ಲೇಖಕ: admin

ಮಡಿಕೇರಿ ಫೆ.20 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಡಗು ಜಿಲ್ಲಾ ಶಾಖೆ, ಸೋಮವಾರಪೇಟೆ ತಾಲ್ಲೂಕು ಶಾಖೆಯ ಸಂಯುಕ್ತಾಶ್ರಯದಲ್ಲಿ ಫೆ.24 ಮತ್ತು 25 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಮೈದಾನದಲ್ಲಿ ಫೆ.24 ರಂದು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದ್ದು, ಆಸಕ್ತ ಸರ್ಕಾರಿ ಖಾಯಂ ನೌಕರರು ಫೆ.22 ರೊಳಗೆ https://forms.gle/3arj7sBogh2kieAKA ಲಿಂಕ್ ಬಳಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಫೆ.24 ರಂದು ಬೆಳಗ್ಗೆ 10.30 ಗಂಟೆಗೆ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಕ್ರೀಡಾಕೂಟಕ್ಕೆ ಚಾಲನೆ…

Read More

ಮಡಿಕೇರಿ ಫೆ.20 NEWS DESK :  ಭಾರತೀಯ ಕ್ರೀಡಾ ಪ್ರಾಧಿಕಾರದ ಚಿನ್ನದ ಪದಕ ವಿಜೇತ 19 ಹಾಕಿ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಆತ್ಮೀಯವಾಗಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನಿಸಿದರು. ಇತ್ತೀಚೆಗೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯಿ) ನಡೆದ ಅಖಿಲ ಭಾರತ ಮಟ್ಟದ ಅಂತರ್ ಸಾಯಿ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿ ಕ್ರೀಡಾ ಪ್ರಾಧಿಕಾರದ ವಿದ್ಯಾರ್ಥಿನಿಯರು ಪಾಲ್ಗೊಂಡು ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಕೊಡಗು ಜಿಲ್ಲೆಗೆ ಹೆಮ್ಮೆ ತರುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು. ಭಾರತೀಯ…

Read More

ಮಡಿಕೇರಿ ಫೆ.20 NEWS DESK :  ಈಗಾಗಲೇ 29ನೇ ಕೊಲ್ಕತ್ತಾ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಕಾಂಪಿಟೀಷನ್ ವಿಭಾಗದಲ್ಲಿ ಅಧಿಕೃತವಾಗಿ ಆಯ್ಕೆಗೊಂಡು ಹೆಸರು ಮಾಡಿರುವ ಸ್ವಸ್ತಿಕ್ ಎಂಟರ್ಟೈನ್ಮೆಂಟ್ ನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ದೇಶನದ “ಕಂದೀಲು” ಕನ್ನಡ ಸಿನಿಮಾ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಇದೇ ಫೆ.29 ರಿಂದ ಮಾರ್ಚ್ 7ರವರೆಗೆ ಬೆಂಗಳೂರಿನ ಒರಿಯಾನ್ ಮಾಲ್‍ನಲ್ಲಿ ನಡೆಯುವ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಮೊದಲನೆಯ ನಿರ್ದೇಶನದ “ರಂಗ ಪ್ರವೇಶ” ಕೊಡಗಿನ ಕನ್ನಡ ಸಿನಿಮಾದ ಮೊದಲನೇಯ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದಿರುವ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದಿರುವ 2ನೇ ಚಿತ್ರ “ಕಂದೀಲು” ಈಗಾಗಲೇ ಮಾನ್ಯತೆ ಪಡೆದಿರುವ ಎರಡು ಫೆಸ್ಟಿವಲ್‍ಗೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ. ಅಲ್ಲದೇ ಈ ಬಾರಿಯ ಚಿತ್ರೋತ್ಸವದ ಕರ್ನಾಟಕದಿಂದ ಸುಮಾರು 15 ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಯಶೋಧಪ್ರಕಾಶ್ ಕೊಟ್ಟುಕತ್ತಿರ ಒಬ್ಬರೇ ಮಹಿಳಾ ನಿರ್ದೇಶಕಿಯಾಗಿರುವುದು ಕೊಡಗಿಗೆ ಹೆಗ್ಗಳಿಕೆಯ ವಿಚಾರ. ವಿಭಿನ್ನ ಕಥಾ…

Read More

ಮಡಿಕೇರಿ ಫೆ.20 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಮಾತನಾಡಿ, ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ ಸಂತ ಕವಿ ಶ್ರೇಷ್ಠ ದಾರ್ಶನಿಕ ಕವಿ ಸರ್ವಜ್ಞ ಅವರು ಕನ್ನಡದಲ್ಲಿ ತ್ರಿಪದಿ ಸಾಲುಗಳ ಪದ್ಯ ಬರೆಯುವ ಮೂಲಕ ಮನೆ ಮಾತಾಗಿದ್ದಾರೆ ಎಂದು ತಿಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆ ಬಳಿಯ ಶಿವನೇರಿ ಗ್ರಾಮದಲ್ಲಿ ಜನಿಸಿ ಭಾರತದ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ್ದಾರೆ ಎಂದು ತಿಳಿಸಿದರು. ಕವಿ ಸರ್ವಜ್ಞ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಎಲ್ಲಾ ಮಹನೀಯರ ಜೀವನ ಸಂದೇಶಗಳನ್ನು ತಿಳಿದುಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು. ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ವೆಂಕಟನಾಯಕ್…

Read More

ಗೋಣಿಕೊಪ್ಪ ಫೆ.20 NEWS DESK :  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ತೆರೇಸಾ ವಿಕ್ಟರ್, ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಮಂಜುಳ ಅವರನ್ನು ಹಾತೂರು ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಕ್ಕಂಡ ರೋಶನ್ ಅವರ ಅಧ್ಯಕ್ಷತೆಯಲ್ಲಿ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಹಾಗೂ ಕೊಕ್ಕಂಡ ಕಾವೇರಪ್ಪ ಅವರು ಮಾತನಾಡಿ ಪಕ್ಷ ನಿಷ್ಠೆಗೆ ಫಲ ಸಿಗುತ್ತದೆ ಎಂದರು. ತಾಲ್ಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಲೀರ ಸಾದಲಿ, ಹಿರಿಯರಾದ ವಿ.ಟಿ.ವಾಸು, ದೊಡ್ಮನೆ ವಿಠಲ ಗೌಡ, ಗೋಣಿಕೊಪ್ಪ ಗ್ರಾ.ಪಂ ಸದಸ್ಯ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಮಾಜಿ ಸದಸ್ಯ ರಾಜಶೇಖರ್, ಪ್ರಮುಖರಾದ ಶಿವಾಜಿ, ನೂರೇರ ಧನ್ಯ, ಬೇಬಿ, ಪುಲಿಯಂಡ ರೋಷನ್, ಶ್ರೇಯಸ್ಸ್, ಬೊಳ್ಳಿ, ಸುರೇಶ್, ಅಮ್ಜು, ಸುರೇಶ್, ಮಧುಸೂದನ್ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು…

Read More

ಸೋಮವಾರಪೇಟೆ ಫೆ.20 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲವೆಂದು ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಪಂಚಾಯ್ತಿಯ ಸಾಮಾನ್ಯ ಸಭೆ ಆಡಳಿತಾಧಿಕಾರಿ ತಹಶೀಲ್ದಾರ್ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಖಾತೆ ವರ್ಗಾವಣೆ ಸೇರಿದಂತೆ ಸಾರ್ವಜನಿಕರ ಯಾವುದೇ ಅರ್ಜಿ ವಿಲೇವಾರಿಗೂ ಹಣ ನೀಡಲೇಬೇಕು. ಎರಡೂವರೆ, ಮೂರು ಸೆಂಟ್ ಜಾಗವಿದ್ದರೆ ಹಣ ಪಡೆದು ಅದನ್ನು ಹೆಚ್ಚುವರಿ ದಾಖಲಾತಿ ಮಾಡಿಕೊಡುತ್ತಿದ್ದಾರೆ ಎಂದು ಸದಸ್ಯೆ ಶೀಲಾ ಡಿಸೋಜ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಜೀವನ್, ಸಾರ್ವಜನಿಕರ ಸಮಸ್ಯೆ ಬಗ್ಗೆ ಸದಸ್ಯರು ಹೇಳಿದರೆ ಇಲ್ಲಿ ಬೆಲೆಯಿಲ್ಲ, ಆದರೆ ಸಾರ್ವಜನಿಕರು ನೇರವಾಗಿ ಬಂದು ಏನಾದರು ಕೊಟ್ಟರೆ ಕೆಲಸವಾಗುತ್ತದೆ ಎಂದು ದೂರಿದರು. ಇದಕ್ಕೆ ಒಪ್ಪದ ಮುಖ್ಯಾಧಿಕಾರಿ ನಾಚಪ್ಪ ಅವರು ಅನಾವಶ್ಯಕ ಆರೋಪ ಮಾಡಬೇಡಿ, ಇದಕ್ಕೆ ದಾಖಲೆ ಇದ್ದರೆ ಕೊಡಿ, ಇಲ್ಲಾ ಯಾರಾದರೂ ಹಣ ಕೇಳಿದರೆ ನನಗೆ ದೂರು ನೀಡಲು ಹೇಳಿ ಎಂದು ತಿರುಗೇಟು ನೀಡಿದರು. ವಲ್ಲಭಬಾಯಿ ರಸ್ತೆಯಲ್ಲಿ ನಿವಾಸಿಯೊಬ್ಬರು ಈ…

Read More

ಗೋಣಿಕೊಪ್ಪ ಫೆ.20 NEWS DESK : ಪತ್ರಕರ್ತನ ಸೋಗಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಆರೋಪದಡಿ ಡಿ.ನಾಗೇಶ್ ಎಂಬಾತನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಈತನ ವಿರುದ್ಧ ಗೋಣಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಡಿ.ನಾಗೇಶ್ ನನ್ನು 20 ದಿನಗಳ ನಂತರ ಮೈಸೂರಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದ್ವಿಚಕ್ರ ವಾಹನ ಮತ್ತು ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಪ್ರಕರಣಗಳಡಿ ತನಿಖೆಯನ್ನು ಕೈಗೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕು ಉಪ ಪೊಲೀಸ್ ಅಧೀಕ್ಷಕ ಮೋಹನ್ ಕುಮಾರ್, ಗೋಣಿಕೊಪ್ಪ ಉಪನಿರೀಕ್ಷಕಿ ರೂಪಾದೇವಿ ಬಿರಾದಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More

ಸೋಮವಾರಪೇಟೆ ಫೆ.20 NEWS DESK : ಲಂಚ ಸ್ವೀಕಾರದ ಆರೋಪದಡಿ ಸೋಮವಾರಪೇಟೆ ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ವೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಂಚ ಪಡೆದ ಆರೋಪ ಎದುರಿಸುತ್ತಿರುವ ಸರ್ವೇಯರ್ ಹೆಚ್.ಮಹದೇವಗೌಡ ಎಂಬುವವರನ್ನು ತನಿಖೆಗೆ ಒಳಪಡಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸರ್ವೇಯರ್ ಹೆಚ್.ಮಹದೇವಗೌಡ ಅವರನ್ನು ವಶಕ್ಕೆ ಪಡೆದರು. ಶನಿವಾರಸಂತೆ ಹೆಮ್ಮನೆ ಗ್ರಾಮದ ನಿವಾಸಿ ಅಕ್ರಂ ಪಾಷ ಎಂಬುವವರು ತಮಗೆ ಸೇರಿದ ಜಮೀನಿಗೆ ಸಂಬಂಧಿಸಿದಂತೆ ಕಡತ ವಿಲೇವಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರೂ.5 ಸಾವಿರ ಲಂಚಕ್ಕೆ ಹೆಚ್.ಮಹದೇವಗೌಡ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ರೂ.1 ಸಾವಿರ ಮೊದಲೇ ಪಡೆಯಲಾಗಿತ್ತು, ಉಳಿದ 4 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತರು ದಾಳಿ ನಡೆಸಿದರು ಎಂದು ಹೇಳಲಾಗಿದೆ. ಲೋಕಾಯುಕ್ತ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಮಹಾನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್ ನೇತೃತ್ವದಲ್ಲಿ, ಲೋಕಾಯುಕ್ತ ಅಧೀಕ್ಷಕ ವಿ.ಜಿ.ಸಜೀತ್, ಕೊಡಗು ಲೋಕಾಯುಕ್ತ ಪೊಲೀಸ್…

Read More

ಕಡಂಗ ಫೆ.20 NEWS DESK :  ಎಡಪಾಲ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯು ಎಡಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಿತು. ಎರಡು ದಿನಗಳ ಕಾಲ 8 ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆಯಿತು. ಹತ್ತನೇ ಆವೃತ್ತಿಯ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಫ್ಲೈಯಿಂಗ್ ಈಗಲ್ಸ್ ಬೆಂಗಳೂರು ತಂಡ ಪಡೆದುಕೊಂಡರೆ, ರನ್ನರ್ಸ್ ತಂಡವಾಗಿ ರೈಸಿಂಗ್ ಸ್ಟಾರ್ ಕತರ್ ತಂಡ ಪೆಡೆದುಕೊಂಡರು. ಕ್ರೀಡಾಕೋಟದ ಬ್ಯಾಟ್ಸ್‌ಮೆನ್ ಆಗಿ  ಈಗಲ್ಸ್ ತಂಡದ ಶಕೀರ್ ಮತ್ತು ಉತ್ತಮ ಬೌಲರ್ ಪ್ರಶಸ್ತಿ ಯನ್ನು ರೆಡ್ ಬುಲ್ ತಂಡದ ಹಂಜ್ಹ ಪೆಡೆದುಕೊಂಡರು. ತೀರ್ಪುಗಾರಿಕೆಯನ್ನು ಮಡಿಕೇರಿಯ ಹನೀಫ ಹಾಗೂ ಅಭಿ ನಡೆಸಿಕೊಟ್ಟರು. ವೀಕ್ಷಕ ವಿವರಣೆ ನವಾಜ್ಹ್ ಹಾಗೂ ಸುಹೇಲ್ ನಿರ್ವಹಿಸಿದರು. ವಾಲಿಬಾಲ್ ಪಂದ್ಯಾವಳಿಯ ವಿಜೇತರಾಗಿ ಹನೀಫ ಮಾಲೀಕತ್ವದ ತೂಫಾನ್ ವಾರಿಯರ್ಸ್ ಹಾಗೂ ರನ್ನರ್ಸ್ ತಂಡವಾಗಿ ನವಾಜ್ಹ್ ಮಾಲೀಕತ್ವದ ಬ್ಲಾಕ್ ಬಸ್ಟರ್ ತಂಡ ಪ್ರಶಸ್ತಿ ಪಡೆದುಕೊಂಡರು. ವಾಲಿಬಾಲ್ ಪಂದ್ಯಾಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಯಹ್ಯಾ, ಅಟ್ಯಾಕ್ಕರ್…

Read More

ಪುತ್ತೂರು ಫೆ.20 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಮಂಗಳೂರು ವಿಭಾಗದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ ವಿವೇಕಾನಂದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ತಂಡವು ತುಮಕೂರಿನಲ್ಲಿ ಫೆಬ್ರವರಿ 28 ಹಾಗೂ 29ರಂದು ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದೆ. ಕಾಲೇಜು ತಂಡದ ತೃತೀಯ ವರ್ಷದ ಎಐಎಂಎಲ್ ವಿಭಾಗದ ಪ್ರಫುಲ್ ಕ್ರೀಡಾಕೂಟದ ಉತ್ತಮ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತೃತೀಯ ಮೆಕ್ಯಾನಿಕಲ್ ವಿಭಾಗದ ದೀಕ್ಷಿತ್.ಬಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಶ್ರವಣ್ ಕುಮಾರ್ ರೈ, ಗುರುಚರಣ್, ವಿಘ್ನೇಶ್ ಭಂಡಾರಿ, ತೃತೀಯ ಎಐಎಂಎಲ್ ವಿಭಾಗದ ಪುಷ್ಪಕ್.ಕೆ.ಎ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಹಿತೇಶ್.ಒ, ಅಂತಿಮ…

Read More