ಲೇಖಕ: admin

ಕುಶಾಲನಗರ ಏ.11 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ ಅಂಗವಾಗಿ ಜನಪದೀಯ ಸಂಸ್ಕೃತಿಯ ಆಚರಣೆಗಳಲ್ಲಿ ಒಂದಾದ ‘ಹೊನ್ನಾರು’ ಉತ್ಸವವನ್ನು ರೈತರು ಸಂಭ್ರಮ, ಸಡಗರದಿಂದ ಆಚರಿಸಿದರು. ಗ್ರಾಮದ ದೇವಾಲಯದಲ್ಲಿ ಜಾನುವಾರುಗಳಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು, ಉತ್ತಮ ಮಳೆ ಬೆಳೆ ಬಂದು ಕೃಷಿ ಕಾರ್ಯ ಸಂತುಷ್ಟಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಗ್ರಾಮದಲ್ಲಿ ಗ್ರಾಮ ದೇವಾಲಯ ಸಮಿತಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ “ಹೊನ್ನಾರು” ನೇಗಿಲು ಹೂಡಿ ಉಳುಮೆ ಕಾರ್ಯಕ್ಕೆ ರೈತ ಕೆ.ಆರ್.ನಾಗರಾಜು ಚಾಲನೆ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ ಮಾತನಾಡಿ, ನಮ್ಮ ಪೂರತವಿಕರು ನಡೆಸಿಕೊಂಡು ಬರುತ್ತಿರುವ ಹೊನ್ನಾರು ಉತ್ಸವವನ್ನು ಗ್ರಾಮದಲ್ಲಿ ಎಲ್ಲರೂ ಜತೆಗೂಡಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳೆದಂತೆ ಕೃಷಿ ಸಂಸ್ಕೃತಿಯು ಕ್ಷೀಣಿಸದಂತೆ ನಮ್ಮ ಪೂರ್ವಿಕರು…

Read More

ಮಡಿಕೇರಿ ಏ.11 NEWS DESK : ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಶ್ರೀ ಬೇಟೆಗಾರ ದೇವಾಲಯದ ವಾರ್ಷಿಕ ಉತ್ಸವವು ಏ.13 ಮತ್ತು 14 ರಂದು ನಡೆಯಲಿದೆ. ಏ.13 ರಂದು ಪಟ್ಟಣಿ ಹಬ್ಬ, ರಾತ್ರಿ ಹತ್ತು ಗಂಟೆಗೆ ಬೊಳ್ಳಾಟ ನೆರವೇರಲಿದೆ. ಏ.14 ರಂದು ಬೆಳಗ್ಗೆ 10 ಗಂಟೆಗೆ ದೇವರ ಕೋಲ ಹಾಗೂ ಮಧ್ಯಾಹ್ನ 3 ಗಂಟೆಗೆ ಎತ್ತು ಪೋರಾಟ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮಡಿಕೇರಿ ಏ.11 NEWS DESK : ಕೊಡವರ ಹೊಸ ವರ್ಷಾಚರಣೆ  ಎಡ್ಮ್ಯಾರ್  ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಏ.14 ರಂದು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ವಸಂತಋತು ಫೆ.15 ರಿಂದ ಆರಂಭಗೊಂಡು ಏ.14 ಕ್ಕೆ ಕೊನೆಗೊಳ್ಳುವ “ ಎಡ್ಮ್ಯಾರ್ ” ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಏ.14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಶ್ರೀಉಮಾಮಹೇಶ್ವರಿ ದೇವಾಲಯದ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಆರ್‌ಎಂಸಿ ಯಾರ್ಡ್ ನಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಸಂವಿಧಾನದ ಆರ್ಟಿಕಲ್…

Read More

ಮಡಿಕೇರಿ ಏ.11 NEWS DESK : ಹಂಡ್ಲಿ ವಲಯ ಮಟ್ಟದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ನಡೆಯಿತು. ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ  ಅವರ ಪರ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ  ಮತಯಾಚಿಸಿದರು. ಈ ಸಂದರ್ಭ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿದರು. ಈ ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ ತಿಂಗಳಿಗೆ 15 ದಿನ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿ,  ಕಾರ್ಯನಿರ್ವಹಿಸುದಾಗಿ ಜನರಿಗೆ ಭರವಸೆ ನೀಡಿದರು. ಈ ಸಂದರ್ಭ   ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಡಿಸಿಸಿ ಸದಸ್ಯರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರುಗಳು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಏ.11 NEWS DESK : ತೊರೆನೂರು ಗ್ರಾ.ಪಂ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸಮ್ಮುಖದಲ್ಲಿ ತೊರೆನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಡಿ.ರವಿಕುಮಾರ್, ಸಿದ್ಧಲಿಂಗೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಉದಯ್ ಕುಮಾರ್, ಗ್ರಾಮದ ಮುಖಂಡರಾದ ಹರೀಶ್, ಮಂಜುನಾಥ್, ನಂದೀಶ್ ಹಾಗೂ ಅನೇಕ ಮುಖಂಡರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ನಟೇಶ್ ಗೌಡ,  ಗ್ರಾ.ಪಂ ಮಾಜಿ ಅಧ್ಯಕ್ಷರಾದ ಯೋಗಿಣಿ, ಶಾಂತಿ, ಪ್ರಮುಖರಾದ ಕೃಷ್ಣೆಗೌಡ ತೊರೆನೂರು, ಟಿ.ಬಿ.ಜಗದೀಶ್, ಶೇಖರ್ ಹೆಬ್ಬಾಲೆ, ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಅಧ್ಯಕ್ಷ ಟಿ.ಕೆ.ವಸಂತ್, ಅಕ್ರಮ ಸಕ್ರಮ ಸಮಿತಿಯ…

Read More

ಮಡಿಕೇರಿ ಏ.11 NEWS DESK :  ಲೋಕಸಭಾ ಚುನಾವಣಾ ಹಿನ್ನೆಲೆ ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯ ಕುಟ್ಟದಲ್ಲಿ ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ  ಅವರ ಪರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮತಯಾಚಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಕೇವಲ ಭೂಮಿ ಪೂಜೆ ಮಾಡಿ ಹೋಗುವುದು ನಮ್ಮ ಅಭಿವೃದ್ಧಿಯಲ್ಲ, ಕೊಡಗು-ವಿರಾಜಪೇಟೆಯನ್ನು ಯಾರು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿಗೆ ಕೊಂಡೊಯ್ಯುವ ಪಣ ನಮ್ಮದು ಎಂದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಧರ್ಮಜ ಉತ್ತಪ್ಪ , ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ  ಮೀದೇರಿರ ನವೀನ್, ಪ್ರಚಾರ ಸಮಿತಿ ಅಧ್ಯಕ್ಷ  ಟಿ.ಪಿ.ರಮೇಶ್,  ಮಾಜಿ ಎಂ.ಎಲ್.ಸಿ ಅರುಣ್ ಮಾಚ್ಚಯ್ಯ , ಹಿರಿಯ ಮುಖಂಡರಾದ ಹೆಚ್.ಎಸ್.ಚಂದ್ರಮೌಳಿ ಇತರೆ ಮುಖಂಡರು, ಸ್ಥಳೀಯರು  ಹಾಜರಿದ್ದರು.

Read More

ಮಡಿಕೇರಿ ಏ.11 NEWS DESK : ಕೊಡವ ಕೂಟಾಳಿಯಡ ಕೂಟದ ವತಿಯಿಂದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೊಡವ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮ  ನಡೆಯಿತು. ಪೊನ್ನಂಪೇಟೆ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದ ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚಂಗುಲಂಡ ಸೂರಜ್,  ಕೊಡಗಿನಲ್ಲಿ ಕೊಡವಾಮೆ ಸಂಬಂಧಿಸಿ ದಂತೆ ಹಲವಾರು ಸಂಘಟನೆಗಳಿವೆ. ಆಚಾರ, ವಿಚಾರ, ಪದ್ಧತಿ, ಪರಂಪರೆ ಬೆಳೆಸುವಲ್ಲಿ ನಮ್ಮ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ “ಕೊಡವಾಮೆಲ್ ಪೆತ್ತವಡ ಆರೈಕೆ” ಎನ್ನುವ ವಿಷಯದ ಬಗ್ಗೆ  ಮಾಹಿತಿ ನೀಡಿದರು. ಇದೇ ಸಂದರ್ಭ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಬರೆದ  “ಪೆತ್ತವಡ ಆರೈಕೆ” ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ದಾನಿಗಳಾದ ಕೊಂಗಾಂಡ ಕಾಶಿ ಕಾರ್ಯಪ್ಪ, ಬಯವಂಡ ಮಹಾಬಲ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಕೂಟದ ನಿರ್ದೇಶಕ ಕಾಳಮಂಡ…

Read More

ಮಡಿಕೇರಿ ಏ.11 NEWS DESK : 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 582 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಿಂಚನ ಆರ್‌. ಹೆಚ್ 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್‌ , ಹಂಸಿನಿ ವಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸುಜಿತ್‌ ಡಿ. ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸಮೀಕ್ಷಾ ಎಸ್‌ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಪ್ರೇಮ್‌ ಸಾಗರ್‌ ಪಟೀಲ್‌ 589 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ರ‍್ಯಾಂಕ್‌, ಹೆಚ್.ವಿ.ವರ್ಷ  589 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ರ‍್ಯಾಂಕ್‌ ಗಳಿಸಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಾನ್ವಿ ರಾವ್‌ 595 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ, ಭಕ್ತಿ…

Read More

ನಾಪೋಕ್ಲು ಏ.11 NEWS DESK : ದೊಡ್ಡಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಅಂದಿ ಬೊಳಕ್, ಮಹಾಪೂಜೆ , ಎತ್ತು ಪೋರಾಟ, ಪಟ್ಟಣಿ ದೇವಿಯ ರ್ಶನ ಬಲಿ, ತರ್ಥ ಪ್ರಸಾದ ವಿತರಣೆ ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದಲ್ಲಿ ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬಳಿಕ ಕಾವೇರಿ ನದಿಯಲ್ಲಿ ದೇವಿಯ ಜಳಕ, ನಂತರ ದೇವಾಲಯದ ಸುತ್ತ ದೇವರ ನೃತ್ಯಬಲಿ ಜರುಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ದೇವಾಲಯದ ಮುಖ್ಯ ಅರ್ಚಕ ಗೋಪಾಲಕೃಷ್ಣ ನೇತೃತ್ವದಲ್ಲಿ ನೆರವೇರಿಸಿ ಕೊಟ್ಟರು. ಉತ್ಸವದಲ್ಲಿ ಊರ ಹಾಗೂ ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ತಮ್ಮಯ್ಯ, ಉಪಾಧ್ಯಕ್ಷ ಮಣವಟ್ಟಿರ ಮುದ್ದಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಾರ್ಯದರ್ಶಿ ಕರವಂಡ ಲವ ನಾಣಯ್ಯ, ದೇವಾಲಯದ ತಕ್ಕರಾದ ಪೆಬ್ಬಟ್ಟಿರ ಕುಶಾಲಪ್ಪ, ಕರವಂಡ ರವಿ ಬೋಪಣ್ಣ ಆಡಳಿತ…

Read More

ನಾಪೋಕ್ಲು ಏ.11 NEWS DESK : ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವ ಏ.13 ರಿಂದ 19 ರವರೆಗೆ ನಡೆಯಲಿದೆ. ಏ.13 ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಗುವುದು, ಏ.14 ರಂದು ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಏ.15 ರಂದು ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಉತ್ಸವ ಬಲಿ ನಡೆಯಲಿದೆ. ಏ.16 ರಂದು ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ನಡೆಯಲಿದೆ. ಏ.17ರಂದು ಹಗಲು ಉತ್ಸವಬಲಿ ನಡೆದು ಸಂಜೆ ದೀಪಾರಾಧನೆ ನಡೆಯಲಿದೆ. ಏ.18 ರಂದು ಪಟ್ಟಣಿ ಹಬ್ಬ ಜರುಗಲಿದೆ. ಬೆಳಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಪರಾಹ್ನ ಜೋಡಿ ದೇವರ ನೃತ್ಯೋತ್ಸವ ನಡೆಯಲಿದೆ. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹಾಲಿಂಗೇಶ್ವರ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More