ವಿರಾಜಪೇಟೆ ಜ.18 : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪರ್ಚನೆ, ಭಸ್ಮಾರ್ಚನೆ, ತುಪ್ಪಾಭಿಷೇಕ, ಹಾಲಿನ ಅಭಿಷೇಕ ವನ್ನು ನೆರವೇರಿಸಿದರು. ಅಲ್ಲದೇ ಮಂಟಪದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ದೇವತಾ ಪ್ರಾರ್ಥನೆ ಹಾಗೂ ಶ್ರೀ ಮಹಾಗಣಪತಿ ಹೋಮ, ಗಣಪತಿ, ಶ್ರೀ ನಾಗ, ವನದುರ್ಗೆ ದೇವರುಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಬೇಟೋಳಿ ಮಹಿಳಾ ಮಂಡಳಿ ಹಾಗೂ ಅಯ್ಯಪ್ಪ ವೃತಾಧಾರಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಹೆಗ್ಗಳ, ಬೂದಿಮಾಳ, ಪೆರಂಬಾಡಿ, ಆರ್ಜಿ, ವಿರಾಜಪೇಟೆ,…
ಲೇಖಕ: admin
ವಿರಾಜಪೇಟೆ ಜ.18 : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪರ್ಚನೆ, ಭಸ್ಮಾರ್ಚನೆ, ತುಪ್ಪಾಭಿಷೇಕ, ಹಾಲಿನ ಅಭಿಷೇಕ ವನ್ನು ನೆರವೇರಿಸಿದರು. ಅಲ್ಲದೇ ಮಂಟಪದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ದೇವತಾ ಪ್ರಾರ್ಥನೆ ಹಾಗೂ ಶ್ರೀ ಮಹಾಗಣಪತಿ ಹೋಮ, ಗಣಪತಿ, ಶ್ರೀ ನಾಗ, ವನದುರ್ಗೆ ದೇವರುಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಬೇಟೋಳಿ ಮಹಿಳಾ ಮಂಡಳಿ ಹಾಗೂ ಅಯ್ಯಪ್ಪ ವೃತಾಧಾರಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಹೆಗ್ಗಳ, ಬೂದಿಮಾಳ, ಪೆರಂಬಾಡಿ, ಆರ್ಜಿ, ವಿರಾಜಪೇಟೆ,…
ಮಡಿಕೇರಿ ಜ.18 : ರೂಂ ಬುಕ್ ಮಾಡುವ ನೆಪದಲ್ಲಿ ಮಡಿಕೇರಿ ನಗರದ ಹೊಟೇಲ್ ವೊಂದರ ಮಾಲೀಕರಿಗೆ ಸೈಬರ್ ವಂಚಕರು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ರೂಂ ಬೇಕೆಂದು ಆನ್ ಲೈನ್ ಮೂಲಕ ಹೊಟೇಲ್ ಗೆ ಕೋರಿಕೆ ಕಳುಹಿಸಿದ್ದಾನೆ. ರೂಂ ಬುಕ್ ಮಾಡಿಕೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕೆಂದು ತಿಳಿಸಿದ ಹೊಟೇಲ್ ನ ವ್ಯವಸ್ಥಾಪಕರು ಮಾಲೀಕರ ಹಣ ವರ್ಗಾವಣೆಯ ಮೊಬೈಲ್ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ. ರೂಂ ಬೇಡಿಕೆಯನ್ನಿಟ್ಟಿದ್ದ ವ್ಯಕ್ತಿ ತನ್ನ ಮೊಬೈಲ್ ಮೂಲಕ ರೂ.20 ಸಾವಿರ ಪಾವತಿ ಮಾಡಿರುವ ಸಂದೇಶದ ಸ್ಕ್ರೀನ್ ಶಾಟ್ ನ್ನು ಹೊಟೇಲ್ ಮಾಲೀಕರಿಗೆ ಕಳುಹಿಸುತ್ತಾನೆ. ನಂತರ ತಕ್ಷಣ ಕರೆ ಮಾಡಿ ಮುಂಗಡ ಹಣ ರೂ.2 ಸಾವಿರಕ್ಕೆ ಬದಲಾಗಿ 20 ಸಾವಿರ ರೂ. ಪಾವತಿ ಮಾಡಿರುವೆ, ರೂ.18 ಸಾವಿರವನ್ನು ನನಗೆ ಮರಳಿಸಿ ಎಂದು ಮಾಲೀಕರಲ್ಲಿ ಮನವಿ ಮಾಡುತ್ತಾನೆ. ರೂ.20 ಸಾವಿರ ಬಂದಿರುವ ಬಗ್ಗೆ ಸ್ಕ್ರೀನ್ ಶಾಟ್ ಮೂಲಕ ಮನವರಿಕೆ ಮಾಡಿಕೊಂಡ ಮಾಲೀಕರು ಕರೆ ಮಾಡಿದಾತನಿಗೆ ರೂ.18…
ವಿರಾಜಪೇಟೆ ಜ.16 : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಆಯೋಜಿಸಲು ಉದ್ದೇಶಿಸಲಾಗಿರುವ 15ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ವಾರು ಮುಸ್ಲಿಂ ಕಪ್ ವಾಲಿಬಾಲ್ -2024 ಹೊನಲು ಬೆಳಕಿನ ಪಂದ್ಯಾವಳಿ ಜ.19 ರಿಂದ 21ರ ವರೆಗೆ ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ.ಹನೀಫ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ತಾಲೂಕು ಮೈದಾನದಲ್ಲಿ 3 ದಿನಗಳ ಕಾಲ ನಡೆಯಲಿರುವ ಪಂದಾವಳಿಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲೆಯ ವಿವಿಧೆಡೆಯ ದಾನಿಗಳ ಮತ್ತು ಕ್ರೀಡಾಪ್ರೇಮಿಗಳ ಆರ್ಥಿಕ ನೆರವಿನಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿಗೆ ಸಂಬಂಧಿಸಿದಂತೆ ಕ್ರೀಡಾಪಟುಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ 30 ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದೆ ಎಂದು ಮಾಹಿತಿ ನೀಡಿದ ಹನೀಫ್, ನೊಂದಾಯಿತ ಜಮಾಅತ್ ತಂಡಗಳಲ್ಲಿ ಆಯಾ ಜಮಾಅತ್ ವ್ಯಾಪ್ತಿಯ ಸದಸ್ಯರನ್ನು ಹೊರತುಪಡಿಸಿದರೆ…
ಮಡಿಕೇರಿ ಜ.16 : ಸೋಮವಾರಪೇಟೆ ಲಯನ್ಸ್ ಕ್ಲಬ್ ಹಾಗೂ ಮುಳಿಯ ಆಭರಣ ಮಳಿಗೆಯ ಸಹಯೋಗದಲ್ಲಿ ಹೊಸ ತೋಟ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಲಯನ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಲೀಕರಾದ ಕೇಶವಪ್ರಸಾದ್ ಮುಳಿಯ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ನವೀನ್ ಅಂಬೆಕಲ್, ವಲಯ ಅಧ್ಯಕ್ಷ ಸಿ.ಕೆ.ರೋಹಿತ್ , ಬಸ್ ನಿಲ್ದಾಣಕ್ಕೆ ಸ್ಥಳದಾನಿಗಳದ ಕೋದಂಡ ಅಪ್ಪಣ್ಣ, ಮುದ್ದಪ್ಪ, ಗ್ರಾ.ಪಂ ಅಧ್ಯಕ್ಷರಾದ ಟಿ.ಪಿ.ಉಷಾ, ರೋಟರಿ ಕ್ಲಬ್ ಸಹಾಯಕ ಗೌರ್ನರ್ ಎಂ.ಡಿ.ಲಿಖಿತ್, ಮಡಿಕೇರಿಯ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್, ಮೋಹನದಾಸ್ ಮತ್ತು ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಿ.ಕೆ.ಲಯನ್ ಶಿವಕುಮಾರ್ ಸ್ವಾಗತಿಸಿದರು. ಯನ್ ಯೋಗೀಶ್ ವಂದಿಸಿದರು.
ನಾಪೋಕ್ಲು ಜ.18 : ಜನಾಂಗಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹೇಳಿದರು. ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯುವಕರು ದೇಹ ಮತ್ತು ಮನಸ್ಸನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕುಡಿತದ ದಾಸರಾಗದೆ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಹಕಾರ ನೀಡಿದರೆ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯ ಎಂದರು. ಕುಂಜಿಲ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳಾದ ಕೆಂಬಟ್ಟಿ ಜನಾಂಗದ ಸಂಸ್ಕೃತಿ ಉತ್ತಮವಾಗಿದೆ. ಮೂಲ ಸಂಸ್ಕೃತಿಯನ್ನು ಮರೆಯುವುದು ಸರಿಯಲ್ಲ.ಸಂಸ್ಕೃತಿ ವಿಶೇಷವಾದದ್ದಾಗಿದ್ದು, ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ ಎಂದರು. ದಿ ತಾಮರ ರೆಸಾರ್ಟ್ ನ ಸೀನಿಯರ್ ಮ್ಯಾನೇಜರ್…
ಸೋಮವಾರಪೇಟೆ ಜ.17 : ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ 8 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ತಮ್ಮ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಯಡೂರು ಕೆರೆಗೆ ಬಿದ್ದಿದ್ದು, ಕಾರಿನೊಳಗಿದ್ದವರು ಕಿಟಕಿಗಳನ್ನು ಒಡೆದು ಹೊರಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಮದಲಾಪುರದ ಜ್ಯೋತಿ, ಲಕ್ಷ್ಮಿ, ಮನು, ಸೀತಮ್ಮ, ರತಿ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಭದ್ರತಾ ಬೇಲಿ ಅಳವಡಿಸಲು ಒತ್ತಾಯ :: ಕರೆಯು ರಸ್ತೆಯ ಅಂಚಿನಲ್ಲಿದ್ದು, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಡಿಕೇರಿ ಜ.18 : ಭಾರತೀಯ ಜನತಾ ಪಕ್ಷದ ಕೃಷಿ ಮೋರ್ಚಾದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಬಿ.ಸಿ.ನವೀನ್ ಕುಮಾರ್ ನೇಮಕಗೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಾ. ಬಿ.ಸಿ.ನವೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. 2010ರಲ್ಲಿ ಪಕ್ಷದ ಸದಸ್ಯರಾಗಿ ಸೇರ್ಪಡೆಗೊಂಡ ಇವರು, 2016ರಲ್ಲಿ ವೈದ್ಯಕೀಯ ಪ್ರಕೋಷ್ಠದ ಕೊಡಗು ಜಿಲ್ಲಾ ಸಂಚಲಕರಾಗಿ, 2017ರಲ್ಲಿ ವಿಭಾಗೀಯ ಸಂಚಾಲಕರಾಗಿ, 2020ರಲ್ಲಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸಮಾಡಿದ್ದಾರೆ. ಮಡಿಕೇರಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ಬಿ.ಸಿ.ನವೀನ್ ಕುಮಾರ್ ಮಕ್ಕಳ ತಜ್ಞರಾಗಿ ಪ್ರಖ್ಯಾತಿಗಳಿಸಿದ್ದಾರೆ.
ಕುಶಾಲನಗರ ಜ.18 : ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಹನ್ನೆರಡನೇ ಶತಮಾನದ ವಚನ ಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿಯನ್ನು ಕುಶಾಲನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಯಿತು. ಶ್ರೀ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಮೆ.ನಾ.ವೆಂಕಟನಾಯಕ್, ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮೊದಲಾದ ವಚನಕಾರರು ಹನ್ನೆರಡನೇ ಶತಮಾನವನ್ನು ಪಾವನಗೊಳಿಸಿದ ಶ್ರೇಷ್ಠ ಶರಣರು. ಅಂದಿನ ಸಮಾಜದಲ್ಲಿ ಜನಸಾಮಾನ್ಯರನ್ನು ಮೂಢನಂಬಿಕೆಗಳ ಕಟ್ಟಳೆಗಳಲ್ಲಿ ಬಂಧಿಯಾಗಿಸಿ ಅವರ ಜೀವನವನ್ನು ನರಕವಾಗಿಸಿದಾಗ ಸಿದ್ದರಾಮೇಶ್ವರರಂತಹ ಶರಣರು ವಚನ ಕ್ರಾಂತಿಯನ್ನು ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಮೂಲಕ ಜಗಜ್ಯೋತಿಯಾದವರು ಎಂದು ಶರಣರ ಚಳುವಳಿಯನ್ನು ಸ್ಮರಿಸಿದರು. ಹನ್ನೆರಡನೇ ಶತಮಾನದಲ್ಲಿ ವಚನಕಾರರು ಸಾಮಾಜಿಕ ಆಂದೋಲನವನ್ನು ಹಮ್ಮಿಕೊಳ್ಳದಿದ್ದಲ್ಲಿ ಇಂದು ದೇಶ ಇಷ್ಟೊಂದು ಸುಭಿಕ್ಷವಾಗುತ್ತಿರಲಿಲ್ಲ ಎಂದು ವೆಂಕಟನಾಯಕ್ ಬಣ್ಣಿಸಿದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ ಹಾಗೂ ಚಿಂತಕ ಎಂ.ನಂಜುಂಡಸ್ವಾಮಿ ಮಾತನಾಡಿ, ಕನ್ನಡ ನಾಡನ್ನು ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿಸಿದ ವಚನ ಸಾಹಿತ್ಯ ವಿಶ್ವಕ್ಕೆ ಆದರ್ಶವಾಗಿದೆ. ವಿದ್ಯಾರ್ಥಿಗಳು…
ಮಡಿಕೇರಿ ಜ.18 : ಕುಶಾಲನಗರ ಪುರಸಭೆಯ ಎಸ್‍ಎಫ್‍ಸಿ (ಎಸ್‍ಸಿಪಿ)(ಟಿಎಸ್‍ಪಿ) ಶೇ.7.25 ರ ಅನುದಾನದಡಿ 2022-23 ನೇ ಅವಧಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಸಹಾಯಧನ ನೀಡುವುದು ಮತ್ತು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡಜನರ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡುವುದು ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ವರ್ಗದ 10 ವರ್ಷದ ಮಕ್ಕಳಿಗೆ ಒಂದು ಬಾರಿಗೆ ಆರೋಗ್ಯ/ ಜೀವ ವಿಮೆ ಒದಗಿಸುವುದು ಹಾಗೂ 2020-21 ನೇ ಸಾಲಿಗೆ ಎಸ್‍ಎಫ್‍ಸಿ(ಟಿಎಸ್‍ಪಿ) ಅನುದಾನದಡಿ ಯಶಸ್ವಿನಿ ಯೋಜನೆಯಡಿ ಗುರುತಿಸಲ್ಪಟ್ಟ ದವಾಖಾನೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2022-23 ನೇ ಅವಧಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 01 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ(ಆದಾಯವು…






