ಮಡಿಕೇರಿ ಜ.21 NEWS DESK : ಸಮಾಜದ ಬಡ ಜನರು, ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯವನ್ನು ಒದಗಿಸುವ ಮೂಲಕ ‘ಸಹಕಾರಿ ಚಳವಳಿ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನಹಿತದ ದೃಷ್ಟಿಯಿಂದ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿ(ಕೆಡಿಸಿಸಿ)ನ ಶತಮಾನೋತ್ಸವದ ಹಿನ್ನೆಲೆ ನಿರ್ಮಿಸಲಾಗಿರುವ ‘ಉನ್ನತಿ’ ಭವನವನ್ನು ಉದ್ಘಾಟಿಸಿ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನ ಸಾಮಾನ್ಯರ ಸಬಲೀಕರಣಕ್ಕೆ ಸರ್ಕಾರಗಳು ಮಾಡಲಾಗದ ಕೆಲಸಗಳನ್ನು ಸಹಕಾರ ಕ್ಷೇತ್ರದ ಮೂಲಕ ಮಾಡಲು ಸಾಧ್ಯವಿದೆ. ರೈತ ಸಮೂಹ, ಬಡವರ್ಗದ ಮಂದಿಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಅವರಲ್ಲಿ ಆರ್ಥಿಕ ಭದ್ರತೆಯನ್ನು ಮೂಡಿಸಲು ಸಾಧ್ಯವಿದೆ. ಈ ಹಿನ್ನೆಲೆ ಸಹಕಾರಿ ಬ್ಯಾಂಕ್‌ಗಳು ಹೆಚ್ಚಿನ ಸಾಲ ಸೌಲಭ್ಯದ ನೆರವನ್ನು ಒದಗಿಸಲು ಮುಂದಾಗುವಂತೆ ಕರೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿರುವುದಕ್ಕೆ ಸಹಕಾರಿ ಕ್ಷೇತ್ರವೂ ಕಾರಣವಾಗಿದೆ. ಇಂತಹ ಕ್ಷೇತದಲ್ಲಿ ‘ರಾಜಕೀಯ’ವನ್ನು ದೂರವಿಟ್ಟು ಜನಹಿತಕ್ಕಾಗಿ ಕಾರ್ಯನಿರ್ವಹಿಸುವುದು…
ಲೇಖಕ: admin
ಮಡಿಕೇರಿ ಜ.21 : ಸಾಮಾಜಿಕ ಜಾಲತಾಣದ ಮೂಲಕವೇ ಕವಿತೆ ಮತ್ತು ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಸಾಮಾಜಿಕ ಜಾಲತಾಣದ ಕನ್ನಡ ಸಾಹಿತ್ಯ ಬಳಗ ಕಥಾಗುಚ್ಛದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣದಲ್ಲಿ ಭಾನುವಾರ ನಡೆದ “ಸ್ನೇಹ ಕೂಟ” ಕಾರ್ಯಕ್ರಮ ಒಂದೆಡೆ ಸೇರಲು ಉತ್ತಮ ವೇದಿಕೆಯಾಯಿತು. ಸಾಹಿತ್ಯ ಬಳಗದ ಸಂಸ್ಥಾಪಕಿ ಲತಾ ಜೋಷಿ ಅವರ ನೇತೃತ್ವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯ, ಸಂಸ್ಕೃತಿ, ವಿಚಾರ ವಿನಿಮಯ ಮಾಡಿಕೊಂಡರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು. ಲತಾ ಜೋಷಿ ಮಾತನಾಡಿ, ಫೇಸ್ ಬುಕ್ ಸಾಹಿತ್ಯ ವೇದಿಕೆ 6 ವರ್ಷಗಳ ಹಿಂದೆ ಆರಂಭವಾಯಿತು. ಇದರಲ್ಲಿ ಸಾಹಿತ್ಯ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಿದ್ದಾರೆ. ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಾಹಿತ್ಯ ಸಂಗ್ರಹವನ್ನು ಕಲೆ…
ಮಡಿಕೇರಿ ಜ.21 : ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ಕೊಡಗು ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಶ್ರೀರಾಮನಾಮ ಸ್ಮರಣೆ ನಡೆಯಲಿದೆ. ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ ಜರುಗಲಿದ್ದು, ದೇವಾಲಯ ಸಮಿತಿಗಳು ಸಿದ್ಧತೆಗಳನ್ನು ಮಾಡಿಕೊಂಡಿವೆ. ಅಯೋಧ್ಯೆಯಿಂದ ನೇರಪ್ರಸಾರವಾಗುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ದೃಶ್ಯಗಳನ್ನು ದೊಡ್ಡ ಪರದೆಯ ಮೇಲೆ ತೋರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲಲಾ ದೇವಾಲಯಗಳು ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ನಿರ್ಧರಿಸಿವೆ. ಜಿಲ್ಲೆಯ ಊರು, ಊರುಗಳು ಕೇಸರೀಮಯವಾಗಿದ್ದು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ರಾಮೋತ್ಸವದ ಸಂಭ್ರಮದಲ್ಲಿದ್ದಾರೆ. ಈಗಾಗಲೇ ವಿಶ್ವ ಹಿಂದೂ ಪರಿಷತ್ ಎಲ್ಲಾ ದೇವಾಲಯ ಹಾಗೂ ಮನೆ ಮನೆಗಳಲ್ಲಿ ರಾಮನಾಮ ಸ್ಮರಣೆ, ದೀಪೋತ್ಸವ ಮತ್ತು ವಿಶೇಷ ಪೂಜೆಗೆ ಕರೆ ನೀಡಿದೆ.
ಮಡಿಕೇರಿ ಜ.21 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾಕೋಟುಪರಂಬುವಿನಿಂದ ವಿರಾಜಪೇಟೆ ಹೋಗುವ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದರು. ಕಾಮಗಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸಮಾಲೋಚಿಸಿದರು. ಇನ್ನು ಮುಂದೆಯೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಮಡಿಕೇರಿ ಜ.21 NEWS DESK : ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ನಗರದ ಸುದರ್ಶನ ಬಡಾವಣೆಯ ಮುನೀಶ್ವರ ದೇವಾಲಯದಲ್ಲಿ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಗಲಿದೆ. 11 ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣೆ, ಬಳಿಕ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ಮೂಲಕ ಆಂಜನೇಯ ದೇವಾಲಯಕ್ಕೆ ತೆರಳಲಾಗುವುದು. ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಬೃಹತ್ ಪರದೆಯಲ್ಲಿ ಆಂಜನೇಯ ದೇವಾಲಯದಲ್ಲಿ ವೀಕ್ಷಿಸಲಾಗಯವುದೆಂದು ಮುನೀಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪರಾಹ್ನ 4 ಗಂಟೆಯಿಂದ ವಿಶೇಷ ಪೂಜೆ, ಸಂಜೆ 7 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ. ರಾಮಮಂದಿರ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಬಡಾವಣೆಯ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಪುಟಾಣಿ ಮಕ್ಕಳಿಗ ಛದ್ಮವೇಷ, ಭಕ್ತಿಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ರಾತ್ರಿ 8.15ಕ್ಕೆ ಅನ್ನದಾನ ನೆರವೇರಿಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪುತ್ತೂರು ಜ.21 NEWS DESK : ರಾಮಾಯಣ ಮಹಾಕಾವ್ಯ ಮಣ್ಣೀನ ಶ್ರೇಷ್ಟತೆಯನ್ನು ಎತ್ತಿ ತೋರಿಸುತ್ತದೆ ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ ಸಪ್ತಾಹ ಕಾರ್ಯಕ್ರಮದಲ್ಲಿ ರಾಮಾಯಣದಲ್ಲಿ ತಾಂತ್ರಿಕತೆ ಎನ್ನುವ ವಿಷಯದ ಬಗ್ಗೆ ಮಾತನಾಡಿದರು. ಹನುಮಂತನ ಇರುವಿಕೆಯಿಂದ ನಾವು ನ್ಯಾನೋ ತಂತ್ರಜ್ಞಾನವನ್ನು ನೋಡಿದ್ದೇವೆ. 7000 ವರ್ಷಗಳ ಹಿಂದೆಯೇ ಹೊಲೋಗ್ರಾಂ ತಂತ್ರಜ್ಞಾನ ಅಸ್ತಿತ್ವದಲ್ಲಿ ಇತ್ತು, ರಾಮಾಯಣದಲ್ಲಿ ಬರುವ ಸಂಜೀವಿನಿ ಹಿಂದೂ ಧರ್ಮದ ಪ್ರಕಾರ ಒಂದು ಮಾಂತ್ರಿಕ ಗಿಡಮೂಲಿಕೆ. ನರಮಂಡಲದ ಗಂಭೀರ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಈ ಔಷಧಿಗಿದೆ ಎಂದು ಅವರು ಹೇಳಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಮಾತನಾಡಿ ರಾಮಾಯಣದಲ್ಲಿ ರಾಮಸೇತುವಿನ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. 2004 ರಿಂದ ಈಚೆಗೆ ರಾಮಸೇತುವುನ…
ಕುಶಾಲನಗರ ಜ.21 NEWS DESK : ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ಐದನೇ ವರ್ಷದ ಪುಣ್ಯಸ್ಮರಣೆ ಭಾನುವಾರ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು. ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ಹಾಗೂ ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ಕುಶಾಲನಗರದ ಕಾಯಕ ಯೋಗಿಗಳಾದ ಪೌರ ಕಾರ್ಮಿಕರ ಸಮ್ಮುಖದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಹಾಗೂ ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನೆಲ್ಲಾ ಸಾರ್ಥಕ ಸೇವೆ ಮಾಡಬಹುದೋ ಅದಕ್ಕಿಂತ ಮಿಗಿಲಾದ ಸೇವೆ ಮಾಡಿ ಜಗತ್ತು ಕಂಡ ಶ್ರೇಷ್ಟ ಸಂತರಾದರು. ಅವರು ಬದುಕಿದ್ದಾಗ ನಾವು ಬದುಕಿದ್ದೆವಲ್ಲಾ ಎಂಬುದು ನಮ್ಮ ಸೌಭಾಗ್ಯ ಎಂದರು. ಇದೇ ಸಂದರ್ಭ ಧಾರ್ಮಿಕ ಸೇವಾ ಕರ್ತ ಚಂದ್ರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅವರನ್ನು ಸಿದ್ದಗಂಗಾ ಭಕ್ತ…
ಕುಶಾಲನಗರ ಜ.21 NEWS DESK : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಗುಡ್ಡೆಹೊಸೂರಿನಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀಗಳ ಐದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನವೀಕರಿಸಿದ ವೃತ್ತದಲ್ಲಿ ಶ್ರೀಗಳ ಕಲಾಕೃತಿಯನ್ನು ಅಲಂಕರಿಸಿ ಪೂಜಿಸಲಾಯಿತು. ಈ ಸಂದರ್ಭ ಮಾತನಾಡಿದ ಸಿದ್ದಗಂಗಾ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ, 2017 ರಲ್ಲಿ ಶ್ರೀಗಳು ಶಿವನಲ್ಲಿ ಲೀನರಾದ ಕೆಲ ದಿನಗಳಲ್ಲಿ ಶ್ರೀಗಳ ಹೆಸರನ್ನು ಕುಶಾಲನಗರ ಭಾಗದಲ್ಲಿ ಚಿರಸ್ಥಾಯಿಯಾಗಿಸಬೇಕೆಂಬ ಹಂಬಲದಿಂದ ಸ್ಥಳೀಯ ಗ್ರಾಮ ಪಂಚಾಯಿತಿಯ ಆಗಿನ ಆಡಳಿತ ಮಂಡಳಿ ಸಹಕರಿಸಿದ್ದರಿಂದ ಇಂದು ಶ್ರೀಗಳ ವೃತ್ತವಾಗಲು ಸಾಧ್ಯವಾಗಿದೆ ಎಂದರಲ್ಲದೇ, ಶ್ರೀಗಳ ವೃತ್ತ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಸದ್ಭಕ್ತರು ಇದ್ದರು. ಮಧ್ಯಾಹ್ನದ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮದ ಬಳಿಕ ಸಾರ್ವಜನಿಕವಾಗಿ ದಾಸೋಹ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಮಡಿಕೇರಿ ಜ.20 : NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವು ಜನವರಿ, 22 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಜ.20 : NEWS DESK : ಪ್ರೀತಿ ವಿಶ್ವಾಸಕ್ಕೆ ಭಾಷೆ ಅಡ್ಡಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕುಂಜಿಲ ಪೈನರಿ ಮಸೀದಿಯ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ನಾವು ಯಾವುದೇ ಭಾಷೆಯಲ್ಲಿ ಮಾತನಾಡಿದರು ಕೂಡ ಒಂದೇ ಸೌಹಾರ್ದತೆ, ಪ್ರೀತಿ, ವಿಶ್ವಾಸ, ಬಾಂಧವ್ಯ ಮುಖ್ಯ. ಮಾನವೀಯತೆ ಮಾನವ ಗುಣವನ್ನು ಜೀವನದಲ್ಲಿ ಅಳವಡಿಸಿ ಸೌಹಾರ್ದತೆಯ ಸಮಾಜದ ನಿರ್ಮಾಣ ಮಾಡಬೇಕೆಂಬ ಕಲ್ಪನೆಯನ್ನ ಕಟ್ಟಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎ.ಎಸ್.ಹುಸೈನ್, ಈ ದೇಶದ ಮುಸಲ್ಮಾನರು 629ನೇ ಇಸವಿಯಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಚೇರ್ಮಾನ್ ಎಂಬ ಗ್ರಾಮದಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಮಸೀದಿಯ ಶಂಕುಸ್ಥಾಪನೆ ಮಾಡಿದ ಮಾಲಿಕ್ ದಿನಾರ್ (ರ ಅ )ಅವರ ಅನುಯಾಯಿ ಗಳಾಗಿದ್ದಾರೆ. ಇಸ್ಲಾಂ ಧರ್ಮ ಬಂದ ಹಾದಿಗೆ ಇತಿಹಾಸವಿದೆ ಎಂದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ,…






