ಲೇಖಕ: admin

ಮಡಿಕೇರಿ ಏ.5  NEWS DESK : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಸಂಪಾಜೆ ಫೀಡರ್‍ನ ವಿದ್ಯುತ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಬೇಕಿರುವುದರಿಂದ ಏ.6 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಾಟಕೇರಿ, ಮದೆನಾಡು, ಜೋಡುಪಾಲ, ದೇವರಕೊಲ್ಲಿ, ಕೊಯನಾಡು, ಸಂಪಾಜೆ, ಚೆಂಬು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ವಿರಾಜಪೇಟೆ ಏ.5  NEWS DESK : ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ (ನಿ) ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ನಿರ್ಮಲ ಕಾಮತ್ ಮಾತನಾಡಿ, ಮಹಿಳೆ ಮನೆಯಿಂದಲೇ ದೇಶಭಕ್ತಿ, ದೈವಭಕ್ತಿ ಗಳಿಸುತ್ತಾಳೆ. ಅಲ್ಲದೇ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ ಆದರೆ ಮನ್ನಣೆ ಸಿಗುವುದು ಮಾತ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವರಿಗೆ. ದೇಶದ ಯಶಸ್ಸಿನ ಹಿಂದೆ ಎಷ್ಟೋ ಕೋಟಿ ಮಹಿಳೆಯರ ಶ್ರಮವಿದೆ. ಅಂತಹ ಪರಿಶ್ರಮಕ್ಕೆ ಬೆಲೆ ನೀಡಬೇಕು ಎಂದರು. ನಿವೃತ್ತ ಶಿಕ್ಷಕಿ ಮುಕ್ತ ಬಾಯಿ ಮಾತನಾಡಿ, ಸ್ತ್ರೀ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಅನ್ನುವದು ಈಗಾಗಲೇ ಸಾಬೀತಾಗಿದೆ, ಆದರೂ ಪುರುಷ ಪ್ರದಾನ ಸಮಾಜದಲ್ಲಿ ಎಷ್ಟೋ ಪ್ರತಿಭಾನ್ವಿತ ಮಹಿಳೆಯರು ಮೂಲೆಗುಂಪಾಗುತ್ತಿದ್ದಾರೆ. ಇಂತಹ ಸಮಾಜದ ಮುಂದೆ ಸಾಧಕ ಮಹಿಳೆಯರನ್ನು ಗುರುತಿಸಿ ಆತ್ಮ ಸ್ಥೈರ್ಯವನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಈಗಿನ ಮಹಿಳೆಯರಿಗೆ ಪುರುಷರಿಂದ ಪ್ರೋತ್ಸಾಹ ಇರುವುದರಿಂದ ಮನೆ ಒಳಗೆ ಹೊರಗೆ ಕೆಲಸ ಮಾಡಲು ಉತ್ಸಾಹವಿದೆ…

Read More

ಪಣಂಬೂರು ಕಡಲತೀರವು ಭಾರತದ ಕರ್ನಾಟಕ ರಾಜ್ಯದ ಮಂಗಳೂರು ನಗರದಲ್ಲಿದೆ. ಈ ಕಡಲತೀರವು ಅರಬ್ಬೀ ಸಮುದ್ರದ ತೀರದಲ್ಲಿದೆ. ಇದು ಭಾರತದ ಸುರಕ್ಷಿತವಾದ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಕಡಲತೀರಗಳಲ್ಲಿ ಒಂದಾಗಿದೆ. ಇದು ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ, ಉತ್ತಮವಾಗಿ ಸಂಪರ್ಕ ಹೊಂದಿದ ಮತ್ತು ಹೆಚ್ಚು ಭೇಟಿ ನೀಡಿದ ಕಡಲ ತೀರಗಳಲ್ಲಿ ಒಂದಾಗಿದೆ. ಈ ಬೀಚ್ ನಗರದಿಂದ 10 ಕಿ.ಮೀ ಉತ್ತರಕ್ಕೆ ಪಣಂಬೂರು ಎಂಬ ಸ್ಥಳದಲ್ಲಿದೆ.ಇದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತದಲ್ಲಿದೆ. ಸದ್ಯಕ್ಕೆ ಇದು ಖಾಸಗಿ ಉದ್ಯಮಿಗಳಿಂದ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ವಹಿಸಲಾಗುತ್ತಿದೆ.ಇತರ ಆಕರ್ಷಣೆಗಳಲ್ಲಿ ಜೆಟ್ ಸ್ಕೈ ಸವಾರಿಗಳು, ಬೋಟಿಂಗ್, ಡಾಲ್ಫಿನ್ ವೀಕ್ಷಣೆ, ಆಹಾರ ಮಳಿಗೆಗಳು ಸೇರಿವೆ ಮತ್ತು ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಡಲತೀರದಲ್ಲಿ ಗಸ್ತು ತಿರುಗುವ ಹೆಚ್ಚು ನುರಿತ ಮತ್ತು ತರಬೇತಿ ಪಡೆದ ಜೀವರಕ್ಷಕರಿಗೆ ಹೆಸರುವಾಸಿಯಾಗಿದೆ. ಈ ಬೀಚ್ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಪಿಕ್ನಿಕ್ ತಾಣವಾಗಿದೆ ಮತ್ತು ಸೂರ್ಯಾಸ್ತದ ವೀಕ್ಷಣೆಗಳನ್ನು ನೀಡುತ್ತದೆ. ನಗರಕ್ಕೆ ಹತ್ತಿರದಲ್ಲಿರುವುದರಿಂದ ಬೀಚ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಂದರಿನಲ್ಲಿ ಬೆರ್ತ್‌ಗಾಗಿ…

Read More

ಮಡಿಕೇರಿ ಏ.5 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಆರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬ್ಲಾಕ್ ಕಾಂಗ್ರೆಸ್ ಮಟ್ಟದ ಅಧ್ಯಕ್ಷರುಗಳು, ಬಿಎಲ್‍ಎ ಗಳು, ವಲಯ ಅಧ್ಯಕ್ಷರುಗಳು ಹಾಗೂ ಬೂತ್ ಪ್ರಮುಖರ ಸಭೆ ಏ.6 ರಿಂದ 9ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಸಭೆಗಳ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಏ.6 ರಂದು ಅಪರಾಹ್ನ 2.30 ಗಂಟೆಗೆ ಮಡಿಕೇರಿ ನಗರ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಏ.7 ರಂದು ಬೆಳಿಗ್ಗೆ 10.30 ಗಂಟೆಗೆ ಗೋಣಿಕೊಪ್ಪಲು ಕಿತ್ತಳೆ ಸಹಕಾರ ಸಂಘದ ಸಭಾಂಗಣದಲ್ಲಿ ಪೆÇನ್ನಂಪೇಟೆ ಬ್ಲಾಕ್ ಸಭೆ, ಅಪರಾಹ್ನ 2.30 ಗಂಟೆಗೆ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಭೆ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿವಾಸದ ಬಳಿ…

Read More

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು 1500 ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 66 (ರಾ.ಹೆ. 17)ರಿಂದ 7 ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ವಿನಾಯಕ ಮೂರ್ತಿ ::  ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ “ಮಹೋತಭಾರ ಶ್ರೀ ವಿನಾಯಕ” ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು 88 ಸೆ.ಮೀ ಎತ್ತರ ಮತ್ತು 59 ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ…

Read More

ಬೇಕಾಗುವ ಪದಾರ್ಥಗಳು :  ಮಶ್ರೂಮ್ –ಎರಡು ಪ್ಯಾಕೆಟ್,  ಬಟಾಣಿ- ಒಂದು ಬಟ್ಟಲು, ಈರುಳ್ಳಿ –2,  ಟೊಮೆಟೊ– 4,  ದನಿಯಾ ಪುಡಿ– ಎರಡು ಚಮಚ,  ಗರಂ ಮಸಾಲ –ಒಂದು ಚಮಚ,  ಅರಿಸಿನ ಪುಡಿ– ಒಂದು ಚಮಚ,  ಶುಂಠಿ -ಬೆಳ್ಳುಳ್ಳಿ ಪೇಸ್ಟ್- 1 ಚಮಚ,  ಕಸ್ತೂರಿ ಮೇಥಿ–ಒಂದು ಚಮಚ, ಸೋಂಪು ಕಾಳು –ಒಂದು ಚಮಚ,  ಚಕ್ಕೆ –2, ಲವಂಗ –2,  ಸ್ಟಾರ್ ಮಸಾಲ ಹೂ– 2,  ಅನಾನಸ್ ಮೊಗ್ಗು-2,  ಏಲಕ್ಕಿ –2,  ಎಣ್ಣೆ- ನಾಲ್ಕು ಟೇಬಲ್ ಚಮಚ,  ಉಪ್ಪು- ರುಚಿಗೆ ತಕ್ಕಷ್ಟು. ಮಾಡುವ ವಿಧಾನ :  ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು. ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು.…

Read More

ಬೆಂಗಳೂರು ಏ.5 NEWS DESK : ನಟಿ ಹಾಗೂ ಮಂಡ್ಯದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್  ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕರ್ನಾಟಕ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಹಾಜರಿದ್ದರು. ಬಿಜೆಪಿ ಸೇರ್ಪಡೆಯಾಗುವ ಮುನ್ನ ಅಂಬರೀಷ್ ಸಮಾದಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದರು, ಪತ್ರ ಅಭಿಷೇಕ್ ಅಂಬರೀಷ್ ಮತ್ತುನಿರ್ಮಾಪಕ ರಾಕ್ ಲೈನ್ ವೆಂಕಟೇಶ್  ಜೊತೆಯಲ್ಲಿದ್ದರು.

Read More

ಮಡಿಕೇರಿ ಏ.5 NEWS DESK :  ಕುಶಾಲನಗರದ ಸಾಹಿತಿ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಅವರಿಗೆ ಸಾಹಿತ್ಯ ಮತ್ತು ಪಾಕಕಲಾ ರಂಗದ ಸಾಧನೆಗಾಗಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ಇಂಡೋನೇಶ್ಯ ದೇಶದ ಬಾಲಿ ದ್ವೀಪದಲ್ಲಿ ಪ್ರದಾನ ಮಾಡಲಾಯಿತು. ವಿಶ್ವವಾಣಿ ಪತ್ರಿಕೆ ವತಿಯಿಂದ ನೀಡಲಾಗುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪೈಕಿ ಸಾಹಿತ್ಯ ಮತ್ತು ಪಾಕಕಲೆ ಕ್ಷೇತ್ರದಿಂದ ಈ ವಷ೯ದ ಗ್ಲೋಬಲ್ ಅಚೀವಸ್೯ ಪ್ರಶಸ್ತಿಗೆ ಕೊಡಗಿನ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಆಯ್ಕೆಯಾಗಿದ್ದರು. ಇವರಿಗೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಕಲಾವಿದೆ ಡಾ. ಜಯಮಾಲ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀವಚನಾನಂದಸ್ವಾಮೀಜಿ, ಬಾಲಿಯ ವೈಸ್ ಕೌನ್ಸುಲ್ ಲವಲೇಶ್ ಕುಮಾರ್, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಬಾಲಿ – ಇಂಡೋನೇಷ್ಯಾ ದೇಶದ ವಿವಿಧ ಗಣ್ಯರು ಪ್ರಶಸ್ತಿ ಪ್ರದಾನ ಕಾಯ೯ಕ್ರಮದಲ್ಲಿ ಹಾಜರಿದ್ದರು. ಬಾಲಿ ದ್ವೀಪದ ಸುಂದರ ಅರಮನೆ ಸುಕಾನೋ೯ಗೆ ಭೇಟಿ ನೀಡಿದ ಸಂದಭ೯ ಪ್ರಶಸ್ತಿ ಪಡೆದ ಸಾಧಕರನ್ನು ರಾಜಮನೆತನದ ಪ್ರಮುಖ, ಬಾಲಿಯ ಸೆನೆಟರ್ ಡಾ.ಗುಸ್ತಿ…

Read More

ಚಮಚ ಅಥವಾ ಫೋರ್ಕ್‌ಗಳನ್ನು ಉಪಯೋಗಿಸದೆ ನಮ್ಮ ಬೆರಳುಗಳಿಂದಲೇ ಊಟ ಮಾಡುವುದರಿಂದ ದೇಹದ ಆರೋಗ್ಯ ವೃದ್ಧಿಸುತ್ತದೆ. ಇಂದಿನ ಮಕ್ಕಳಿಗೆ ಚಮಚವಿಲ್ಲದೆ ಊಟಮಾಡಿಯೇ ಗೊತ್ತಿಲ್ಲ. ಹಿಂದೆಲ್ಲ ನಮ್ಮ ಕೈಯಲ್ಲಿಯೇ ಕಲಸಿಕೊಂಡು, ಊಟ ಮಾಡಬೇಕೆಂಬ ಪದ್ಧತಿ ಇತ್ತು. ಎಲ್ಲೋ ಅಪರೂಪಕ್ಕೆ, ಕೈಬೆರಳಿಗೆ ಗಾಯವಾಗಿದ್ದರೆ ಮಾತ್ರ ಚಮಚ ಉಪಯೋಗಿಸುವ ರೂಢಿ ಇತ್ತು. ಆದರೆ ಇಂದು ಹಾಗಿಲ್ಲ. ಕೈಯಿಂದ ಊಟಮಾಡುವುದು ಅನಾಗರಿಕ ಪದ್ಧತಿ ಎಂಬ ಭಾವನೆ ಇಂದು ಹಲವರಲ್ಲಿದೆ. ಆಯುರ್ವೇದದ ಗ್ರಂಥಗಳ ಪ್ರಕಾರ ಕೈಯಿಂದ ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆಯಂತೆ! ಕೇಳುವುದಕ್ಕೆ ಅಚ್ಚರಿಯಾದರೂ ಇದು ಸಾಬೀತಾದ ಸತ್ಯ. ಮಾನವನ ಜೀವ ಹೇಗೆ ಪಂಚಭೂತಗಳಿಂದ ಸೃಷ್ಟಿಯಾಗಿದೆಯಲ್ಲ, ಹಾಗೇ ನಮ್ಮ ಐದೂ ಬೆರಳುಗಳು ಪಂಚಭೂತಗಳಲ್ಲಿ ಒಂದೊಂದನ್ನು ಪ್ರತಿನಿಧಿಸುತ್ತವೆ. ಹೆಬ್ಬೆರಳು ಅಗ್ನಿಯನ್ನು ಸಂಕೇತಿಸಿದರೆ, ತೋರುಬೆರಳು ಗಾಳಿಯನ್ನೂ, ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರನ್ನು ಸಂಕೇತಿಸುತ್ತದೆ. ಈ ಪಂಚಭೂತಗಳಲ್ಲಿನ ಶಕ್ತಿಯು ಬೆರಳುಗಳ ಮೂಲಕ ದೇಹದಲ್ಲಿ ಪ್ರವಹಿಸುತ್ತದೆಯಂತೆ. ಅದಕ್ಕೆಂದೇ ಕೈಯಲ್ಲಿಯೇ ಊಟಮಾಡಬೇಕು ಎನ್ನುತ್ತದೆ ಆಯುರ್ವೇದ. ಅಷ್ಟೇ ಅಲ್ಲ, ಊಟ ಮಾಡುವಾಗ…

Read More

ನಾಪೋಕ್ಲು ಏ.5 NEWS DESK : ಕೊಡಗಿನ ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಮಳೆಗಾಗಿ ಏ.8 ರಂದು ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಪ್ರಾರ್ಥನೆ ಜರುಗಲಿದೆ. ಅಂದು ಬೆಳಿಗ್ಗೆ 5.45 ರಿಂದ 6.45 ರವರೆಗೆ ರುದ್ರಾಭಿಷೇಕ ಪೂಜೆ ಹಾಗೂ ನೂರಾಒಂದು ಎಳನೀರು, ಹಾಲು, ತುಪ್ಪ ಅಭಿಷೇಕ ನಡೆಯಲಿದೆ. ಈ ಸಂದರ್ಭ ಕೊಡಗಿನ ಸಮಸ್ತ ಭಕ್ತಾದಿಗಳು ವರುಣನ ಕೃಪೆಗಾಗಿ ಸಲ್ಲಿಸಲಾಗುವ ವಿಶೇಷ ಸಮೂಹ ಪ್ರಾರ್ಥನೆಯಲ್ಲಿ ಪಾಲುಗೊಳ್ಳಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More