ಮಡಿಕೇರಿ ಏ.10 NEWS DESK : ಮಡಿಕೇರಿ ನಗರದ ಸುರ್ದಶನ ಬಡಾವಣೆಯ ಶ್ರೀ ಮುನೀಶ್ವರ ದೇವಾಲಯದಲ್ಲಿ ಯುಗಾದಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಅಭಿಷೇಕ, ಅಲಂಕಾರ ಪೂಜೆ, ಹೋಮ ಹವನಾದಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ದೇವಾಲಯದ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿಗೆ ಭಕ್ತರು ಹರಕೆ ಅರ್ಪಿಸಿದರು. ಮಹಾಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಅಪಾರ ಸಂಖ್ಯೆಯ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆಯಾಯಿತು. ಯುಗಾದಿ ಉತ್ಸವದ ಪ್ರಯುಕ್ತ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಲೇಖಕ: admin
ಮಡಿಕೇರಿ ಏ.10 NEWS DESK : 2024-25 ನೇ ಸಾಲಿನ ಅಖಿಲ ಭಾರತ ಅಂತರ ಸೈನಿಕ ಶಾಲೆಗಳ ಗ್ರೂಪ್ (ಗುಂಪು-ಹೆಚ್) ಫುಟ್‌ಬಾಲ್ ಸ್ಪರ್ಧೆಯು ಸೈನಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗಿನ ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವವರಿಗೆ ನೈಜ ಕ್ರೀಡಾ ಮನೋಭಾವ, ಕಠಿಣ ತರಬೇತಿ ಮತ್ತು ನಿರಂತರ ಪ್ರಯತ್ನಗಳ ಅವಶ್ಯಕತೆ ಇದೆ ಎಂದರು. ಸ್ಪರ್ಧೆಯಲ್ಲಿ ಗೆಲುವು ಸಂಪಾದಿಸಲು ಶಿಸ್ತು, ಶ್ರೇಷ್ಠತೆ ಮತ್ತು ಸಾಂಘಿಕ ಹೋರಾಟದ ಅನಿವಾರ್ಯತೆಯ ಅವಶ್ಯಕತೆಯನ್ನು ತಿಳಿಸಿದರು. ಇಂಥಹ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಂಡ ಸ್ಪೂರ್ತಿ ಮತ್ತು ಪರಿಶ್ರಮದ ಮೌಲ್ಯಗಳನ್ನು ತುಂಬುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದರು. ಫುಟ್‌ಬಾಲ್‌ನಲ್ಲಿ ಯಶಸ್ಸು ಗಳಿಸಲು, ಮೂಲಭೂತವಾಗಿ ಅಸಾಧಾರಣ ಸಾಂಘಿಕ ಹೋರಾಟ ಪ್ರದರ್ಶನ ನೀಡಲು ಸಹಕಾರಿಯಾಗಿದೆ. ಭಾಗವಹಿಸಿದ ಕ್ರೀಡಾಪಟುಗಳು ಉತ್ಸಾಹ, ಸಮಗ್ರತೆ ಮತ್ತು ತಮ್ಮ ಎದುರಾಳಿಗಳನ್ನು ಗೌರವದಿಂದ ಕಾಣುವುದರೊಂದಿಗೆ, ಕ್ರೀಡಾ ಮನೋಭಾವ ಮತ್ತು ನ್ಯಾಯೋಚಿತ ಗುಣಗಳನ್ನು ಕ್ರೀಡೆಗಳಲ್ಲಿ ಪ್ರದರ್ಶಿಸಲು ಕರೆ ನೀಡಿದರು.…
ಕುಶಾಲನಗರ ಏ.10 NEWS DESK : ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಹೊನ್ನಾರು ಉತ್ಸವ ಆಚರಿಸಿದರು. ತಾವು ಸಾಕಿರುವ ಹಸು ಎತ್ತುಗಳೊಂದಿಗೆ ಉಳುಮೆಯ ಪರಿಕರಗಳನ್ನು ತೊಳೆದು ಪೂಜಿಸಿದ ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ ಸಾಮೂಹಿಕವಾಗಿ ಉಳುಮೆ ಮಾಡುವ ಎತ್ತುಗಳು ಹಾಗೂ ಹೈನುಗಾರಿಕೆಯ ಆಕಳುಗಳನ್ನು ಪೂಜಿಸಿದರು. ಇದೇ ಸಂದರ್ಭ ಊರನ್ನು ಕಾಡುತ್ತಿರುವ ಬರವನ್ನು ದೂರ ಮಾಡಿ ಉತ್ತಮ ಮಳೆ ಸುರಿಸಿ ಅನ್ನದಾತರ ಬದುಕನ್ನು ಸಮೃದ್ಧಗೊಳಿಸೆಂದು ಪ್ರಾರ್ಥಿಸಿದರು. ಕಳೆದ ಒಂದೂವರೆ ವರ್ಷದಿಂದ ಮಳೆಯಾಗದ ಕಾರಣ ಬರ ಆವರಿಸಿದ್ದು, ರೈತರು ಅವಲಂಬಿಸಿರುವ ಕೊಳವೆ ಬಾವಿಗಳು ನೀರಿಲ್ಲದೇ ಬಿಕೋ ಎನ್ನುತ್ತಿವೆ. ಜನ ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿವ ನೀರಿನ ಬವಣೆಯನ್ನು ದೂರ ಮಾಡಿ, ಉತ್ತಮ ಮಳೆ ಸುರಿಸಿ ಮತ್ತೆ ಕೊಳವೆ ಬಾವಿಗಳಲ್ಲಿ ನೀರು ಹರಿಸೆಂದು ದೇವರಲ್ಲಿ ರೈತರು ಪ್ರಾರ್ಥಿಸಿದರು. ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಗ್ರಾಮದ ಬಸವೇಶ್ವರ ದೇವಾಲಯದಿಂದ ಹೊರಟ ಹೊನ್ನಾರು ಉತ್ಸವ ಗ್ರಾಮದ ಮುಖ್ಯ ಬೀದಿಯಲ್ಲಿ ಸಾಗಿ…
ಮಡಿಕೇರಿ ಏ.10 NEWS DESK : ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿಯ ತಾಯಿ, ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುತ್ತಿಗೆದಾರ ಟಿ.ಕೆ.ಸುರೇಂದ್ರ ಅವರ ಪತ್ನಿ ಎಂ.ಯು.ಬೇಬಿರಾಣಿ ಹಾಗೂ ಪುತ್ರಿ ಟಿ.ಎಸ್. ರಿನಿಶಾ ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಗಮನ ಸೆಳೆದಿದ್ದರು. ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜ್ ನ ವಿದ್ಯಾರ್ಥಿನಿಯಾಗಿರುವ ರಿನಿಶಾ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 570 ಅತ್ಯುನ್ನತ ಅಂಕಗಳನ್ನು ಪಡೆದುಕೊಂಡಿದ್ದಾರೆ. ತಾಯಿ ಬೇಬಿರಾಣಿ ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜ್ ನಲ್ಲಿ ಪರೀಕ್ಷೆ ಬರೆದಿದ್ದು, ಕಲಾ ವಿಭಾಗದಲ್ಲಿ 600 ಕ್ಕೆ 388 ಅಂಕಗಳನ್ನು ಪಡೆದು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.NEWS DESK ಕನ್ನಡ ವಿಷಯದಲ್ಲಿ ಪುತ್ರಿ 96 ಹಾಗೂ ತಾಯಿ 93 ಅಂಕ ಪಡೆದುಕೊಂಡಿದ್ದಾರೆ. ಸುಮಾರು 25 ವರ್ಷಗಳ ಹಿಂದೆ 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದ ನನಗೆ ಇದೀಗ ಮಗಳು ಸ್ಫೂರ್ತಿ ತುಂಬಿ ದ್ವಿತೀಯ ಪಿಯುಸಿ ಬರೆಯುವಂತೆ ಪ್ರೋತ್ಸಾಹ ನೀಡಿದ ಪರಿಣಾಮ ಇಂದು ನಾನು ಉತ್ತೀರ್ಣಳಾಗಿದ್ದೇನೆ ಎಂದು ಬೇಬಿರಾಣಿ ಹರ್ಷ ವ್ಯಕ್ತಪಡಿಸಿದರು.NEWS…
ಮಡಿಕೇರಿ ಏ.10 NEWS DESK : ಯವಕಪಾಡಿ ಗ್ರಾಮದ ಕಕ್ಕಬೆ ಶ್ರೀ ಆದಿ ಪನ್ನಾಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವವು ಏ.12 ಮತ್ತು 13 ರಂದು ನಡೆಯಲಿದೆ. ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉತ್ಸವವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಏ.12 ರಂದು ಬೆಳಿಗ್ಗೆ 10 ಗಂಟೆಗೆ ಅಂಜಪರವಂಡ ಮನೆಯಿಂದ ಭಂಡಾರ ಬರುವುದು, 11 ಗಂಟೆಗೆ ತಡಂಬು ತೊಳೆಯುವುದು, ಮಧ್ಯಾಹ್ನ 1 ಗಂಟೆಗೆ ನಾಡು ಹತ್ತಿಸುವುದು ಮತ್ತು ಹರಕೆ ಒಪ್ಪಿಸುವುದು, ರಾತ್ರಿ 9 ಗಂಟೆಗೆ ಕರಿ ಚಾಮುಂಡಿ ಭಾರಣಿ ನಡೆಯಲಿದೆ. ಏ.13 ರಂದು 11 ಗಂಟೆಗೆ ಕುರುಂದ ದೇವರ ಹಬ್ಬ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಮುವತ್ತಮೂರು ಕುಡಿಯವರು ಕೋರಿದ್ದಾರೆ.
ಮಡಿಕೇರಿ ಏ.10 NEWS DESK : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ಕಾರ್ಕಳದ ಕ್ರಿಯೇಟಿವ್ ಎಜುಕೇಷನ್ ಫೌಂಡೇಷನ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾಳೆ. ಉತ್ತಮ ಉಪನ್ಯಾಸಕರ ಪ್ರಯತ್ನದ ಫಲವಾಗಿ ದ್ವಿತೀಯ ಪಿಯುಸಿಯಲ್ಲಿ ನಿರಂತರವಾಗಿ ಶೇ.100 ರಷ್ಟು ಸಾಧನೆ ಮಾಡುತ್ತಿರುವ ಈ ಶಿಕ್ಷಣ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ ಎಂದು ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ವಿರಾಜಪೇಟೆ ಏ.10 NEWS DESK : ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ಪೊನ್ನೀರ ಕುಟುಂಬಸ್ತರು ವರ್ಷಂಪ್ರತಿ ನಡೆಸಿಕೊಂಡು ಬರುವ ಶ್ರೀ ಬೇಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆ ಶುದ್ಧ ಕಳಸ ನೆರವೇರಿಸಿ, ರಾತ್ರಿಯಿಂದ ವಿವಿಧ ದೈವಗಳೊಂದಿಗೆ ಮರುದಿನದ ವರೆಗೆ ಬೇಟೆ ಚಾಮುಂಡಿ ದೈವದ ಕೋಲದೊಂದಿಗೆ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯಲಾಯಿತು. ವಿವಿಧೆಡೆಯಿಂದ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಏ.10 NEWS DESK : ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಮತ್ತು ಕರುಣೆಯ ಸಂಕೇತವಾದ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಮಸ್ಜಿದ್ ತಖ್ವಾದಲ್ಲಿ ನಡೆದ ಈದ್ ನಮಾಜ್ ನೇತೃತ್ವವನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು. ನಂತರ ಮಾತನಾಡಿದ ಮುಸ್ತಫಾ ಸಖಾಫಿ ಕಳೆದ ಒಂದು ತಿಂಗಳು ಎಲ್ಲರೂ ಶ್ರದ್ಧೆ ಮತ್ತು ಭಕ್ತಿಯಿಂದ ವ್ರತಾಚರಣೆಯನ್ನು ಮಾಡಿದ್ದೇವೆ. ಪವಿತ್ರ ರಂಜಾನ್ ನಲ್ಲಿ ನಾವೆಲ್ಲರೂ ಅಲ್ಲಾಹಿನೊಂದಿಗೆ ವಿಶೇಷ ಪ್ರಾರ್ಥನೆ ನಡೆಸಿದ್ದೇವೆ. ಆದರೆ ಯುವ ಸಮೂಹ ಕೆಡುಕಿನ ದಾರಿಯಲ್ಲಿ ಸಾಗುತ್ತಿರುವುದು ದುಖಃದ ಸಂಗತಿಯಾಗಿದೆ. ಯುವ ಸಮೂಹ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಒಳಿತಿನ ದಾರಿಯಲ್ಲಿ ಸಾಗಬೇಕು. ಯೌವ್ವನವನ್ನು ನಾವು ಹಾಳುಮಾಡಬಾರದು. ಯುವತ್ವದ ಪ್ರಾಯದಲ್ಲಿ ದೀನಿಕಾರ್ಯಗಳನ್ನು ಮಾಡುತ್ತಾ ನಾವು ಅಲ್ಲಾಹನಿಗೆ ಹತ್ತಿರವಾಗಬೇಕು. ಆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಎಂದು ಸಾಧ್ಯ ಎಂದರು. ನಾವೆಲ್ಲರೂ ಸಂಭ್ರಮದಿಂದ ಈದ್ ಆಚರಣೆ ಮಾಡುವಾಗ ಜಗತ್ತಿನಾದ್ಯಂತ ಒಪ್ಪೊತ್ತಿನ ಊಟವೂ ಇಲ್ಲದೆ ಉಪವಾಸವಿರುವ ಲಕ್ಷಾಂತರ ಜನರಿಗಾಗಿ ನಾವು ದುಆ…
ಮಡಿಕೇರಿ ಏ.10 NEWS DESK : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಉಡುಪಿ ಜಿಲ್ಲೆಯಲ್ಲಿಯೇ ಅಮೋಘ ಫಲಿತಾಂಶವನ್ನು ನೀಡುತ್ತಾ ಬಂದಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿಜ್ಞಾನ ವಿಭಾಗ ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ರಾಂಕ್ ಗಳನ್ನು ಪಡೆದುಕೊಂಡಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ದಿನದಿಂದಲೇ ತರಬೇತಿ ನೀಡಲಾಗುತ್ತಿದೆ. ಏಳು ಉಪನ್ಯಾಸಕರು ಸೇರಿಕೊಂಡು ನಿರ್ಮಿಸಿದ ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜ್ ಎಂದು ಗುರುತಿಸಿ ಕೊಂಡಿದೆ. ಶೈಕ್ಷಣಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿಕೊಂಡು ಬಂದಿದೆ. *ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರಾಂಕ್ ಗಳಲ್ಲಿ ವಾಣಿಜ್ಯ ವಿಭಾಗಕ್ಕೆ 3 ರಾಂಕ್* 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ.100 ರಷ್ಟು ಫಲಿತಾಂಶ ದೊರೆತ್ತಿದೆ. ಅನಘ (ಮೂರನೇ ರಾಂಕ್) ದಿವಿತ್ ಗೌಡ(ಏಳನೇ ರಾಂಕ್) ಹಾಗೂ ಅಕ್ಷತಾ ಪೈ( ಹತ್ತನೇ ರಾಂಕ್) ನ್ನು ಪಡೆದಿರುತ್ತಾರೆ. *CA ಫೌಂಡೇಷನ್ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ* ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್…
ಮಡಿಕೇರಿ ಏ.10 NEWS DESK : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ವರ್ಷವಧಿ ಜಾತ್ರೆಯು ಶ್ರದ್ಧಾಭಕ್ತಿಯಿಂ ನಡೆಯಿತು. ದೇವರ ಸನ್ನಿಧಿಯಲ್ಲಿ ಎರಡು ದಿನಗಳ ಕಾಲ ಮಹಾಪೂಜೆ, ದೀಪಾರಾಧನೆ , ದೇವರ ಬಲಿ ದೇವರ ಪ್ರದರ್ಶನ, ಮಹಾಭಿಷೇಕ, ವಿಶೇಷ ಸೇವೆಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ , ದೇವರ ಬಲಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಭಕ್ತಾದಿಗಳಿಗೆ ಅನ್ನನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ವಿವಿಧಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.






