ಲೇಖಕ: admin

ಮಡಿಕೇರಿ ಮೇ 3 NEWS DESK :  ಮರಗೋಡು ಶ್ರೀ ಶಿವ ಪಾರ್ವತಿ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಪಾಂಡನ ಮನೆಯಿಂದ ಭಂಡಾರ ತರುವ ಮೂಲಕ ಪ್ರಾರಂಭವಾಯಿತು. ಪಟ್ಟಣಿಯಂದು ಎತ್ತು ಪೋರಾಟ ನಡೆಯಿತು.  ತೆಂಗಿನಕಾಯಿ ಕೀಳುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಸಂಜೆ ದೇವರ ಜಳಕದ ನಂತರ 11 ಸುತ್ತು ದೇವರ ನೃತ್ಯ ಬಲಿಯು ನಡೆದು ಉತ್ಸವ ಸಂಪನ್ನಗೊಂಡಿತು. ಉತ್ಸವ ಸಂದರ್ಭದಲ್ಲಿ ದೇವರಿಗೆ ಕುಂಕುಮರ್ಚನೆ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.  ಅರ್ಚಕರಾದ  ಮಹೇಶ್ ಶಗ್ರಿತ್ತಾಯ ಹಾಗೂ ಕಾಸರಗೋಡಿನ ತಂತ್ರಿಗಳಾದ  ಗೋಪಾಲಕೃಷ್ಣ ಕೆದಿಲಾಯ ಅವರು ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು. ಬ್ರಹ್ಮವಾಹಕರಾದ  ಸತ್ಯಮೂರ್ತಿ ಸರಳಾಯ ಮತ್ತು  ಕೃಷ್ಣ ಪ್ರಸಾದ್ ಕೆದಿಲಾಯ ಅವರು ಉತ್ಸವ ಮೂರ್ತಿಯನ್ನು ಹೊತ್ತು ದೇವರ ಸೇವೆಯನ್ನು ನೆರೆವೇರಿಸಿದರು. ಉತ್ಸವದಲ್ಲಿ ವಿವಿಧ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಶಾಲನಗರ ಮೇ 2 NEWS DESK : ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣ, ಚಿಕ್ಕ ಅಳುವಾರ, ಕೊಡಗು ಇಲ್ಲಿ, 2024-25ನೇ ಶೈಕ್ಷಣಿಕ ಸಾಲಿನಿಂದ ಬಹು ಬೇಡಿಕೆಯ ವೃತ್ತಿಪರ ಕೋರ್ಸ್‌ಗಳಾದ ಬಿಸಿಎ, ಎಂಸಿಎ ಮತ್ತು ಎಂಬಿಎ ಪದವಿಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲ ಹಂತದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA in Artificial Intelligence and Machine Learning) ಪದವಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA in Artificial Intelligence and Machine Learning) ಜನಪ್ರಿಯ ಕೋರ್ಸ್‌ಗಳಲ್ಲಿ ಒಂದಾಗಿದೆ. ಮೂರು ವರ್ಷಗಳ ಪದವಿ ಕೋರ್ಸ್ ಇದಾಗಿದ್ದು ಆರು ಸೆಮಿಸ್ಟರ್‌ಗಳನ್ನೊಳಗೊಂಡಿದೆ. ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಡೇಟಾ ರಚನೆ ಮತ್ತು ಪೈಥಾನ್, ‘ಸಿ’, ‘ಸಿ++’, ಕ್ಲೌಡ್ ಕಂಪ್ಯೂಟಿAಗ್ ಮತ್ತು ‘ಜಾವಾ’ ನಂತಹ ಕೋರ್ ಪ್ರೋಗ್ರಾಮಿಂಗ್ ಭಾಷೆಗಳ ಬಗ್ಗೆ ಕಲಿಯುವುದಕ್ಕೆ ಹಾಗೂ ಮಾಹಿತಿ ತಂತ್ರಜ್ಞಾನ ಪರಿಕರಗಳ ವಿನ್ಯಾಸ…

Read More

ಮಡಿಕೇರಿ ಮೇ 2 NEWS DESK : ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ “ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024” ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಿನ್ನಿಸ್ ವಿಶ್ವ ದಾಖಲೆ ಬರೆಯುವ ಮೂಲಕ ಸಣ್ಣ ಕುಟುಂಬವೊಂದು ದೊಡ್ಡ ಸಾಧನೆ ಮಾಡಿದೆ ಎಂದು ಕುಂಡ್ಯೋಳಂಡ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಡ್ಯೋಳಂಡ ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹಾಗೂ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಅವರು ಕೇವಲ 103 ಸದಸ್ಯ ಬಲದ ಕುಟುಂಬವೊಂದು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದರು. ಕಳೆದ ಒಂದು ವರ್ಷದಿಂದ ಹಾಕಿ ಹಬ್ಬದ ಯಶಸ್ಸಿಗಾಗಿ ಎಲ್ಲರ ಸಹಕಾರ ಪಡೆದು ಶ್ರಮಿಸಲಾಗಿದೆ. 30 ದಿನಗಳ ಕಾಲ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ 346 ಕುಟುಂಬಗಳ 4,834 ಆಟಗಾರರು ಪಾಲ್ಗೊಂಡಿದ್ದರು. 360 ಕೊಡವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇದು ಗಿನ್ನಿಸ್ ವಿಶ್ವ ದಾಖಲೆ ಬರೆಯಲು ಸಹಕಾರಿಯಾಯಿತು. ಗಿನ್ನಿಸ್ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ, ಎಲ್ಲಾ…

Read More

ಮಡಿಕೇರಿ ಮೇ 2 NEWS DESK :  ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಮೇ 3ರ ಪಂದ್ಯ  ಪಂದ್ಯ -1(08:30 ಎ.ಎಂ)  ಅಂಜಿಗೇರಿ NAAD v/s ಕೂರ್ಗ್ ಬ್ಲಾಸ್ಟರ್ಸ್ ತಂಡ  ಪಂದ್ಯ -2 (ಮಧ್ಯಾಹ್ನ 1:30)  MTB ರಾಯಲ್ಸ್ v/s ಕೊಡವ ವಾರಿಯರ್ಸ್

Read More

ಮಡಿಕೇರಿ ಮೇ 2 NEWS DESK : “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ತೀವ್ರ ಪೈಪೋಟಿಯಿಂದ ಕೂಡಿದ್ದ ದಿನದ ದ್ವಿತೀಯ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡ 11 ರನ್‍ಗಳ ಅಲ್ಪ ಅಂತರದ ಗೆಲುವನ್ನು ಟೀಂ ಲೀವರೇಜ್ ತಂಡದ ವಿರುದ್ಧ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ಕೊಡವ ವಾರಿಯರ್ಸ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 112 ರನ್‍ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಟೀಂ ಲೀವರೇಜ್ ತಂಡ ನಿಗದಿತ ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 101 ರನ್‍ಗಳನ್ನಷ್ಟೆ ಕಲೆ ಹಾಕಲು ಶಕ್ತವಾಗಿ, ಗೆಲುವಿನ ಸಮೀಪಕ್ಕೆ ಬಂದು ಪರಾಭವಗೊಂಡು ನಿರಾಸೆ ಅಣುಭವಿಸಿತು. ಕೊಡವ ವಾರಿಯರ್ಸ್ ತಂಡದ ಸಜನ್ ನಂದೀರ ಅವರು ಬಿಗುವಿನ ಬೌಲಿಂಗ್ ಪ್ರದರ್ಶನ ನೀಡಿ, ಕೇವಲ 12 ರನ್‍ಗಳನ್ನಿತ್ತು 3 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗುವ ಮೂಲಕ ಪಂದ್ಯ ಪುರುಷೋತ್ತಮರಾಗಿ ಹೊರ ಹೊಮ್ಮಿದರು.

Read More

ಮಡಿಕೇರಿ ಮೇ 2 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ದಿನದ ಮೊದಲ ಪಂದ್ಯದಲ್ಲಿ ರಾಯಲ್ ಟೈಗರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿ ಪೂರ್ಣ ಅಂಕಗಳನ್ನು ಪಡೆದುಕೊಂಡಿತು. ರಾಯಲ್ ಟೈಗರ್ಸ್ ತಂಡ 7 ವಿಕೆಟ್‍ಗಳ ಅಂತರದಿಂದ ಎದುರಾಳಿ ಟೀಂ ವೈಲ್ಡ್‍ಫ್ಲಾರ್ ತಂಡವನ್ನು ಪರಾಭವಗೊಳಿಸಿತು. ಮೊಲು ಬ್ಯಾಟಿಂಗ್ ಮಾಡಿದ ಟೀಂ ವೈಲ್ಡ್ ಫ್ಲಾರ್ ತಂಡ ನಿಗದಿತ ಇಪ್ಪತ್ತು ಓವರ್‍ಗಳಲ್ಲಿ 18 ಓವರ್‍ಗಳಲ್ಲೆ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 131 ರನ್‍ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ರಾಯಲ್ ಟೈಗರ್ಸ್ ತಂಡ 11.2 ಓವರ್‍ಗಳಲ್ಲೆ 132 ರನ್‍ಗಳನ್ನು ಗಳಿಸುವ ಮೂಲಕ ಸುಲಭ ಗೆಲುವನ್ನು ಸಾಧಿಸಿತು. ವಿಜೇತ ರಾಯಲ್ ಟೈಗರ್ಸ್ ತಂಡದ ಅಪ್ಪಯ್ಯ ಅವರು 23 ರನ್ ನೀಡಿ ಎರುರಾಳಿ ವೈಲ್ಡ್ ಫ್ಲಾರ್ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿದ್ದಲ್ಲದೆ, ಬ್ಯಾಟಿಂಗ್‍ನಲ್ಲಿ 12 ಎಸೆತಕ್ಕೆ ಮಿಂಚಿನ…

Read More

ಮಡಿಕೇರಿ ಮೇ 2 NEWS DESK : ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಹಿಟ್ನೆ ಹೆಬ್ಬಾಗಿಲು ನಿವಾಸಿ ಶಿವಪ್ಪ (49) ಎಂಬುವವರೇ ಮೃತ ವ್ಯಕ್ತಿ. ಶಿವಪ್ಪ ಇಂದು ಮಧ್ಯಾಹ್ನ ಕುಶಾಲನಗರ ಕೊಪ್ಪ ಸೇತುವೆಯ ಕೆಳಭಾಗದ ನದಿಯಲ್ಲಿ ಸ್ನಾನಕ್ಕೆಂದು ಇಳಿದಾಗ ಕಾಲುಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಸಿದ್ದಾಪುರ ಮೇ 2 NEWS DESK :  ಮನೆಯ ಆವರಣದ ಕೋಳಿ ಗೂಡಿನಲ್ಲಿದ್ದ ಭಾರೀ ಗಾತ್ರದ ನಾಗರ ಹಾವೊಂದನ್ನು ರಕ್ಷಿಸಿರುವ ಘಟನೆ ಪೊನ್ನಂಪೇಟೆ ಸಮೀಪದ ಚಿಕ್ಕ ಮಂಡೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಮಂಡೂರು ಗ್ರಾಮದ ಕಳ್ಳಿಚಂಡ ಶ್ಯಾಂ ಜಗದೀಶ್ ಎಂಬವರ ಮನೆಯ ಕೋಳಿಗೂಡಿನೊಳಗೆ ನಾಗರಹಾವೊಂದು ಸೇರಿಕೊಂಡು ಅಲ್ಲಿದ್ದ ಆರು ಕೋಳಿಮೊಟ್ಟೆಯನ್ನು ನುಂಗಿ ಹಾಕಿತ್ತು. ಇದನ್ನು ಗಮನಿಸಿ ಆತಂಕಗೊಂಡ ಮನೆ ಮಂದಿ ಸಿದ್ದಾಪುರದ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಸುರೇಶ್ ಮತ್ತು ಆರ್‌ಆರ್‌ಟಿ ವಿನೋದ್ ಅವರು ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.

Read More

ಮಡಿಕೇರಿ ಮೇ 2  NEWS DESK : ಮುಂಬೈನ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ನಡೆದ 43ನೇ ಇಂಡಿಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಬಂಗಾಡುಮನೆ ವಸಂತಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. 4*100 ರಿಲೆಯಲ್ಲಿ ಚಿನ್ನದ ಪದಕ, 100 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ 400 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವಸಂತಿ ಅವರು, ಪ್ರಸ್ತುತ ಬಡ್ತಿ ಹೊಂದಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸೀನಿಯರ್ ನಸಿರ್ಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು ಇಲ್ಲಿಯವರೆಗೆ ಅನೇಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದಿದ್ದಾರೆ.

Read More

  ಮಡಿಕೇರಿ ಮೇ 2 NEWS DESK : ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಮೇ 8 ರಂದು ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮತ್ತು ಮೇ 17 ರಂದು ಮಡಿಕೇರಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಲಿರುವರು. ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ ಮಡಿಕೇರಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Read More