ನಾಪೋಕ್ಲು ಜ.20 : NEWS DESK : ಮೂರ್ನಾಡು ಪಿಯುಸಿ ಕಾಲೇಜಿನಲ್ಲಿ ನಡೆದ ಡಾನ್ಸ್ ಸ್ಪರ್ಧೆಯಲ್ಲಿ ಸೇಕ್ರಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು. ಶಾಲೆಯ ವಿದ್ಯಾರ್ಥಿಗಳಾದ ಕೌಶಲ್ಯ, ಸಾರಿಕಾ, ಸಿ.ಯು.ನಿಶಾನ, ಎಂ.ಬಿ.ಅನ0ತ್, ಪಿ.ಎನ್.ಸಂಶೀರ, ಪಿ.ಎನ್. ನಾದಿಯ, ಕೆ.ಕೆ.ಜಿಯಾದ್, ಪಿ. ಹೆಚ್.ಯಾಶೀರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಸಂಸ್ಥೆಯ ಪ್ರಾಂಶುಪಾಲ ಕಲಿಯಾಟoಡ ಶಾರದ ಅಪ್ಪಣ್ಣ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ನಾಪೋಕ್ಲು ಜ.20 : NEWS DESK : ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಹಾಳಾಗಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಮೂರ್ನಾಡು ಚೆಸ್ಕಾಂ ಇಲಾಖೆ ದುರಸ್ತಿ ಪಡಿಸಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚೇಲಾವರ ಗ್ರಾಮದ ಮನೆಯಪಂಡ ಧೀರಜ್ ತಿಮ್ಮಯ್ಯ ಅವರ ಕಾಫಿ ತೋಟದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್ ಕಳೆದ ಎರಡು ವರ್ಷಗಳಿಂದ ದುಸ್ಥಿತಿಯಲ್ಲಿದ್ದು .ಇದರಿಂದಾಗಿ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಪದೇ ಪದೇ ವಿದ್ಯುತ್ ಕಡಿತಗೊಳ್ಳುವುದು, ವಿದ್ಯುತ್ ಪೂರೈಕೆಯಾದರೂ ಲೋ ವೋಲ್ಟೇಜ್ ಕೊರತೆಯಿಂದ ಸಮಸ್ಯೆ ಅನುಭವಿಸುವಂತಾಗಿತ್ತು.. ನೂತನ ಟ್ರಾನ್ಸ್ ಫಾರ್ಮರ್ ಅಳವಡಿಸಿ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿದ್ದು, ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿ ಮೂರ್ನಾಡು ಚೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ತೇಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಟ್ರಾನ್ಸ್ ಫಾರ್ಮರ್ ದುರಸ್ತಿ ಪಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜ.20 : Newsdesk : ಆರೋಗ್ಯ ರಕ್ಷಕ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನಾ ಮುಖ್ಯಮಂತ್ರಿಯವರ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆಯಲು ಇಂದೇ ಆಯುಷ್ಮಾನ್ ಕಾರ್ಡ್ ಮಾಡಿಸಿ. ಆಯುಷ್ಮಾನ್ ಕಾರ್ಡ್‍ಗಳನ್ನು ನಿಮ್ಮ ಹತ್ತಿರದ ಗ್ರಾಮಒನ್ ನಿಂದ ರೇಷನ್ ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಚಿತವಾಗಿ ಪಡೆಯಿರಿ.ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿ.ಪಿ.ಎಲ್. ಕಾರ್ಡ್‍ನ ಪ್ರತೀ ಕುಟುಂಬಗಳಿಗೆ ರೂ.5 ಲಕ್ಷ ವಾರ್ಷಿಕ ಮಿತಿಯೊಳಗೆ ಉಚಿತ ಚಿಕಿತ್ಸೆ, ಎ.ಪಿ.ಎಲ್ ಕಾರ್ಡ್‍ನ ಪ್ರತೀ ಕುಟುಂಬಗಳಿಗೆ ಪ್ಯಾಕೇಜ್ ದರದಲ್ಲಿ ಶೇ.30 ರಷ್ಟು ವಾರ್ಷಿಕವಾಗಿ ರೂ.1.5 ಲಕ್ಷದ ಮಿತಿಯೊಳಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಸ್ಥೆಗೆ ಭರಿಸುತ್ತದೆ.ಈ ಕಾರ್ಡ್‍ನ ನೆರವಿನಿಂದ ದೇಶದಲ್ಲಿ ಎಲ್ಲೇ ಇದ್ದರೂ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಪೋರ್ಟಬಿಲಿಟಿ ಸೌಲಭ್ಯವಿದೆ. ತುರ್ತು ಸಂದರ್ಭದಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ರೆಫರಲ್ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡ್‍ನ್ನು 14…
ಮಡಿಕೇರಿ ಜ.20 : Newsdesk : ಸಂವಿಧಾನ ದಿನಾಚರಣೆ ಪ್ರಯುಕ್ತ ಜ.26 ರಿಂದ 22 ದಿನಗಳ ಕಾಲ ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಕೋರಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥ ಅಭಿಯಾನ ಸಂಬಂಧ ವಿವಿಧ ಸಮಾಜದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂವಿಧಾನ ದಿನಾಚರಣೆ ಪ್ರಯುಕ್ತ ಜ.26 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಂವಿಧಾನ ಜಾಗೃತಿ ಜಾಥಗೆ ಚಾಲನೆ ನೀಡಲಿದ್ದಾರೆ. ಬಳಿಕ ಜ.27 ರಿಂದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಅಭಿಯಾನ ನಡೆಯಲಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.ಮೂಲಭೂತ ಹಕ್ಕುಗಳ…
ಮಡಿಕೇರಿ ಜ.19 NEWS DESK : ಹಾಕತ್ತೂರು ತೊಂಭತ್ತು ಮನೆ ನಿವಾಸಿ, ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಅವರ ತಾಯಿ ಟಿ.ಆರ್.ಲಕ್ಷ್ಮಿ (72) ಅವರು ತಾ.19ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಓರ್ವ ಪುತ್ರನನ್ನು ಅಗಲಿದ್ದು, ಅಂತ್ಯಕ್ರಿಯೆ ತಾ.20 ರಂದು ಸ್ವಗ್ರಾಮದಲ್ಲಿ ನಡೆಯಲಿದೆ.
ಮಡಿಕೇರಿ ಜ.19 : ನಗರದ ಕೊಡಗು ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ ಸಿ.ಎಸ್.ರಘುವಂಶಿ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾನೆ.ಎನ್‍ಸಿಸಿ ಕೆಡೆಟ್ ಸಾಜೆರ್ಂಟ್ ರಘುವಂಶಿ ಸಿ.ಎಸ್ ಕರ್ನಾಟಕ ಗೋವಾ ಡೈರೆಕ್ಟ್ ರೇಟ್ ನ ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್ ಆಗಿದ್ದಾನೆ. ಈತ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿರುವ ಕೊಡಗು ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿದ್ದಾನೆ.ರಘುವಂಶಿಯ ಸಂದರ್ಶನ ಡಿ.ಡಿ ಚಾನಲ್ ಮತ್ತು ಸಂಸದ್ ಟಿ.ವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. 19ನೇ ಕರ್ನಾಟಕ ಬೆಟಾಲಿಯನ್ ನ ಎನ್‍ಸಿಸಿ ಕೆಡೆಟ್ ಆಗಿರುವ ರಘುವಂಶಿ, ಮಡಿಕೇರಿಯ ಸಿವಿಲ್ ಇಂಜಿನಿಯರ್ ಸಿ.ಆರ್.ಶಿವಕುಮಾರ್ ಹಾಗೂ ಸಂಧ್ಯಾ ಪಿ. ದಂಪತಿಯ ಪುತ್ರನಾಗಿದ್ದಾನೆ.
ಮಡಿಕೇರಿ ಜ.19 : ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ.25 ರಂದು ವಿರಾಜಪೇಟೆಯಲ್ಲಿ “ಕರ್ನಾಟಕ ದಲಿತ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ನಗರದ ಸೆಂಟ್ ಆನ್ಸ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು.ಹುಟ್ಟು ಹೋರಾಟಗಾರರಾಗಿ ಬಡವರ ನೋವಿಗೆ ಸ್ಪಂದಿಸುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜನಪರ ಮತ್ತು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿವಾಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಹೆಚ್.ಬಿ.ಸಂತೋಷ್ ಹಾಗೂ ಮಡಿಕೇರಿ ನಗರ ಸಂಚಾಲಕ ಲೋಕನಾಥ್ ಉಪಸ್ಥಿತರಿದ್ದರು.
ಮಡಿಕೇರಿ ಜ.19 : ಕನಿಷ್ಟ ವೇತನ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜ.23 ರಿಂದ 25ರವರೆಗೆ ಪ್ರತಿಭಟನೆ ನಡೆಸಲು ಕೊಡಗು ಜಿಲ್ಲಾ ಅಂಗನವಾಡಿ ನೌಕರರ ಸಂಘ ನಿರ್ಧರಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್.ಸುಮಿತ್ರ, ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ವ್ಯಾಪ್ತಿಯ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.ಜ.23 ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಸುಮಾರು 860 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ ಎರಡು ದಿನಗಳ ಪ್ರತಿಭಟನೆ ಸಂದರ್ಭ ಅಂಗನವಾಡಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಪ್ರಸ್ತುತ ಮಾಸಿಕ 11,500 ರೂ. ಗೌರವ ಧನವನ್ನಷ್ಟೆ ಪಡೆಯುತ್ತಿದ್ದಾರೆ. 2017ರ ಬಳಿಕ ಗೌರವ ಧನ ಹೆಚ್ಚಳವಾಗಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಕನಿಷ್ಟ 31 ಸಾವಿರ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರಲ್ಲದೆ, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವವರಿಗೆ ಕನಿಷ್ಟ 10 ಸಾವಿರ…
ಮಡಿಕೇರಿ ಜ.19 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಅರೆಭಾಷಿಕ ಗೌಡ ಜನಾಂಗ ಬಾಂಧವರ ವಧು-ವರರ ಸಮಾವೇಶ ಫೆ.11 ರಂದು ನಡೆಯಲಿದೆ.ಅಂದು ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಮತ್ತು ಇತರ ಎಲ್ಲಾ ಮಾಹಿತಿಗಳೊಂದಿಗೆ ಖುದ್ದಾಗಿ ಭಾಗವಹಿಸಬೇಕು. ಬರುವಾಗ ಅಪೇಕ್ಷಿತ ವಧು, ವರರನ್ನು ಕರೆದುಕೊಂಡು ಬರಬೇಕೆಂದು ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗೆ ಮೊ.ಸಂ 9379213818, 9739495381, 9449476171, 9449086589 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ ಜ.19 : ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‍ನ ಮುಖ್ಯ ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ನಗರಸಭೆ ತೆರವುಗೊಳಿಸಿದೆ. ಬೀದಿ ಬದಿ ವ್ಯಾಪಾರದಿಂದ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಆದರೆ ನಗರಸಭೆಯ ಕ್ರಮವನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ರಾಜಾಸೀಟು ಆವರಣದಲ್ಲಿ ಪುಟಾಣಿ ರೈಲು ಇದ್ದ ಸ್ಥಳದಲ್ಲ್ಲಿ ಈ ಹಿಂದೆ ಬೀದಿ ಬದಿ ವ್ಯಾಪಾರಸ್ಥರು ಗೂಡಂಗಡಿಗಳನ್ನಿರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಪ್ರವಾಸಿತಾಣದ ಬುಡದಲ್ಲೆ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರದಿಂದ ಸಮಸ್ಯೆಗಳು ಉದ್ಭವವಾದ ಹಿನ್ನೆಲೆ ಅಲ್ಲಿಂದ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು.ಇಲ್ಲಿಂದ ಸ್ಥಳಾಂತರಗೊಂಡ ಬೀದಿಬದಿ ವ್ಯಾಪಾರಿಗಳು ರಾಜಾಸೀಟು ಮುಖ್ಯರಸ್ತೆಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲದ ಬಳಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಆರಂಭಿಸಿದರು. ವಾಹನ ದಟ್ಟಣೆ ಮತ್ತು ಜನನಿಬಿಡ ಪ್ರದೇಶದಲ್ಲಿ ಬೀದಿ ವ್ಯಾಪಾರ ನಡೆಸುತ್ತಿರುವುದು ಮತ್ತೆ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದನ್ನು ಗಮನಿಸಿದ ನಗರಸಭೆ, ಅಲ್ಲಿಂದ ಅವರನ್ನು ತೆರಳಲು ಸೂಚಿಸಿ, ಪರ್ಯಾಯ ಸ್ಥಳವನ್ನು ಗುರುತಿಸಿತ್ತು. ಇದಕ್ಕೆ…






