ಲೇಖಕ: admin

ವೈನಾಡ್ ಫೆ.1 NEWS DESK: ರಸ್ತೆಯಲ್ಲಿ ನಿಂತಿದ್ದ ಪ್ರವಾಸಿಗರನ್ನು ಒಂಟಿ ಸಲಗವೊಂದು ಅಟ್ಟಾಡಿಸಿದ ವಿಡಿಯೋ ಭಾರೀ ವೈರಲ್ ಆಗಿದೆ. ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿ ಭಾಗದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರು ರಸ್ತೆಗಿಳಿದು ಅರಣ್ಯ ಭಾಗವನ್ನು ವೀಕ್ಷಿಸತ್ತಿದ್ದ ಸಂದರ್ಭ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಇಬ್ಬರು ಪ್ರವಾಸಿಗರನ್ನು ರಸ್ತೆಯುದ್ದಕ್ಕೂ ಓಡಿಸಿದ ಕಾಡಾನೆ ಕೆಳಗೆ ಬಿದ್ದ ಒಬ್ಬರನ್ನು ತುಳಿಯಲು ಯತ್ನಿಸಿದೆ. ಆದರೆ ಅದೃಷ್ಟವಶಾತ್ ಪ್ರವಾಸಿಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಅರಣ್ಯ ಭಾಗದ ರಸ್ತೆಗಳಲ್ಲಿ ಪ್ರವಾಸಿಗರು ಅತ್ಯಂತ ಆತಂಕದಿಂದಲೇ ತೆರಳುವಂತ್ತಾಗಿದೆ. ಅಲ್ಲದೆ ವನ್ಯಜೀವಿಗಳು ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಿಯಬೇಡಿ ಎನ್ನುವ ಸಂದೇಶ ರವಾನೆಯಾಗಿದೆ.

Read More

ಚಾಮರಾಜನಗರ ಫೆ.1 NEWS DESK : ಗುಂಡ್ಲುಪೇಟೆ ವ್ಯಾಪ್ತಿಯ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ಸೀಗನಬೆಟ್ಟದ ಬಳಿ ಗಂಡು ಹುಲಿಯೊಂದು ಮೃತಪಟ್ಟಿದೆ. ಸುಮಾರು 5 ವರ್ಷದ ಹುಲಿ ಮತ್ತೊಂದು ಹುಲಿಯೊಂದಿಗೆ ಕಾದಾಡಿ ಸಾವನ್ನಪ್ಪಿರಬಹುದೆಂದು ತಿಳಿದು ಬಂದಿದೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ಸಂದರ್ಭ ಹುಲಿಯ ಹೊಟ್ಟೆಯಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಇರುವುದು ಕಂಡು ಬಂದಿದೆ. ಬಂಡೀಪುರ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಮಡಿಕೇರಿ ಫೆ.2  NEWS DESK :  ಗಾಳಿಬೀಡಿನ ನವೋದಯ ವಿದ್ಯಾಲಯದಲ್ಲಿ 9 ಮತ್ತು 11 ನೇ ತರಗತಿಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ಫೆಬ್ರವರಿ, 10 ರಂದು ಜವಾಹರ್ ನವೋದಯ ವಿದ್ಯಾಲಯದಲ್ಲ್ಲಿ “ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ” ನಡೆಯಲಿದ್ದು, ನೋಂದಾಯಿತ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ನವೋದಯ ವಿದ್ಯಾಲಯ ಸಮಿತಿಯು ತನ್ನ ಅಧಿಕೃತ ವೆಬ್‍ಸೈಟಿನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ https://navodaya.gov.in ಈ ವೆಬ್‍ಸೈಟಿನಿಂದ ನೇರವಾಗಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳು ತಮ್ಮ ಮಗ/ಮಗಳು ಓದುತ್ತಿರುವ ಶಾಲೆ ಅಥವಾ ನವೋದಯ ವಿದ್ಯಾಲಯವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9611862835, 8840383521 ನ್ನು ಸಂಪರ್ಕಿಸಬಹುದು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಒ.ಎಂ. ಪಂಕಜಾಕ್ಷನ್  ತಿಳಿಸಿದ್ದಾರೆ.

Read More

ಮಡಿಕೇರಿ ಫೆ.1 NEWS DESK : ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸಭೆ ನಡೆಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಮೊರಾರ್ಜಿ ದೇಸಾಯಿ ಮತ್ತು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮಕ್ಕಳ ಸಂಖ್ಯೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು. ವಸತಿ ಶಾಲೆಯ ಮಕ್ಕಳೆಲ್ಲರೂ ಉತ್ತಮ ಶಿಕ್ಷಣ ಪಡೆದು ಐಐಟಿ, ಐಐಎಂ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುವಂತಾಗಬೇಕು ಎಂದು ಹೇಳಿದರು. ವಸತಿ ಹಾಗೂ ಸಾಮಾನ್ಯ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲರೊಂದಿಗೂ ಬೆರೆಯುವ ಗುಣ ಬೆಳೆಸಬೇಕು. ನಾಡಿನ ಪ್ರತಿಯೊಬ್ಬರೂ ಮನುಷ್ಯರು, ಕನ್ನಡಿಗರು, ಭಾರತೀಯರು ಎಂಬ ಮನೋಭಾವ ಬರಬೇಕು. ಧಾರ್ಮಿಕವಾಗಿ ಯಾರನ್ನು ಸಹ…

Read More

ವಿರಾಜಪೇಟೆ ಫೆ.1 NEWS DESK :  ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಸುಮಾರು ವರ್ಷದ ಹಿಂದೆ ಸ್ವಂತ ಜಾಗ ಖರೀದಿಸಿ ಕೂಲಿ ಕೆಲಸ ಮಾಡಿಕೊಂಡು ತನ್ನ ಸ್ವಂತ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ ಬೆಟ್ಟ ಕುರುಬರ ಕುಟುಂಬಕ್ಕೆ ಸ್ಥಳೀಯ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಮಾವೀಯತೆ ಮೆರೆದಿದ್ದಾರೆ. ಬೆಟ್ಟ ಕುರುಬರ ಕಾಳ, ಪತ್ನಿ ಸುಮ, ಮಕ್ಕಳೊಂದಿಗೆ ಈ ಗುಡಿಸಲಿನಲ್ಲಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರ ಮನೆಯ ದುಸ್ಥಿತಿಯನ್ನು ತಿಳಿದ ಬಿ.ಎಂ ಗಣೇಶ್ ಅವರು ತಮ್ಮ ಸ್ವಂತ ಹಣದಿಂದ ನಾಲ್ಕು ಕೊಠಡಿಗಳ ಒಂದು ಪುಟ್ಟ ಮನೆಯನ್ನು ಕಟ್ಟಿಸಿಕೊಟ್ಟರು. ನೂತನ ಮನೆಗೆ ಗಣಪತಿ ಹೋಮ ನಡೆಸಿ ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶ ನಡೆಸಿ ಕಾಳ ಅವರಿಗೆ ಮನೆ ಹಸ್ತಾಂತರಿಸಿದರು. ಈ ಸಂದರ್ಭ ಮೆಚ್ಚುಗೆಯ ಮಾತನಾಡಿದ ಕಾಳ, ದಿನಗೂಲಿ ಕೆಲಸ ಮಾಡುತ್ತಾ ಸಾಗಿಸುತ್ತಿರುವ ನಮಗೆ ಸ್ವಂತ ಮನೆ ಕನಸಾಗಿತ್ತು. ಗಣೇಶ್ ಅವರ ಸಹಕಾರದಿಂದ ಸ್ವಂತ…

Read More

ಮಡಿಕೇರಿ ಫೆ.1 NEWS DESK : ಗೂನಡ್ಕ-ಪೇರಡ್ಕ ಮೋಹಿಯುದ್ದಿನ್ ಜುಮಾ ಮಸ್ಜಿದ್ ಹಾಗೂ ದರ್ಗಾಕ್ಕೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ  ಅಬ್ದುಲ್ ಅಜಿಮ್  ಭೇಟಿ ನೀಡಿದರು. ಮಸೀದಿ ಮತ್ತು ಪೇರಡ್ಕ ದರ್ಗಾದ ಇತಿಹಾಸ ಕೇಳಿ, ಈ ಭಾಗದಲ್ಲಿ ಮುಸ್ಲಿಮರು ಮಸೀದಿ ಹಾಗೂ ದರ್ಗಾದಲ್ಲಿ ಶಿಸ್ತು ಉಳ್ಳವರು ಹಾಗೂ ಧಾರ್ಮಿಕ ತಿಳುವಳಿಕೆ ಉಳ್ಳವರು ಎಂದು ಸಂತಸ ವ್ಯಕ್ತಪಡಿಸಿದರು. ನಂತರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾ.ಪಂ  ಅಧ್ಯಕ್ಷರಾದ ಸುಮತಿ, ಶಕ್ತಿವೇಲು ಗ್ರಾ.ಪಂ  ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ  ಜಿ.ಕೆ.ಹಮೀದ್ ಗೂನಡ್ಕ, ಮಹಮದ್ ಕುಂಞಿ ತೆಕ್ಕಿಲ್, ಮಸೀದಿ ಕಾರ್ಯದರ್ಶಿ ಉಸ್ಮಾನ್, ಪಾಂಡಿ ಅಬ್ಬಾಸ್, ಸಾಧುಮೋನ್ ತೆಕ್ಕಿಲ್ ಪೇರಡ್ಕ ಜುರೈದ್ ತೆಕ್ಕಿಲ್ , ಖಲಿಲ್, ಜುನೈದ್ ತೆಕ್ಕಿಲ್, ಮೂಸನ್, ಮೊದಲದವರು ಉಪಸ್ಥಿತರಿದ್ದರು.

Read More

ಮಡಿಕೇರಿ ಫೆ.1 NEWS DESK :  ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿರೋಧಿಸಿ, ದುಡಿಯುವ ಜನಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ  ಬೆಂಗಳೂರಿನಲ್ಲಿ ನಡೆದ ಬಜೆಟ್ ಪೂರ್ವ ಜನಾಗ್ರಹ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಅಧಿವೇಶನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಮಿತಿ ಪಾಲ್ಗೊಂಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕರ ಕನಿಷ್ಠ ವೇತನ, ಗೌರವಧನದ ಹೆಚ್ಚಳಕ್ಕಾಗಿ ಬಿಸಿಯೂಟ, ಅಂಗನವಾಡಿ, ಆಶಾ, ಕೈಗಾರಿಕಾ, ಕಟ್ಟಡ, ಸಾರಿಗೆ, ಬೀಡಿ, ಪ್ಲಾಂಟೇಷನ್, ಬ್ಯಾಂಕ್-ವಿಮಾ, ಗಿಗ್, ಗಣಿಕಾರ್ಮಿರಿಂದ ಪ್ರತಿಭಟನೆ ನಡೆಯಿತು. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ ರೂ.10 ಸಾವಿರ, ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.10 ಸಾವಿರ ಮತ್ತು ಆಶಾ ಕಾರ್ಯಕರ್ತೆಯರಿಗೆ ರೂ.10 ಸಾವಿರ ಗೌರವ ಧನ ಹೆಚ್ಚಿಸುವುದರ ಜೊತೆಗೆ ಎಲ್ಲಾ ಯೋಜನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಇಡುಗಂಟು, ಇಎಸ್‍ಐ ಸೌಲಭ್ಯ…

Read More

ಮಡಿಕೇರಿ ಫೆ.1 : ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ಸೃಷ್ಟಿಸಬೇಕಾದರೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ದಲಿತ ಚಳುವಳಿಯ ಹೋರಾಟಗಾರ ಜಯಪ್ಪ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50ನೇ ಸುವರ್ಣ ಸಂಭ್ರಮೋತ್ಸವ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಪ್ರೊ.  ಬಿ. ಕೃಷ್ಣಪ್ಪ ಅವರ ಒಡನಾಡಿಗಳಾಗಿ 50 ವರ್ಷಗಳ ಕರ್ನಾಟಕ ದಲಿತ ಸಂಘಟನೆಯ ಇತಿಹಾಸವನ್ನು ವಿವರಿಸಿದ ಅವರು, ಜಾತಿ ಪ್ರತಿಷ್ಠೆಗಳಿಲ್ಲದ ಅಸ್ಪೃಶ್ಯತೆಯ ತೊಡಕುಗಳಿಲ್ಲದ ಸಮತ ಭಾವದ ದೇಶವನ್ನು ಕಟ್ಟಬೇಕು. ಕೆಳವರ್ಗದವರಲ್ಲಿ ಮಾನವೀಯ ಘನತೆಯ ಸ್ವಾಭಿಮಾನವನ್ನು ಚಿಗುರಿಸುವುದು ಅಂಬೇಡ್ಕ ಅವರ ಬದುಕಿನ ಧ್ಯೆಯವಾಗಿತ್ತು. ದಲಿತ ಜನಾಂಗದ ಬದುಕಿನ ಇತಿಹಾಸದಲ್ಲಿ ಅಸ್ಪಶ್ಯತೆಯನ್ನು ವೈಜ್ಞಾನಿಕವಾಗಿ…

Read More

ಮಡಿಕೇರಿ ಫೆ.1 NEWD DESK : ಮಾನವ ಶಾಸ್ತ್ರ ವಿಜ್ಞಾನಿಗಳು ಮತ್ತು ಜನಾಂಗೀಯ ಶಾಸ್ತ್ರ ವಿಜ್ಞಾನಿಗಳು ಮಾತ್ರ ಕೊಡವ ಬುಡಕಟ್ಟು ಗುಣಲಕ್ಷಣಗಳನ್ನು ನಿರ್ಧರಿಸಬಹುದೇ ಹೊರತು ಸಂಸದರು ಈ ವಿಷಯದ ಬಗ್ಗೆ ಅಧಿಕಾರ ಹೊಂದಿಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರು ಮತ್ತು ಕೊಡವ ಬುಡಕಟ್ಟು ಜನಾಂಗದ ಭವಿಷ್ಯವನ್ನು ನಿರ್ಧರಿಸಲು ಅವರು ಯಾರೂ ಅಲ್ಲ. ಅವರು ಸಂವಿಧಾನ ತಜ್ಞರೂ ಅಲ್ಲ ಅಥವಾ ಮಾನವ ಶಾಸ್ತ್ರಜ್ಞರೂ ಅಲ್ಲ ಎಂದು ತಿಳಿಸಿದ್ದಾರೆ. ಬುಡಕಟ್ಟು ಅಲ್ಲದ ನಗರೀಕರಣಗೊಂಡ ತಳವಾರ ಮತ್ತು ಪರಿವಾರವನ್ನು ಎಸ್ಟಿ ಪಟ್ಟಿಗೆ ಹೇಗೆ ಸೇರಿಸಿದರು? ಅವರಿಗೆ ಯಾವ ಮಾನದಂಡವನ್ನು ಅನ್ವಯಿಸಲಾಗಿದೆ? ಇದು ಕೇವಲ ರಾಜಕೀಯ ಲಾಭಕ್ಕಾಗಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಕೊಡವರ ಜನಾಂಗೀಯ ಕುಲಶಾಸ್ತ್ರ ಅಧ್ಯಯನಕ್ಕೆ ಧಕ್ಕೆ ತರುವ ತಂತ್ರವನ್ನು ರೂಪಿಸಿದವರು ಯಾರು ಎಂಬುವುದು ಈಗ ಸ್ಪಷ್ಟವಾಗಿದೆ. ಕೊಡವರ ಮೇಲೆ ನೈಜ ಅಭಿಮಾನವಿದ್ದರೆ ಸಂಸದರು ತಮ್ಮ ಲೋಕಸಭಾ ಸ್ಥಾನವನ್ನು ತೆರವು ಮಾಡಲಿ ಮತ್ತು…

Read More