ಲೇಖಕ: admin

ಮಡಿಕೇರಿ ಏ.8 NEWS DESK :  ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ “ಬಾಲಗೋಕುಲ” ಮಡಿಕೇರಿ ವತಿಯಿಂದ ಮಕ್ಕಳಿಗಾಗಿ “ವಸಂತ ಶಿಬಿರ”  ಉಚಿತ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಹಲವಾರು ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ಮಹಾಪುರುಷರ ಕಥೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರೊಂದಿಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು. ಶಿಬಿರದಲ್ಲಿ ಐದರಿಂದ ಹದಿನೈದನೆಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್‌ ಡಾಲಿ, “ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ…

Read More

NEWS DESK : 8.04.2024 ಸೋಮವಾರದಂದು ಕಳೆದ ವರ್ಷದ ಶೋಭಕೃತ್ ಸಂವತ್ಸರಕ್ಕೆ ವಿದಾಯ ಹೇಳಿ ಹಿಂದು ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ವಸಂತ ಋತುವಿನ ಪ್ರಥಮ ದಿನವನ್ನು (ಪಾಡ್ಯ) ಯುಗಾದಿ ಹೊಸ ವರ್ಷವೆಂದು ಹೇಳಲಾಗುತ್ತದೆ. ಹೊಸ ಸಂವತ್ಸರ ಆರಂಭ ಎಂದು ಕರೆಯಲ್ಪಡುತ್ತದೆ. ದಿನಾಂಕ 09.04.2024 ಮಂಗಳವಾರದಂದು ಕ್ರೋಧಿನಾಮ ಸಂವತ್ಸರ ಆರಂಭವಾಗಲಿದೆ. ಈ ಕ್ರೋಧಿ ಸಂವತ್ಸರದಲ್ಲಿ ಪ್ರಾಕೃತಿಕ, ಸಾಮಾಜಿಕ, ವೈಯಕ್ತಿಕ, ದೈನಂದಿನ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುವುದನ್ನು ಸಂಕ್ಷಿಪ್ತ ನೋಟದಲ್ಲಿ ತಿಳಿಯೋಣ. ಈ ಸಂವತ್ಸರದಲ್ಲಿ ಎರಡು ಚಂದ್ರಗ್ರಹಣ ಮತ್ತು ಎರಡು ಸೂರ್ಯಗ್ರಹಣ ಘಟಿಸಲಿದ್ದು, ಈ ನಾಲ್ಕು ಗ್ರಹಣಗಳು ಭಾರತದಲ್ಲಿ ಗೋಚರಿಸದೆ ಇರುವುದು ವಿಶೇಷವಾಗಿದೆ. ಈ ಸಂವತ್ಸರದಲ್ಲಿ ಕುಜ ರಾಜನ ಸ್ಥಾನದಲ್ಲಿದ್ದರೆ, ಶನಿ ಮಂತ್ರಿಯ ಸ್ಥಾನದಲ್ಲಿದ್ದಾರೆ. ಕುಜನ ಅವಕೃಪೆಯಿಂದ ದೊಡ್ಡ ದೊಡ್ಡ ರಾಜಕಾರಣಿಗಳ ಸಾವು, ನೋವು ನಡೆಯಲಿದೆ. ಅತಿ ವ್ಯಸನದಿಂದ ಮಾನಹಾನಿಯಾಗಲಿದೆ, ಅಧಿಕಾರ ಕಳೆದುಕೊಳ್ಳಲಿದ್ದಾರೆ, ಅಲ್ಲಲ್ಲಿ ಅಸ್ಥಿರ ರಾಜಕಾರಣ ನಡೆಯಲಿದೆ. ಶನಿಯು ಮಂತ್ರಿ ಸ್ಥಾನದಲ್ಲಿರುವುದರಿಂದ ನೌಕರ ವರ್ಗದವರಿಗೆ ತುಂಬಾ ಆಪತ್ತು ಬರಲಿದೆ.…

Read More

ಮಡಿಕೇರಿ ಏ.8 NEWS DESK : ಸೋಮವಾರಪೇಟೆ ಸಮೀಪದ ಕೊತ್ನಳಿಯ ಉದ್ಯಮಿ ಹಾಗೂ ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ತಮ್ಮ ಹುಟ್ಟುಹಬ್ಬವನ್ನ ಅನಾಥಾಶ್ರಮದ ಹಿರಿಜೀವಗಳೊಂದಿಗೆ ಆಚರಿಸಿಕೊಂಡರು. ಮಡಿಕೇರಿಯ ವಿಕಾಸ್ ಜನ ಸೇವಾ ಟ್ರಸ್ಟ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು. ನಂತರ ಆಶ್ರಮದ ಹಿರಿಯರಿಗೆ ಬಟ್ಟೆ ಹಾಗೂ ಮಧ್ಯಾಹ್ನದ ಊಟವನನ್ನ ನೀಡಿ ಅವರೊಂದಿಗೆ ಊಟ ಮಾಡುವ ಮೂಲಕ ಸರಳತೆಯನ್ನ ಮೆರೆದರು. ಇದೇ ಸಂದರ್ಭ ಕೊಡಗು ರಕ್ಷಣಾ ವೇದಿಕೆಯ ಸದಸ್ಯರು ಅರಣ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅರಣ್, ಸೋಮವಾರಪೇಟೆಯ ಅಭಿವೃದ್ಧಿಗಾಗಿ ಸೋಮವಾರಪೇಟೆ ಅಭಿವೃದ್ಧಿ ಹೋರಾಟ ಸಮಿತಿಯನ್ನ ಕಟ್ಟಿಕೊಂಡು ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರುತ್ತಿದ್ದೇವೆ. ಈ ಭಾರಿ ಹಿರಿಯ ಜೀವಗಳೊಂದಿದೆ ಹುಟುಹಬ್ಬ ಆಚರಿಸಕೊಂಡಿರುವುದಾಗಿ ತಿಳಿಸಿದರು.

Read More

ಸುಂಟಿಕೊಪ್ಪ ಏ.8 NEWS DESK : ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವ ಮತ್ತು ಮಂತ್ರವಾದಿ ಗುಳಿನಗ 84ನೇ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಆಯುಧಾ ಪೂಜೆ, ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು. ನಂತರ ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು. ಮರುದಿನ ದೇವಾಲಯದ ಮತ್ತು ಭಕ್ತರ ಸೇರಿದಂತೆ ಮೂರು ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಣಿಕ ದೈವಗಳಿಗೆ ಹರಕೆ ಮತ್ತು ಕಾಣಿಕೆ ಅರ್ಪಿಸಿದರು. ಎರೆದಿದ್ದ ಭಕ್ತಾಧಿಗಳಿಗೆ ಗಂಧ ಪ್ರಸಾದ ಹಾಗೂ ಅನ್ನದಾನ ನೆರವೇರಿತು. ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು ಸೂಳ್ಯ, ಪುತ್ತೂರು, ಸಕಲೇಶಪುರ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ನೇಮೋತ್ಸವ ವೀಕ್ಷಿಸಿದರು.

Read More

ನಾಪೋಕ್ಲು ಏ.8 NEWS DESK  : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಏ.9 ರಂದು ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ ಶಿಬಿರ ಪ್ರಾರಂಭ ಗೊಳ್ಳಲಿದೆ. ಗ್ರಾಮೀಣ ಭಾಗದ ಮಕ್ಕ ಳ ಶ್ರೇಯೋಭಿವೃದ್ಧಿಗೆಂದು ಸ್ಥಾಪಿಸಲಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿಯ 24 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಕ್ರೀಡಾ ತರಬೇತಿ ಶಿಬಿರವನ್ನು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸುತ್ತಿದೆ. ಶಿಬಿರವು ಪ್ರತಿ ದಿನ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಒಂದು ತಿಂಗಳ ಕಾಲ ಜರುಗಲಿದ್ದು, ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಲು, ಮೊಟ್ಟೆ ನೀಡಲಾಗುತ್ತಿದೆ ಎಂದು ಅಕಾಡೆಮಿ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಮತ್ತು ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ನ0.9632835001 ಸಂಪರ್ಕಿಸಲು ಕೋರಿದೆ. ವರದಿ : ದುಗ್ಗಳ ಸದಾನಂದ 

Read More

ಸುಂಟಿಕೊಪ್ಪ ಏ.8 : ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಾಲಯದ ವಾರ್ಷಿಕ ಮಹಾಪೂಜೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವರ ಉತ್ಸವದ ಅಂಗವಾಗಿ ಗಣಪತಿ ಹೋಮ, ಗಣಪತಿ ಮತ್ತು ಸುಬ್ರಮಣ್ಯ ಸ್ವಾಮಿಯ ಪೂಜೆ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ಚಾಮುಂಡೇಶ್ವರಿ ದೇವಿಗೆ ಪೂಜೆ, ಗುಳಿಗನ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ, ನೈವೇದ್ಯ ಪೂಜೆ ಹಾಗೂ ದೇವಿ ದರ್ಶನ ನಡೆಯಿತಯ. ತಲಪುರಿ ಸ್ನಾನದ ನಂತರ ಮೆರವಣಿಗೆ ನಡೆಯಿತು. ಮಕ್ಕಳು ಹಣತೆ ಹಿಡಿದು ಸಾಗಿದರು. ವಸೂರಿ ಮಾಲೆ ದೇವರ ಬೆಳ್ಳಾಟಂ ನಂತರ ದೇವಿ ದರ್ಶನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಮರುದಿನ ದೇವಿಯ ದರ್ಶನ, ದೇವಿಗೆ ಹರಕೆಯ ಅರ್ಪಣೆ ಮಾಡಲಾಯಿತು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ಸುಂಟಿಕೊಪ್ಪ, ಶ್ರೀದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು ಸೇರಿದಂತೆ ಕೇರಳ ರಾಜ್ಯದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಶಾಂತ ರಾಮಕೃಷ್ಣ, ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.

Read More

ಮಡಿಕೇರಿ ಏ.7 NEWS DESK : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಪೇಕ್ಷೆ ಮತ್ತು ಆಶೀರ್ವಾದದಿಂದ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿರುವೆ. ಕಾವೇರಿ ಉದ್ಭವಿಸುವ ಸ್ಥಳದಲ್ಲಿ ಸೇವೆಗೆ ಅವಕಾಶ ಸಿಕ್ಕಿರುವುದೇ ಸೌಭಾಗ್ಯ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ತಿಳಿಸಿದ್ದಾರೆ. ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಇಂದು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾವೇರಿಯ ಉಗಮ ಸ್ಥಾನ ಮತ್ತು ವೀರ ಪರಂಪರೆಯ ನಾಡಿನಲ್ಲಿ ಸೇವೆಗೆ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದರು. ಪ್ರಧಾನಮಂತ್ರಿಗಳ ಆಶೀರ್ವಾದದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರಕಿದೆ. ನಿಮ್ಮೆಲ್ಲರ ಸೇವೆಯನ್ನು ಪ್ರಾಮಾಣಿಕವಾಗಿ, ಮಾಡಲು ನಾನು ಬದ್ಧ ಎಂದು ಭರವಸೆ ನೀಡಿದರು. ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಮೋದಿಯವರು ಹಲವು ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ವಿಶ್ವದಲ್ಲೇ ಭಾರತವನ್ನು ಗುರುತಿಸುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಇದುವರೆಗೂ ಆಗದ ಹಲವು ಜನಪರ ಕಾರ್ಯಕ್ರಮಗಳು ಮೋದಿಯವರ ಅವಧಿಯಲ್ಲಿ ಶೀಘ್ರಗತಿಯಲ್ಲಿ ಆಗಿದೆ. ದೇಶದ ಉನ್ನತಿಗಾಗಿ, ದೇಶದ ಉಳಿವಿಗಾಗಿ, ಸಾಮಾಜಿಕ…

Read More

ಮಡಿಕೇರಿ ಏ.7 NEWS DESK : ಬಿಜೆಪಿ ಯುವಮೋರ್ಚಾ ಮಡಿಕೇರಿ ಗ್ರಾಮಾಂತರ ಮಂಡಲದ ಮೊದಲ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿಮಂಡಲ ಯುವಮೋರ್ಚಾ ಅಧ್ಯಕ್ಷ ಚೇತನ್ ಬಂಗೇರ  ಅವರ ಅಧ್ಯಕ್ಷತೆಯಲ್ಲಿ  ನಡೆಯಿತು. ಯುವಮೋರ್ಚಾದ ನೂತನ ಪದಾಧಿಕಾರಿಗಳಿಗೆ ಅದೇಶಪತ್ರವನ್ನು ವಿತರಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಯಾವ ರೀತಿಯಾಗಿ ತೊಡಗಿಸಿಕೊಳ್ಳ ಬೇಕು  ಮತ್ತು  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಮೋರ್ಚಾದ ಸದಸ್ಯರ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಎಲ್ಲಾ ಶಕ್ತಿಕೇಂದ್ರ ಅಥವಾ ಬೂತ್ ಮಟ್ಟದಲ್ಲಿ ಯುವಮೋರ್ಚಾದ ತಂಡಗಳ ರಚನೆಗೆ ಸೂಚಿಸಲಾಯಿತು. ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ್ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಯುವಮೋರ್ಚಾದ ಮಡಿಕೇರಿ  ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಮಜೀಕೊಡಿ ಸ್ವಾಗತಿಸಿದರು, ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ದರ್ಶನ್ ದಂಬೆಕೋಡಿ ವಂದಿಸಿದರು.

Read More

ಮಡಿಕೇರಿ ಏ.7 NEWS DESK : ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ.4ರಂದು ವ್ಯಕ್ತಿಯೋರ್ವರನ್ನು ಅಪಹರಿಸಿ ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ. ಮೈಸೂರು ರಾಜೀವ್ ನಗರ 2ನೇ ಹಂತದ ನಿವಾಸಿ ಯಾಸಿನ್(21), ಶ್ರೀರಾಮ್‌ಪುರ ನಿವಾಸಿ ರುಕ್ಸಾನ(23), ಗೌಸಿಯ ನಗರ ರಿಯಾಜ್ ಜಿನ್ನಾ ಮಸೀದಿ ಸಮೀಪದ ನಿವಾಸಿ ಸಹಬಾಜ್(28), ಗೌಸಿಯ ನಗರ 10ನೇ ಕ್ರಾಸ್ ನಿವಾಸಿ ಅಬ್ದುಲ್(21) ರೇಣುಕಾ ದೇವಿ ಬ್ಲಾಕ್, 3ನೇ ಕ್ರಾಸ್, ಗೌಸಿಯ ನಗರದ ಸುಹೇಲ್ ಅಹಮ್ಮದ್(30), ಪಿರಿಯಾಪಟ್ಟಣ ನಿವಾಸಿ ಯಾಸಿನ್(23), ಗೌಸಿಯಾ ನಗರದ ಪೈಜಲ್ ಖಾನ್(23), ಮೈಸೂರು ರಾಜೀವ್ ನಗರ 3ನೇ ಹಂತದ ಮುದಾಸಿರ್(24) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಗೌಸಿಯಾ ನಗರದ ಪಿಳ್ಳೆ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ::: ಅಪಹರಣ ಮತ್ತು ದರೋಡೆ :::…

Read More

ಮಡಿಕೇರಿ ಏ.7 NEWS DESK : ಕಾಂಗ್ರೆಸ್ ಎಲ್ಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಿಲ್ಲ, ಜನಸಾಮಾನ್ಯರ ಪರವಾದ ಕಾರ್ಯಕ್ರಮಗಳ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಿದಿದೆ. ಈ ಬಗ್ಗೆ ಜನ ಜಾಗೃತರಾಗಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರ ನಿವಾಸದ ಆವರಣದಲ್ಲಿ ನಡೆದ ವಲಯ, ಬೂತ್ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಭಿವೃದ್ಧಿಪರ ಚಿಂತನೆಯ ರಾಜಕಾರಣ ಮಾಡಿದರೆ, ಬಿಜೆಪಿ ಧರ್ಮವನ್ನು ಆಧರಿಸಿ ರಾಜಕಾರಣ ಮಾಡಿ ಸಮಜದಲ್ಲಿ ಸಂಘರ್ಷವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತದೆ ಎಂದು ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಮತದಾರರು ನಮ್ಮ ಕೈಹಿಡಿಯಲಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಮೈಮರೆಯಬಾರದು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಗೆಲುವಿಗಾಗಿ ಪರಿಶ್ರಮ ಪಡಬೇಕು.…

Read More