ಲೇಖಕ: admin

ಮಡಿಕೇರಿ ಫೆ.24 NEWS DESK : ಗೋಣಿಕೊಪ್ಪಲು ಬೈಪಾಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ  ಕಿರು ಸೇತುವೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಈ ಸಂದರ್ಭ ಸ್ಥಳೀಯ ನಾಯಕರು, ಗ್ರಾಮಸ್ಥರು ಮತ್ತು  ಸಾರ್ವಜನಿಕರು  ಹಾಜರಿದ್ದರು.

Read More

ಮಡಿಕೇರಿ ಫೆ.24 NEWS DESK : ತಿತಿಮತಿ, ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಭೇಟಿ ನೀಡಿದರು. ನಂತರ ಸಾಕಾನೆಯ ಮಾವುತರ ಯೋಗಕ್ಷೇಮವನ್ನು ವಿಚಾರಿಸಿ,  ಪ್ರವಾಸಿ ತಾಣವಾಗಿ ಮಾರ್ಪಾಡಿಸುತ್ತಿರುವ ಆನೆ ಶಿಬಿರದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Read More

ಮಡಿಕೇರಿ ಫೆ.24 NEWS DESK : ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.29 ರಿಂದ ಮಾ.9ರ ವರೆಗೆ ಮಹಾಶಿವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ. ಫೆ.29 ರಂದು ಬೆಳಿಗ್ಗೆ 9.30 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಸಂಜೆ 6.30 ಗಂಟೆಗೆ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ ಮಹಿಳಾ ಭಜನಾ ತಂಡ ಹಾಗೂ ಮೇಕೇರಿ ಶ್ರೀ ಗೌರಿಶಂಕರ ದೇವಾಲಯದ ಭಜನಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.1 ರಂದು ಸಂಜೆ 6.30 ಗಂಟೆಗೆ ಹಾಕತ್ತೂರು-ತೊಂಬತ್ತುಮನೆ ಶ್ರೀ ವಿನಾಯಕ ದೇವಾಲಯ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಾ.2 ರಂದು ಸಂಜೆ 6.30 ಗಂಟೆಗೆ ಭಾಗಮಂಡಲ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಕಾರ್ಯಕ್ರಮ ನಡೆಯಲಿದೆ. ಮಾ.3 ರಂದು ಸಂಜೆ 6.30ಕ್ಕೆ ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ತಂಡ, ಮಾ.4 ರಂದು ಸಂಜೆ 6.30ಕ್ಕೆ ಮಡಿಕೇರಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಮಹಿಳಾ ಭಜನಾ ಸಮಿತಿ, ಮಾ.5 ರಂದು ಸಂಜೆ 6.30ಕ್ಕೆ ಮಡಿಕೇರಿ…

Read More

ಮಡಿಕೇರಿ ಫೆ.24 NEWS DESK : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ ಮತ್ತು ಪ.ಪಂ ನೌಕರರ ಸಂಘದ ವತಿಯಿಂದ  ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಸಮಾವೇಶ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಬಿ.ಜಯಶಂಕರ ಶೆಟ್ಟಿ ಉದ್ಘಾಟಿಸಿದರು. ನಂತರ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ನಂದಕುಮಾರ್  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಎಂ.ಇ.ಎಸ್.ಕಾಲೇಜಿನ ಉಪನ್ಯಾಸಕ ಡಾ.ರವಿ ಅಪ್ಪಗೆರೆ, ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್,  ಕೆ.ಎಸ್.ಆರ್.ಟಿ.ಸಿ  ಪುತ್ತೂರು ವಿಭಾಗ ಕಾರ್ಮಿಕ ಕಲ್ಯಾಣಧಿಕಾರಿ ಕೆ.ಕೆ.ಸೋಮಶೇಖರ್, ಮಡಿಕೇರಿ ಘಟಕ ವ್ಯವಸ್ಥಾಪಕ ಹೆಚ್.ಇ.ವೀರಭದ್ರಸ್ವಾಮಿ, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಟಿ.ಸುರೇಶ್ ಕಂಠಿ, ಪುತ್ತೂರು ವಿಭಾಗ ತನಿಖೆದಳದ ಸಾರಿಗೆ ಸಂಚಾರಿ ನಿರ್ದೇಶಕ  ಜಯಣ್ಣ, ಕೆ.ರಾ.ರ.ಸಾ.ನಿ ಪಾ ಜಾ/ಪ ಪಂ ವರ್ಗಗಳ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶ್ರೀನಿವಾಸ್, ಪುತ್ತೂರು ವಿಭಾಗ ಪಾ.ಜಾ/ಪ.ಪಂ ವರ್ಗಗಳ…

Read More

ಮಡಿಕೇರಿ ಫೆ.24 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ 10 ಕುಟುಂಬ 18 ಗೋತ್ರದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಕ್ರೀಡಾಕೂಟದ ಬಿಡ್ಡಿಂಗ್ ಪ್ರಕ್ರಿಯೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಇಂತಹ ಕ್ರೀಡಾಕೂಟಗಳ ಮೂಲಕ ಜನಾಂಗದ ಆಸಕ್ತ ಕಿರಿಯರಿಗೆ ವೃತ್ತಿಪರ ವಾಗಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದರು. ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡ ಸಮಾಜದ ಖಜಾಂಜಿ ಕುಯ್ಯುಮುಡಿ ವಸಂತ್, ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್, ಬಿಡ್ಡಿಂಗ್ ನಿರ್ವಾಹಕರಾಗಿ ಕಟ್ಟೆಮನೆ ಸೋನಾಜಿತ್  ಹಾಜರಿದ್ದರು. ಪುದಿಯನೆರವನ ರಿಶೀತ್ ಸ್ವಾಗತಿಸಿ, ಕೆದಂಬಾಡಿ ಕಾಂಚನ ಗೌಡ ಪ್ರಾರ್ಥಿಸಿ, ಪರಿಚನ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ದೇರಳ ನವೀನ್ ವಂದಿಸಿದರು‌. 10 ಫ್ರಾಂಚೈಸಿಗಳಿಗೆ 180 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಪೊನ್ನಚ್ಚನ…

Read More

ಬೆಂಗಳೂರು, ಫೆ.24 NEWS DESK :  ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕಿಯಿಲ್ಲ, ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ,  ಸಂವಿಧಾನದ ವಿರುದ್ಧದ ಅಪಪ್ರಚಾರವನ್ನು ಯಾರೂ ಸಹಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಅರಮನೆ ಮೈದಾನದಲ್ಲಿ  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ವಿರುದ್ಧ ಎರಡು ಅಪಪ್ರಚಾರಗಳು ನಡೆಯುತ್ತಿದೆ. ಸಂವಿಧಾನ ದಲಿತರ ಉದ್ದಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರಿಯಬೇಕು. 1950 ಜನವರಿ 26 ರಿಂದ ಜಾರಿಗೆ ಬಂದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ. ಇದನ್ನು ನಾವು ಯಾರೂ ಸಹಿಸಬಾರದು. ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ ಎಂದರು. ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ ::  ದೇಶದಲ್ಲಿ…

Read More

ಬೆಂಗಳೂರು ಫೆ.24 NEWS DESK : ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಲಿದ್ದು, ವಿಧಾನ ಸೌಧದಲ್ಲಿ ಸಿದ್ದವಾಗುತ್ತಿರುವ ಮತಗಟ್ಟೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಣೆ ಮಾಡಿದರು. ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದನೇ ಅಭ್ಯರ್ಥಿ ಕಣದಲ್ಲಿರುವುದರಿಂದ ಅಡ್ಡ ಮತದಾನವಾಗದೇ ಇರಲು ಕಾಂಗ್ರೆಸ್ ಮುಂಜಾಗ್ರತಾ ಕ್ರಮ ವಹಿಸಿದ್ದು, ಕಾನೂನಾತ್ಮಕವಾಗಿ ಚುನಾವಣೆ ನಡೆಸುವ ಸಲುವಾಗಿ ಕಾನೂನು ತಜ್ಞರು ಆಗಿರುವ ಎ.ಎಸ್.ಪೊನ್ನಣ್ಣ ನವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

Read More

ಕುಶಾಲನಗರ  ಫೆ.24 NEWS DESK :  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ಕೆ.ಎಸ್.ಮೂರ್ತಿ ನೇಮಕಗೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವಚನ ಸಾಹಿತ್ಯ ವೇದಿಕೆಯನ್ನು ಕಟ್ಟುವ ಮೂಲಕ ” ವಚನಗಳ ನಡಿಗೆ – ಶಾಲಾ ಕಾಲೇಜುಗಳೆಡೆಗೆ ” ಎಂಬ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಶರಣ ಸಾಹಿತ್ಯ ಪರಿಷತ್ತಿನ ಆಶಯಕ್ಕನುಗುಣವಾಗಿ ಕೆ.ಎಸ್.ಮೂರ್ತಿ ಕಾರ್ಯನಿರ್ವಹಿಸುತ್ತಿರುವುದರಿಂದ ಪರಿಷತ್ತಿನ ಗೌರವಾಧ್ಯಕ್ಷರಾಗಿರುವ ಸುತ್ತೂರು ಶ್ರೀಗಳ ಸೂಚನೆಯಂತೆ ಇವರನ್ನು ನೇಮಕಗೊಳಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮಿತಿಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವ ಮೂಲಕ ಶರಣ ಸಾಹಿತ್ಯವನ್ನು ಮತ್ತಷ್ಟು ಚೈತನ್ಯಶೀಲ ಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಫೆ.24 NEWS DESK : ಗೋಣಿಕೊಪ್ಪಲು ಕಾಫಿ ಮಂಡಳಿ ವಿಸ್ತರಣಾ ವಿಭಾಗ ಹಾಗೂ ಕೊಟ್ಟಗೇರಿ ಲಕ್ಷ್ಮಣತೀರ್ಥ ಸಂಘದ ವತಿಯಿಂದ  ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರಿಗೆ ಫೆ.29 ರಂದು ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರ ನಡೆಯಲಿದೆ. ಅಂದು ಬೆಳಗ್ಗೆ 9.45ಗಂಟೆಗೆ ಕೊಟ್ಟಗೇರಿ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ  ಬಾಳೆಲೆ ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸು ಮಾಡಿದ ರೀತಿಯಲ್ಲಿ ಮಣ್ಣಿನ ಮಾದರಿಯ ಸಂಗ್ರಹಣೆಯನ್ನು ತಂದು ಅ ದಿನವೇ ಫಲಿತಾಂಶವನ್ನು ಪಡೆದುಕೊಳ್ಳಲು ಮನವಿ ಮಾಡಿದ್ದಾರೆ. ಮಣ್ಣಿನ ಪರೀಕ್ಷೆ ಮಾಡಿಸಿ ಕೊಳ್ಳಲು ಬೆಳೆಗಾರರು ಬೆಳಿಗ್ಗೆ 9.45ಗಂಟೆಗೆ ಹಾಜರಿರತಕ್ಕದ್ದು,  ಮಣ್ಣಿನ ರಸಸಾರ ಪರೀಕ್ಷೆಗೆ ರೂ.25,   ಸಾರಜನಕ,ರಂಜಕ, ಪೊಟ್ಯಾಶ್ ಪರೀಕ್ಷೆಗೆ ರೂ.150 ಪಾವತಿಸತಕ್ಕದ್ದು, ಇದರ ಜೊತೆಗೆ  ನುರಿತ ತಜ್ಞರಿಂದ ಕಾಫಿ ಬೇಸಾಯದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲಾಗುವುದೆಂದು ಕೊಟ್ಟಗೇರಿ ಲಕ್ಷ್ಮಣತೀರ್ಥ ಸಂಘದ ಅಧ್ಯಕ್ಷರು ಹಾಗೂ ಗೋಣಿಕೊಪ್ಪಲು ಕಾಫಿ ಮಂಡಳಿ…

Read More

ಮಡಿಕೇರಿ ಫೆ.23 NEWS DESK : 2018 ರಲ್ಲಿ ವಿಶ್ವದ ಅತ್ಯಂತ ಎತ್ತರದ ಶಿಖರದ ತುತ್ತ ತುದಿಯನ್ನು ಏರಿ ಕನ್ನಡ ಬಾವುಟ ಹಾರಿಸಿದ ಪ್ರಥಮ ಕನ್ನಡಿಗ ವಿಕ್ರಮ್ ಚಂದ್ರನಾಯಕ್ ರವರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಅವರನ್ನು ಭೇಟಿ ಮಾಡಿ ಆಡಳಿತಾತ್ಮಕ ನೆರವು ಕೋರಿದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ  ಸಾಹಸಿ ಯುವಕನಾದ ಸಿ.ವಿಕ್ರಮ್ ಗಸ್ತು ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2018 ರಲ್ಲಿ 8848.86 ಮೀ ಎತ್ತರದ ಜಗತ್ತಿನ ಅತ್ಯಂತ ತುತ್ತ ತುದಿಯಲ್ಲಿರುವ ಮೌಂಟ್ ಎವರೆಷ್ಟ್ ಶಿಖರವನ್ನು ಏರಿದ ಪ್ರಥಮ ಕನ್ನಡಿಗನಾಗಿ ಸಾಧನೆ ಮಾಡಿದ್ದರು. ಈಗ ಅವರಿಗೆ ಸರ್ಕಾರಿ ಸೇವೆಯಲ್ಲಿ ಪದೋನ್ನತಿ ಸಂಭಂದಿಸಿದಂತೆ ಕ್ಯಾಬಿನೆಟ್ ನಿಂದ ಅನುಮೋದನೆ ಬೇಕಾಗಿರುವುದರಿಂದ ಎ.ಎಸ್.ಪೊನ್ನಣ್ಣ ನವರಿಂದ ನೆರವು ಕೋರಲು ಬಂದಿದ್ದರು. ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಸಾಧಕನಿಗೆ ನೆರವು ನೀಡುವುದು ರಾಜ್ಯಕ್ಕೆ ನೀಡುವ ಗೌರವವಾಗಿದೆ. ಆದ್ದರಿಂದ ವಿಕ್ರಮ್ ಗೆ ಸಂಭಂದಿಸಿದಂತೆ ಆಡಳಿತಾತ್ಮಕ ನೆರವು ನೀಡಲು ತಾವು…

Read More