ಲೇಖಕ: admin

ಮಡಿಕೇರಿ ಮೇ 2 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ 3 ರಂದು ನಡೆಯಲಿದೆ. ಜುಮಾ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಎರುಮಾಡ್ ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದರೂಪಿ ಎಮ್ಮೆಮಾಡು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಅಬೂಬಕ್ಕರ್ ಸಖಾಫಿ ಪುದಿಯೋಡಿ ವಹಿಸಲಿದ್ದು, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯ ಉಸ್ಮಾನ್ ಕಂಬೇರ, ಮಾಜಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ಬೆಲಿಯತ್ಕಾರಂಡ, ಶಾಫಿ ಸಅದಿ ಸೋಮವಾರಪೇಟೆ, ಕರ್ನಾಟಕ ಎಸ್.ವೈ.ಎಸ್ ಅಧ್ಯಕ್ಷ ಹಫೀಳ್ ಸಅದಿ, ಕೊಟ್ಟಮುಡಿ ಹಿದಾಯ ಮರ್ಕಝುಲ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಪಡಿಯಾನಿ ಖತೀಬ್ ಹಂಝ ರಹ್ಮಾನಿ, ಪಳ್ಳರಾಣೆ ಖತೀಬ್ ಝುಬೈರ್ ಮಿಸ್ಬಾಹಿ, ಎಮ್ಮೆಮಾಡು ಗ್ರಾ.ಪಂ…

Read More

ಮಡಿಕೇರಿ ಮೇ 2 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಮೇ 3 ರಂದು  ಮಾಸಿಕ ದುರ್ಗಾಪೂಜೆ ನಡೆಯಲಿದೆ. ಅಂದು ಸಂಜೆ 7 ಗಂಟೆಗೆ ನಡೆಯಲಿರುವ ದುರ್ಗಾಪೂಜೆಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ತೀರ್ಥ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.  ಪೂಜಾ ಸೇವೆಯನ್ನು ಮಾಡಿಸುವ ಭಕ್ತಾದಿಗಳು ಸಂಜೆ 6.30 ಕ್ಕೆ ಹಾಜರಿದ್ದು, ಸಂಕಲ್ಪ ಮಾಡಿಸುವಂತೆ ಕೋರಿದೆ.

Read More

ಮಡಿಕೇರಿ ಮೇ 2 NEWS DESK : ಮಕ್ಕಳಿಗೆ ಶಿಕ್ಷಣ ಮುಖ್ಯ, ಓದಿ ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕೆಂದು ಹಾಕಿ ಪಟು, ರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಕರೆ ನೀಡಿದರು. ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್  ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಂದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಾಕಿ ವಿಶ್ವಮಾನ್ಯ ಆಟವಾಗಿದೆ. ಇಂತಹ ಶಿಬಿರದಲ್ಲಿ ಹಾಕಿಯನ್ನು ಕೂಡ ಕಲಿಸಿಕೊಡುತ್ತಿರುವದು ಶ್ಲಾಘನೀಯ. ಯಾವದೇ ಕಾರಣಕ್ಕೂ ಈ ಶಿಬಿರ ನಿಲ್ಲಬಾರದು, ಮುಂದುವರೆಸಿಕೋಡು ಹೋಗಬೇಕೆಂದು ಹೇಳೀದರು. ಶಿಲ್ಪಿ ತನ್ನಲ್ಲಿರುವ ಕಲೆಯನ್ನು ತೋರಿಸಿಕೊಳ್ಳಲ್ಲ, ಅದಾಗಿಯೇ ಹೊರಬರುತ್ತದೆ. ಅದೇ ರೀತಿ ಮಕ್ಕಳ ಪ್ರತಿಭೆ ಬಗ್ಗೆ ಪೋಷಕರಿಗೆ ಗೊತ್ತಿರುತ್ತದೆ. ಅದನ್ನು ಹೊರತರಲು ಪ್ರೋತ್ಸಾಹ ನೀಡಬೇಕು. ಹಿಂದೆ ನಮಗೆಲ್ಲ ಈರೀತಿಯ ಶಿಬಿರ, ಪ್ರೋತ್ಸಾಹ ಇರಲಿಲ್ಲ, ನಾವೇ ಅಭ್ಯಾಸ ಮಾಡಿಕೊಳ್ಳುತ್ತಿದ್ದೆವು. ಆಡುವ ಮೈದಾನಕ್ಕೆ ಮೊದಲು ನಮಿಸಬೇಕು. ಮೈದಾನಕ್ಕೆ ಬರುವವರು ಒಳ್ಳೆಯ ಅಟಗಾರರಾಗುತ್ತಾರೆ. ಪ್ರಸ್ತುತ…

Read More

ಮಡಿಕೇರಿ ಮೇ 2 NEWS DESK : ಕೊಡಗು ಜಿಲ್ಲೆಯ ಸಿದ್ದಾಪುರ ವಿಭಾಗದ ಕಾವೇರಿ ಜಲಾನಯನ ಪ್ರದೇಶದ 2400 ಏಕರೆ ಕಾಫಿ ತೋಟವನ್ನು ಭೂ ಪರಿವರ್ತನೆ ಮಾಡುವ ಮೂಲಕ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಪ್ರಕರಣದ ಕುರಿತು ಸರಕಾರಕ್ಕೆ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಸಿರ ಪರಿಸರದಿಂದ ಕೂಡಿರುವ ಕಾಫಿ ತೋಟವನ್ನು ಭೂಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಬೃಹತ್ ಟೌನ್‍ಶಿಪ್‍ಗಳು ಮತ್ತು ಮನೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಇದು ಮುಂದೆ ಭಾರೀ ಅನಾಹುತಗಳಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ. ಭೂ ಪರಿವರ್ತನ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಂದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಿಎನ್‍ಸಿ ದೂರು ದಾಖಲಿಸಿದೆ ಎಂದು ತಿಳಿಸಿದ್ದಾರೆ.…

Read More

ಮಡಿಕೇರಿ ಮೇ 2 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರ ಮಡಿಕೇರಿಯ ಸಮೀಪ ಮೇಕೇರಿ ಮಸೀದಿಯ ಮಖಾಂ ಉರೂಸ್ ಕಾರ್ಯಕ್ರಮ ಮೇ 3 ರಿಂದ 7 ರವರೆಗೆ ನಡೆಯಲಿದೆ. ಮೇ 3ರ ಶುಕ್ರವಾರ ಜನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ ನೆರವೇರಲಿದೆ. ಮಧ್ಯಾಹ್ನ 2 ಗಂಟೆಗೆ ಮಖಾಂ ಝಿಯಾರತ್, ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮೇ 4ರ ಶನಿವಾರ ರಾತ್ರಿ 8 ಗಂಟೆಗೆ ಧಾರ್ಮಿಕ ಉಪನ್ಯಾಸ, ಮೇ 5ರ ಭಾನುವಾರ ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರವಿರುತ್ತದೆ. ಮೇ 6ರ ಸೋಮವಾರ ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, 2.30 ಕ್ಕೆ ಸಂದಲ್ ಮೆರವಣಿಗೆ ಹಾಗೂ ಸಂಜೆ 4 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೇಕೇರಿಯ ಕಿಜರ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ರಹೀಮ್ ತಿಳಿಸಿದ್ದಾರೆ.    

Read More

ಮಡಿಕೇರಿ ಮೇ 2 NEWS DESK : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮೇ 7 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, 6.30 ಗಂಟೆಗೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಹಗಲು 11.45ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನೆರವೇರಲಿದ್ದು, ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ಜರುಗಲಿದೆ ಎಂದರು. ಅಪರಾಹ್ನ 12 ಗಂಟೆಗೆ ಅನ್ನದಾನ, 12.30ಕ್ಕೆ ತಾಯಿಯ ದರ್ಶನ, ಸಂಜೆ 6 ಗಂಟೆಗೆ ದೇವಾಲಯದಲ್ಲಿ…

Read More

ಮಡಿಕೇರಿ ಮೇ 2 NEWS DESK :  ಭಾಗಮಂಡಲದ ಕೆವಿಜಿ ಐಟಿಐ 2024- 26 ನೇ ಶೈಕ್ಷಣಿಕ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ವೇತನ ಅನುದಾನ ಕೊಳಪಟ್ಟ ಈ ತರಬೇತಿ ಸಂಸ್ಥೆಯಲ್ಲಿ ಮೆಕ್ಯಾನಿಕ್ ಮೋಟಾರ್ ವೆಹಿಕಲ್( ಎಂ.ಎಂ.ವಿ), ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಎಲೆಕ್ಟ್ರಿಕಲ್ ವೃತ್ತಿ ವಿಭಾಗಗಳಿದ್ದು, ಆಯ್ಕೆಯು ಸರ್ಕಾರದ ನಿಯಮದ ಅನುಸಾರವಾಗಿ ನಡೆಯಲಿದೆ. ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಿರುವಂತ ಈ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನದ ಆಯ್ಕೆ, ವಾಹನ ಕಲಿಕೆ ತರಬೇತಿ, ಪ್ರಾಯೋಗಿಕ ತರಬೇತಿ, ಹಿಂದುಳಿದ ವರ್ಗಗಳ ಹಾಸ್ಟೆಲ್ ವ್ಯವಸ್ಥೆ ಇನ್ನಿತರ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು -9900902141 ಸಂಪರ್ಕಿಸಬಹುದಾಗಿದೆ.

Read More

ಸೋಮವಾರಪೇಟೆ ಮೇ 2 NEWS DESK : ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್ ಗಳ ಸೇವೆ ಗಮನಾರ್ಹವಾಗಿದ್ದು, ಜನಸಾಮಾನ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿರಿಕೊಡ್ಲಿ ಮಠಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಮಡಿಕೇರಿ ರಸ್ತೆಗೆ ಸ್ಥಳಾಂತರ ಗೊಂಡಿರುವ ಚೌಡ್ಲು ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಾಂಗಣ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಬ್ಯಾಂಕ್ ಜನಸ್ನೇಹಿಯಾಗಿ ಜನಸಾಮಾನ್ಯರಿಗೆ ಹತ್ತಿರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. ವ್ಯಾಪಾರ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸೇವೆ ನೀಡುತ್ತಿದೆ ಆದರೂ ನಿಸ್ವಾರ್ಥವಾಗಿ ದುಡಿಯುವ ಮೂಲಕ ರೈತರಿಗೆ ಮತ್ತಷ್ಟು ಸೇವೆಸಲ್ಲಿಸುವಂತಾಗಬೇಕು ಎಂದರು. ಬ್ಯಾಂಕ್ ನ ಮೈಸೂರು ವಲಯದ ಸಹಾಯಕ ಮುಖ್ಯ ವ್ಯವಸ್ಥಾಪಕ ಡಾ.ಅರುಣ್ ಮಾತನಾಡಿ, ಕರ್ನಾಟಕ ಬ್ಯಾಂಕ್ ಸ್ಥಾಪನೆ ಗೊಂಡು ನೂರು ವರ್ಷ ಪೂರೈಸಿದೆ. ಈಗ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಕೆಲವೆಡೆಯು ತನ್ನ ಶಾಖೆಯನ್ನು ಹೊಂದಿದ್ದು, ಆದ್ದರಿಂದಲೇ ಭಾರತದ ಕರ್ನಾಟಕ ಬ್ಯಾಂಕ್ ಎಂದು ಹೆಸರುವಾಸಿಯಾಗಿದೆ ಎಂದರು. ಸೋಮವಾರಪೇಟೆ ಶಾಖೆಯು 1976 ರಲ್ಲಿ ಆರಂಭಗೊಂಡು 16000 ಗ್ರಾಹಕರಿಗೆ ತನ್ನ ಸೇವೆ ನೀಡುತ್ತಾ 143ಕೋಟಿ ವಹಿವಾಟು…

Read More

ನಾಪೋಕ್ಲು ಮೇ 2 NEWS DESK : ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ (sai) ತಂಡದಿಂದ ಮುಂಬೈ ರಾಷ್ಟ್ರೀಯ ಎನ್.ಸಿ.ಒ.ಇ (ನ್ಯಾಷನಲ್ ಸೆಂಟರ್ ಆಫ್ ಎಕ್ಷಲೆನ್ಸ್ ) ತಂಡಕ್ಕೆ ಪಿ.ಡಿ.ಶ್ರಾವ್ಯ ಆಯ್ಕೆಯಾಗಿದ್ದಾಳೆ. ಕಕ್ಕಬ್ಬೆಯ ದೇವಯ್ಯ ಹಾಗೂ ಚಿತ್ರ ದಂಪತಿಯ ಪುತ್ರಿಯಾಗಿರುವ ಶ್ರಾವ್ಯ, ಪ್ರಸ್ತುತ ಮಡಿಕೇರಿ ಸಾಯಿಯಲ್ಲಿ ಅಂತಿಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

Read More

ನಾಪೋಕ್ಲು ಮೇ 3 NEWS DESK : ಭಾಗಮಂಡಲ ಸಮೀಪದ ಕೋರಂಗಾಲದ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಳಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಬ್ರಹ್ಮ ಕಳಶೋತ್ಸವದ ಅಂಗವಾಗಿ ಗಣ ಹೋಮ, ದೇವರಿಗೆ ಅನುಜ್ಞಾನ ಕಳಸ , ಬಿಂಬಶುದ್ಧಿ, ನವಗ್ರಹ ಹೋಮ, ತತ್ವ ಹೋಮ, ತತ್ವ ಕಳಸ, ಜೀವ ಕಳಸ ಪ್ರತಿಷ್ಠೆ, ದುರ್ಗಾ ದೀಪ ನಮಸ್ಕಾರ ಪೂಜೆ, ಪ್ರಾಯಶ್ಚಿತ ಹೋಮ, ಆದಿವಾಸ ಹೋಮ, ಕಳಸ ಮಂಟಪ ಸಂಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ವೃಷಭ ಲಗ್ನದಲ್ಲಿ ಬ್ರಹ್ಮಕಳಶಾಭಿಷೇಕ ನಡೆಯಿತು. ಉಪದೇವರಿಗೆ ಕಳಶಾಭಿಷೇಕ, ಮಹಾಪೂಜೆ ದೇವರಿಗೆ ಪ್ರತಿಷ್ಠೆ ಬಲಿ, ಮಂಗಳ ಮಂತ್ರಾಕ್ಷತೆ, ಆಶೀರ್ವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೂರು ದಿನಗಳ ಕಾಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ತಕ್ಕಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ವರದಿ : ದುಗ್ಗಳ…

Read More