ಮಡಿಕೇರಿ ಡಿ.29 : ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ವತಿಯಿಂದ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಕೊಡವ ಸಮ್ಮೇಳನದಲ್ಲಿ ಸಂಘಟನೆಯ ಪ್ರಮುಖರು ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು.
ಲೇಖಕ: admin
ಮಡಿಕೇರಿ ಡಿ.29 : ಕಾಂತೂರು-ಮೂರ್ನಾಡು ಗ್ರಾ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆ ಶಿಬಿರ ನಡೆಯಿತು. ಕಾಂತೂರು- ಮೂರ್ನಾಡು ಗ್ರಾ.ಪಂ ನಲ್ಲಿ ನಡೆದ ಶಿಬಿರದಲ್ಲಿ ಪ್ರತಿ ದಿನ 50 ರಿಂದ 60 ಮಂದಿ ಮಹಿಳೆಯರ ಗೃಹಲಕ್ಷ್ಮಿ ನೋಂದಣಿ, ಆಧಾರ್, ಇಕೆವೈಸಿ ಮತ್ತು ಬ್ಯಾಂಕಿನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಲಾಯಿತು. ಅಲ್ಲದೇ ಅಂಚೆ ಕಚೇರಿಯಲ್ಲಿ ಐಪಿಬಿಪಿ ಖಾತೆ ತೆರೆಯುವ ಮೂಲಕ ಗೃಹಲಕ್ಷ್ಮಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಗೃಹಲಕ್ಷ್ಮಿ ನೋಂದಣಿಗಾಗಿ ಹಾಗೂ ಅದನ್ನು ಸರಿ ಪಡಿಸಲು ವಿವಿಧಡೆ ಅಲೆದಾಡುವುದು ತಪ್ಪುತಪ್ಪಿಸಲು ಈ ಶಿಬಿರ ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ ಕೀರ್ತನ್ ಮಾರ್ಗದರ್ಶನದಲ್ಲಿ ನಡೆದ ಮೂರು ದಿನಗಳ ಶಿಬಿರದಲ್ಲಿ ಈ ಶಿಬಿರದಲ್ಲಿ ಪಂಚಾಯತ್ ಅಧ್ಯಕ್ಷ ಕುಶನ್, ಅಭಿವೃದ್ಧಿ ಅಧಿಕಾರಿ ಮಾನ್ ಚಂದ್ರಮೌಳಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಬಿ.ಜಯಂತಿ, ಬಿ.ಆರ್.ಭವ್ಯ, ಪ್ರಮೀಳಾ, ಚೈತ್ರ, ಉಮಾವತಿ, ಸಮೀರಾ ಮತ್ತು ಗ್ರಾ.ಪಂ ಸಿಬ್ಬಂದಿಗಳಾದ ಶಶಿ ಮತ್ತು ಎಲ್ಲಾ…
ಮಡಿಕೇರಿ ಡಿ.29 : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಭಗವತಿ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ವೈಷ್ಣವಿ ಯುವಕ ಸಂಘ ಮರಗೋಡು, ಕ್ಯಾಪ್ಟನ್ಸ್ 11 ಪಾಲಿಬೆಟ್ಟ, ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ಸೇರಿ ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯವು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ಹಾಗೂ ಭಗವತಿ ಯೂತ್ ಕ್ಲಬ್ ಬಿ ಹಾಲುಗುಂದ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ನಿಗದಿತ ಸಮಯದಲ್ಲಿ ಯಾವುದೇ ಗೋಲುಗಳಿಸದೆ,ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ಸಡನ್ ಡೆತ್ ನಲ್ಲಿ ಚಾಮುಂಡಿ ಯುನೈಟೆಡ್ ತಂಡವು 8-7 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಎರಡನೇ ಕ್ವಾಟರ್ ಫೈನಲ್ ಪಂದ್ಯವು ವೈಷ್ಣವಿ ಯುವಕ ಸಂಘ…
ಸುಂಟಿಕೊಪ್ಪ,ಡಿ.29: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 2023ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಸಭೆಯಲ್ಲಿ ನೊಡೆಲ್ ಅಧಿಕಾರಿಯಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಪಾಲ್ಗೊಂಡಿದ್ದರು. ಕಳೆದ ಸಾಲಿನ ಗ್ರಮ ಸಭೆಯ ವರದಿ ಮಂಡನೆಯಾದ ನಂತರ ನೆರೆದಿದ್ದ ಗ್ರಾಮಸ್ಥರು ನಿರ್ಣಯವಾದ ಎಷ್ಟು ಕೆಲಸಗಳು ಅನುಷ್ಠಾನಗೊಂಡಿದೆ. ಚೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಪಾವತಿಸಲಾಗಿದೆಯೇ ಎಂದು ಇಸಾಕ್‍ಖಾನ್ ಪ್ರಶ್ನಿಸಿದರು. ಅರ್ಧಭಾಗದಷ್ಟು ಪಾವತಿಸಲಾಗಿದೆ ಮುಂದಿನ ದಿನಗಳಲ್ಲಿ ಪಾವತಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಕೇಂದ್ರ ಸರಕಾರದ ಜಲಜೀವನ್ ಯೋಜನೆ ಅನುಷ್ಠಾನ ಯಾಕೆ ವಿಳಂಬಗೊಂಡಿದೆ ಇತರೆಡೆಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದೆ. ಸುಂಟಿಕೊಪ್ಪದಲ್ಲಿ ಯಾಕೆ ಅನುಷ್ಠಾನಗೊಂಡಿಲ್ಲವೆಂದು ಬಿ.ಕೆ.ಮೋಹನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿ.ಪಂ ಅಭಿಯಂತರರಾದ ಫಯಾಜ್, ಟೆಂಡರ್ ಪ್ರಕ್ರಿಯೆಯು ನಡೆದಿದು,್ದ ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಉತ್ತರಿಸಿದರು. ಸುಂಟಿಕೊಪ್ಪ ಪಟ್ಟಣದಲ್ಲಿ ಕಸ ವಿಲೇವಾರಿಯು ಸರಿಯಾದ ರೀತಿಯಲ್ಲಿ ನಡೆಸುತ್ತಿಲ. ಕಸವನ್ನು ಸಂಗ್ರಹಿಸುವ ವಾಹನ ಬಾರದ ಹಿನ್ನಲೆ ವಾರಗಟ್ಟಲೇ ಕಸವನ್ನು…
ಮಡಿಕೇರಿ,ಡಿ.29 : ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕೆಲವು ವಾಹನ ಸವಾರರು ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಚಾಲನೆ ಮಾಡುತ್ತಿರುವ ಮಾಹಿತಿ ಅರಿತು ಕಾರ್ಯಾಚರಣೆ ನಡೆಸಿದ ಪೊನ್ನಂಪೇಟೆ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸುವುದರ ಮೂಲಕ ಬಿಸಿ ಮುಟ್ಟಿಸಿದರು. ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿಗಳು ಸೀಟ್ ಬೆಲ್ಟ್ ಧರಿಸದ, ಹೊಗೆ ನಿಯಂತ್ರಣ ದಾಖಲೆ, ಇನ್ಶೂರೆನ್ಸ್, ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುತ್ತಿದ್ದವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಮಾತ್ರವಲ್ಲದೇ ಒಟ್ಟು 15 ರಿಂದ 20 ವಾಹನ ಚಾಲಕರಿಗೆ ದಂಡ ವಿಧಿಸಿದರು. ಕೆಲವರಿಗೆ ಠಾಣಾಧಿಕಾರಿ ನವೀನ್ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.
ಮಡಿಕೇರಿ ಡಿ.28 : ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಎಂ ಎಲ್ ಸಿ ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದ್ದಾರೆ. ಕುಶಾಲನಗರದ ಬಳಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ ನನ್ನನ್ನು ಯಾರು ಕರೆದಿಲ್ಲ ಎಂದು ಕೂಡ ಹೇಳಿದರು. ಬಿಎಸ್ ವೈ ಸರ್ಕಾರದ ವಿರುದ್ಧ ಯತ್ನಾಳ್ 40,000 ಕೋಟಿ ಅಕ್ರಮ ಆರೋಪ ವಿಚಾರ ಬಗ್ಗೆ ಉತ್ತರಿಸಿದ ಶೆಟ್ಟರ್ ಭ್ರಷ್ಟಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಈಗಾಗಲೇ ಸಿದ್ದರಾಮಯ್ಯರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆ ನಡೆಯುತ್ತಿದೆ. ಯತ್ನಾಳ್ ಮಾಹಿತಿ ತೆಗೆದುಕೊಂಡು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದ ಶೆಟ್ಟರ್ ಯತ್ನಾಳ್ ಆರೋಪದ ಬಗ್ಗೆ ದಾಖಲೆ ಕೊಟ್ರೆ ತನಿಖೆಗೆ ಅನುಕೂಲ ಆಗಲಿದೆ ಎಂದರು.
ವಿರಾಜಪೇಟೆ ಡಿ.28 : ವಿರಾಜಪೇಟೆ ವಿವೇಕ ಜಾಗೃತ ಬಳಗ ಹಾಗೂ ಶ್ರೀಮಂಗಲ ವಿವೇಕ ಜಾಗೃತ ಬಳಗಗಳ ಸಂಯುಕ್ತಾಶ್ರಯದಲ್ಲಿ ಸಂತೋಷ ಕೂಟ ಹಾಗೂ ಸಂವರ್ಧನಾ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಕಾವೇರಿ ಆಶ್ರಮದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಬೆಳವಣಿಗೆಗೆ ಪೂರಕವಾಗಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ವಿಸ್ತಾರವಾಗಿ ಡಿವೈನ್ ಪಾರ್ಕ್‍ನ ಹೆಚ್-2 ಹಾಗೂ ಸಿ-2 ಅಧಿಕಾರಿ ಯಶವಂತ ಹಾಗೂ ಎನ್-2 ಅಧಿಕಾರಿ ಶರತ್ ಕುಮಾರ್ ಅವರ ಸಮ್ಮುಖದಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಗದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಲವು ಮನೋರಂಜನೆ ಸ್ಪರ್ಧೆಗಳಲ್ಲಿ ಭಾವಹಿಸಿದರು. ಇದೇ ಸಂದರ್ಭ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭ ಇತ್ತಿಚೆಗೆ ಕೊಡವ ಸಮಾಜದಲ್ಲಿ ದಿವ್ಯತ್ರಯರ ಹಾಗೂ ಪರಮಪೂಜ್ಯ ಡಾಕ್ಟರ್ ಜೀ ಅವರ ಕೃಪೆಯಿಂದ ಸಂಪನ್ನವಾಗಿದ್ದ ಯೋಗ ಪರ್ಯಟನ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನ ನೀಡಿ ಸಂಭ್ರಮಕ್ಕೆ ಕಾರಣರಾದ ಎಲ್ಲಾ ವಿವೇಕವೀರರನ್ನು ನೆನೆದು ಅವರ ಸಕಲ ಏಳಿಗೆಗೂ ಭಗವಂತನ ಕೃಪೆ ದೊರೆಯಲಿ ಎಂದು ಪ್ರಾರ್ಥಿಸಿದರರು. ಕಾರ್ಯಕ್ರಮದಲ್ಲಿ…
ಮಡಿಕೇರಿ ಡಿ.28 : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ “ಯುವನಿಧಿ” ಯೋಜನೆಯ ನೋಂದಣಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ. 2023 ರಲ್ಲಿ ಪದವಿ/ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ/ಖಾಸಗಿ/ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ “ಯುವನಿಧಿ” ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪದವೀಧರರಿಗೆ ಪ್ರತಿ ತಿಂಗಳು 3,000 ರೂ.ಗಳು ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ.ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005999918 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ (08272-225851) ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಉಮಾ…
ಮಡಿಕೇರಿ ಡಿ.28 : ಪ್ರಸಕ್ತ (2023-24) ಸಾಲಿಗೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಆದರ್ಶವಾಗಿ ಸೇವೆ ಸಲ್ಲಿಸಿರುವ (ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು) ವ್ಯಕ್ತಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2023-24ನೇ ಸಾಲಿಗೆ ಮಹಿಳಾ ಅಭಿವೃದ್ಧಿ, ಕ್ರೀಡೆ, ಶಿಕ್ಷಣ, ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದೆ. ಜನವರಿ 1, 2023 ರಿಂದ ಡಿಸೆಂಬರ್ 31, 2023ರ ಅವಧಿಯಲ್ಲಿ ಶೌರ್ಯ, ಸಾಹಸ ಪ್ರದರ್ಶಿಸಿ ಇತರರ ಪ್ರಾಣ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ರಕ್ಷಿಸಲು ಸಹಕಾರಿಯಾಗಿರುವ ಪ್ರಕರಣಗಳಿದ್ದಲ್ಲಿ ಅಂತಹ ಮಹಿಳೆಯರು ವೀರ ಮಹಿಳೆ ಪ್ರಶಸ್ತಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಂಸ್ಥೆ ಹಾಗೂ ವ್ಯಕ್ತಿ ಮಹಿಳಾ ಅಭಿವೃದ್ಧಿ…
ಮಡಿಕೇರಿ ಡಿ.28 : ನಾವೀನ್ಯತೆ ಕ್ಷೇತ್ರ-2 ಮತ್ತು ತಾರ್ಕಿಕ ಸಾಧನೆಗಳು-2 ಈ ವಿಭಾಗದಲ್ಲಿ ತಲಾ 2 ರಂತೆ ಒಟ್ಟು 4 ಪ್ರಶಸ್ತಿ ನೀಡಲಾಗುತ್ತಿದ್ದು, ಅಸಾಧಾರಣ ಸಾಧನೆ ಮಾಡಿ ಪ್ರತಿಭೆ ತೋರಿರುವ 5 ರಿಂದ 18 ವರ್ಷದೊಳಗಿನ (ಜುಲೈ 31 ಕ್ಕೆ) ಮಕ್ಕಳನ್ನು 2023-24 ನೇ ಸಾಲಿಗೆ ಜಿಲ್ಲಾ ಮಟ್ಟದ ಪ್ರತಿಭಾಪುರಸ್ಕಾರ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಈ ಜಿಲ್ಲಾ ಮಟ್ಟದ ಪ್ರಶಸ್ತಿಯು ಪ್ರಶಸ್ತಿಪತ್ರ ಹಾಗೂ ರೂ.10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಈ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ಹಿಂದೆ ಯಾವುದಾದರೂ ವರ್ಷದಲ್ಲಿ ಅರ್ಜಿ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ, ಪುನಃ ಅದನ್ನು ಪರಿಗಣಿಸಲಾಗುವುದಿಲ್ಲ. 2023-24 ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ,…






