ಲೇಖಕ: admin

ಮಡಿಕೇರಿ ಫೆ.16 NEWS DESK :  ದಕ್ಷಿಣ ಕೊಡಗಿನ ಮಾಯಮುಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊರಗಿನವರಿಂದ ಕಸದ ಸಮಸ್ಯೆ ಸೃಷ್ಟಿಯಾಗಿದೆ. ಬೇರೆ ಊರುಗಳಿಂದ ತಂದ ರಾಶಿ ರಾಶಿ ಕಸವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾ.ಪಂ ರೂ.10 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಕಸ ಸುರಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವರು ಮಾಯಮುಡಿ ಇಲ್ಲಿಯವರೆಗೆ ಸ್ವಚ್ಛ ಗ್ರಾಮವಾಗಿತ್ತು. ಆದರೆ ಇತ್ತೀಚೆಗೆ ಬೇರೆ ಊರುಗಳಿಂದ ಕಸದ ರಾಶಿಯನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಯಮುಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವಿದೆ. ಬೇರೆ ಊರಿನಿಂದ ಕಸವನ್ನು ತಂದು ಎಲ್ಲೆಂದರಲ್ಲಿ ಹಾಕುತ್ತಿರುವ ಕಿಡಿಗೇಡಿಗಳು ಅಶುಚಿತ್ವದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇದನ್ನು ಗ್ರಾ.ಪಂ ಗಂಭೀರವಾಗಿ ಪರಿಗಣಿಸಿದ್ದು, ಯಾರೇ ಕಸ ಹಾಕಿದರೂ ರೂ.10 ಸಾವಿರ ದಂಡ ವಿಧಿಸಲಾಗುವುದು ಮತ್ತು ಕಸ ಹಾಕುವವರ ಮೇಲೆ ನಿಗಾ ವಹಿಸಲು…

Read More

ಪುತ್ತೂರು ಫೆ.16 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಡಾ.ನಿಶ್ಚಯ್ ಕುಮಾರ್ ಹೆಗ್ಡೆ ಪದ ಸ್ವೀಕಾರ ಮಾಡಿದ್ದಾರೆ. ಹದಿನೆಂಟು ವರ್ಷಗಳ ಅಧ್ಯಾಪನದ ಅನುಭವವನ್ನು ಹೊಂದಿರುವ ಇವರು ಕಂಪ್ಯೂಟರ್ ವಿಭಾಗದ ನೂತನ ತಂತ್ರಜ್ಞಾನಗಳ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಪದಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು.

Read More

ವಿರಾಜಪೇಟೆ ಫೆ.16 NEWS DESK :  ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ಯುವಕ ಸಂಘದ ವತಿಯಿಂದ ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿಯ ನೂತನ ತಾಲೂಕು ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಪುರಸಭೆ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಜವಬ್ದಾರಿ ಸ್ಥಾನ ಸಿಕ್ಕಿರುವುದು ತುಂಬಾ ಸಂತೋಷದ ವಿಷಯ ಮತ್ತು ಕಲ್ಲುಬಾಯ್ಸ್ ತಂಡದ ವತಿಯಿಂದ ತಾವು ಹುಟ್ಟಿದ ಪ್ರದೇಶದಲ್ಲಿ ಸನ್ಮಾನ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಒಬ್ಬ ನಾಯಕನಿಗೆ ಏನೇ ಪದವಿ ಬಂದರೂ ತಮ್ಮ ಹುಟ್ಟೂರಿನಲ್ಲಿ ಸಿಗುವ ಗೌರವ, ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಲಾಂ ಅವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ, ಅವರ ಬದ್ಧತೆ ಇಂದು ಅವರಿಗೆ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ. ಕಡು ಬಡವರು ಸರಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದಾರೆ. ಆದರೆ ಅವರಿಗೆ ಇಂದಿಗೂ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾದ್ಯವಾಗಿಲ್ಲ. ಈ ಸಮಿತಿ…

Read More

ಮಡಿಕೇರಿ ಫೆ.16 NEWS DESK :  ಸದಸ್ಯರ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದ ನಂತರ ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಎನ್.ಎ.ರವಿ ಬಸಪ್ಪ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಹಾಗೂ ಪಶುಪಾಲನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ದವಸದ ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಸಂಘಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕವೂ ಸಹ ಅಗ್ರ ಪಾಲು ಉತ್ಪಾದಕರ ರಾಜ್ಯಗಳ ಪೈಕಿ ಇದೆ. ಆದರೆ ಕೊಡಗು ಕೇವಲ ಹಾಲಿನ ಮಾರಾಟ ಪ್ರದೇಶವಾಗಿದ್ದು ಹೈನೋದ್ಯಮ…

Read More

ನಾಪೋಕ್ಲು ಫೆ.16 NEWS DESK :  ವಿದ್ಯುತ್ ಲೈನಿಗೆ ಮರದ ಗೊಂಬೆ ಸ್ಪರ್ಶಿಸಿ ಶಾರ್ಟ್ ಸರ್ಕಿಟ್ ಉಂಟಾಗಿ ಅಡಿಕೆ ಹಾಗೂ ಸಿಲ್ವರ್ ಗಿಡಗಳು ಭಸ್ಮವಾದ ಘಟನೆ ಚರಿಯಪರಂಬುವಿನಲ್ಲಿ ನಡೆದಿದೆ. ಚರಿಯ ಪರಂಬು ರಸ್ತೆಯಲ್ಲಿರುವ ಮೇಜರ್ ನಂದ ಅವರ ತೋಟದ ಪಕ್ಕ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಸುಮಾರು ಒಂದು ಎಕ್ಕರೆ ಜಾಗದಲ್ಲಿದ್ದ ಅಡಿಕೆ, ಸಿಲ್ವರ್ ಗಿಡ ನಾಶವಾಗಿದೆ. ಇದರಿಂದಾಗಿ ನಾಪೋಕ್ಲು ಪಟ್ಟಣಕ್ಕೆ ನೀರು ಸರಬರಾಜಿನ ಪಂಪು ನಿಷ್ಕ್ರಿಯಗೊಂಡಿದ್ದು ಸಮಸ್ಯೆ ಎದುರಾಗಿದೆ . ಚೆಸ್ಕಾಂ ಇಲಾಖೆಯ ಇಂಜಿನಿಯರ್ ಹರೀಶ್ ಪ್ರತಿಕ್ರಿಯಿಸಿ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಕ್ರಮ ಕೈಗೊಳ್ಳಲಾಗಿದೆ. ತೋಟದ ಮಾಲೀಕರು ಮರ ಕಡಿಯಲು ಅನುಮತಿ ನೀಡಿದರೆ ಶೀಘ್ರ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ವರದಿ : ದುಗ್ಗಳ ಸದಾನಂದ  

Read More

ನಾಪೋಕ್ಲು ಫೆ.16 NEWS DESK : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ‘”ಕಾಲತ್ ರ ಕಳಿ” ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ನಡೆಯಿತು. ಪಿ ಅಂಡ್ ಜಿ ಕ್ರಿಯೇಶನ್ಸ್ ಅಡಿಯಲ್ಲಿ ಬಾಳೆಯಡ ಪ್ರತಿಷ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶನದ ನಾಲ್ಕನೇ ಕೊಡವ ಚಲನಚಿತ್ರ ಇದಾಗಿದ್ದು, ಸೋಮೆಂಡ ಬೋಸ್ ಬೆಳ್ಳಿಯಪ್ಪ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುದ್ದಾರೆ. ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಚಿತ್ರತಂಡದ ಪರವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಯಾವುದೇ ವಿಘ್ನ ಕುಂದುಕೊರತೆಗಳಾಗದಂತೆ ಸುಸೂತ್ರವಾಗಿ ಪೂರ್ಣಗೊಳ್ಳಲಿ ಪ್ರಾರ್ಥಿಸಿದರು. ಚಲನಚಿತ್ರದ ನಿರ್ದೇಶಕರಾಗಿ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಭಾಷೆಯ ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ. ಈಗಿನ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ ದುಷ್ಪರಿಣಾಮಗಳ ಕುರಿತ ಸಿನಿಮಾ ಇದಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಸೋಮೆಂಡ ಬೋಸ್ ಬೆಳ್ಳಿಯಪ್ಪ ಮಾತನಾಡಿ, ಹಲವು ಕಿರು ಚಿತ್ರಗಳನ್ನು ಈಗಾಗಲೇ ನಿರ್ಮಿಸಿದ್ದು, ನೂತನ ಸಿನಿಮಾ…

Read More

ಬೆಂಗಳೂರು ಫೆ.16 NEWS DESK : ಕರ್ನಾಟಕ ಬಜೆಟ್ : *ಕಂದಾಯ* 392. ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ, ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕೃತ ದಾಖಲೆಗಳನ್ನು ನಾಗರಿಕರು, ಸ್ವತಃ ಆನ್ ಲೈನ್ ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸುರಕ್ಷಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು. 393. ಆಕಾರ್‌ಬಂದ್‌ ಮತ್ತು ಆರ್.ಟಿ.ಸಿ. ಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್‌ಬಂದ್‌ಗಳ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲಾಗುವುದು. 394. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಆರ್.ಟಿ.ಸಿ.ಯನ್ನು ವಿತರಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಬಾಕಿ ಉಳಿದಿರುವ ಗ್ರಾಮಗಳನ್ನು ಪೋಡಿ ಅಭಿಯಾನ 2.0 ರಡಿ ಪೋಡಿ ಮುಕ್ತ ಮಾಡಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು. 395. ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ…

Read More

ಮಡಿಕೇರಿ ಫೆ.16 NEWS DESK :  ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರ ಬದುಕಿನಲ್ಲಿ ಬದಲಾವಣೆಗೆ ಕಾರಣರಾಗಬೇಕು. ಬದುಕಲೆಂದೇ ಸಂಘಟನೆಗಳಿಗೆ ಸೇರುವ ಬದಲಿಗೆ ಸಂಘಟನೆಗಳಿಗೆ ಸೇಪ೯ಡೆಯಾದ ಬಳಿಕ ಇತರರ ಬದುಕನ್ನು ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಹೆಚ್.ಆರ್.ಕೇಶವ ಕರೆ ನೀಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ನೀಡಿದ ಸಂದಭ೯ ರೋಟರಿ ಸಭಾಂಗಣದಲ್ಲಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹೆಚ್.ಆರ್.ಕೇಶವ್, ಸಮಾಜಕ್ಕೆ ನಾನಾ ರೀತಿಯ ಸೇವೆಗಳ ಮೂಲಕ ಒಳಿತನ್ನುಂಟು ಮಾಡಬೇಕೆಂಬ ಉದ್ದೇಶ ಹೊಂದಿರುವ ರೋಟರಿಯ ಧ್ಯೇಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ರೋಟರಿ ಸದಸ್ಯರಾಗಲು ಪ್ರೇರಣೆಯಾಗಿದೆ ಎಂದು ಹೇಳಿದರು. ಸಂಘಟನೆಯೇ ಜೀವನವಲ್ಲ. ಆದರೆ ಇತರರ ಜೀವನದ ಮೇಲೆ ಉತ್ತಮ ಪರಿಣಾಮ ಬೀರಲು ಸಂಘಟನೆಗಳ ಮೂಲಕ ಸಾಧ್ಯವಿದೆ. ಇದನ್ನು ರೋಟರಿ ಸಂಸ್ಥೆಯ ಸದಸ್ಯರು ನಿರೂಪಿಸಿದ್ದಾರೆ ಎಂದು ಹೇಳಿದರು. ರೋಟರಿ ಸದಸ್ಯರು ಅಂತರರಾಷ್ಟ್ರೀಯ ರೋಟರಿಗೆ ನೀಡುವ ದೇಣಿಗೆಯು ಸಾವಿರಾರು ಸಮಾಜ ಸೇವಾ ಕಾಯ೯ಗಳಿಗೆ ಸಹಕಾರಿಯಾಗುತ್ತಿದೆ. ಲಕ್ಷಾಂತರ…

Read More

ನಾಪೋಕ್ಲು ಫೆ.16 NEWS DESK : ಹೊದ್ದೂರು ಗ್ರಾಮ ಪಂಚಾಯಿತಿಯ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುಷ್ಮಾನ್ ಇಲಾಖೆ ವತಿಯಿಂದ ಯೋಗ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯೋಗ ಗುರು ಕೌಶಿಕ್ , ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿ ಯೋಗದ ಮಹತ್ವ, ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿಗಳು, ಪದಾಧಿಕಾರಿಗಳು, ಮಡಿಕೇರಿಯ ಜಿಲ್ಲಾ ಸರಕಾರಿ ಆಯುರ್ವೇದ ಆಸ್ಪತ್ರೆ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಫೆ.16 NEWS DESK : ಶ್ರೀ ಮಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರದಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮ ನಡೆಯಿತು. ಗೋವುಗಳನ್ನು ಅಪ್ಪಿಕೊಳ್ಳುವ ಮೂಲಕ ವಿದ್ಯಾಥಿ೯ಗಳು ಹಸುವಿನ ಮಮತೆಯ ಮಹತ್ವ ಅರಿತರು. ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಣ್ಮರೆಯಾಗುತ್ತಿರುವ ಹಸು ಸಾಕಾಣಿಕೆ ಹಾಗೂ ಗೋಪ್ರೇಮ ಇನ್ನು ಮುಂದೆ ಹೊಸ ಪೀಳಿಗೆಯಲ್ಲಿ ಮತ್ತೊಮ್ಮೆ ಕಾಣಿಸುವಂತಾಗಬೇಕು. ಆ ಮೂಲಕ ಜನರು ಮತ್ತೊಮ್ಮೆ ನೈಸರ್ಗಿಕ ಕೃಷಿ ಚಟುವಟಿಕೆ ಹಾಗೂ ಇನ್ನಿತರ ದೇಶೀಯ ಸ್ವಾವಲಂಬನೆ ಕಡೆಗೆ ಚಿತ್ತಹರಿಸುವಂತಾಗಬೇಕೆಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಡ್ಲ ಗೋಶಾಲೆಯ ಅಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ, ಪಾಶ್ಚಾತ್ಯ ದೇಶದಲ್ಲಿ ಈಗ ಗೋ ಅಪ್ಪುಗೆ ಹಲವು ಕಾಯಿಲೆಗಳಿಗೆ ಮದ್ದೆಂದು ಕಂಡುಹಿಡಿದು ಇದನ್ನೇ ಹೆಚ್ಚಾಗಿ…

Read More