪೇಟೆ, ಸೌತ್ ಕೊಡಗು ಮತ್ತು ಸೆಂಟ್ ಜೋಸೆಪ್ಸ್ ಗಲ್ರ್ಸ್ ಕಾಂಪೋಸಿಟ್ ಪ್ರೌಢಶಾಲೆ, ಮಡಿಕೇರಿ ಇಲ್ಲಿ 6ನೇ ತರಗತಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಂದ ಜಾತಿ ದೃಢೀಕರಣ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಮುಖ್ಯೋಪಾಧ್ಯಾಯರಿಂದ ದೃಢೀಕೃತಗೊಂಡ ಅಂಕ ಪಟ್ಟಿಯನ್ನು ಸಲ್ಲಿಸುವುದು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ರೂ.2 ಲಕ್ಷ ಒಳಗೆ ಇರಬೇಕು. (ಈ ಬಗ್ಗೆ ತಹಶೀಲ್ದಾರರವರಿಂದ ಪಡೆದ ಆದಾಯ ಪ್ರಮಾಣ…
ಮಡಿಕೇರಿ ಮೇ 7 NEWS DESK : ಮಡಿಕೇರಿ ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಆಗುವ ಕೂಟುಹೊಳೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಶೇಖರಣೆ ಇಲ್ಲದೆ ಪ್ರಸ್ತುತ ಬತ್ತಿ ಹೋಗಿರುವುದರಿಂದ, ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಎಲ್ಲಾ 23 ವಾರ್ಡ್‍ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟಕರವಾಗಿರುವುದರಿಂದ ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಈ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡು ಮಿತವಾಗಿ ಬಳಸಿ, ಅನುಪಯುಕ್ತವಾಗಿ ಬಳಸದೆ (ಕಾರು, ಸ್ಕೂಟರ್ ಇತ್ಯಾದಿ ವಾಹನಗಳನ್ನು ಕುಡಿಯುವ ನೀರಿನಿಂದ ಶುಚಿಗೊಳಿಸದೇ ಅಲ್ಲದೆ ಮನೆಯ ಹೂ ತೋಟ ಮತ್ತು ಹೂ ಕುಂಡಗಳಿಗೆ ಉಪಯೋಗಿಸದೇ) ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಕೋರಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಅನುಪಯುಕ್ತವಾಗಿ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಮತ್ತೆ ಮರುಕಳಿಸಿದ್ದಲ್ಲಿ 1964ರ…






