ಮಡಿಕೇರಿ ಏ.10 NEWS DESK : ತನಲ್ ಮಹಿಳಾ ವಿಂಗ್ ವತಿಯಿಂದ ಮಡಿಕೇರಿಯ ನೆರಳಿನ ಮನೆ ತನಲ್ ಆಶ್ರಮದಲ್ಲಿ ಈದ್ ಉಲ್ ಫಿತರ್ ಸಂಭ್ರಮದಿಂದ ಆಚರಿಸಲಾಯಿತು. ತನಲ್ ಮಹಿಳಾ ವಿಂಗ್ ಸದಸ್ಯರು ಎಲ್ಲಾ ಆಶ್ರಿತರಿಗೆ ಮದರಂಗಿ ಹಚ್ಚಿ, ಹೊಷ ಉಡುಪು ಮತ್ತು ವಿಶೇಷ ಉಡುಗೊರೆ ನೀಡಿ ಸಂಭ್ರಮಿಸಿದರು. ಅಲ್ಲದೇ ಭೋಜನ ವ್ಯವಸ್ಥೆ ಯನ್ನು ಕಲ್ಪಿಸಿದರು. ಈ ಸಂದರ್ಭ ತನಲ್ ಮಹಿಳಾ ವಿಂಗ್ ನ ಪದಾಧಿಕಾರಿಗಳಾದ ಮುಹೀನ ಮೊಹಮ್ಮದ್, ಉನೈಸ ಮುಸ್ತಾಫಾ, ನಸಿರ, ಝಕೀಯ ಮತ್ತು ರಹಮತ್ ಅನ್ವರ್ ಹಾಜರಿದ್ದರು.
ಲೇಖಕ: admin
ಮಡಿಕೇರಿ ಏ.10 NEWS DESK : ಹಬ್ಬಗಳು ಭಾವೈಕ್ಯ ದ ಸಂದೇಶವನ್ನು ಸಾರುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನಮ್ಮ ಭಾರತ ಎಂದಿಗೂ ಶಾಂತಿ ನೆಮ್ಮದಿಯನ್ನು ಬಯಸುತ್ತದೆ ಹೊರತು ದ್ವೇಷದ ವಾತಾವರಣವಲ್ಲ ಎಂದು ಹಾಫಿಝ್ ಫಝಲುಲ್ ರೆಹಮಾನ್ ಹೇಳಿದರು. ನಗರದ ಬದ್ರಿಯಾ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವ ವಹಿಸಿದ ನಂತರ ಮಾತನಾಡಿದ ಅವರು, ಪ್ರವಾದಿ ( ಸ) ಅವರು ನೀವು ಎಲ್ಲಿಯವರೆಗೆ ನಿಮ್ಮ ನೆರೆಯವರನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಓರ್ವ ಉತ್ತಮ ವಿಶ್ವಾಸಿಯಾಗಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಉಲ್ಲೇಖಿಸಿದರು. ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಸಿ.ಪಿ.ಸಿ ಲೇ ಔಟ್ ನ ಮಸ್ಜಿದ್ ಉರ್ ರಹ್ಮಾ ಮಸೀದಿ, ಉಮರ್ ಮೌಲವಿ ಭಟ್ಕಲ್ ಮಸೀದಿ, ಅಲೀ ಮುಸ್ಲಿಯಾರ್, ಮಲಬಾರ್ ಜುಮಾಅತ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ಈದ್ ನಮಾಝ್ ನಡೆಯಿತು. ಅಬ್ದುಲ್ ಹಮೀದ್ ಮದನಿ, ಸಲಫಿ ಮಸೀದಿಯಲ್ಲಿ ಸಲಾವುದ್ದೀನ್ ಚುಝೈಲಿ ನೇತೃತ್ವದಲ್ಲಿ ನಡೆಯಿತು.
ಮಡಿಕೇರಿ ಏ.10 NEWS DESK : ಕಂದಕದಲ್ಲಿ ಸಿಲುಕಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಕುಶಾಲನಗರ ತಾಲೂಕಿನ ಬಾಳುಗೋಡು ಗ್ರಾಮದ ಕೆರೆಮೂಲೆಯಲ್ಲಿ ನಡೆದಿದೆ. ಕಾಫಿ ಬೆಳೆಗಾರ ಸಿ.ಕೆ.ಗಣೇಶ್ ಮಾರ್ಗ ಮಧ್ಯೆ ತೆರಳುವಾಗ ಕಾಡಾನೆಮರಿಯೊಂದು ಕಂದಕದ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಒದಾಡುತ್ತಿತ್ತು. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕುಶಾಲನಗರ ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್ ಹಾಗೂ ದೇವಯ್ಯ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಮೇಲೆತ್ತಲು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜೆಸಿಬಿಯನ್ನು ಬಳಸಿ ಗ್ರಾಮಸ್ಥರ ಸಹಕಾರದಿಂದ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಮರಿ ಆನೆಯನ್ನು ರಕ್ಷಿಸಿದ್ದಾರೆ.
ಮಡಿಕೇರಿ ಏ.10 NEWS DESK : ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಆದೇಶದ ಮೇರೆಗೆ ವಿರಾಜಪೇಟೆ ಪುರಸಭೆಯ ಸಹಭಾಗಿತ್ವದಲ್ಲಿ ವಿರಾಜಪೇಟೆ ನಗರದ ಸಂತ ಅನ್ನಮ್ಮ ಕಾಲೇಜಿನಲ್ಲಿ ನಡೆದ ಮತದಾನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ವಿರಾಜಪೇಟೆ ಏ.10 NEWS DESK : ಅರಮೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವವು ಏ.12 ಮತ್ತು 13 ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯು ತಿಳಿಸಿದೆ. ಎರಡು ದಿನಗಳು ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಏ.12 ರಂದು ಮುಂಜಾನೆ 4 ಗಂಟೆಗೆ ದೇವಿಗೆ ವಿಶೇಷ ಅಭಿಷೇಕ, 5 ಗಂಟೆಗೆ ದೇವಸ್ಥಾನ ಕ್ಕೆ ಭಂಡಾರ ಬರುವುದು, ಬೆಳಿಗ್ಗೆ 11 ಗಂಟೆಗೆ ದೇವರ ದರ್ಶನ, ಮಧ್ಯಾಹ್ನ 1 ಗಂಟೆಗೆ ಪ್ರಮುಖ ಆಕರ್ಷಣೆಯಾದ ಕೊಡೆ ತರುವುದು. ನಂತರ 3-30 ಗಂಟೆಗೆ ಎತ್ತು ಪೊರಾಟ್, 4 ಗಂಟೆಗೆ ಕುಂಞ ತೋಟ್ ನೊಂದಿಗೆ ಪ್ರಥಮ ದಿನದ ಕಾರ್ಯಕ್ರಮ ಅಂತ್ಯವಾಗಲಿದೆ. ಏ.13 ರಂದು ಬೆಳಿಗ್ಗೆ 10.30ಕ್ಕೆ ದೇವರ ದರ್ಶನ, ಮಧ್ಯಾಹ್ನ 1 ಗಂಟೆಗೆ ವಿಶೇಷ ಅನ್ನ ಸಂತರ್ಪಣೆ, ನಂತರ 4 ಗಂಟೆಗೆ ಕುರುಂಧ ಕಳಿ, ಸಂಜೆ 5 ಗಂಟೆಗೆ ದೇವರ ಅಭ್ಯಂಜನ ನಡೆಯಲಿದೆ. ದೇಗುಲದಲ್ಲಿ ಎರಡು ದಿನ ಕಾಲ ನಡೆಯುವ ಶ್ರೀ…
ಮಡಿಕೇರಿ ಏ.10 NEWS DESK : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಶೇ.92.13 ಫಲಿತಾಂಶದೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.97.37ದೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ ಶೇ. 96.80 ದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಗದಗ ಜಿಲ್ಲೆ ಶೇ.72.86 ದೊಂದಿಗೆ ಕೊನೆಯ ಸ್ಥಾನದಲ್ಲಿದೆ. ರಾಜ್ಯದಾದ್ಯಂತ ಈ ಬಾರಿ 5, 52,690 ವಿದ್ಯಾರ್ಥಿಗಳು ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಈ ಬಾರಿ ರಾಜ್ಯದಾದ್ಯಂತ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. 1,124 ಕೇಂದ್ರಗಳಲ್ಲಿ…
ಮಡಿಕೇರಿ ಏ.10 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜು ಬಳಿ ನಡೆಯುತ್ತಿರುವ ಚರಂಡಿ ಕಾಮಗಾರಿಯ ಗುಣಮಟ್ಟವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೋಮವಾರಪೇಟೆ ಏ.10 NEWS DESK : ಆಲೂರುಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ತಪೋಕ್ಷೇತ್ರ ಮನೆಹಳ್ಳಿ ಮಠಕ್ಕೆ ಮೈಸೂರಿನ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಕ್ಷೇತ್ರದ ಆರಾದ್ಯ ದೈವ ವೀರಭದ್ರ ಸ್ವಾಮಿ, ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಮಠದ ಪೀಠಾಧ್ಯಕ್ಷರಾದ ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವ ಹಾಗೂ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಮಳೆ, ಬೆಳೆ, ಪ್ರಜೆಗಳ ಕಲ್ಯಾಣಕ್ಕಾಗಿ ಅಷ್ಟೋತ್ತರ, ಅರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು. ನಂತರ ಬಿಲ್ವ ಗೋ ಶಾಲೆಗೆ ಭೇಟಿನೀಡಿದ ಅವರು ಗೋವುಗಳಿಗೆ ಹಣ್ಣು ಹಂಪಲು ತಿನ್ನಿಸಿ ನಮಿಸಿದರು. ನಂತರ ಮಾತನಾಡಿದ ಅವರು ಇಂದು ಸಾಕಷ್ಟು ಸವಾಲುಗಳಿವೆ ಅವುಗಳನ್ನು ಮೆಟ್ಟಿನಿಂತು ಅಭಿವೃದ್ದಿ ಸಾಧಿಸಬೇಕಾಗಿದೆ, ಇಂದು ಲೋಕಕಲ್ಯಾಣಕ್ಕಾಗಿ ಭಗವಂತನ ಮೊರೆಹೊಕ್ಕಿದ್ದೇವೆ ಎಲ್ಲಾ ಗುರುಗಳ ಮಾರ್ಗದರ್ಶನ, ಆಶೀರ್ವಾದ ವಿರಲಿ ಎಂದರು. ಈ ಸಂದರ್ಭ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಕೊಡಗುಹಾಸನ ಮಠಧೀಶರ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಶ್ರೀ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ,ಕಾರ್ಯದರ್ಶಿ ಕಿರಿಕೂಡ್ಲಿ ಮಠದ…
NEWS DESK :ಪುಣ್ಯ ಮಾಸ ರಂಜಾನ್ ತಿಂಗಳು ವಿದಾಯ ಹೇಳುತ್ತಿದೆ ರಮ್ಜಾನ್ ಸತ್ಯ ವಿಶ್ವಾಸಿಗಳಿಗೆ ಪುಣ್ಯಗಳ ಕೊಯ್ಲು ದಿನವಿಡೀ ಹಸಿವಿನಿಂದಿ ದ್ದು ಸೃಷ್ಟಿಕರ್ತನ ಸ್ತುತಿ ಸ್ತೋತ್ರಗಳನ್ನು ಮಾಡುತ್ತಾ ಕಳೆಯುವ ಸತ್ಯ ವಿಶ್ವಾಸಿಗೆ ಶವ್ವಾಲ್ ತಿಂಗಳ ಮೊದಲ ದಿನ ಹಬ್ಬವಾಗಿರುತ್ತದೆ. ರಂಜಾನ್ ತಿಂಗಳಲ್ಲಿ ಅವನು ಹಲವು ಅನುಭವ ಗಳನ್ನು ಪಡೆದಿರುತ್ತಾನೆ. ನಿತ್ಯ ಆರಾಧನೆ ಮತ್ತು ಪಾಪ ಕಾರ್ಯಗಳಿಂದ ದೂರವಿರುತ್ತಾ ಸಿಗುವ ಆಧ್ಯಾತ್ಮಿಕ ಅನುಭೂತಿ ಒಂದೆಡೆಯಾದರೆ ರಂಜಾನಿನ ದಿನವಿಡೀ ಹಸಿದಿರುವುದರಿಂದ ದೈಹಿಕ ಇಚ್ಛೆಗಳಿಂದ ದೂರವಿರುವುದರಿಂದ ಬಿಡುವಿಲ್ಲದ ಹೊರತಾಗಿಯೂ ಬಿಡುವು ಮಾಡಿಕೊಂಡು ಆರಾಧನೆಗಾಗಿ ಸಮಯವನ್ನು ನಿಗದಿ ಪಡಿಸುವುದರಿಂದ ತ್ಯಾಗ ಮನೋಭಾವ ಸಮಯ ಪಾಲನೆ ಯ ಶಿಸ್ತು ಆತನಲ್ಲಿ ಬೆಳೆದಿರುತ್ತದೆ. ಹೀಗೆ ಒಂದು ತಿಂಗಳ ನಿರಂತರ ಉಪವಾಸದಿಂದ ಒಬ್ಬ ಮನುಷ್ಯನು ಸಂಪೂರ್ಣವಾಗಿ ಪರಿಶುದ್ಧನಾಗಿರುತ್ತಾನೆ ಅವನ ಬದುಕಿನಲ್ಲಿಯೂ ಬದಲಾವಣೆಯಾಗಿರುತ್ತದೆ ಅವನ ಶರೀರ ಮತ್ತು ಮನಸ್ಸು ಎರಡು ಎಲ್ಲಾ ರೀತಿಯ ಕೆಡುಕು ರೋಗಗಳಿಂದ ದುಶ್ಚಟತನದಿಂದ ಶುದ್ದಿಯಾಗಿರುತ್ತದೆ. ರಂಜಾನ್ ಸಮಾಜಕ್ಕೆ ದೊಡ್ಡ ಪರಿವರ್ತನೆಯ ಸುಧಾರಣೆಯ ಪಾಠವನ್ನೇ ಕಲಿಸಿಕೊಟ್ಟಿರುತ್ತದೆ. ಹಸಿವೆಯಲ್ಲಿ ಯಾವುದೇ ಭೇದವಿಲ್ಲ ದನಿಕನಾಗಿದ್ದರೂ ಬಡವನಾಗಿದ್ದರೂ…
ಮಡಿಕೇರಿ ಏ.9 NEWS DESK : ಮೈಸೂರು- ಕೊಡಗು ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭಗೊಂಡಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಕೊಡಗಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ಎ.ಜೀವಿಜಯ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಬೆಂಬಲ ಕೋರಿದರು. ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಮಾಲೋಚಿಸಿದರು. ಇದಕ್ಕೂ ಮೊದಲು ವಿವಿಧ ಮಠಾಧೀಶರನ್ನು ಭೇಟಿಯಾದ ಯದುವೀರ್ ಅವರು ಆಶೀರ್ವಾದ ಪಡೆದರು. ಬಿಜೆಪಿ ಮುಖಂಡರುಗಳಾದ ರಾಮದಾಸ್, ಅಶ್ವತ್ಥ್ ನಾರಾಯಣ ಗೌಡ, ಮಾಜಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.






