ಲೇಖಕ: admin

ಮಡಿಕೇರಿ ಏ.26 NEWS DESK  : ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮತ್ತು ಇತರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಗೆ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಧ್ವಜಾರೋಹಣಕ್ಕೂ ಮೊದಲು  ಸಾಮೂಹಿಕ ನಮಾಜಿನ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬೆಳ್ತಂಗಡಿ ದಾರುಸ್ಸಲಾಂ ಚೇರ್ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವ ವಹಿಸಿದ್ದರು. ರಾತ್ರಿ 8 ಗಂಟೆಗೆ ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಮ್ಮೆಮಾಡು ಮುದರ್ರಿಸ್ ಹಂಝ ಸಖಾಫಿ ವಹಿಸಲಿದ್ದಾರೆ. ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ್ಲ ಪ್ರಶ್ನಂಙಳುಂ ಪರಿಹಾರವುಂ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಎಮ್ಮೆಮಾಡು ಮಾಜಿ ಖತೀಬರಾದ ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದರೂಸಿ, ಹಾಫಿಳ್ ಜುನೈದ್ ಜಲಾಲಿ, ಎಮ್ಮೆಮಾಡು ಶಹೀದಿಯ ಅನಾಥಾಲಯ ಅಧ್ಯಕ್ಷ ಹಸೈನಾರ್ ಹಾಜಿ ಚಕ್ಕೇರ,…

Read More

ಮಡಿಕೇರಿ ಏ.26 NEWS DESK : ಕೊಡಗಿನ ವಿವಿಧೆಡೆ ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಯುವ ಮತದಾರರಿಗೆ ಸ್ಫೂರ್ತಿಯಾದರು. ನಾಪೋಕ್ಲು  ಬೂತ್ ಸಂಖ್ಯೆ 56 ರಲ್ಲಿ ಬೊಪ್ಪೇರ ಕಾವೇರಪ್ಪ (98) ಮತದಾನ ಮಾಡಿದರು. ಚೌಡ್ಲೂ ಗ್ರಾಮದ ಹೊನ್ನಮ್ಮ (85) ಸಹಾಯಕರೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK :  ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆ ಬೂತ್ ಸಂಖ್ಯೆ 237ರಲ್ಲಿ ಮೊದಲ ಬಾರಿ ಮತದಾನ ಮಾಡಿದ  ಕೆ.ಎಂ.ಇರ್ಷಾದ್,  ಸವಾದ್ ಉಸ್ಮಾನ್, ಸಫ್ವಾನ್ ಮತ್ತು ಮುಜಮ್ಮಿಲ್  ಮತಿತ್ತರರು ಮೊದಲ ಬಾರಿಗೆ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿ ಸಂಭ್ರಮಿಸಿದರು.

Read More

ಮಡಿಕೇರಿ ಏ.26 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಮತದಾನ ಮಾಡಿದರು. ಮೈಸೂರಿನ ಯಾದವಗಿರಿ ಸುನಂದ ಪಬ್ಲಿಕ್ ಶಾಲೆಯ ಮತಗಟ್ಟೆ 145 ರಲ್ಲಿ  ಪತ್ನಿ, ಮಕ್ಕಳ ಜೊತೆ ಆಗಮಿಸಿ ಮತಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK : ಕೊಡಗಿನಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನ 1 ಗಂಟೆಗೆ ವೇಳೆಗೆ  ಶೇ.46.97 ರಷ್ಟು ಮತದಾನ ನಡೆದಿದೆ. ಮತದಾರರು ಉತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.

Read More

ಮಡಿಕೇರಿ ಏ.26 NEWS DESK  : ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ  ಪತ್ನಿ ಯಶಿ ಚಂಗಪ್ಪ ಅವರೊಂದಿಗೆ 31ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ. ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ.

Read More

ಮಡಿಕೇರಿ ಏ.26 NEWS DESK : ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ವಾರ್ಷಿಕ ಉತ್ಸವವು ಏ.29 ರಂದು ನಡೆಯಲಿದೆ. ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪೂರ್ವಾಹ್ನ 7 ಗಂಟೆಗೆ ಮಹಾಗಣಪತಿ ಹೋಮ, 12 ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ತಕ್ಕಾರ ಮನೆಯಿಂದ ಭಂಡಾರ ತರುವುದು, 1.30 ರಿಂದ ಹಬ್ಬಾಚರಣೆ, 1.45 ರಿಂದ ಅನ್ನ ಸಂತರ್ಪಣೆ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್‍ನ ಪ್ರಮುಖರು ಕೋರಿದ್ದಾರೆ.

Read More

ಮಡಿಕೇರಿ ಏ.26 NEWS DESK  :  ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ,  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮತ್ತು  ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ ಮತಚಲಾಯಿಸಿದರು. ನಂತರ “ನಾನು ಮತ ಚಲಾಯಿಸಿದ್ದೇನೆ” ಎಂಬ ಸಂದೇಶ ಸಾರಿ ಮತದಾನ ಜಾಗೃತಿ ಮೂಡಿಸಿದರು.

Read More

ಮಡಿಕೇರಿ ಏ.26 NEWS DESK : ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅರಮೇರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK : ಶನಿವಾರಸಂತೆ ಸಮೀಪದ ಶಿಡಿಗಳಲೇ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಹಾರೆಹೊಸೂರು ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.

Read More