ಚೆಯ್ಯಂಡಾಣೆ ಫೆ.6 NEWS DESK : ಜಗತ್ತಿನ ಬದಲಾವಣೆಗೆ ಅನುಗುಣವಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ.ಪಿ ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಅತ್ಯವಶ್ಯಕ. ನಗರ ಪ್ರದೇಶಗಳಲ್ಲಿ ಡಿಜಿಟಲೀಕರಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಸಾಧಕ ಬಾಧಕಗಳು ಕೂಡ ಇದೆ. ಅದರಲ್ಲಿ ಸಾಧಕಗಳನ್ನು ಆಯ್ಕೆಮಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದರು. ಸಾಮಾಜಿಕ ಜಾಲತಾಣಗಳಿಂದ ಹರಡುವ ತಪ್ಪು ಮಾಹಿತಿಯನ್ನು ದೂರ ಇಟ್ಟು, ಒಳ್ಳೆಯದನ್ನು ಆಯ್ಕೆ ಮಾಡಿ ಉಪಯೋಗ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲು ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿ ಕೊಡಬೇಕಾಗಿದೆ.ಅದರಂತೆ ಇಲ್ಲಿನ ಶಾಲೆಯ ಮಕ್ಕಳಿಗೆ ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು…
ಲೇಖಕ: admin
ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ. ಚೆನ್ನಾಗಿ ಅಗಿಯುವುದರಿಂದ ಆಗುವ ಪ್ರಯೋಜನಗಳೇನು? ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿ ಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ. ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ…
ಮಡಿಕೇರಿ ಫೆ.6 NEWS DESK : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಕೈಗೆಟುಕುವ ದರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ನೀಡುತ್ತಿದೆ. 1 ಕೆಜಿ ಅಕ್ಕಿಯ ಬೆಲೆ ರೂ.29 ಆಗಿದ್ದು, ತಲಾ 5 ಕೆಜಿ ಮತ್ತು 10 ಕೆಜಿ ಬ್ಯಾಗ್ ನಲ್ಲಿ ಸಿಗಲಿದೆ. ಇಂದಿನಿಂದ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಚಾಲನೆ ಸಿಗಲಿದ್ದು, ನಾಫೆಡ್‌ನ ಸಂಚಾರಿ ವಾಹನಗಳಲ್ಲಿ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.
ಮಡಿಕೇರಿ ಫೆ.6 NEWS DESK : ಇತ್ತೀಚೆಗೆ ಮೈಸೂರಿನ ಬೋಗಾದಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ನಿಂದ ಪ್ರಾಣ ಕಳೆದುಕೊಂಡ ಕಂಡಂಗಾಲ ಗ್ರಾಮದ ಬಲ್ಲಾಡಿಚಂಡ ಬಿ.ಶಿವನ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರು ಫೆ.6 : ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು. ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತ 9 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳು, ಸ್ಮರಣಿಕೆ ಹಾಗೂ ಗಾಂಧೀಜಿ ಅವರ ಜೀವ ಸಂದೇಶಗಳ ಕುರಿತು ಪುಸ್ತಕಗಳನ್ನು ವಿತರಿಸಿ ಶುಭಕೋರಿದರು. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವಿಧ್ಯಾರ್ಥಿ ಅನಿರುದ್ದ ಮನೋಜ್ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಕೆ.ಎಸ್.ಹೃತ್ಪೂರ್ವಕ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಮುಖ್ಯಮಂತ್ರಿ ಅವರಿಂದ ಬಹುಮಾನ ಪಡೆದಿರುವುದು ವಿಶೇಷ. ಜಿಲ್ಲಾ ಮಟ್ಟದಲ್ಲಿ ಪ್ರಥಮ…
ಮಡಿಕೇರಿ ಫೆ.6 NEWS DESK : ವಿರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಮತ್ತು ಏಕ ವ್ಯಕ್ತಿ ನೃತ್ಯದಲ್ಲಿ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿನಿ ಹೆಚ್.ವಿ.ವರ್ಷಿತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾದಳು. ಅತಿಥಿ ಗಣ್ಯರು ಹೆಚ್.ವಿ.ವರ್ಷಿತಾಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಮಾರುತಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಹಾಕತ್ತೂರು ನಿವಾಸಿ ಹೆಚ್.ಟಿ.ವೆಂಕಟೇಶ್ ಹಾಗೂ ವನಿತಾ ದಂಪತಿ ಪುತ್ರಿ.
ಮಡಿಕೇರಿ ಫೆ.6 NEWS DESK : ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಮಯದ ಕರೆ – ಸಕಾರಾತ್ಮಕ ಚಿಂತನೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಮುಂಬೈನ ಪ್ರಖ್ಯಾತ ಸ್ಫೂರ್ತಿ ದಾಯಕ ಪ್ರವಚನಕಾರ ಬ್ರಹ್ಮಾಕುಮಾರ್ ಗಿರೀಶ್ ವಿಚಾರ ಸಂಕಿರಣ ನಡೆಸಿಕೊಟ್ಟರು. ಜಿಲ್ಲಾ ನ್ಯಾಯಾಧೀಶರು ಬಿ.ಕೆ.ಗಿರೀಶ್ ಅವರನ್ನು ಸನ್ಮಾನಿಸಿ, ವರ್ತಮಾನದ ಒತ್ತಡದ ಬದುಕಿಗೆ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಂ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಬ್ರಹ್ಮಾಕುಮಾರೀಸ್ ನ ಬಿ.ಕೆ.ಧನಲಕ್ಷ್ಮಿ ಅಕ್ಕನವರು ಹಾಗೂ ಬಿ.ಕೆ. ಪ್ರಾಣೇಶಣ್ಣ ಉಪಸ್ಥಿತರಿದ್ದರು. ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷ ನಿರಂಜನ್, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮ ಬಹಳ ಲಾಭದಾಯಕವಾಗಿದೆಯೆಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ಫೆ.6 NEWS DESK : ‘ಮಾದಿಗ ಮುನ್ನಡೆ’ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ಒಳ ಮೀಸಲಾತಿಗೆ ಪ್ರಮುಖರು ಆಗ್ರಹಿಸಿದರು. ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ಮಾದಿಗರಿಗೆ ಒಳ ಮೀಸಲಾತಿ ಸಿಗಬೇಕು. ಆ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಪ್ರಮುಖರು ಒತ್ತಾಯಿಸಿದರು. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಅದಕ್ಕಾಗಿ 9 ಜನರ ಬಲಿದಾನವಾಗಿದೆ, ಮೀಸಲಾತಿ ಸಿಕ್ಕಿದಾಗ ಈ ಬಲಿದಾನಗಳಿಗೆ ಶಾಂತಿ ಸಿಗಲಿದೆ. ಕೊಡಗು ಜಿಲ್ಲೆಯಲ್ಲಿ ಎಂಟು ಸಾವಿರಕ್ಕೂ ಅಧಿಕ ಮಾದಿಗ ಜನಾಂಗದ ಬಂಧುಗಳಿದ್ದಾರೆ ಎಂದು ಹೇಳಿದರು. ತುಮಕೂರಿನ ಡಾ. ಲಕ್ಷ್ಮಿಕಾಂತ್ ಮಾತನಾಡಿ, ಮಾದಿಗ ಜನಾಂಗ ಬಂಧುಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲರಾಗಬೇಕು. ಸ್ವಾತಂತ್ರ್ಯ ಬಂದು ಕಳೆದ 75 ವರ್ಷ ಕಳೆದರೂ ಇನ್ನೂ ಕೂಡ ಸಮಾಜ ಬಂದುಗಳು ಎಚ್ಚೆತ್ತುಕೊಂಡಿಲ್ಲ ಎಂದು…
ಮಡಿಕೇರಿ ಫೆ.6 : NEWS DESK : ರಾಜ್ಯದ ಎಲ್ಲಾ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬೇಡಿಕೆಗೆ ದಶಕಗಳ ಇತಿಹಾಸವೂ ಇದೆ. ಆದರೆ ಸರ್ಕಾರವು ಬಸ್ ಪಾಸ್ ನೀಡುವುದೇ ಆದಲ್ಲಿ ಗ್ರಾಮೀಣ ಅರ್ಹ ಪತ್ರಕರ್ತರನ್ನು ಗುರುತಿಸುವುದಕ್ಕೇ ಜಿಲ್ಲಾ ಮಟ್ಟದಲ್ಲಿ ಮಾನ್ಯತಾ ಸಮಿತಿಯನ್ನು ಮೊದಲು ರಚಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಮೊದಲಿನಿಂದ ಇರುವ ಕಾರ್ಯನಿರತ ಪತ್ರಕರ್ತರ ಸಂಘದ ಜತೆಗೇ ಇನ್ನೊಂದೆರಡು ಸಂಘಟನೆಗಳೂ ರಾಜ್ಯದಲ್ಲಿ ಸಕ್ರಿಯವಾಗಿ ಇವೆ. ಇತರ ಸಂಘಟನೆಗಳನ್ನು ಅನಧಿಕೃತ ಎಂದು ಹೇಳಲೂ ಸಾಧ್ಯವಿಲ್ಲ. ಇನ್ನು ಪಾಸ್ ಸಿಗುವ ವಿಚಾರ ಖಚಿತ ಆದ ಕೂಡಲೇ ಈಗಾಗಲೇ ಕೊನೆಯುಸಿರು ಎಳೆದಿರುವ ನವೀಕರಣ ಸಮಯದಲ್ಲಿ ಮಾತ್ರ ವರ್ಷಕ್ಕೊಮ್ಮೆ ಪ್ರಕಟಗೊಳ್ಳುವ ನೂರಾರು ಪತ್ರಿಕೆಗಳು ಮರು ಜೀವ ಪಡೆದುಕೊಳ್ಳುತ್ತವೆ. . ಇದರ ಜತೆಗೇ ಈಗಾಗಲೇ ಪತ್ರಕರ್ತರ ವೇಷ ಹಾಕಿಕೊಂಡಿರುವ ನೂರಾರು NRR (Non Reporting Reporters) ಗಳ ಜತೆಗೇ ನೂರಾರು NRR ಗಳೂ ಸೃಷ್ಟಿ…
ಕೊಡ್ಲಿಪೇಟೆ ಫೆ.6 NEWS DESK : ಕೊಡ್ಲಿಪೇಟೆಯ ವಿವಿಧೆಡೆ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ಪಟ್ಟಣದ ವಿವಿಧೆಡೆ ಶಬ್ದ ಚಿತ್ರ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಾಗೃತಿ ಜಾಥವನ್ನು ಬರಮಾಡಿಕೊಂಡರು. ಕೊಡ್ಲಿಪೇಟೆ ಮತ್ತು ಬ್ಯಾಡ ಗೊಟ್ಟ ಪಂಚಾಯಿತಿ ಮತ್ತು ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗು ಸಿಬ್ಬಂದಿ ವರ್ಗ, ಗ್ರಾಮಮಟ್ಟದ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರಗಳು ಶಾಲೆಗಳು ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು.






