ಲೇಖಕ: admin

ಮಡಿಕೇರಿ ಏ.26 NEWS DESK : ಲೋಕಸಭಾ ಚುನಾವಣೆಗೆ ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 11 ಗಂಟೆ ವೇಳೆಗೆ 30.11ರಷ್ಟು ಮತದಾನ ನಡೆದಿದೆ.

Read More

ಮಡಿಕೇರಿ ಏ.26  NEWS DESK : ಕೊಡ್ಲಿಪೇಟೆಯ ಕಲ್ಲು ಮಠದ ಶ್ರೀ ಮಹಾಂತ ಸ್ವಾಮೀಜಿ ಕೊಡ್ಲಿಪೇಟೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮತಚಲಾಯಿಸಿದರು. ಪತ್ನಿ ದಿವ್ಯ ಅವರೊಂದಿಗೆ ಬೇಳೂರು ಗ್ರಾಮ ಪಂಚಾಯಿತಿ ಬಜೆಗುಂಡಿಯ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ74(ನಗರೂರು) ರಲ್ಲಿ ಮತದಾನ ಮಾಡಿದರು.  

Read More

ಮಡಿಕೇರಿ ಏ.26 NEWS DESK :  ಬಿಜೆಪಿ ಅಭ್ಯರ್ಥಿ ಯದುವೀರ್ ಮೈಸೂರಿನಲ್ಲಿ ಮತದಾನ ಮಾಡಿದರು. ಪತ್ನಿ ತೃಷಿಕಾ, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಜೊತೆ ಮತಗಟ್ಟೆಗೆ ಬಂದು  ಮತಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್‌.ಪೊನ್ನಣ್ಣ ಮತಚಲಾಯಿಸಿದರು. ಪತ್ನಿ ಕಾಂಚನ ಪೊನ್ನಣ್ಣ ಹಾಗೂ ಸಹೋದರ ನರೇನ್ ಕಾರ್ಯಪ್ಪ ಅವರೊಂದಿಗೆ ಹುದಿಕೇರಿಯ ಬೆಳ್ಳೂರು ಬೂತ್‌ ನಂ.246ರಲ್ಲಿ ಮತಚಲಾಯಿಸಿದರು.

Read More

ಮಡಿಕೇರಿ ಏ.26 NEWS DESK :  ಬಿಜೆಪಿ ನಾಯಕ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮತಚಲಾಯಿಸಿದರು. ಪತ್ನಿ ಕುಂತಿ ಬೋಪಯ್ಯ ಹಾಗೂ ಪುತ್ರಿ ಯಶಿಕ ರೊಂದಿಗೆ ನಗರದ ಜೂನಿಯರ್ ಕಾಲೇಜು ಆವರಣದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

Read More

ಮಡಿಕೇರಿ ಏ.26 NEWS DESK : ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ಮಡಿಕೇರಿ ತಾಲ್ಲೂಕು ಪಂಚಾಯತ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಮಡಿಕೇರಿ ಏ.25 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಒಟ್ಟು 18 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರ ರಾಜಕೀಯ ಭವಿಷ್ಯವನ್ನು ಏ.26ರಂದು ಮತದಾನ ಮಾಡುವ ಮೂಲಕ ಮತದಾರ ನಿರ್ಧರಿಸಲಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಟ್ಟು 4,70,766 ಮತದಾರರಿದ್ದು, 2,30,568 ಪುರುಷರು ಮತ್ತು 2,40,182 ಮಹಿಳಾ ಮತದಾರರು, 16 ಇತರ ಮತದಾರರು ಇದ್ದಾರೆ.

Read More

ಮಡಿಕೇರಿ ಏ.25 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್‌ನ ಎಂ.ಲಕ್ಷ್ಮಣ್ ಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್.ಪ್ರವೀಣ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಸುನಿಲ್ ಟಿ.ಆರ್, ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಜಾಕೀಯ ಲೀಲಾ, ಸೋಷಿಯಲಿಸ್ಟ್ ಪಾರ್ಟಿ(ಇಂಡಿಯಾ)ಯ ಹರೀಶ್ ಗೌಡ, ಸೆಕ್ಯುಲರ್ ಡೆಮಾಕ್ರೆಟಿಕ್ ಕಾಂಗ್ರೆಸ್‌ನ ಎ.ಸಿ. ರಾಮಚಂದ್ರರಾವ್, ಕರ್ನಾಟಕ ಜನತಾ ಪಕ್ಷದ ಕದಂಬ ನ.ಅಂಬರೀಶ್, ಸಮಾಜವಾದಿ ಜನತಾ ಪಾರ್ಟಿ ಕರ್ನಾಟಕದ ಡಾ. ಹೆಚ್.ಎಂ.ನಂಜುಂಡ ಸ್ವಾಮಿ, ಕರುನಾಡು ಪಾರ್ಟಿಯ ಹೆಚ್.ಕೆ.ಕೃಷ್ಣ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಕ್ರಿಸ್ಟೋಫರ್ ರಾಜ್ ಕುಮಾರ್, ಪಕ್ಷೇತರರಾದ ಎ.ಎಸ್. ಸತೀಶ್, ರಾಮ ಮೂರ್ತಿ ಎಂ., ರಂಗ ಸ್ವಾಮಿ ಎಂ., ಪಿ.ಎಸ್. ಯಡೂರಪ್ಪ, ಅಂಬೇಡ್ಕರ್ ಸಿ.ಜೆ., ರಾಜು ಮತ್ತು ದರ್ಶನ್ ಕೆ. ಪೊನ್ನೆಟ್ಟಿ ಕಣದಲ್ಲಿದ್ದಾರೆ.

Read More

ಮಡಿಕೇರಿ ಏ.25 NEWS DESK : ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸೆಮಿಫೈನಲ್ ಪಂದ್ಯಾವಳಿ ಏ.27 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಏ.27 ರ ಶನಿವಾರ ಬೆಳಗ್ಗೆ 7 ಗಂಟೆಗೆ ಕಕ್ಕಬ್ಬೆಯಿಂದ ನಾಪೋಕ್ಲುವರೆಗೆ ಕೊಡವ ಕುಟುಂಬಗಳ ನಡುವೆ 2.50 * 4 ಕಿ.ಮೀ ದೂರದ ಓಟದ ಸ್ಪರ್ಧೆ “ಫ್ಯಾಮಿಲಿ ರಿಲೇ” ನಡೆಯಲಿದೆ. ಒಂದು ಕುಟುಂಬ ತಂಡದಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಮೊದಲ ಬಹುಮಾನ ರೂ.50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ ಹಾಗೂ ತೃತೀಯ 20 ಸಾವಿರ ರೂ. ನೀಡಲಾಗುವುದು. ಸ್ಪರ್ಧಿಗಳು ಅಂದು ಬೆಳಗ್ಗೆ 6 ಗಂಟೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಜರಿರಬೇಕು. ನೋಂದಣಿಗೆ ಏ.26 ಬೆಳಗ್ಗೆ 11 ಗಂಟೆಯವರೆಗೆ ಕಾಲಾವಕಾಶವಿದ್ದು,…

Read More