ಕಡಂಗ ಫೆ.1 NEWS DESK : ಕೊಕ್ಕಂಡ ಬಾಣೆ ದರ್ಗಾ ಶರೀಫ್ ನಲ್ಲಿ ಮಹಾತ್ಮರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಉರೂಸ್ ಸಮಾರಂಭವು ಫೆ.2 ರಂದು ಆರಂಭಗೊಳ್ಳಲಿದೆ ಎಂದು ಮುಹ್ಯಯದ್ದೀನ್ ಜುಮ ಮಸೀದಿಯ ಅಧ್ಯಕ್ಷ ಅಬ್ದುಲ ತಿಳಿಸಿದ್ದಾರೆ ಐದು ದಿನಗಳ ಕಾಲ ನಡೆಯುವ ಉರೂಸ್ ಸಮಾರಂಭವು ಜುಮಾ ನಮಾಜಿನ ಬಳಿಕ ಖತೀಬ್ ಉಸ್ತಾದರಾದ ರಫೀಕ್ ಲತಿಫಿ ಪ್ರಾರ್ಥನೆ ಮೂಲಕ ಪ್ರಾರಂಭಗೊಳ್ಳಲಿದ್ದು, ರಾತ್ರಿ 8 ಗಂಟೆಗೆ ಕೇರಳದ ಪ್ರಸಿದ್ಧ ಸೈಹಿದ್ ಕುಂಬೊಳ್ ಅಲಿ ದುವಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಸಾಯಂಕಾಲ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ.ಎ.ಸಲಾಂ , ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಹಾಗೂ ಸಹ ಕಾರ್ಯದರ್ಶಿ ಪಿ.ಎಚ್.ಶಮೀರ್ ಉಪಸ್ಥಿತರಿದ್ದರು. ವರದಿ : ನೌಫಲ್ ಕಡಂಗ
ಲೇಖಕ: admin
ಮಡಿಕೇರಿ ಫೆ.1 : ಪ್ರಸಕ್ತ (2023-24) ಸಾಲಿನ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ / ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. 18 ವರ್ಷ ತುಂಬಿದ ಪಟ್ಟಣ/ಗ್ರಾಮಾಂತರ ಪ್ರದೇಶದ ಅರ್ಹ ಅಭ್ಯರ್ಥಿಗಳು www.kvic.org.in (pmegp online application) ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ ಇವರ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ: 08272-228746 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ನಾಪೋಕ್ಲು ಫೆ.1 : ಚಿತ್ರದುರ್ಗದ ನವೋದಯ ಪ್ರತಿಷ್ಠಾನದ ವತಿಯಿಂದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಗಣಿತ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಕೊಟ್ಟೂರು ಚೇರಂಬಾಣೆಯ ಮಚ್ಚಂಡ ಆರ್.ಚಕ್ಷ ಹಾಗೂ ಪಿ.ಎ.ಮಹಾಶೂಫ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕುಟ್ಟನ ವಿ.ರಿಷಿತ ಹಾಗೂ ಕೂರನ ಕೆ.ಇಂಚರ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ವ್ಯವಸ್ಥಾಪಕ ನಾಟೊಳಂಡ ವಿಜು, ಪ್ರಾಂಶುಪಾಲ ಕುದುಪಜೆ ಕವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ: ದುಗ್ಗಳ ಸದಾನಂದ.
ಚೆಯ್ಯಂಡಾಣೆ ಫೆ.1 : NEWS DESK : ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ಸಂಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕ್ರಿಯಗೊಳ್ಳುತ್ತಿವೆ. ಚೆಯ್ಯಂಡಾಣೆಯಲ್ಲಿರುವ ಬಿಎಸ್‌ಎನ್‌ಎಲ್ ಟವರ್ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿರುವ ಟವರ್ ನಲ್ಲಿ ಜನರೇಟರ್ ಕಾರ್ಯ ಸ್ಥಗಿತಗೊಳಿಸಿ ಹಲವು ದಿನಗಳೇ ಕಳೆದಿದೆ.ಇಲ್ಲಿ ಟವರ್, ಜನರೇಟರ್, ಸಿಬ್ಬಂದಿಗಳು ಎಲ್ಲವೂ ಮೂಕ ಪ್ರೇಕ್ಷಕರಂತೆ ನಿಂತಿವೆ. ಯಾವುದೇ ಸಿಬ್ಬಂದಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಸುತ್ತಮುತ್ತಲ ಗ್ರಾಮಸ್ಥರ ದೂರವಾಣಿ ಕಾರ್ಯನಿರ್ವಹಿಸದೆ ತಿಂಗಳುಗಳೇ ಕಳೆದಿದೆ. ಮೊಬೈಲ್ ಗಳಂತೂ ನೆಟ್ ವರ್ಕ್ ಸಿಗದೆ ನಿಷ್ಕ್ರಿಯವಾಗುತ್ತಿವೆ. ಜನೋಪಕಾರಿ ಸಂಸ್ಥೆಯಾಗಿದ್ದ ಬಿಎಸ್‌ಎನ್‌ಎಲ್ ಈ ದುಸ್ಥಿತಿಗೆ ಬಂದು ತಲುಪಿರುವುದು ವಿಷಾದಕರವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆಯ್ಯಂಡಾಣೆಯಲ್ಲಿ ಬಿಎಸ್‌ಎನ್‌ಎಲ್ ಕಚೇರಿ ಇಲ್ಲ, ಟವರ್ ನ ನೆಟ್ ವರ್ಕ್ ಮೇಲೆ ಅವಲಂಬಿತರಾಗಿದ್ದ ಸುತ್ತಮುತ್ತಲಿನ ಜನ ಇದೀಗ ಯಾವುದೇ ಸಂಪರ್ಕವಿಲ್ಲದೆ ಗೊಂದಲಕ್ಕೆ ಸಿಲುಕಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಿಎಸ್‌ಎನ್‌ಎಲ್ ವ್ಯವಸ್ಥೆಯನ್ನು…
ಮಡಿಕೇರಿ ಜ.31 NEWS DESK : ಕೊಡಗು ಜಿಲ್ಲಾ ಗೃಹರಕ್ಷಕದಳ ಮಡಿಕೇರಿ ಕಚೇರಿಯಲ್ಲಿ 2023-24ನೇ ಸಾಲಿಗೆ ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಸ್ಥಾನಗಳಿಗೆ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ನಿವಾಸಿಯಾಗಿರುವ 19 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಹಾಗೂ 10ನೇ ತರಗತಿ ತೇರ್ಗಡೆ ಹೊಂದಿರುವ ದೃಢಕಾಯರಾಗಿರುವ ಪುರುಷ/ ಮಹಿಳಾ ಅಭ್ಯರ್ಥಿಗಳು ಫೆ.15 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವ ಸದಸ್ಯರು ಜಿಲ್ಲಾ ಗೃಹರಕ್ಷಕದಳ ಕಚೇರಿ, ಡೈರಿಫಾರಂ ಮಡಿಕೇರಿ (ದೂ.ಸಂ. 08272-228427) ಮತ್ತು ಕೊಡಗು ಜಿಲ್ಲಾ ಗೃಹರಕ್ಷಕದಳದ ಸಹಾಯಕ ಬೋಧಕರಾದ ಅಕ್ಷಯ್‍ಕುಮಾರ್ ಡಿ. ಮೊ.ಸಂ.9844008820 ಹಾಗೂ ಗೃಹರಕ್ಷಕದಳದ ಘಟಕ ಕಚೇರಿಗಳ ಘಟಕಾಧಿಕಾರಿಗಳನ್ನು ಸಂಪರ್ಕಿಸಬಹುದು. ಘಟಕಾಧಿಕಾರಿಗಳ ವಿವರ : ಮಡಿಕೇರಿ ಘಟಕ ವೈ.ಎನ್.ಕವನ್ ಕುಮಾರ್ 9448204356, ಭಾಗಮಂಡಲ ಘಟಕ ಎನ್.ಪಿ.ಲೋಕನಾಥ 9108209941, ವಿರಾಜಪೇಟೆ ಘಟಕ ಮದಬ್ ಬೈರಾಗಿ 819756103, ಕುಶಾಲನಗರ ಘಟಕ ಬಿ.ಕೆ.ಪುಟ್ಟರಾಜು 9242116174, ಸೋಮವಾರಪೇಟೆ ಘಟಕ ಎಚ್.ಕೆ.ತ್ಯಾಗರಾಜು 9481431221, ಶಾಂತಳ್ಳಿ ಘಟಕ ಎಸ್.ಆರ್.ದೇವರಾಜು 9482729233,…
ಮಡಿಕೇರಿ ಜ.31 NEWS DESK : ಭಾರತದ ಮಹಾನ್ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 127ನೇ ಜನ್ಮ ದಿನಾಚರಣೆ ಹಾಗೂ ನೇತಾಜಿ ಯುವಕ ಹಾಗೂ ಯುವತಿ ಮಂಡಲದ 32ನೇ ವಾರ್ಷಿಕೋತ್ಸವವು ತಾಳತ್ತಮನೆಯಲ್ಲಿ ಸಂಭ್ರಮದಿಂದ ಆಚರಿಯಲಾಯಿತು. ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ಮಡಿಕೇರಿ ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಮತ್ತು ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಛತ್ತೀಸ್ ಗಡ್ ಸಬ್ ಇನ್‍ಸ್ಪೆಕ್ಟರ್ ಬಿ.ಐ.ಕುಮಾರ್ (ಸಿಆರ್‍ಪಿಎಫ್) ಉದ್ಘಾಟಿಸಿದರು. ಮಹಿಳಾ ಆರೋಗ್ಯ ನಿವೃತ್ತ ಸಹಾಯಕಿ ಬೊಟ್ಟೋಳಂಡ ಕಾವೇರಮ್ಮ ನಾಣಯ್ಯ ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾಟಕೇರಿಯ ಪ್ರಶಾಂತಿ ರೆಸಾರ್ಟ್ ಮಾಲಿಕರಾದ ಸವಿತ ಅಡಿಕೆರ ಸಂಘದ ಧ್ವಜಾರೋಹಣವನ್ನು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಹಾಗೂ ನೇತಾಜಿ ಯುವಕ ಮಂಡಲದ ಅಧ್ಯಕ್ಷ ಪಿ.ಕೆ.ಜೀವನ್, ಯುವತಿ…
ವಿರಾಜಪೇಟೆ ಜ.31 NEWS DESK : ಕರಡ ಶಾಖೆಯ “ಬ್ಯಾಂಕ್ ಆಫ್ ಬರೋಡ” ವತಿಯಿಂದ ವಿರಾಜಪೇಟೆಯ ಕಾವೇರಿ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಾಖೆಯ ಸೀನಿಯರ್ ಮ್ಯಾನೇಜರ್ ಸಿ.ವಿ.ಮಹೇಶ್ ವರ್ಮ ಕಾವೇರಿ ಶಾಲೆಗೆ ಕ್ರೀಡಾ ಸಾಮಾಗ್ರಿಗಳ ರೂಪದಲ್ಲಿ ರೂ.10,000 (ಹತ್ತು ಸಾವಿರ ) ರೂಪಾಯಿ ದೇಣಿಗೆಯನ್ನು ನೀಡಿದರು. ಈ ಸಂದರ್ಭ ಕಾವೇರಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. ಕಾವೇರಿ ಶಾಲೆಯ ದೈಹಿಕ ಶಿಕ್ಷಕಿ ಮೋನಿಕ ಹಾಗೂ ರಾಜ್ಯಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಕ್ರೀಡಾ ನಾಯಕರುಗಳಾದ ಆಕರ್ಷ್ ಕೊಂಗಂಡ ಮತ್ತು ಎಂ.ಜಿ.ಅಯ್ಯಪ್ಪ ಹಾಜರಿದ್ದರು.
ಮಡಿಕೇರಿ ಜ.31 NEWS DESK : ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಯರವ ಸಮುದಾಯ ವಸತಿ ರಹಿತ ಕುಟುಂಬದವರ ಹಾಡಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ, ಸದಸ್ಯರಾದ ಎಸ್.ಕೆ.ವಂಟಿಗೋಡಿ ಮತ್ತು ಟಿ.ಶ್ಯಾಮ್ ಭಟ್ ಭೇಟಿ ನೀಡಿ ಕುಟುಂಬದವರ ಜೊತೆ ಸಂವಾದ ನಡೆಸಿದರು. ನಿವೇಶನ, ಮನೆ ಇಲ್ಲದಿರುವುದು, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಇಲ್ಲದಿರುವುದು, ಟಾರ್ಪಲ್ ಕಟ್ಟಿಕೊಂಡು ಜೀವನ ದೂಡುತ್ತಿರುವುದನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರು. ಹಾಡಿ ಜನರ ಜೊತೆ ಸಂವಾದ ನಡೆಸಿದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವಂತೆ ಸಲಹೆ ನೀಡಿದರು. ಹತ್ತಿರದಲ್ಲಿಯೇ ಏಕಲವ್ಯ ಮಾದರಿ ವಸತಿ ಶಾಲೆ ಇದ್ದು, ಅಲ್ಲಿಗೆ ಸೇರ್ಪಡೆ ಮಾಡಬೇಕು. ಶಿಕ್ಷಣದಿಂದ ಯಾರೂ ಸಹ ವಂಚಿತರಾಗಬಾರದು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಅಧ್ಯಕ್ಷರು ಸಲಹೆ ಮಾಡಿದರು. `ಅಲ್ಲಿನ ಯರವ ಸಮುದಾಯದ ಶೋಭಾ ಅವರು ಜಿಲ್ಲೆಯ ವಿವಿಧ…
ಮಡಿಕೇರಿ ಜ.31 NEWS DESK : ವಿರಾಜಪೇಟೆ ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಹವಾಲು ಸ್ವೀಕರಿಸುವುದಕ್ಕೂ ಮೊದಲು ಮಾತನಾಡಿದ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಎಲ್.ನಾರಾಯಣಸ್ವಾಮಿ, ಬಾಳುಗೋಡು ಯರವ ಕುಟುಂಬದವರು ವಾಸ ಮಾಡುತ್ತಿರುವುದನ್ನು ಗಮನಿಸಿ ಒಂದು ರೀತಿ ವಿಚಲಿತನಾದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತ ದೇಶ ಚಂದ್ರಯಾನ ಉಡಾವಣೆ ಮಾಡಿ ಯಶಸ್ಸುಗಳಿಸಿದೆ. ವಿಶ್ವದ ಜಿಡಿಪಿಯಲ್ಲಿ 10 ರೊಳಗಿನ ಸ್ಥಾನವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ವಾಸಕ್ಕೆ ಯೋಗ್ಯವಾದ ನಿವೇಶನ, ಮನೆ, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕ ಹೊಂದದೆ ಇರುವ ಎಷ್ಟೋ ಕಡುಬಡ ಕುಟುಂಬಗಳಿದ್ದು, ಭಾರತ ವಿಕಾಸ ಹೊಂದಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಅವಲೋಕನ ಮಾಡಬೇಕಿದೆ ಎಂದರು. ಆದಿವಾಸಿ ಜನರಿಗೆ ಬೇಕಿರುವ ನಿವೇಶನ, ಮನೆ, ದೀಪ, ಹತ್ತಿರದಲ್ಲಿ ಅಂಗನವಾಡಿ, ಶಾಲೆ, ಇಂತಹ ಕನಿಷ್ಠ ಮೂಲ ಸೌಲಭ್ಯ ಇಲ್ಲದಿರುವುದು ನಮ್ಮ ವ್ಯವಸ್ಥೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮವಲೋಕನ ಮಾಡಬೇಕಿದೆ ಎಂದು…
ಮಡಿಕೇರಿ ಜ.31 NEWS DESK : ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್‍ನಲ್ಲಿ ಸುಬೇದಾರ್ ಆಗಿ ಸೇವೆಸಲ್ಲಿಸುತ್ತಿದ್ದ ಕೊಡಗಿನ ಎ.ಎ.ಸುಧಾಕರ್ ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದಿದ್ದಾರೆ. ಗುಜರಾತ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಧಾಕರ್ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಡ್ತಿ ಪಡೆದಿದ್ದಾರೆ. ಇವರು ಮೂಲತಃ ಕೊಡಗಿನ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ-ಬಾಚಳ್ಳಿ ಗ್ರಾಮದ ನಿವಾಸಿ ಎ.ಡಿ.ಅಪ್ಪಯ್ಯ ಹಾಗೂ ದಿ.ಜಾನಕಿ ದಂಪತಿಯ ಪುತ್ರ.






