ಲೇಖಕ: admin

ನಾಪೋಕ್ಲು ಏ.5 NEWS DESK :  ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ವರ್ಷವಧಿ ಜಾತ್ರೆಯು ಏ.8 ಮತ್ತು 9 ರಂದು ನಡೆಯಲಿದೆ. ದೇವರ ಸನ್ನಿಧಿಯಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವರ್ಷವಧಿ ಜಾತ್ರಾ ಮಹೋತ್ಸವ ನಡೆಯಲಿದೆ. ಏ.8 ರಂದು ಬೆಳಿಗ್ಗೆ ಮಹಾಪೂಜೆ, ದೀಪಾರಾಧನೆ , ದೇವರ ಬಲಿ ನಡೆಯಲಿದೆ .ಏ.9 ರಂದು ಬೆಳಿಗ್ಗೆ ದೇವರ ಪ್ರದರ್ಶನ, ಮಹಾಭಿಷೇಕ, ವಿಶೇಷ ಸೇವೆಗಳು ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ , ದೇವರ ಬಲಿ ಜರುಗಲಿದೆ. ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನ ಸಮರ್ಪಣೆ ನೆರವೇರಲಿದೆ. ಸಂಜೆ ವಾದ್ಯಗೋಷ್ಠಿಯೊಂದಿಗೆ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಪಟ್ಟಣದಲ್ಲಿ ಸಾಗಿ ಪವಿತ್ರ ಕಾವೇರಿ ನದಿಯಲ್ಲಿ ಮೂರ್ತಿಯನ್ನು ಸ್ನಾನ ಮಾಡಿ ದೇವಾಲಯಕ್ಕೆ ಹಿಂತಿರುಗಿದ ಬಳಿಕ ದೇವರ ಪ್ರದರ್ಶನ, ಬಲಿ, ವಸಂತ ಪೂಜಾ ನಡೆಯಲಿದೆ. ಬಳಿಕ ಅನ್ನ ಸಮರ್ಪಣೆ ಜರುಗಲಿದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವರದಿ : ದುಗ್ಗಳ…

Read More

ಮಡಿಕೇರಿ ಮಾ.5 NEWS DESK : ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜ್ಞಾಪಕಾರ್ಥವಾಗಿ ಏ.4 ರಿಂದ  ರಾಷ್ಟ್ರೀಯ ಜಾನಪದ ಹಬ್ಬ ಪ್ರಯುಕ್ತ  ವಿವಿಧ ಸ್ಪರ್ಧೆ, ಕಾರ್ಯಕ್ರಮಗಳು ಸೇರಿದಂತೆ ಒಟ್ಟು  ನಿರಂತರವಾಗಿ  150 ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತಿಹಾಸ, ವಿಜ್ಞಾನ, ವಾಣಿಜ್ಯ ಮತ್ತು ಪುರಾಣದ ಮೂಲಬೇರು ಜಾನಪದ. ಇಡೀ ಸೃಷ್ಟಿಯ ಸರ್ವ ಋತುಗಳನ್ನು ತನ್ನ ಒಡಲಿನಲ್ಲಿ ಅದುಮಿಟ್ಟುಕೊಂಡು, ಅಗತ್ಯ ಬಿದ್ದಾಗ ವಿವಿಧ ರೂಪದಲ್ಲಿ ಬಿತ್ತರಿಸಿದ ವಾಸ್ತವ ಇತಿಹಾಸವೇ ಜಾನಪದ. ಪ್ರಪಂಚದ ಅತ್ಯಂತ ವಿಭಿನ್ನ, ವಿಶಿಷ್ಟ ಇತಿಹಾಸ, ಸಂಸ್ಕೃತಿ, ಹಿನ್ನೆಲೆ ಮುನ್ನಲೆ ಹೊಂದಿರುವ ಕೊಡವ ಜಾನಪದವೂ ಪ್ರಪಂಚದ ಮೂಲದಿಂದಲೇ ಹರಿದು ಬಂದುದಕ್ಕೆ ಜಾನಪದದಲ್ಲಿಯೇ ಅಸಂಖ್ಯಾತ ಸಾಕ್ಷಿಗಳು ದೊರೆಯುತ್ತವೆ. ಮೂಲೆ ಮೂಲೆಗೆ, ಬಾಯಿಂದ ಬಾಯಿಗೆ ಹರಿದು ಹಂಚಿ ಹೋಗಿದ್ದ ಕೊಡವ ಜಾನಪದವನ್ನ ತಮ್ಮ ಸಾಮರ್ಥ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ 1920ರಲ್ಲಿ ಪಟ್ಟೋಲೆ ಪಳಮೆ ಎಂಬ ಪುಸ್ತಕ…

Read More

ಮಡಿಕೇರಿ ಮಾ.5 NEWS DESK : ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕುಶಾಲನಗರ ಪುರಸಭೆ ವತಿಯಿಂದ  ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಮತದಾರರರಿಗೆ ಮತದಾನದ ಕುರಿತು ಅರಿವು ಮೂಡಿಸಲಾಯಿತು. ನಂತರ  ಗೊಂದಿಬಸವನ ಹಳ್ಳಿಯಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ  ನಡೆಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಹಾಗೂ ಸೆಲ್ಫಿ ಪಾಯಿಂಟ್ ನಲ್ಲಿ ಸೆಲ್ಫಿ ಚಿತ್ರಗಳನ್ನು ತೆಗೆಸಿಕೊಳ್ಳಲಾಯಿತು.

Read More

ಕೊರಟಗೆರೆ ಏ.4 NEWS DESK : ಅರಣ್ಯ ಸಿಬ್ಬಂದಿಗಳು ನಾಲ್ವರು ಬೇಟೆಗಾರರನ್ನು ಸೆರೆ ಹಿಡಿದು ಬರೋಬರಿ 7 ಕಾಡುಹಂದಿಗಳನ್ನು ರಕ್ಷಿಸಿದ ಪ್ರಕರಣ ಕೊರಟಗೆರೆಯ ಸುರಪುರದಲ್ಲಿ ನಡೆದಿದೆ. ಕಾಡುಹಂದಿಗಳನ್ನು ಯಾದಗಿರಿಯಿಂದ ಕೊರಟಗೆರೆ ಪಟ್ಟಣಕ್ಕೆ ತಂದು ಮಾರಾಟಕ್ಕೆ ಯತ್ನಿಸುವ ಸಂದರ್ಭ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿದರು. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೂಲ್‌ಪೇಟೆಯ ಸುರೇಶ(28), ರಂಗಮಪೇಟೆಯ ಪರಶುರಾಮ(22), ಕೊಪ್ಪಳ ಜಿಲ್ಲೆ ಕೊಪ್ಪಳ ಗಾಂಧಿನಗರದ ಮಂಜುನಾಥ(28) ಹಾಗೂ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ(39) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಭೀಮಾ(38) ಎಂಬಾತ  ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಹೆಚ್, ಮಧುಗಿರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಕೊರಟಗೆರೆ ವಲಯಅರಣ್ಯಾಧಿಕಾರಿ ರವಿ.ಸಿ, ಉಪ ವಲಯಅರಣ್ಯಾಧಿಕಾರಿದಿಲೀಪ್‌ಕುಮಾರ್, ಸಿಬ್ಬಂಧಿಗಳಾದ ವಿಜಯಕುಮಾರ್, ಮಂಜುನಾಥ, ಚಾಂದುಪಾಷ, ಕಾವ್ಯಶ್ರೀ, ನರಸರಾಜು, ಬಾಬು ಸೇರಿದಂತೆಇತರರು ದಾಳಿಯಲ್ಲಿ ಭಾಗವಹಿಸಿದ್ದರು.

Read More

ಮಡಿಕೇರಿ ಏ.4 NEWS DESK : ಕಾಳುಮೆಣಸು ಕುಯ್ಲಿಗೆ ಬಳಸಿದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಪುಷ್ಪಗಿರಿ ಎಂಬುವವರೇ ಉಸಿರು ಚೆಲ್ಲಿದವರಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ  ಮಾಯಮುಡಿ ಗ್ರಾಮದ ತೋಟದಲ್ಲಿ ಕರಿಮೆಣಸು ಕೊಯ್ಲಿಗೆ ಬಂದಿದ್ದ ಪುಷ್ಪಗಿರಿ, ಅಲ್ಯುಮಿನಿಯಂ ಏಣಿಯನ್ನು ಮರಕ್ಕೆ ಇಡುವಾಗ ಪಕ್ಕದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್ ಲೈನ್’ಗಳು ಕಾಫಿ ತೋಟಗಳ ನಡುವೆ ಹಾದು ಹೋಗಿದ್ದು, ತೋಟದ ಕೆಲಸದ ಸಂದರ್ಭ ಅಲ್ಯುಮಿನಿಯಂ‌ ಏಣಿಗೆ ಬದಲಾಗಿ ಮರ, ಫೈಬರ್ ಅಥವಾ ಬಿದಿರಿನ ಏಣಿಯನ್ನು ಬಳಸುವಂತೆ ಸೆಸ್ಕ್ ಅಧಿಕಾರಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ.

Read More

ಕೊರಟಗೆರೆ ಏ.4 NEWS DESK : ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಒಂದು ತಿಂಗಳ ಹಿಂದೆಯಷ್ಟೇ ಉಪಟಳ ನೀಡುತ್ತಿದ್ದ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಎರಡನೇ ಚಿರತೆ ಬೋನಿಗೆ ಬಿದ್ದಿದೆ. ಈ ಚಿರತೆ ಗ್ರಾಮಸ್ಥರು ಸಾಕಿದ ಪ್ರಾಣಿಗಳನ್ನು ಭಕ್ಷಿಸಿ ಆತಂಕ ಸೃಷ್ಟಿಸಿತ್ತು.

Read More

ಮಡಿಕೇರಿ ಏ.4 NEWS DESK : ಐರಿ ಸಮುದಾಯದ 10ನೇ ವರ್ಷದ ಕೌಟುಂಬಿಕ ಕ್ರಿಕೆಟ್‌ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿ, ಈ ಬಾರಿ ಏಪ್ರಿಲ್‌ 27 ರಿಂದ ಮೂರು ದಿನಗಳ ಕಾಲ ಮೂರ್ನಾಡುವಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಐರಿ ಮಕ್ಕಡ ಕೂಟ, ಕ್ರೀಡಾಕೂಟವನ್ನು ಕೊಡಗು ಐರಿ ಸಮಾಜ ಸಹಯೋಗದಲ್ಲಿ ಈ ನಡೆಸಲಾಗುತ್ತಿದ್ದು ಪುರುಷರಿಗೆ ಕ್ರಿಕೆಟ್‌ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯಾವಳಿ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದೆ. ಕ್ರೀಡೆಯೊಂದಿಗೆ ಸಂಸ್ಕೃತಿಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಬಾರಿ ಕ್ರಿಕೆಟ್‌ನಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ  ಕೊಡವ ಭಾಷಿಕ ಸಂಸ್ಕೃತಿಯ ಪ್ರತೀಕವಾಗಿರುವ ಗೆಜ್ಜೆತಂಡ್‌ ಅನ್ನು ಟ್ರೋಫಿಯಾಗಿ ನೀಡಲಾಗುತ್ತದೆ ಎಂದು ಕ್ರೀಡಾಕೂಟದ ಸಂಚಾಲಕ ಐಮಂಡ ಶರತ್‌ ಬೆಳ್ಯಪ್ಪ ಪ್ರಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾ ಕೂಟಕ್ಕೆ ಗೆಜ್ಜೆತಂಡ್‌ ಟ್ರೋಫಿ-2024ಎಂದು ಹೆಸರಿಡಲಾಗಿದೆ. ಕ್ರೀಡಾಕೂಟಕ್ಕೆ  ಖ್ಯಾತ ಕಲಾವಿದ ಐಮಂಡ ರೂಪೇಶ್‌ ನಾಣಯ್ಯ ಆಕರ್ಷಕ ಲೋಗೋ ವಿನ್ಯಾಸಗೊಳಿಸಿದ್ದಾರೆ. ಏಪ್ರಿಲ್‌…

Read More

ಕರಿಕೆ ಏ.4 NEWS DESK : ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ತೋಟಂ ಶ್ರೀ ಮುತ್ತಪ್ಪ ಬೆಳ್ಳಾಟ ಶ್ರದ್ಧಾಭಕ್ತಿಯಿಂದ ನಡೆಯಿತು. ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಾಪೂಜೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

Read More

ಪುತ್ತೂರು ಏ.4 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್.ಎಸ್.ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ಎಯ್ಡೆಡ್ ಡಯಾಗ್ನೋಸಿಸ್ ಆಫ್ ಏಟ್ರಿಯಲ್ ಫೈಬ್ರಿಲ್ಲೇಶನ್ ಯೂಸಿಂಗ್ ಮೆಷಿನ್ ಲರ್ನಿಂಗ್ ಎಪ್ರೋಚ್ (Computer aided Diagnosis of Atrial fibrillation using machine learning approach) ಎನ್ನುವ ವಿಷಯದ ಬಗ್ಗೆ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ರೋಶನ್ ಜಾಯ್ ಮಾರ್ಟಿಸ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ. ಇವರು ಪ್ರಸ್ತುತ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಲೆಲ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು 18 ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ. ಡಾ.ಶ್ರೀಕಾಂತ್ ರಾವ್.ಎಸ್.ಕೆ ಅವರ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ.

Read More

ಮಡಿಕೇರಿ ಏ.4 NEWS DESK : ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಕೊಂಡದೇರ ಬಾಂಡ್ ಗಣಪತಿ ಹಾಗೂ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ, ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕನ್ನಂಡ ಕವಿತ ಬೊಳ್ಳಪ್ಪ, ಮೂವೆರ ಜಯರಾಂ ಹಾಜರಿದ್ದರು.

Read More