ಲೇಖಕ: admin

ಮಡಿಕೇರಿ ಫೆ.19 : ಸಿದ್ದಾಪುರ ಅಮೃತ ಯುವ ಮೊಗೇರ ವತಿಯಿಂದ ಫೆ.24, 25 ಹಾಗೂ 26 ರಂದು ಅಮ್ಮತಿಯಲ್ಲಿ  ದ್ವಿತೀಯ ವರ್ಷದ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ. ಅಮ್ಮತಿಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ಮಾಲೀಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದ್ದು ,ಟೀಮ್ ಹಂಟರ್ಸ್ ಮರಗೋಡು, ಫ್ರೆಂಡ್ಸ್ ಕ್ರಿಕೆಟರ್ಸ್ ಅಮ್ಮತಿ, SPM ರಾಯಲ್ ವಿರಾಜಪೇಟೆ, ಪ್ರೆಸಿಡೆಂಟ್ಸ್ XI ಸೋಮವಾರಪೇಟೆ, ಟೀಮ್ ಕಾರ್ಣಿಕ ಕೊಡಗು, ರಾಪ್ಟಾರ್ ಕಾನನಕಾಡು, ಟೀಮ್ ಬ್ರದರ್ಸ್ ಬಕ್ಕ, ಫ್ರೆಂಡ್ಸ್ ಘಿಟ ಅಮ್ಮತಿ, ಮರ್ಸಿಲೆಸ್ಸ್ ಕ್ರಿಕೆಟರ್ಸ್, ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ವಿಜೇತ ತಂಡಕ್ಕೆ 50,000 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ, ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ. ಪಂದ್ಯಾವಳಿಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಪಿ.ಸಿ.ರಮೇಶ್ ಉದ್ಘಾಟಿಸಲಿದ್ದು,  ಮುಖ್ಯ ಅತಿಥಿಗಳಾಗಿ ಅಮೃತ ಯುವ…

Read More

ಮಡಿಕೇರಿ ಫೆ.19 NEWS DESK :  ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಅಶೋಕ ಪುರ ಮತ್ತು ಚೌಡೇಶ್ವರಿ ದೇವಾಲಯ ಬಳಿಯಲ್ಲಿನ ಅಂಗನವಾಡಿಗಳಿಗೆ ವಿವಿಧ ಸಾಮಾಗ್ರಿಗಳನ್ನು ನೀಡಲಾಯಿತು. ಊಟದ ತಟ್ಟೆ, ಲೋಟ, ನೆಲಹಾಸು, ತಟ್ಟೆ ಇರಿಸಲು ಸ್ಟಾಂಡ್ ಗಳನ್ನು ಮಿಸ್ಟಿ ಹಿಲ್ಸ್ ಮೂಲಕ ರೋಟರಿ ಜಿಲ್ಲಾ ಗವನ೯ರ್ ಎಚ್.ಆರ್.ಕೇಶವ್ ವಿತರಿಸಿದರು. ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ . ಎಸ್.ಸಂಪತ್ ಕುಮಾರ್ ನಿದೇ೯ಶಕರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ., ಪೊನ್ನಚ್ಚನ ಮಧುಸೂದನ್ , ಜಗದೀಶ್ ಪ್ರಶಾಂತ್, ಬಿ.ಕೆ. ರವೀಂದ್ರರೈ, ವಿನೋದ್ ಅಂಬೆಕಲ್, ಪ್ರಸಾದ್ ಗೌಡ, ನಗರಸಭೆಯ ಮಾಜಿ ಸದಸ್ಯೆ ವೀಣಾಕ್ಷಿ, ರೋಟರಿ ಸದಸ್ಯ ರವಿಕುಮಾರ್ ಹಾಜರಿದ್ದರು.

Read More

 ಮಡಿಕೇರಿ ಫೆ.19 NEWS DESK  : ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಇಂದು ಬೆಂಗಳೂರಿನಲ್ಲಿ  ಸನ್ಮಾನಿಸಿ ಗೌರವಿಸಿದರು.

Read More

ಸೋಮವಾರಪೇಟೆ ಫೆ.19 NEWS DESK :  ತಾಲ್ಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬುವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ನಡೆದಿದೆ. ರಸ್ತೆ ಬದಿಯ ಕಾಡಿಗೆ ಬೆಂಕಿ ಬಿದ್ದು ಪಕ್ಕದ ಕಾಫಿ ತೋಟಕ್ಕೂ ವ್ಯಾಪಿಸಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಭಾಗದಲ್ಲಿ ಕೋಟೆ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಧೂಮಪಾನ ಮಾಡಿ ಎಸೆದ ಸಿಗರೇಟ್‍ನಿಂದ ಬೆಂಕಿ ಹತ್ತಲು ಕಾರಣವಾಗಿರಬಹುದು ಎಂದು ಸ್ಥಳೀಯ ನಿವಾಸಿ ಗೀಜಿಗಂಡ ಲೋಕೇಶ್ ಹೇಳಿದ್ದಾರೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.

Read More

ನಾಪೋಕ್ಲು ಫೆ.19 NEWS DESK : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆಯ ಬದಿಗೆ ಸರಿದ ಘಟನೆ ಕೋರಂಗಳದಲ್ಲಿ ಜರುಗಿದೆ. ಬೆಂಗಳೂರು ಕಡೆಯಿಂದ ಭಾಗಮಂಡಲಕ್ಕೆ ತೆರಡುತ್ತಿದ್ದ ಕರ್ನಾಟಕ ಸರಕಾರ ರಸ್ತೆ ಸಾರಿಗೆ ರಾಜಹಂಸ ಬಸ್ಸೊಂದು ಅಯ್ಯಂಗೇರಿ ಗ್ರಾಮದ ಕೋರಂಗಲ ಶಾಲೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದ್ದು, ಅಪಾಯದಂಚಿನಿಂದ ಪಾರಾಗಿದೆ. ಬಸ್ಸಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು,ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ವರದಿ : ದುಗ್ಗಳ ಸದಾನಂದ 

Read More

ನಾಪೋಕ್ಲು ಫೆ.19 NEWS DESK : ಕರ್ನಾಟಕ ಹಿರಿಯ ಫುಟ್ಬಾಲ್ ತಂಡಕ್ಕೆ ಬಾಳೆಯಡ ಮೃನಲ್ ಮುತ್ತಣ್ಣ ಆಯ್ಕೆಯಾಗಿದ್ದಾರೆ. ಇವರು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್ ಸಂತೋಷ ಟ್ರೋಫಿಗಾಗಿ ಆಡಿದ ಯುವ ಆಟಗಾರ. ಮೃನಲ್ ಮುತ್ತಣ್ಣ ಬಾಳೆಯಡ ಸತೀಶ್ ಮತ್ತು ಬಿಂದು ದಂಪತಿಗಳ ಪುತ್ರ. ವರದಿ : ದುಗ್ಗಳ ಸದಾನಂದ. 

Read More

ವಿರಾಜಪೇಟೆ ಫೆ.19  NEWS DESK : ಕೇಂದ್ರ ಸಾಹಿತ್ಯ ಅಕಾಡೆಮಿಯು ಆಂದ್ರ ಪ್ರದೇಶದ ವಿಜಯವಾಡ ಆಂದ್ರ ಲಾಯಲ್ ಕಾಲೇಜಿನ ಸಹಯೋಗದಲ್ಲಿ ಫೆ.21ರಂದು ನಡೆಸುವ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯಲ್ಲಿ ಕೊಡವ ಭಾಷಾ ಕವಿಯಾಗಿ ಮುಲ್ಲೇಂಗಡ ಮಧೋಷ್ ಪೂವಯ್ಯ ಭಾಗವಹಿಸಲಿದ್ದಾರೆ.

Read More

ಬೆಂಗಳೂರು ಫೆ.19 NEWS DESK :  ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ  ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಬಳಿಕ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ವಿಧಾನಸೌಧದಲ್ಲಿ ನಡೆದ ಒಡಂಬಡಿಕೆ ವಿನಿಮಯದ ನಂತರ ಮಾತನಾಡಿದ ಸಚಿವ ಪಾಟೀಲ, `ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು…

Read More

ಮಡಿಕೇರಿ ಫೆ.19 NEWS DESK :   ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಾಧಿಪತಿ ಸ್ವಾತಂತ್ರ್ಯ ಸಿಕ್ಕಿದ ನಂತರ ಆರಂಭವಾಯಿತು. ಅಂದು ಕಾಂಗ್ರೆಸ್ ಪಕ್ಷ ಬ್ರಿಟಿಷರ ತೆಕ್ಕೆಯಿಂದ ಆಡಳಿತ ವಹಿಸಿಕೊಳ್ಳುವಾಗ ಅಂದು ಪ್ರಧಾನಿ ಅಭ್ಯರ್ಥಿಯಾಗಿ ನೆಹರು ಅವರು ಆಯ್ಕೆಯಾದರು. ಸರ್ದಾರ್ ವಲಭ ಪಟೇಲ್, ಲಾಲ್ ಬಹುದೂರ್ ಶಾಸ್ತ್ರಿ ಇಂತಹ ಅಭ್ಯರ್ಥಿ ಇದ್ದರು. ಅವರು ಗಾಂಧೀಜಿಯ ಆಪ್ತರಾಗಿದ್ದ ನೆಹರು ರವರನ್ನು ಆಯ್ಕೆ ಮಾಡಿದರು. ಗಾಂಧೀಜಿಯ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಕೈ ಬಿಡಲಾಯಿತು. ಅಂದಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಏಕಾಧಿಪತಿ ಆಡಳಿತ ಜಾರಿಗೆ ಬಂತು. ಆದರೆ ಇಂದಿರಾ ಗಾಂಧೀಜಿಯು ಪ್ರಧಾನಿ ಆಗುವವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟಾಗಿ ಏಕಾಧಿಪತಿ ಇರಲಿಲ್ಲ. ಯಾವಾಗ ಇಂದಿರಾ ಗಾಂಧೀಜಿಯ ಸುಪ್ರದಿಗೆ ಪಕ್ಷ ಬಂತೋ ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷ ಅವರ ಕುಟುಂಬದ ಹಿಡಿತದಲ್ಲಿ ಇದೆ. ಇಂದಿರಾಗಾಂಧಿ ನಂತರ ರಾಜೀವ್ ಗಾಂಧಿ ಅಲ್ಪ ಕಾಲ ಆಡಳಿತ ನಡೆಸಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡು ರಿಮೋಟ್ ಆಡಳಿತ ನಡೆಸಿದರು. ಸೋನಿಯಾ ಗಾಂಧಿ ಇದು…

Read More

ಬೆಂಗಳೂರು ಫೆ.19 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಟಾಟಾ ಸಮೂಹ ಸಂಸ್ಥೆಯ ಏರ್ ಇಂಡಿಯಾ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್  ರಾಜ್ಯದಲ್ಲಿ ಒಟ್ಟು 2300 ಕೋಟಿ ರೂಪಾಯಿ ಹೂಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ , ಟಾಟಾ ಸಮೂಹದ ನಿಪುಣ್ ಅಗರ್ ವಾಲ್ , ಸುಕರಣ್ ಸಿಂಗ್, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿ., ಸಿಇಒ ಹರಿ ಮರಾರ್ ಉಪಸ್ಥಿತರಿದ್ದರು.

Read More