ಲೇಖಕ: admin

ಮಡಿಕೇರಿ ಫೆ.21 NEWS DESK :  ಇಡೀ ವಿಶ್ವದಲ್ಲಿ ಭಾರತವು ಶ್ರೇಷ್ಠ ಸಂವಿಧಾನವನ್ನು ಹೊಂದಿದ್ದು, ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಸಂವಿಧಾನ ಜಾಗೃತಿ ಜಾಥ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಪ್ರಜೆಗಳಾದ ಪ್ರತಿಯೊಬ್ಬರೂ ಸಮನಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಹ ಸಮಾನ ಅವಕಾಶವನ್ನು ಹೊಂದಿದ್ದಾರೆ ಎಂದು ಹೇಳಿದರು. ಸಂವಿಧಾನದಡಿ ಪ್ರತಿಯೊಬ್ಬರೂ ಸಮಾನರಾಗಿದ್ದು, ಬಡವ-ಬಲ್ಲಿದ, ಮೇಲು-ಕೀಲು ಎಂಬುದಿಲ್ಲ. ರಾಷ್ಟ್ರದಲ್ಲಿ ಯಾರೂ ಸಹ ಅಸಮಾನತೆ ಹೊಂದಿರಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಕೆ.ರಾಮರಾಜನ್ ಅವರು ನುಡಿದರು. ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದೆ. ಹಾಗೆಯೇ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ಒಳಗೊಂಡಿದೆ. ಆ…

Read More

ಮಡಿಕೇರಿ ಫೆ.21 NEWS DESK :  ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯ ಲೈನ್ ಮನೆಗಳಲ್ಲಿ ವಾಸವಿರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಅರಣ್ಯ ಬುಡಕಟ್ಟು ಒಕ್ಕೂಟದ ಮೈಸೂರು ಜಿಲ್ಲಾ ಪ್ರಮುಖ ಶೈಲೇಂದ್ರ ಕುಮಾರ್, ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ರಾಪ್ತ ಹೆಣ್ಣು ಮಕ್ಕಳನ್ನು ಪ್ರೀತಿ, ಪ್ರೇಮದ ವಿಚಾರದಲ್ಲಿ ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಮತ್ತು ಒಂಟಿಯಾಗಿರುವ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿ, ಸಂತ್ರಸ್ತರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಹಣ ನೀಡಿದರೆ ಎಲ್ಲವೂ ಸಾಧ್ಯ ಎನ್ನುವ ಮನೋಸ್ಥಿತಿ ಹಲವರಲ್ಲಿದೆ. ದೌರ್ಜನ್ಯ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಬಾಲಕಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಇತ್ತೀಚೆಗೆ ದಕ್ಷಿಣ ಕೊಡಗಿನ ಗ್ರಾಮವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೊಳಗಾದ ಅಪ್ರಾಪ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭ ಕೆಲವು…

Read More

ಮಡಿಕೇರಿ ಫೆ.21 NEWS DESK : ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ನೀಡುವ “ಗೃಹಲಕ್ಷ್ಮಿ”ಯ ಮಾಸಿಕ ರೂ.2 ಸಾವಿರ ಅನೇಕರಿಗೆ ಇಲ್ಲಿಯವರೆಗೆ ತಲುಪಿಲ್ಲ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾ ಕೋಶಾಧಿಕಾರಿ ಕೆ.ಎಂ.ಯೂಸುಫ್, ಸೌಲಭ್ಯಗಳನ್ನು ತ್ವರಿತವಾಗಿ ಫಲಾನುಭವಿಗಳಿಗೆ ತಲುಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಅಂಚೆ ಮೂಲಕ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಅವರು, ಯೋಜನೆಗಳು ಜಾರಿಯಾಗಿ 6 ತಿಂಗಳು ಕಳೆದಿದ್ದರೂ ಸರಕಾರದ ಸೌಲಭ್ಯಕ್ಕಾಗಿ ಜನರು ಪರದಾಡುವುದು ತಪ್ಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕ ಮಹಿಳೆಯರು ದಾಖಲೆಗಳಿಗಾಗಿ ಬ್ಯಾಂಕ್, ತಾಲ್ಲೂಕು ಕಚೇರಿ, ಆಧಾರ್ ಸೆಂಟರ್, ಸೈಬರ್ ಸೆಂಟರ್‍ಗಳಿಗೆ ಅಲೆದಾಡುತ್ತಿದ್ದಾರೆ. ಇದರಿಂದ ಕೆಲವೊಂದು ಮನೆಗಳಲ್ಲಿ ಕಲಹ ಏರ್ಪಡುತ್ತಿದೆ. ಸರಕಾರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವ ಕ್ರಮ ಕೈಗೊಂಡಿದ್ದರೆ ಅಥವಾ ಎಲ್ಲಾ ದಾಖಲೆಗಳನ್ನು ಪರಿಪೂರ್ಣಗೊಳಿಸುವಂತೆ ಆದೇಶಿಸಿ, ಆ ನಂತರ ಯೋಜನೆಯನ್ನು ನೀಡಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗೃಹಲಕ್ಷ್ಮಿ…

Read More

ಮಡಿಕೇರಿ ಫೆ.21 NEWS DESK :  ವಿಶ್ವರಾಷ್ಟ್ರ ಸಂಸ್ಥೆಯ ಅಂತರ ರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. 2024ರ ವಿಶ್ವ ಮಾತೃಭಾಷಾ ದಿನದಂದು ಯುನೆಸ್ಕೋ “ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ” ಎಂಬ ಘೋಷವಾಕ್ಯವನ್ನು ಮೊಳಗಿಸಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು. ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತೀ ವರ್ಷ ಆಕ್ಸ್ಫರ್ಡ್ ಡಿಕ್ಷನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಹೊಸ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಆಕ್ಸ್ಫರ್ಡ್ ಡಿಕ್ಷನರಿ ಎರಡನ್ನು ಕೂಡ ಸಮೃದ್ಧ ಮತ್ತು ಶ್ರೀಮಂತಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಒಟ್ಟು 27 ಹಕ್ಕೊತ್ತಾಯಗಳನ್ನ ಮಂಡಿಸಿದರು. ಕೊಡವ ಲ್ಯಾಂಡ್ ಭೂ ರಾಜಕೀಯ…

Read More

ಮಡಿಕೇರಿ ಫೆ.21 NEWS DESK : ಗುಜರಾತ್ ನಲ್ಲಿ ನಡೆದ ಬ್ರೈನೋಬ್ರೈನ್  ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋ ಬ್ರೈನ್ ಸಂಸ್ಥೆಯ ವಿದ್ಯಾರ್ಥಿ 6 ವರ್ಷದ ಆಹಾನ್ ಬನ್ವಾಲ್  ಚಾಂಪಿಯನ್ನಾಗಿ ಹೊರಹೊಮ್ಮಿದ್ದಾನೆ. ಗುಜರಾತ್ ರಾಜ್ಯ ಉದಯಪುರದ ಮೂಲ ನಿವಾಸಿಗಳಾಗಿರುವ ಅಭಿಷೇಕ್ ಕುಮಾರ್ ಬನ್ವಾಲ್ ಮತ್ತು ಸ್ಮಿತಾ ಶೇಖರ್ ದಂಪತಿಗಳ ಪುತ್ರ ಆಹಾನ್ ಬನ್ವಾಲ್  ಮಡಿಕೇರಿ ಬ್ರೈನೋಬ್ರೈನ್ ಸಂಸ್ಥೆಯ ತರಬೇತುದಾರರಾದ  ಮಾಪಂಗಡ ಕವಿತಾ ಕರುಂಬಯ್ಯ ಅವರಿಂದ ಅಬಾಕಸ್ ತರಬೇತಿ ಪಡೆಯುತ್ತಿದ್ದಾನೆ. ಗುಜರಾತ್ ರಾಜ್ಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಒಟ್ಟು 700 ಮಕ್ಕಳು ಭಾಗಿಯಾಗಿದ್ದು, ಈ ಸ್ಪರ್ಧೆಯಲ್ಲಿ ಆಹಾನ್ ಬನ್ವಾಲ್ ಚಾಂಪಿಯನ್ನಾಗಿರುವುದು ಪ್ರಶಂಷನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ  ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಮಡಿಕೇರಿ ಫೆ.21 NEWS DESK :  ಪೇರಡ್ಕ ಗೂನಡ್ಕ ಪ್ರದೇಶವು ಹಿಂದಿನಿಂದಲೂ ಸೌಹಾರ್ದತೆಯ ಪ್ರದೇಶವಾಗಿದೆ. ಇಲ್ಲಿ ಹಲವಾರು ಸರ್ವಧರ್ಮಿಯರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನಾವೆಲ್ಲರು ಜಾತ್ಯಾತೀತ ಮನೋಭಾವದಿಂದ ಸಹಬಾಳ್ವೆಯ ಜೀವನ ಸಡೆಸಬೇಕು. ರಾಜಕೀಯ ಜೀವನದಲ್ಲಿ ಟೀಕೆಗಳು ಸಹಜ ಅದಕ್ಕೆಲ್ಲ ಎದೆ ಗುಂದುವನು ನಾನಲ್ಲ ಸೌಹಾರ್ಧತೆಯನ್ನು ನನ್ನ ಪೂರ್ವಿಕರಿಂದ ತಂದೆ- ತಾಯಿಯಿಂದ ಕಲಿತಿರುತ್ತೇನೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಪೇರಡ್ಕ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ವಲಿಯುಲ್ಲಾಹಿ ದರ್ಗಾ ಶರೀಪಿನ ಉರೂಸ್ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು. ಈ ಊರಿನ ಅಭಿವೃದ್ಧಿ ಇತಿಹಾಸ ನನಗೆ ತಿಳಿದಿದೆ. ನನ್ನನ್ನು ನಿಮ್ಮೆಲ್ಲರ ದುವಾ ಆಶೀರ್ವಾದದಿಂದ ಅಲ್ಲಾಹು ಈ ಪುಣ್ಯ ಸ್ಥಳಕ್ಕೆ ತಲುಪಿಸಿದ್ದಾರೆ. ಇಲ್ಲಿಯ ಮತ್ತು ಊರಿನ ಅಭಿವೃದ್ಧಿ ಬಗ್ಗೆ ಮಿತ್ರ ಟಿ.ಎಂ.ಶಾಹಿದ್ ತೆಕ್ಕಿಲ್ ಮತ್ತು ಜಿ.ಕೆ.ಹಮೀದ್ ಗೂನಡ್ಕ ಅವರು ಸದಾ ತಿಳಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. ಊರಿನ ಅಭಿವೃದ್ಧಿ ಬಗ್ಗೆ ಪರಿಸರದ ಸೌದರ್ಯದ ಬಗ್ಗೆ ಸಂತಸ…

Read More

ಮಡಿಕೇರಿ ಫೆ.21 NEWS DESK : ಕೊಡಗಿನ ಕೊಡವ ಸಿನಿಮಾ ರಂಗಕ್ಕೆ 52 ವರ್ಷ ತುಂಬಿದೆ. ಪ್ರಕೃತಿಯ ಸೊಬಗಿಗೆ ಮನಸೋತು ಎಷ್ಟೋ ಸಿನಿಮಾಗಳು ಕೊಡಗಿನಲ್ಲಿ ಚಿತ್ರೀಕರಣಗೊಂಡಿವೆ, ಇನ್ನೂ ಚಿತ್ರೀಕರಣಗೊಳ್ಳುತ್ತಲೇ ಇವೆ. ಕೊಡಗಿನಲ್ಲೂ ಸಿನಿ ಪ್ರಿಯರು, ಉತ್ತಮ ಕಲಾವಿದರುಗಳು ಇದ್ದಾರೆ, ಕನ್ನಡ, ಹಿಂದಿ ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳ ಸಿನಿಮಾಗಳನ್ನು ಟೆಂಟ್ ಪರದೆಯ ಮೇಲೆ ನೋಡುತ್ತಿದ್ದ ಕಾಲಘಟ್ಟದಲ್ಲಿ 1972 ರಲ್ಲಿ ಕೊಡಗಿನಲ್ಲೂ ಮೊಟ್ಟಮೊದಲ ಬಾರಿಗೆ ಚಿತ್ರೀಕರಣಗೊಂಡು ಬೆಳಕಿಗೆ ಬಂದ ಕೊಡವ ಸಿನಿಮಾ “ನಾಡ ಮಣ್ಣ್ ನಾಡ ಕೂಳ್”. ಕೊಡಗಿನ ಜನರು ಕೂಡ ಸಿನಿಮಾ ನಿರ್ಮಿಸಬಹುದು ಎಂದು ತೋರಿಸಿಕೊಟ್ಟ ಸುಸಂದರ್ಭ ಅದು. ಕೊಡವ ಭಾಷಾ ಚಿತ್ರವೊಂದಕ್ಕೆ ಅಭೂತಪೂರ್ವ ಪ್ರೋತ್ಸಾಹ ನೀಡಿದ ಕಾಲವೂ ಅದಾಗಿತ್ತು. ನಂತರದ ದಿನಗಳಲ್ಲಿ ಮತ್ತಷ್ಟು ಕೊಡವ ಸಿನಿಮಾಗಳು ಬರಲಾರಂಭಿಸಿದವು. ಅಧಿಕೃವಾಗಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಸಿನಿಮಾಗಳಾದ ಮಹಾವೀರ ಅಚ್ಚುನಾಯಕ, ಮಂದಾರಪೂ, ಪೊಣ್ಣ್‌ರ ಮನಸ್ಸ್, ನಾಬಯಂದಪೂ, ನಾ ಪುಟ್ಟ್‍ನ ಮಣ್ಣ್, ಜಡಿಮಳೆ, ಬಾಳ್‌ಪೊಲಂದತ್, ಪೊನ್ನಮ್ಮ, ತಳಂಗ್‍ನೀರ್, ಬಾಕೆಮನೆ,…

Read More

ಮಡಿಕೇರಿ ಫೆ.21 NEWS DESK : ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಿ.ಕೆ.ಚಂದ್ರು ಹಾಗೂ ಸೋಮವಾರಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರನ್ನಾಗಿ ಜಿ.ಜಗನ್ನಾಥ್ ಅವರನ್ನು ನೇಮಕ ಮಾಡಿರುವುದಾಗಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ ತಿಳಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಸ್‌ಸಿ ಮೋರ್ಚಾವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರನ್ನು ನೇಮಕ ಮಾಡಿ ಎಸ್‌ಸಿ ಮೋರ್ಚಾವನ್ನು ಸಂಘಟಿಸಲಾಗುವುದು. ಸಧ್ಯದಲ್ಲೇ ಎಸ್.ಸಿ.ಮೋರ್ಚದ ಸಭೆ ನಡೆಸಲಾಗುವುದೆಂದು ರವಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Read More

ಮಡಿಕೇರಿ ಫೆ. 21 NEWS DESK :  ಪತ್ರಕತ೯ ಅನಿಲ್ ಹೆಚ್.ಟಿ ಬರೆದಿರುವ ಅಯೋಧ್ಯೆ  – ಪ್ರೀತಿಯ ಮಂದಿರ, ರಾಷ್ಟ್ರಮಂದಿರ ಹೆಸರಿನ ಹೊಸ ಪುಸ್ತಕ ಫೆಬ್ರವರಿ 23 ರಂದು ಶುಕ್ರವಾರ ಲೋಕಾಪ೯ಣೆಯಾಗಲಿದೆ. ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಫೆ.23 ರಂದು ಶುಕ್ರವಾರ ಸಂಜೆ 6 ಗಂಟೆಗೆ ಅಯೋಧ್ಯೆ  ಪುಸ್ತಕವನ್ನು  ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡು ಬರೆದ ಖ್ಯಾತ ಕವಿ ಡಾ. ಗಜಾನನ ಶಮ೯ಲೋಕಾಪ೯ಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಪಾಲ್ಗೊಳ್ಳಲಿದ್ದಾರೆ.  ಅಯೋಧ್ಯೆ  ಹಿನ್ನಲೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣ, ಅಯೋಧ್ಯೆಯ ಪ್ರವಾಸಿ ತಾಣಗಳು, ಮಂದಿರ ನಿಮಾ೯ಣದ ಹಿಂದಿನ ಹೋರಾಟಗಳ ಮಾಹಿತಿಗಳೂ ಸೇರಿದಂತೆ ಅನೇಕ ಲೇಖನಗಳನ್ನು 130 ಪುಟದ, ವಣ೯ಮಯ ಪುಸ್ತಕದಲ್ಲಿ ದಾಖಲಿಸಲಾಗಿದೆ. ಅಯೋಧ್ಯೆ ಸಂಬಂಧಿತ ಹಲವು ವಣ೯ ಛಾಯಾಚಿತ್ರಗಳೂ ಪುಸ್ತಕದಲ್ಲಿದೆ ಎಂದು ಪ್ರಕಾಶನ ಸಂಸ್ಥೆಯಾದ ವಾತಾ೯ ಕಮ್ಯೂನಿಕೇಶನ್ಸ್ ಪ್ರಕಟಣೆ ತಿಳಿಸಿದೆ.

Read More

ನಾಪೋಕ್ಲು ಫೆ.21 NEWS DESK :  ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಪುರುಷರ ಅಂತರ ಸಾಯಿ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನು ಒಳಗೊಂಡ ಬೆಂಗಳೂರು ಸಾಯಿ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ರಾಷ್ಟ್ರದ ಒಂಬತ್ತು ಸಾಯಿ ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಬೆಂಗಳೂರು ತಂಡವು ಕುರುಕ್ಷೇತ್ರ ತಂಡವನ್ನು 3 -2 ಗೋಲುಗಳಿಂದ ಮಣಿಸಿತು. ಜಿಲ್ಲೆಯ ಚೋಯಮಾದಂಡ ಬಿದ್ದಪ್ಪ, ತೀತಿಮಾಡ ಯಶಸ್, ಕಂಭೀರ0ಡ ಮಾನವ್ ,ಮಂಡೇಟಿರ ದನುಷ್,ಕುಲ್ಲೇಟಿರ ವಚನ್ ಕಾಳಪ್ಪ, ಬಿದ್ದಾತಂಡ ಅಖಿಲ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ಕ್ರೀಡಾಪಟುಗಳಾಗಿ ಪಾಲ್ಗೊಂಡಿದ್ದರು. ಪದ್ಮಶ್ರೀ ಪುರಸ್ಕೃತ ಡಾ. ಎಂ.ಪಿ .ಗಣೇಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ. 

Read More