ವಿರಾಜಪೇಟೆ ಜ.9 : ಡಾ. ಡಿ.ವೀರೇಂದ್ರ ಹೆಗ್ಗಡೆಯರು ಜ.13 ರವರೆಗೆ ಒಂದು ವಾರದ ಸ್ವಚ್ಛತಾ ಸಪ್ತಾಹ ಆಚರಿಸುವಂತೆ ಮಾರ್ಗದರ್ಶನ ನೀಡಿದ ಹಿನ್ನೆಲೆ ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಬಾಳುಗೋಡುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ಘಟಕದ ಪದಾಧಿಕಾರಿಗಳು ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಮೇಲ್ವಿಚಾರಕ ನಾಗರಾಜ್, ವಿಪತ್ತು ತಂಡದ ಸಂಯೋಜಕಿ ರೇಖಾ ಗಣೇಶ್ ಮೋಹನ್, ರಂಜನ್, ಅರುಣ್, ಅಕ್ಷತ್, ಕವನ್, ಜ್ಯೋತಿ, ಎಸ್. ಸಬಿತ, ಜ್ಯೋತಿ, ಸುನಿಲ್ ಕುಟ್ಟಪ್ಪ ಭಾಗವಹಿಸಿದ್ದರು.
ಲೇಖಕ: admin
ಚೆಯ್ಯಂಡಾಣೆ ಜ.9 : ಯಾರನ್ನು ಬೇಡವೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದತೆಯಿಂದ ಕಾಣುವ ದೇಶವಿದ್ದರೆ ಅದು ನಮ್ಮ ಭಾರತ ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಹೇಳಿದರು. ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಧ್ಯೇಯ ವಾಕ್ಯದಲ್ಲಿ ಜ.24ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ನಾಪೋಕ್ಲು ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮದೇಶದ ಪರಂಪರೆ ಎಲ್ಲರನ್ನೂ ಒಗ್ಗೂಡಿಸುವ ಪರಂಪರೆಯಾಗಿದೆ. ಎಲ್ಲಾ ವರ್ಗದವರಿಗೂ ಕೆಂಪು ಹಾಸನ್ನು ಹಾಸಿದ ನಾಡು ಇದಾಗಿದೆ. ವಿಶ್ವದ ಹಲವಾರು ದೇಶಕ್ಕೆ ಮಾದರಿಯಾಗಬಲ್ಲ ನಮ್ಮ ದೇಶದಲ್ಲಿ ಎಲ್ಲರಿಗು ಮುಕ್ತವಾದ ಸ್ವಾತಂತ್ರ್ಯ ನೀಡಿ ಮಾದರಿಯಾದ ರಾಷ್ಟ್ರವಾಗಿದೆ. ಇದರ ಬಗ್ಗೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…
ಸುಂಟಿಕೊಪ್ಪ, ಜ. 9 : ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2024 ನೇ ನೂತನ ಸಾಲಿನ ಅಧ್ಯಕ್ಷರಾಗಿ ನೇಮಕಗೊಂಡ ಸಂಪತ್ ಕುಮಾರ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಾರಂಗಿ ರಸ್ತೆಯಲ್ಲಿರುವ ಅತ್ತೂರು ಗ್ರಾಮದ ಆರ್- ಕ್ಯೂಬ್ ಫಾರ್ಮ್ ಹೌಸ್ ನ ಸಭಾಂಗಣದಲ್ಲಿ ನಡೆಯಿತು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2023ನೇ ಸಾಲಿನ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಸಿಐ ವಲಯ 14ರ ಅಧ್ಯಕ್ಷೆ ಆಶಾ ಜೈನ್ ಅವರು ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ಬೋಧಿಸಿದರು. ನಂತರ ಮಾತನಾಡಿದ ಜೆಸಿಐ ವಲಯ ಅಧ್ಯಕ್ಷೆ ಆಶಾ ಜೈನ್ ಅವರು, ಯುವ ಸಮುದಾಯದಲ್ಲಿ ಶಿಸ್ತು, ಸಮಯಪಾಲನೆ, ಸಂಯಮ, ಉತ್ತಮ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾದ ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಯುವಶಕ್ತಿಯ, ನಾಗರಿಕರ ಜಾಗತಿಕ ಸಂಸ್ಥೆಯಾಗಿದೆ. ಯುವ ಸಮುದಾಯದಲ್ಲಿ ಧನಾತ್ಮಕ ಬದಲಾವಣೆಯೊಂದಿಗೆ ಕ್ರೀಯಾಶೀಲ ವ್ಯಕ್ತಿತ್ವ, ನಾಯಕತ್ವ, ಉತ್ತಮ ಉದ್ಯಮಶೀಲ ಕೌಶಲ್ಯಗಳನ್ನು ಬೆಳೆಸುವುದರೊಂದಿಗೆ ದೇಶದಲ್ಲಿ ಬ್ರಾತೃತ್ವ ಬೆಳೆಸಿ…
ಪುತ್ತೂರು ಜ.9 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ವಿದ್ಯಾರ್ಥಿಗಳು ಮಂಗಳೂರಿನ ಶ್ರೀದೇವಿ ಇನ್ಸ್ ಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಮೇಳ ಮೇಧಾ-2K24 ಇದರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಒಟ್ಟು 17 ವಿದ್ಯಾರ್ಥಿಗಳ ಕಾಲೇಜು ತಂಡವು ಭಾಗವಹಿಸಿದ್ದು, ಇದರಲ್ಲಿ 8 ವಿದ್ಯಾರ್ಥಿಗಳು ತಾಂತ್ರಿಕ ವಿಭಾಗದಲ್ಲಿ ಹಾಗೂ 9 ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪ್ರಶಸ್ತಿಗಳೊಂದಿಗೆ ಮೇಳದ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜಿನ ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.
ಕುಶಾಲನಗರ ಜ.9 : ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘದ ಉದ್ಘಾಟನಾ ಸಮಾರಂಭ ಕುಶಾಲನಗರದಲ್ಲಿ ನಡೆಯಿತು. ಸಂಘವನ್ನು ಉದ್ಘಾಟಿಸಿ ಮಾತನಾಡಿದ ಹಸಿ ಶುಂಠಿ ವರ್ತಕರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು, ಹಸಿ ಶುಂಠಿ ವರ್ತಕರ ಹಿತರಕ್ಷಣೆಗಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು. ಹಿಂದೆ ಚೀನಾದ ರೈತರು ಬೆಳೆದ ಶುಂಠಿಯ ಫಸಲನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡು ನಮ್ಮ ದೇಶದ ಶುಂಠಿ ಕೃಷಿಕರ ಹಿತವನ್ನು ಕಡೆಗಣಿಸಲು ಹೊರಟ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಹಸಿ ಶುಂಠಿ ವರ್ತಕರ ಸಂಘ ಬಲವಾದ ಹೋರಾಟ ರೂಪಿಸಿದ್ದರ ಫಲವಾಗಿ ಚೀನಾದ ಶುಂಠಿಯ ಆಮದನ್ನು ನಿಷೇಧಗೊಳಿಸಲಾಯಿತು ಎಂದು ವಿವರಿಸಿದರು. ಈ ಸಂದರ್ಭ ಕೊಡಗು ಮೈಸೂರು ಹಸಿ ಶುಂಠಿ ವರ್ತಕರ ಸಂಘದ ಅಧ್ಯಕ್ಷ ಹೆಚ್.ಎನ್.ರಾಜಶೇಖರ್, ರಾಜ್ಯ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಮೊಹಮ್ಮದ್ ಅನೀಶ್, ತೌಫಿಕ್, ಖಜಾಂಚಿ ಮುನ್ನಾ, ದಿನೇಶ್ ಬಿ.ಎಲ್. ಯತೀಶ್, ಜನಾರ್ಧನ್, ರೇವಣ್ಣ, ಹಿನಾಯತ್ ಹಾಗೂ ಕೊಡಗು ಮೈಸೂರು ಜಿಲ್ಲೆಗಳ ಸಂಘದ ಪದಾಧಿಕಾರಿಗಳಾದ…
ಮಡಿಕೇರಿ ಜ.9 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮಂಡ್ಯದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೆದಮುಳ್ಳೂರು ಗ್ರಾಮದ ಕೌಶಿ ಕಾವೇರಮ್ಮ ಚಿನ್ನದ ಪದಕ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದುಷಿ ಹೇಮಾವತಿ ಕಾಂತರಾಜ್ ಹಾಗೂ ಕಾವ್ಯಶ್ರೀ ಅವರ ಬಳಿ ತರಬೇತಿ ಪಡೆಯುತ್ತಿರುವ ಕೌಶಿ ಕಾವೇರಮ್ಮ , ಕೆದಮುಳ್ಳೂರು ಗ್ರಾಮದ ವಿ.ಡಿ.ಡಾಲಿ ಮತ್ತು ವಿ.ಡಿ.ಸೀಮ ದಂಪತಿಯ ಪುತ್ರಿ.
ಬೆಂಗಳೂರು ಜ.9 : ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ “ಮಂಗಳವಾದ್ಯ” ಕಾದಂಬರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾದಂಬರಿ ಅನಾವರಣಗೊಳಿಸಿ ಮಾತನಾಡಿ, ನಟರಾಗಿ ಜನಪ್ರಿಯತೆಗಳಿಸಿರುವ ಎಂ.ಆರ್.ಮುತ್ತುರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ. ಯಾವ ಕಾಯಕವು ಮೇಲೂ ಅಲ್ಲ, ಯಾವುದು ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮಹತ್ವ ಮತ್ತು ಸಮಾನ ಘನತೆ ಹೊಂದಿವೆ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಇದೇ ಕಾರಣಕ್ಕೆ. ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ. ಧರ್ಮದ…
ಮಡಿಕೇರಿ ಜ.9 : ಮಡಿಕೇರಿಯ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾಥಿ೯ಗಳು ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದು, ಏಡಿಗಳ ಸಂರಕ್ಷಣೆ ಸಂಬಂಧಿತ ಪ್ರಬಂಧ ಮಂಡಿಸುತ್ತಿದ್ದಾರೆ. ಕೊಡಗು ವಿದ್ಯಾಲಯದ ವಿಜ್ಞಾನ ಶಿಕ್ಷಕಿ ಟಿ.ಜಯಶ್ರೀ ಅವರ ಮಾಗ೯ದಶ೯ನದಲ್ಲಿ ವಿದ್ಯಾಥಿ೯ಗಳಾದ ಎಂ.ಪಿ.ಯಶಿಕಾ ಶೆಟ್ಟಿ ಮತ್ತು ಯಶ್ ಕಾರ್ಯಪ್ಪ ಪಿ. ಎಸ್. ಸಂಶೋಧನಾತ್ಮಕ ಪ್ರಬಂಧವನ್ನು ಏಡಿಗಳ ಕುರಿತಂತೆ ಮಂಡಿಸಲಿದ್ದಾರೆ. ಪರಿಸರ ವ್ಯವಸ್ಥೆಯೊಳಗೆ ಏಡಿಗಳು ನಿಣಾ೯ಯಕ ಪಾತ್ರ ವಹಿಸಿದೆ. ಏಡಿಗಳು ಬಹು ಉಪಕಾರಿ ಜೀವಿಯಾಗಿದ್ದು, ಏಡಿಗಳು ಅಕಶೇರುಕಗಳಲ್ಲಿ ಸಂಧಿಪದಿ ವರ್ಗದ, ಕ್ರಸ್ಟೇಶಿಯ ಎಂಬ ಉಪವಗ೯ಕ್ಕೆ ಸೇರಿದ ಜೀವಿಗಳಾಗಿವೆ. ಏಡಿಗಳು ರೈತನ ಮಿತ್ರರೇ ಹೊರತು ಶತ್ರುವಲ್ಲ. ಏಡಿಗಳು ಮಣ್ಣನ್ನುಸಮೃದ್ಧಗೊಳಿಸಿ, ರಂಧ್ರಗಳನ್ನು ತಮ್ಮ ಅಡಗು ತಾಣವಾಗಿ ಪರಿವತಿ೯ಸುವುದರ ಮೂಲಕ ನೀರಿನ ಒಳಹರಿವಿಗೆ ಹಾಗೂ ಇಂಗುವಿಕೆಗೆ ಸಹಾಯ ಮಾಡುತ್ತವೆ. ಕಳೆಗಳನ್ನು ತಿಂದು, ಮಣ್ಣನ್ನು ಗಾಳಿಯಾಡುವಂತೆ ಏಡಿಗಳು ಮಾಡುತ್ತವೆ. ಇವು ಜಲಮಾಲಿನ್ಯದ ತೀವ್ರತೆಯನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರವನ್ನುವಹಿಸುತ್ತವೆ. ಅತ್ಯಂತ ರುಚಿಕರ ಹಾಗೂ ಆರೋಗ್ಯಕರ ಆಹಾರದ ಮೂಲವಾಗಿ ಕಾಯ೯ನಿವ೯ಹಿಸುತ್ತದೆ. ಹೀಗಾಗಿಯೇ ಏಡಿಗಳು ಕೖಷಿಕರಿಗೆ…
ಮಡಿಕೇರಿ ಜ.9 : ಬಸ್ ತಂಗುದಾಣವೆಂದರೆ ಬಿರುಕು ಬಿಟ್ಟ ಗೋಡೆಗಳು, ಮುರಿದ ಛಾವಣಿ, ಕಸದ ರಾಶಿ, ದುರ್ನಾತ ಬೀರುವ ಶೌಚಾಲಯ ಕಣ್ಣ ಮುಂದೆ ಹಾದು ಹೋಗುತ್ತದೆ. ಪರಿಣಾಮವಾಗಿ ತಂಗುದಾಣವಿದ್ದರೂ ಪ್ರಯಾಣಿಕರು ಹೊರಗೆ ಮರದ ನೆರಳಲ್ಲೋ, ರಸ್ತೆ ಬದಿಯ ಅಂಗಡಿಗಳಲ್ಲೋ ಆಶ್ರಯ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಬಣ್ಣ ಬಣ್ಣದ ಚಿತ್ರಗಳೊಂದಿಗೆ ಹಲವು ಸಂದೇಶಗಳನ್ನು ಸಾರುವ ಬಸ್ ತಂಗುದಾಣವೊಂದು ಕೊಡಗಿನ ತೀರ್ಥಕ್ಷೇತ್ರವಾದ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಇದೀಗ ಈ ಬಸ್ ತಂಗುದಾಣ ಜನಾಕರ್ಷಣೆಯ ಕೇಂದ್ರವಾಗಿದೆ. ಭಾಗಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಳನ ರವಿ ಅವರ ಕಲ್ಪನೆಯ ಕೂಸಾಗಿರುವ ಈ ತಂಗುದಾಣದಲ್ಲಿ ನೇಗಿಲ ಯೋಗಿ, ಬೆಳೆಯ ಸಿರಿ ಮೊಳಕೆಯಲ್ಲಿ, ಎಪಿಜೆ ಅಬ್ದುಲ್ ಕಲಾಂ, ಚಂದ್ರಯಾನದ ವಿಕ್ರಂ ಲ್ಯಾಂಡರ್ ಸೇರಿದಂತೆ ಆಕರ್ಷಕ ಚಿತ್ರಗಳು ರಾರಾಜಿಸುತ್ತಿವೆ. ಸುಮಾರು 32 ಅಡಿ ಉದ್ದ, 10 ಅಡಿ ಅಗಲದ ಅಂದಾಜು 10 ಜನ ಕೂರಲು ಸ್ಥಳಾವಕಾಶವಿರುವ ಈ ತಂಗುದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗ್ರಾಮೀಣ…
ಮಡಿಕೇರಿ ಜ.9 : ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಡಿ.26 ರಿಂದ 31 ರ ವರೆಗೆ ನಡೆದ ಸಿ ಬಿ ಎಸ್ ಇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕರ ತಂಡವು ತೃತೀಯ ಸ್ಥಾನವನ್ನು ಪಡೆದಿದೆ. ಈ ತಂಡದ ತರಬೇತುದಾರರಾಗಿ ಹೆಚ್.ಡಿ.ದೀನ ಹಾಗೂ ತಂಡದ ವ್ಯವಸ್ಥಾಪಕರಾಗಿ ಕೆಚ್ಚೆಟ್ಟಿರ ಪಾರ್ವತಿ ಕಾರ್ಯ ನಿರ್ವಹಿಸಿದ್ದರು. ತಂಡದ ಆಟಗಾರರು, ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.






