ಮಡಿಕೇರಿ ಫೆ.2 NEWS DESK : ಗೂನಡ್ಕ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಅವರನ್ನು ಸನ್ಮಾನಿಸಲಾಯಿತು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮೈಸೂರು ಪೇಟ ತೊಡಿಸಿ, ಶಾಲು ಮತ್ತು ಸ್ಮರಣಿಕೆ, ತೆಕ್ಕಿಲ್ ದಶದೀವಿಕೆ ಹಾಗೂ ಬೆಳಕಿನೆಡೆಗೆ 10 ಮುಸ್ಲಿಂ ಕತೆಗಳ ಪುಸ್ತಕ ನೀಡಿ ಸನ್ಮಾನಿಸಿ ಗೌರವಿಸಿದರು. ಗೂನಡ್ಕ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸತತವಾಗಿ 5ನೇ ಬಾರಿ ಶೇ.100ರಷ್ಟು ಫಲಿತಾಂಶ ಪಡೆದಿರುವುದಕ್ಕೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಸಂತಸ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಇಂತಹ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರನ್ನು ಮತ್ತು ಶಿಕ್ಷಕ ವೃಂದದವರನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಜೆ.ಡಿ.ಸಂಪತ್ ಶಾಲೆಯ ಶಿಕ್ಷಕ ವೃಂದದವರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾ.ಪಂ ಅಧ್ಯಕ್ಷ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ ಹನೀಫ್ ಗೂನಡ್ಕ ಮತ್ತು ಶಾಲೆಯ…
ಲೇಖಕ: admin
ಮಡಿಕೇರಿ. ಫೆ.2 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿ.ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲಾ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಜಿಲ್ಲೆಯ ಹಿರಿಯ ಸಾಹಿತಿಗಳು, ಪತ್ರಕರ್ತರು, ಶಕ್ತಿ ದಿನ ಪತ್ರಿಕೆಯ ಸಂಸ್ಥಾಪಕರು ಆಗಿದ್ದ ಬಿ.ಎಸ್ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅವರ ಪುತ್ರ ಬಿ.ಜಿ ಅನಂತಶಯನ ಈ ದತ್ತಿ ಸ್ಥಾಪಿಸಿದ್ದು, ಕೊಡಗು ಜಿಲ್ಲೆಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಕಥೆಯನ್ನು ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ರಚಿಸತಕ್ಕದ್ದು, ತೀರ್ಪುಗಾರರ ಮೂಲಕ ಪ್ರಥಮ ದ್ವಿತೀಯ ಮತ್ತು ತೃತೀಯ ಬರಹಗಳನ್ನು ಆರಿಸಿ ಬಹುಮಾನ ನೀಡಲಾಗುವುದು. ಕಥೆ ಬರೆದು ಸಲ್ಲಿಸಲು ದಿನಾಂಕ. 15.02.2024 ಕೊನೆಯ ದಿನವಾಗಿದ್ದು, ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬಾಳೆಲೆ ಹೋಬಳಿ ಘಟಕ, ಅಂಚೆ ಪೆಟ್ಟಿಗೆ ಸಂಖ್ಯೆ 63, ಬಾಳೆಲೆ, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ 571219 ಸಂಪರ್ಕಿಸಲು…
ಮಡಿಕೇರಿ ಫೆ.2 NEWS DESK : ಬ್ರಹ್ಮಕುಮಾರೀಸ್ ಮಡಿಕೇರಿ ಶಾಖೆಯ ವತಿಯಿಂದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯ ರಾಜ್ಯಮಟ್ಟದ ವ್ಯವಸ್ಥಾಪಕರುಗಳಿಗಾಗಿ ಮೂರು ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು. ಹೋಟೆಲ್ ಕೂರ್ಗ್ ಮ್ಯಾರಿಯಟ್ ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕನವರು ಮೂರು ದಿನಗಳು ಬೆಳಗ್ಗೆ 7 ರಿಂದ 8 ರವರೆಗೆ ಮನೋಬಲದ ವೃದ್ದಿಗೆ ರಾಜಯೋಗದ ತರಬೇತಿಯನ್ನು ನೀಡಿದರು. ಸಹೋದರಿ ಧರಣಿ ಶಾರೀರಿಕ ಯೋಗಾಸನ ಮಾಡಿಸಿದರು. ಯೋಗದ ಅನುಭೂತಿಯಲ್ಲಿ ಸಹೋದರಿ ಬಿ.ಕೆ.ಹರಿಣಾಕ್ಷಿ ಭಾಗವಹಿಸಿದ್ದರು. ಇಂದಿನ ಒತ್ತಡದ ಬದುಕಿನಲ್ಲಿ ಪರಿವಾರ ಹಾಗೂ ವ್ಯವಹಾರಗಳ ಸಮತೋಲನೆಗೆ ಧ್ಯಾನ ಬಹಳ ಸಹಾಯಕ. ತಮ್ಮಲ್ಲಿ ಸುಪ್ತವಾಗಿರುವ ಆತ್ಮಶಕ್ತಿಯನ್ನು ಜಾಗೃತ ಮಾಡಿಕೊಳ್ಳುವ ವಿಧಾನವೇ ರಾಜಯೋಗ. ಈ ಕಾರ್ಯಕ್ರಮ ಕಂಪನಿಯ ವ್ಯವಸ್ಥಾಪಕರುಗಳಿಗೆ ಅಪಾರ ಲಾಭದಾಯಕವಾಯಿತು ಎಂದರು.
*ಫೆ.2 ರಂದು ಮಡಿಕೇರಿ ಶಾಸಕರು ಮಡಿಕೇರಿಯಲ್ಲಿ ಸಿಗಲಿದ್ದಾರೆ*
ವೈನಾಡ್ ಫೆ.1 NEWS DESK: ರಸ್ತೆಯಲ್ಲಿ ನಿಂತಿದ್ದ ಪ್ರವಾಸಿಗರನ್ನು ಒಂಟಿ ಸಲಗವೊಂದು ಅಟ್ಟಾಡಿಸಿದ ವಿಡಿಯೋ ಭಾರೀ ವೈರಲ್ ಆಗಿದೆ. ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿ ಭಾಗದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರು ರಸ್ತೆಗಿಳಿದು ಅರಣ್ಯ ಭಾಗವನ್ನು ವೀಕ್ಷಿಸತ್ತಿದ್ದ ಸಂದರ್ಭ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಇಬ್ಬರು ಪ್ರವಾಸಿಗರನ್ನು ರಸ್ತೆಯುದ್ದಕ್ಕೂ ಓಡಿಸಿದ ಕಾಡಾನೆ ಕೆಳಗೆ ಬಿದ್ದ ಒಬ್ಬರನ್ನು ತುಳಿಯಲು ಯತ್ನಿಸಿದೆ. ಆದರೆ ಅದೃಷ್ಟವಶಾತ್ ಪ್ರವಾಸಿಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಅರಣ್ಯ ಭಾಗದ ರಸ್ತೆಗಳಲ್ಲಿ ಪ್ರವಾಸಿಗರು ಅತ್ಯಂತ ಆತಂಕದಿಂದಲೇ ತೆರಳುವಂತ್ತಾಗಿದೆ. ಅಲ್ಲದೆ ವನ್ಯಜೀವಿಗಳು ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಿಯಬೇಡಿ ಎನ್ನುವ ಸಂದೇಶ ರವಾನೆಯಾಗಿದೆ.
ಚಾಮರಾಜನಗರ ಫೆ.1 NEWS DESK : ಗುಂಡ್ಲುಪೇಟೆ ವ್ಯಾಪ್ತಿಯ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ಸೀಗನಬೆಟ್ಟದ ಬಳಿ ಗಂಡು ಹುಲಿಯೊಂದು ಮೃತಪಟ್ಟಿದೆ. ಸುಮಾರು 5 ವರ್ಷದ ಹುಲಿ ಮತ್ತೊಂದು ಹುಲಿಯೊಂದಿಗೆ ಕಾದಾಡಿ ಸಾವನ್ನಪ್ಪಿರಬಹುದೆಂದು ತಿಳಿದು ಬಂದಿದೆ. ಅಲ್ಲದೆ ಮರಣೋತ್ತರ ಪರೀಕ್ಷೆಯ ಸಂದರ್ಭ ಹುಲಿಯ ಹೊಟ್ಟೆಯಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಇರುವುದು ಕಂಡು ಬಂದಿದೆ. ಬಂಡೀಪುರ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ ಫೆ.2 NEWS DESK : ಗಾಳಿಬೀಡಿನ ನವೋದಯ ವಿದ್ಯಾಲಯದಲ್ಲಿ 9 ಮತ್ತು 11 ನೇ ತರಗತಿಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ಫೆಬ್ರವರಿ, 10 ರಂದು ಜವಾಹರ್ ನವೋದಯ ವಿದ್ಯಾಲಯದಲ್ಲ್ಲಿ “ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ” ನಡೆಯಲಿದ್ದು, ನೋಂದಾಯಿತ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ನವೋದಯ ವಿದ್ಯಾಲಯ ಸಮಿತಿಯು ತನ್ನ ಅಧಿಕೃತ ವೆಬ್‍ಸೈಟಿನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ https://navodaya.gov.in ಈ ವೆಬ್‍ಸೈಟಿನಿಂದ ನೇರವಾಗಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳು ತಮ್ಮ ಮಗ/ಮಗಳು ಓದುತ್ತಿರುವ ಶಾಲೆ ಅಥವಾ ನವೋದಯ ವಿದ್ಯಾಲಯವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9611862835, 8840383521 ನ್ನು ಸಂಪರ್ಕಿಸಬಹುದು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಒ.ಎಂ. ಪಂಕಜಾಕ್ಷನ್ ತಿಳಿಸಿದ್ದಾರೆ.
ಮಡಿಕೇರಿ ಫೆ.1 NEWS DESK : ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸಭೆ ನಡೆಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಮೊರಾರ್ಜಿ ದೇಸಾಯಿ ಮತ್ತು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮಕ್ಕಳ ಸಂಖ್ಯೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು. ವಸತಿ ಶಾಲೆಯ ಮಕ್ಕಳೆಲ್ಲರೂ ಉತ್ತಮ ಶಿಕ್ಷಣ ಪಡೆದು ಐಐಟಿ, ಐಐಎಂ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುವಂತಾಗಬೇಕು ಎಂದು ಹೇಳಿದರು. ವಸತಿ ಹಾಗೂ ಸಾಮಾನ್ಯ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲರೊಂದಿಗೂ ಬೆರೆಯುವ ಗುಣ ಬೆಳೆಸಬೇಕು. ನಾಡಿನ ಪ್ರತಿಯೊಬ್ಬರೂ ಮನುಷ್ಯರು, ಕನ್ನಡಿಗರು, ಭಾರತೀಯರು ಎಂಬ ಮನೋಭಾವ ಬರಬೇಕು. ಧಾರ್ಮಿಕವಾಗಿ ಯಾರನ್ನು ಸಹ…
ವಿರಾಜಪೇಟೆ ಫೆ.1 NEWS DESK : ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಸುಮಾರು ವರ್ಷದ ಹಿಂದೆ ಸ್ವಂತ ಜಾಗ ಖರೀದಿಸಿ ಕೂಲಿ ಕೆಲಸ ಮಾಡಿಕೊಂಡು ತನ್ನ ಸ್ವಂತ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ ಬೆಟ್ಟ ಕುರುಬರ ಕುಟುಂಬಕ್ಕೆ ಸ್ಥಳೀಯ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಮಾವೀಯತೆ ಮೆರೆದಿದ್ದಾರೆ. ಬೆಟ್ಟ ಕುರುಬರ ಕಾಳ, ಪತ್ನಿ ಸುಮ, ಮಕ್ಕಳೊಂದಿಗೆ ಈ ಗುಡಿಸಲಿನಲ್ಲಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರ ಮನೆಯ ದುಸ್ಥಿತಿಯನ್ನು ತಿಳಿದ ಬಿ.ಎಂ ಗಣೇಶ್ ಅವರು ತಮ್ಮ ಸ್ವಂತ ಹಣದಿಂದ ನಾಲ್ಕು ಕೊಠಡಿಗಳ ಒಂದು ಪುಟ್ಟ ಮನೆಯನ್ನು ಕಟ್ಟಿಸಿಕೊಟ್ಟರು. ನೂತನ ಮನೆಗೆ ಗಣಪತಿ ಹೋಮ ನಡೆಸಿ ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶ ನಡೆಸಿ ಕಾಳ ಅವರಿಗೆ ಮನೆ ಹಸ್ತಾಂತರಿಸಿದರು. ಈ ಸಂದರ್ಭ ಮೆಚ್ಚುಗೆಯ ಮಾತನಾಡಿದ ಕಾಳ, ದಿನಗೂಲಿ ಕೆಲಸ ಮಾಡುತ್ತಾ ಸಾಗಿಸುತ್ತಿರುವ ನಮಗೆ ಸ್ವಂತ ಮನೆ ಕನಸಾಗಿತ್ತು. ಗಣೇಶ್ ಅವರ ಸಹಕಾರದಿಂದ ಸ್ವಂತ…
ಮಡಿಕೇರಿ ಫೆ.1 NEWS DESK : ಗೂನಡ್ಕ-ಪೇರಡ್ಕ ಮೋಹಿಯುದ್ದಿನ್ ಜುಮಾ ಮಸ್ಜಿದ್ ಹಾಗೂ ದರ್ಗಾಕ್ಕೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಭೇಟಿ ನೀಡಿದರು. ಮಸೀದಿ ಮತ್ತು ಪೇರಡ್ಕ ದರ್ಗಾದ ಇತಿಹಾಸ ಕೇಳಿ, ಈ ಭಾಗದಲ್ಲಿ ಮುಸ್ಲಿಮರು ಮಸೀದಿ ಹಾಗೂ ದರ್ಗಾದಲ್ಲಿ ಶಿಸ್ತು ಉಳ್ಳವರು ಹಾಗೂ ಧಾರ್ಮಿಕ ತಿಳುವಳಿಕೆ ಉಳ್ಳವರು ಎಂದು ಸಂತಸ ವ್ಯಕ್ತಪಡಿಸಿದರು. ನಂತರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾ.ಪಂ ಅಧ್ಯಕ್ಷರಾದ ಸುಮತಿ, ಶಕ್ತಿವೇಲು ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಮಹಮದ್ ಕುಂಞಿ ತೆಕ್ಕಿಲ್, ಮಸೀದಿ ಕಾರ್ಯದರ್ಶಿ ಉಸ್ಮಾನ್, ಪಾಂಡಿ ಅಬ್ಬಾಸ್, ಸಾಧುಮೋನ್ ತೆಕ್ಕಿಲ್ ಪೇರಡ್ಕ ಜುರೈದ್ ತೆಕ್ಕಿಲ್ , ಖಲಿಲ್, ಜುನೈದ್ ತೆಕ್ಕಿಲ್, ಮೂಸನ್, ಮೊದಲದವರು ಉಪಸ್ಥಿತರಿದ್ದರು.






