ಲೇಖಕ: admin

ಮಡಿಕೇರಿ ಏ.7 NEWS DESK : ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ತಡೆಯಲಾಗದ ಉಷ್ಣಾಂಶದಿಂದ ಜನ ತತ್ತರಿಸಿ ಹೋಗಿದ್ದು, ಇಂದು ಜಿಲ್ಲೆಯ ವಿವಿಧೆಡೆ ಸುರಿದ ಹೂಮಳೆ ಕೊಂಚ ನೆಮ್ಮದಿಯನ್ನು ತಂದಿದೆ. ಅತಿಹೆಚ್ಚು ವರ್ಷಧಾರೆಯಾಗುವ ಭಾಗಮಂಡಲದಲ್ಲಿ ವರ್ಷದ ಮೊದಲ ಮಳೆ ಇಂದು ಸುರಿಯಿತು. ಚೇರಂಬಾಣೆ, ನಾಪೋಕ್ಲು, ಎಮ್ಮೆಮಾಡು, ನೆಲಜಿ, ಕಾರುಗುಂದ, ಕಡಿಯತ್ತೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ::: ಪೂಜೆ ::: ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಉಷ್ಣಾಂಶ ಮಿತಿ ಮೀರುತ್ತಿರುವುದರಿಂದ ನದಿ ಮತ್ತು ಜಲಮೂಲಗಳು ಬತ್ತಿ ಹೋಗಿವೆ. ಗಿಡಮರಗಳು ಒಣಗಲು ಆರಂಭಗೊಂಡಿವೆ, ಕೃಷಿ ಫಸಲಿಗೆ ಹಾನಿಯಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದರಿಂದ ಕೊಡಗಿನ ಮಳೆ ದೇವರೆಂದೇ ನಂಬಿಕೊಂಡು ಬಂದಿರುವ ಪಾಡಿ ಶ್ರೀಇಗ್ಗುತ್ತಪ್ಪನಿಗೆ ಏ.8 ರಂದು ಸ್ಥಳೀಯ ಭಕ್ತಜನ ಸಂಘ ಹಾಗೂ ಭಕ್ತರು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಅಭಿಷೇಕ ಅರ್ಪಿಸಲಿದ್ದಾರೆ.

Read More

ಮಡಿಕೇರಿ ಏ.7 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಿಧಾನವಾಗಿ ಲೋಕಸಭಾ ಚುನಾವಣೆ ಕಾವೇರುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿರುವುದರಿಂದ ಎಂ.ಲಕ್ಷ್ಮಣ್ ಗೌಡ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಸ್ವತ: ಮುಖ್ಯಮಂತ್ರಿಗಳು ಏ.14 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಮತ್ತು ಸಂಜೆ 4 ಗಂಟೆಗೆ ವಿರಾಜಪೇಟೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳು ಹಾಗೂ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರುಗಳು ಹಾಜರಿರುವರು ಎಂದು ಕಾಂಗ್ರೆಸ್ ಪ್ರಮುಖರು ತಿಳಿಸಿದ್ದಾರೆ.

Read More

ಮಡಿಕೇರಿ ಏ.7 NEWS DESK : ಲೋಕಸಭಾ ಚುನಾವಣೆಯ ಮತದಾನವು ಇದೇ ಏ.26ರಂದು ನಡೆಯಲಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ಲಕ್ಷ್ಮಣ ಗೌಡ ಅವರ ಗೆಲುವಿಗೆ ಪ್ರತಿ ಮತಗಟ್ಟೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಬಿಎಲ್‌ಎ ಗಳು, ಡೆಲಿಗೇಟರ್‌ಗಳು, ವಲಯ ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರುಗಳು ಶಕ್ತಿಮೀರಿ ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕರೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಮತಗಟ್ಟೆ ಸಮಿತಿ ಅಧ್ಯಕ್ಷರುಗಳ, ಬಿಎಲ್‌ಎ ಗಳ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮಡಿಕೇರಿ ಬ್ಲಾಕಿನಲ್ಲಿ 72 ಮತಗಟ್ಟೆಗಳಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗಳಿಸಿದ ಮತಕ್ಕಿಂತ ಹೆಚ್ಚಿನ ಮತವನ್ನು ಪಡೆಯುವಲ್ಲಿ ಕಾರ್ಯಕರ್ತರು ಮುಂದಾಗಬೇಕು ಹಾಗೂ ಸರ್ಕಾರ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತಯಾಚಿಸಬೇಕೆಂದರು.…

Read More

ಮಡಿಕೇರಿ ಏ.7 NEWS DESK : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಭೀತಿಯನ್ನು ಎದುರಿಸುತ್ತಿದೆ. ಇದರಿಂದ ಹತಾಶೆಗೊಂಡಿರುವ ವಿರಾಜಪೇಟೆ ಕ್ಷೇತ್ರದ ಶಾಸಕರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಜನರ ಕೈಗೆ ಸಿಗುವುದಿಲ್ಲವೆಂದು ಹೇಳಿಕೆ ನೀಡುವ ಮೂಲಕ ಮತದಾರರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದಲ್ಲಿ ರಾಜಪ್ರಭುತ್ವ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯದುವೀರ್ ಅವರು ಒಬ್ಬ ಸಾಮಾನ್ಯ ವ್ಯಕ್ತಿ ಮತ್ತು ಈಗ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಒಡೆಯರ್ ವಂಶಸ್ಥರಾಗಿ ಹಾಗೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಸಂಕಷ್ಟದ ಬದುಕನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ ಎಂದು ತಿಳಿಸಿದ್ದಾರೆ. ರಾಜವಂಶಸ್ಥರು ಅರಮನೆಯಲ್ಲಿದ್ದುಕೊಂಡೇ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿದೆ. ರಾಜ್ಯದ ರೈತರು ಹಾಗೂ ಜನರಿಗಾಗಿ ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಜನರು ಇಂದಿಗೂ ಇದೆಲ್ಲವನ್ನು ಮರೆತಿಲ್ಲ,…

Read More

ಮಡಿಕೇರಿ ಏ.7 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಏ.8ರಂದು ಸೋಮವಾರಪೇಟೆ ಮಂಡಲದ ವಿವಿಧ ಭಾಗಗಳಲ್ಲಿ ಬಹಿರಂಗ ಪ್ರಚಾರ ಸಭೆ ನಡೆಯಲಿದೆ ಎಂದು ಬಿಜೆಪಿ ಸೋಮವಾರಪೇಟೆ ಮಂಡಲದ ಅಧ್ಯಕ್ಷ ಗೌತಮ್ ಗೌಡ ಹಾಗೂ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಾದಾಪುರ, 10 ಗಂಟೆಗೆ ಸುಂಟಿಕೊಪ್ಪ, 11.30 ಗಂಟೆಗೆ ಸೋಮವಾರಪೇಟೆ, ಮಧ್ಯಾಹ್ನ 2 ಗಂಟೆಗೆ ಶನಿವಾರಸಂತೆ, 3 ಗಂಟೆಗೆ ಕೊಡ್ಲಿಪೇಟೆ, ಸಂಜೆ 4 ಗಂಟೆಗೆ ಆಲೂರು ಸಿದ್ದಾಪುರ, 5 ಗಂಟೆಗೆ ಹೆಬ್ಬಾಲೆ, 6 ಗಂಟೆಗೆ ಕುಶಾಲನಗರ ಹಾಗೂ 7 ಗಂಟೆಗೆ ನೆಲ್ಯಹುದುಕೇರಿಯಲ್ಲಿ ಬಹಿರಂಗ ಪ್ರಚಾರ ಸಭೆ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅಭ್ಯರ್ಥಿ ಯದುವೀರ್ ಒಡೆಯರ್, ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ ಗೌಡ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ,…

Read More

ಮಡಿಕೇರಿ ಏ.7 NEWS DESK : ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದಶ೯ಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ ಆದಶ೯ಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾವ೯ತಿ ಪೂವಯ್ಯ ಅವರಿಗೆ ಸಲ್ಲಬೇಕೆಂದು ಹಿರಿಯ ಪತ್ರಕತ೯ ಕೆ.ಬಿ.ಗಣಪತಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿತ ಕೂತಂಡ ಪಾವ೯ತಿ ಪೂವಯ್ಯ ಅವರ ಕುರಿತಾದ ಅವ್ವ ಪುಸ್ತಕ ಲೋಕಾಪ೯ಣೆಗೊಳಿಸಿ ಮಾತನಾಡಿದ ಕೆ.ಬಿ.ಗಣಪತಿ, ಪಂದ್ಯಂಡ ಗಣಪತಿಯವರು ಅಂದಿನ ಕಾಲದಲ್ಲಿ ಕೊಡಗಿನ ಗಾಂಧಿ ಎಂದು ಖ್ಯಾತರಾಗಿದ್ದರೆ ಕೂತಂಡ ಪೂವ೯ತಿ ಪೂವಯ್ಯ ಅವರು ಕೊಡಗಿನ ಸರೋಜಿನಿ ನಾಯ್ದು ಎಂದು ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿಕೊಂಡರು.  ಕೂತಂಡ ಪಾವ೯ತಿ ಅವರನ್ನು ಪ್ರತ್ಯಕ್ಷ ಕಂಡವುರು ಕೆಲವೇ ಕೆಲವರಾದರೂ ಪಾವ೯ತಿ  ಅವರ ಜೀವನಾದಶ೯ಗಳನ್ನು ಅರಿತವರು ಅನೇಕರಿದ್ದಾರೆ.  ತನ್ನ ಬರವಣಿಗೆ ಮೂಲಕ ಕೊಡವರಂಥ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀತಿ೯ ಅಂದಿನ ಕಾಲದ  ಅಗ್ರ ಮಹಿಳಾ ಲೇಖಕಿಯಾಗಿದ್ದ  ಪಾವ೯ತಿ ಪೂವಯ್ಯನವರಿಗೆ ಸಲ್ಲುತ್ತದೆ ಎಂದು ಗಣಪತಿ ಶ್ಲಾಘಿಸಿದರು. ಕೊಡವ, ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ…

Read More

NEWS DESK : ಶೋಭಕೃತ್ ನಾಮಸಂವತ್ಸರದ ಪಾಲ್ಗುಣ ಮಾಸದ ಕೊನೆಯ ಅಮಾವಾಸ್ಯೆಯಂದು ಅತ್ಯಂತ ಕಠೋರವಾದ ಸೂರ್ಯನ ಮೈತುಂಬಾ ಕತ್ತಲೆ ವ್ಯಾಪಿಸುವ ವರ್ಷದ ಮೊದಲ ಸೂರ್ಯಗ್ರಹಣ 2024 ಏಪ್ರಿಲ್ 8 ರಂದು ಸೋಮವಾರ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಉತ್ತರ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಗ್ರಹಣ ಸಂಭವಿಸುವ ಸಮಯ ಭಾರತದ ಕಾಲಮಾನದಲ್ಲಿ ಸೋಮವಾರ ರಾತ್ರಿ 9:13 ಗಂಟೆಯಿಂದ ರಿಂದ 2.22 ವರೆಗೆ. ಭಾರತ ದೇಶದಲ್ಲಿ ಗ್ರಹಣ ಗೋಚರಿಸದೆ ಇದ್ದರೂ ಕೆಲವು ರಾಶಿ, ನಕ್ಷತ್ರಗಳ ಮೇಲೆ ಗ್ರಹಣ ಪರಿಣಾಮ ಬೀರಲಿದೆ. ಗ್ರಹಣದ ದಿನ ರೇವತಿ ನಕ್ಷತ್ರವಿದ್ದು, ರೇವತಿ ನಕ್ಷತ್ರ ಮೀನ ರಾಶಿಯವರಿಗೆ ಶನಿಬಾಧಕವು ಹೆಚ್ಚಾಗಲಿದೆ. ಬಂಧು ಕಲಹ, ಪ್ರಯಾಣದಲ್ಲಿ ಅಡೆತಡೆ, ವ್ಯವಹಾರದಲ್ಲಿ ನಷ್ಟ, ಮಾನಸಿಕ ವೇದನೆ ಆಗಲಿದೆ. ವೃಶ್ಚಿಕ ಲಗ್ನದಲ್ಲಿ ಗ್ರಹಣ ಸ್ಪರ್ಶವಾಗುವುದರಿಂದ ವೃಶ್ಚಿಕ ರಾಶಿಯವರಿಗೆ ವಿವಿಧ ಕ್ಷೇತ್ರದಲ್ಲಿ ಹಿನ್ನಡೆಯಾಗಲಿದೆ. ಮಾನಸಿಕ ವೇದನೆ ಎದುರಾಗಲಿದೆ, ಮನಸ್ತಾಪದಿಂದ ಆತ್ಮೀಯರು ದೂರವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಾಲಗಾರರ ಒತ್ತಡ ಹೆಚ್ಚಲಿದೆ. ಈ…

Read More

ಮಡಿಕೇರಿ ಏ.6 NEWS DESK : ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯಾತೀತ ಜನತಾ ದಳ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗಿನಲ್ಲಿ ಕೂಡ ಎರಡು ಪಕ್ಷದ ಮೈತ್ರಿ ಸಭೆ ಮಡಿಕೇರಿ ಯಲ್ಲಿ ನಡೆಯಿತು. ಸಭೆ ಯಲ್ಲಿ ಮುಂದಿನ ಲೋಕ ಸಭಾ ಚುನಾವಣೆ ಯನ್ನು ಜಂಟಿ ಯಾಗಿ ಎದುರುಸುವ ತೀರ್ಮಾನ ವನ್ನು ಮಾಡಲಾಯಿತು. ಈ ನಿಟ್ಟಿನಲ್ಲಿ ಕಾರ್ಯ ತಂತ್ರ ರೂಪಿಸುವಂತೆ ಚರ್ಚೆ ನಡೆಯಿತು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಾತ್ಯಾತೀತ ಜನತಾ ದಳದ ಕೋರ್ ಕಮಿಟಿ ಸದಸ್ಯರಾದ ಟಿ.ಎಲ್.ವಿಶ್ವ,  ಪ್ರವೀಣ್,  ಬಿಜೆಪಿ ಜಿಲ್ಲಾ ಪ್ರಧಾನ  ಕಾರ್ಯದರ್ಶಿಮಹೇಶ್ ಜೈನಿ, ವಿ.ಕೆ.ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಎರಡು ಪಕ್ಷದ ಪ್ರಮುಖರಾದ ಪಾಣ್ ತಲೆ ವಿಶ್ವ ನಾಥ್, ನಾಗರಾಜ್, ಅನಿತಾ ಪೂವಯ್ಯ, ಕನ್ನಿಕೆ, ಮನು ಮಂಜುನಾಥ್, ಪುಷ್ಪವತಿ, ಗೌತಮ್ , ಕವನ್ ಕಾವೇರಪ್ಪ, ಮಂಜುನಾಥ್, ಶಿವದಾಸ್, ಜಾಶಿರ್, ಸುರೇಶ್, ರವಿ ಮೊಗೇರ ಸೇರಿದಂತೆ ಎರಡು…

Read More

ಮಡಿಕೇರಿ ಏ.6 NEWS DESK : ವಿಶ್ವ ಆರೋಗ್ಯ ದಿನದ ಪ್ರಯುಕ್ತ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ನಗರದ ರಾಜಸೀಟ್ ಮುಂಭಾಗದಲ್ಲಿ ಬೀದಿ ನಾಟಕ ನಡೆಯಿತು. ಈ ಬೀದಿನಾಟಕದಲ್ಲಿ ಕಡ್ಡಿಪುಡಿ ಹಾಕಿ ಗಂಟಲಿನ ಕ್ಯಾನ್ಸರ್, ಮದ್ಯಪಾನ ಮತ್ತು ಧೂಮಪಾನದಿಂದ ಹೃದಯಾಘಾತ ಹಾಗೂ ಧೂಮಪಾನದ ಹೊಗೆಯ ಪ್ರಭಾವದಲ್ಲಿರುವ, ಚಟ ಇಲ್ಲದವರಿಗೂ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ವಿಶಾಲ್ ಕುಮಾರ್, ಪ್ರಾಂಶುಪಾಲರಾದ ಡಾ.ನರಸಿಂಹ ರೈ, ವೈದ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ, ಮುಖ್ಯ ಆಡಳಿತಾಧಿಕಾರಿ ರೋಹಿಣಿ ಈ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಬೀದಿ ನಾಟಕವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲನೆಯ ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು, ಕಿವಿ, ಮೂಗು ಗಂಟಲಿನ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತ ಅವರು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೊಡಗು ವೈದ್ಯಕೀಯ…

Read More

ಮಡಿಕೇರಿ ಏ.6 NEWS DESK : ಲೋಕಸಭಾ ಚುನಾವಣೆಯ ಮತದಾನವು ಇದೇ ಏ.26ರಂದು ನಡೆಯಲಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ಲಕ್ಷ್ಮಣ ಗೌಡ ಅವರ ಗೆಲುವಿಗೆ ಪ್ರತಿ ಮತಗಟ್ಟೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಬಿಎಲ್‍ಎ ಗಳು, ಡೆಲಿಗೇಟರ್‍ಗಳು, ವಲಯ ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರುಗಳು ಶಕ್ತಿ ಮೀರಿ ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕರೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಮತಗಟ್ಟೆ ಸಮಿತಿ ಅಧ್ಯಕ್ಷರುಗಳ, ಬಿಎಲ್‍ಎ ಗಳ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಡಿಕೇರಿ ಬ್ಲಾಕಿನಲ್ಲಿ 72 ಮತಗಟ್ಟೆಗಳಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗಳಿಸಿದ ಮತಕ್ಕಿಂತ ಹೆಚ್ಚಿನ ಮತವನ್ನು ಪಡೆಯುವಲ್ಲಿ ಕಾರ್ಯಕರ್ತರು ಮುಂದಾಗಬೇಕು ಹಾಗೂ ಸರ್ಕಾರ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್…

Read More