ಮಡಿಕೇರಿ ನ.16 : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ನಾಪೋಕ್ಲು ಗ್ರಾಮ ಪಂಚಾಯತಿಗೆ ಸೇರಿದ ಮಹಾತ್ಮ ಗಾಂಧಿ ಸಾರ್ವಜನಿಕ ಉದ್ಯಾನವನದಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಯಿತು. ಉದ್ಯಾನವನದಲ್ಲಿ ಬೆಳೆದಿದ್ದ ಕಾಡುಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು. ಸ್ವಚ್ಛತಾ ಶ್ರಮದಾನದಲ್ಲಿ ಘಟಕದ ಪದಾಧಿಕಾರಿಗಳಾದ ಶಂಕರ್, ಮಾಯಿಲಪ್ಪ, ದಿಲೀಶ್, ಚೇತನ್, ಗೀತಾ, ಉಮಾಲಕ್ಷ್ಮಿ, ಚಂದ್ರಕಲಾ, ಸಂಯೋಜಕಿ ಬಾಳೆಯಡ ದಿವ್ಯ, ಗ್ರಾ.ಪಂ ಸದಸ್ಯರಾದ ಕುಲ್ಲೆಟಿರ ಅರುಣ್ ಬೇಬ, ಗುತ್ತಿಗೆದಾರ ವಿನಾಯಕ್ ಪಾಲ್ಗೊಂಡಿದ್ದರು.
ಲೇಖಕ: admin
ಮಡಿಕೇರಿ ನ.15 :NEWS DESK ಬಣ್ಣ, ಪರಿಮಳ ಮತ್ತು ರುಚಿಗೆ ಮಾರು ಹೋಗುತ್ತಿರುವ ಗ್ರಾಹಕರು ಹಾಗೂ ಪ್ರವಾಸಿಗರಿಗೆ ಊಟ, ಉಪಹಾರ, ಬಿರಿಯಾನಿಯ ಹಿಂದಿನ ಅಸಲಿಯತ್ತನ್ನು ಮಡಿಕೇರಿ ನಗರಸಭೆ ಇಂದು ಬಿಚ್ಚಿಟ್ಟಿದೆ. ಅಶುಚಿತ್ವದ ವಾತಾವರಣ ಕಂಡು ಬೆಚ್ಚಿ ಬಿದ್ದಿದೆ. ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಸಿ.ಸತೀಶ್ ಅವರ ನೇತೃತ್ವದಲ್ಲಿ ಸದಸ್ಯರ ತಂಡ ವಿವಿಧ ಹೋಟೇಲ್, ಬೇಕರಿ, ಬಿರಿಯಾನಿ ಸೆಂಟರ್ ಗಳಿಗೆ ದಾಳಿ ಮಾಡಿತು. ಅಶುಚಿತ್ವ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಮಿತಿ ಹಲವರಿಗೆ ದಂಡ ವಿಧಿಸಿತು.NEWS DESK ಸರ್ಕಾರಿ ಬಸ್ ನಿಲ್ದಾಣ, ಚೌಕಿ (ಇಂದಿರಾಗಾಂಧಿ ವೃತ್ತ) ಮತ್ತು ಹಳೆಯ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯ ಹೋಟೇಲ್, ಬೇಕರಿ, ಬಿರಿಯಾನಿ ಸೆಂಟರ್ ಗಳಿಗೆ ದಾಳಿ ಮಾಡಿದ ಸದಸ್ಯರು ಶುಚಿತ್ವ ಕಾಪಾಡದಿದ್ದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದರು. ಕೆಲವು ವ್ಯಾಪಾರಿಗಳು ಶುಚಿತ್ವಕ್ಕೆ ಆದ್ಯತೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರುಗಳಾದ ಶ್ವೇತ ಪ್ರಶಾಂತ್, ಚಂದ್ರಶೇಖರ್, ನಗರಸಭೆಯ ಆರೋಗ್ಯ ಅಧಿಕಾರಿ ಸುರೇಶ್, ಇಂಜಿನಿಯರ್ ಸೌಮ್ಯ ಮತ್ತಿತರರು ದಾಳಿ ನಡೆಸಿದರು.NEWS…
ಸುಂಟಿಕೊಪ್ಪ ನ.15 : ಬ್ಯಾಂಕಾಕ್ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಸೆಸ್ಟೋ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಅವರು ಚಾಪಿಯನ್ಸ್ ತಂಡವಾಗಿ ಹೊರಹೊಮ್ಮುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ. ಶ್ರೀಲಂಕಾದ ರತ್ನಪುರದಲ್ಲಿ ನ. 9ರಿಂದ13ರವರೆಗೆ ನಡೆದ ಅಂತರಾಷ್ಟ್ರೀಯ ಸೆಸ್ಟೋ ಬಾಲ್ ಚಾಂಪಿಯನ್ ಶಿಪ್‌ನ ಭಾರತ ಪುರುಷರ ತಂಡದ ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ದ ಸೆಸ್ಟೋ ಬಾಲ್ ನಲ್ಲಿನ ತಮ್ಮ ಚಾಕಾಚಕ್ಯತೆಯನ್ನು ಪ್ರದರ್ಶಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿ ಕ್ರೀಡಾ ಜಿಲ್ಲೆ ಎನಿಸಿರುವ ಕೊಡಗಿಗೆ ಕೀರ್ತಿ ತಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಶಾಹಿಲ್ ಉಸ್ಮಾನ್ ಅವರು ಭಾರತ ತಂಡದ ಕ್ಯಾಪ್ಟನ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಕೆ.ಎ. ಉಸ್ಮಾನ್ ರವರ ಪುತ್ರನಾಗಿದ್ದಾರೆ. ಇರ್ಷಾದ್ ಮುಸ್ತಾಫ ಅವರು ಅಂತರ್ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ಗೆ ಪಾತ್ರರಾಗಿದ್ದು ಇವರು ಸುಂಟಿಕೊಪ್ಪದ ದಿವಂಗತ…
ಸೋಮವಾರಪೇಟೆ, ನ.15 ಸೋಮವಾರಪೇಟೆಯ ಶ್ರೀ ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋವಿನ ಪೂಜೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್, ದೇವಾಲಯ ಜೀಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ಹಾಗೂ ಕಾರ್ಯದರ್ಶಿ ನಂದಕುಮಾರ್ ಸೇರಿದಂತೆ ಹಲವರು ಇದ್ದರು.
ಸೋಮವಾರಪೇಟೆ ನ.15 : ಸೋಮವಾರಪೇಟೆಯ ಬಸವೇಶ್ವರ ದೇವಾಲಯದಲ್ಲಿ ದೀಪಾವಳಿಯ ಪ್ರಯುಕ್ತ ಮಂಗಳವಾರ ಗೋಪೂಜೆ ಮಾಡಲಾಯಿತು. ವೀರಶೈವ ಸಮಾಜದ ಯಜಮಾನರಾದ ಬಿ.ಪಿ.ಶಿವಕುಮಾರ್, ಶೆಟ್ರು ಬಿ.ಆರ್.ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ.ನಾಗರಾಜ್ ಇದ್ದರು.
ಸೋಮವಾರಪೇಟೆ ನ.15 : ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಮಡಿಕೇರಿ ರಾಜ್ಯ ಹೆದ್ದಾರಿ ನಗರೂರು ಜಂಕ್ಷನ್ ನಲ್ಲಿ ಬುಧವಾರ ಸಂಭವಿಸಿದೆ. ತಾಲ್ಲೂಕಿನ ಇನಕನಹಳ್ಳಿ ಗ್ರಾಮದ ವಿಜಯ್, ದ್ಯಾನ್, ಕಾರೇಕೊಪ್ಪ ಗ್ರಾಮದ ಭಾಸ್ಕರ್, ನಿದೀಶ್, ವಿನೋದ್ ಕುಮಾರ್ ಗಾಯಗೊಂಡಿದ್ದಾರೆ. ಭಾಸ್ಕರ್, ವಿಜಯ್ ಎಂಬವರ ತೊಡೆ ಭಾಗ ಮುರಿದಿದ್ದು, ತಲೆಗೆ ತೀವ್ರ ತರದ ಗಾಯವಾಗಿದೆ. ವಿನೋದ್ ಕುಮಾರ್ ತಲೆಭಾಗಕ್ಕೆ ತೀವ್ರತರದ ಗಾಯವಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿಲಾಗಿದೆ. ಕಾರೇಕೊಪ್ಪದ ಮೂವರು ಬೈಕ್ ನಲ್ಲಿ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಸಂದರ್ಭ ಮಡಿಕೇರಿಗೆ ತೆರಳುತ್ತಿದ್ದ ವಿಜಯ್ ಅವರ ಬೈಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಠಾಣಾಧಿಕಾರಿ ರಾಮಚಂದ್ರನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೋಮವಾರಪೇಟೆ ನ.15 : ಕ್ರೀಡೆ ತವರೂರು ಕೊಡಗು ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ದೊರಕಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಆಶಿಸಿದರು. ತಾಲೂಕಿನ ಮಾದಾಪುರ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳವುದು ಮುಖ್ಯ. ಕ್ರೀಡಾಪಟುಗಳು ಸಮಯ ಪರಿಪಾಲನೆ, ನಿರ್ದಿಷ್ಠ ಗುರಿ ಮತ್ತು ಏಕಾಗ್ರತೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ ಎಂದರು. ವಿದ್ಯಾಸoಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕರ್ನಲ್ ಬಿ.ಜಿ.ವಿ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವಕ್ಕಿ, ಪದವಿಪೂರ್ವ ಕಾಲೇಜು ಉಪ ನಿರ್ದೆಶಕ ಪುಟ್ಟರಾಜು, ಆಡಳಿತ ಮಂಡಳಿ ಸದಸ್ಯರಾದ ಬೋಜಮ್ಮ, ನಾಣಿಯಪ್ಪ ಮತ್ತಿತರರು ಇದ್ದರು.
ಮಡಿಕೇರಿ ನ.15 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ನಿ. ಇವರ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ’ ದಿನಾಚರಣೆಯು ನ.16 ರಂದು ಬೆಳಗ್ಗೆ 11 ಗಂಟೆಗೆ ಕೊಹಿನೂರು ರಸ್ತೆಯ ಬಾಲಭವನ (ಚೇತನ ಚಿಲುಮೆ) ದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರಾದ ಎ.ಕೆ.ಮನುಮುತ್ತಪ್ಪ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಸಿ.ಕೆ.ಬಾಲಕೃಷ್ಣ, ವಿಧಾನಸಭೆಯ ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಕೊಡಂದೇರ ಪಿ.ಬಾಂಡ್ ಗಣಪತಿ, ಕರ್ನಾಟಕ ರಾಜ್ಯ ಸಹಕಾರ ಹಾಪ್‍ಕಾಮ್ಸ್ ಹಾಗೂ ಕೊಡಗು ಜಿಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಸಹಕಾರ…
ಮಡಿಕೇರಿ ನ.15 : ಪ್ರಸಕ್ತ(2023-24) ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗ ಹಾಗೂ ಗುಂಪು ಉದ್ಯಮಶೀಲತೆ ಮತ್ತು ಎಸ್‍ಎಚ್‍ಜಿ ಗುಂಪು ರಚನೆಗೆ ಮಡಿಕೇರಿ ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉದ್ದೇಶಿಸಿರುವ ಚಟುವಟಿಕೆಯ ಬಗ್ಗೆ ಅನುಭವ ಹೊಂದಿದ್ದರೆ/ತರಬೇತಿ ಪಡೆದಿದ್ದರೆ ಪ್ರಮಾಣ ಪತ್ರ, ಯೋಜನಾ ವರದಿ, ಬಿಪಿಎಲ್ ರೇಷನ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣ ಪತ್ರ, ವೈಯಕ್ತಿಕ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಇತ್ತೀಚಿನ ಭಾವಚಿತ್ರ, ಅಂಗವಿಕಲರಾಗಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರ, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ರೂ.20 ಛಾಪಾ ಕಾಗದದ ಮೇಲೆ ನಲ್ಮ್ ಯೋಜನೆಯ ಪೋಷಣ ಪ್ರಮಾಣ ಪತ್ರ, ನೋಟರಿಯಿಂದ ದೃಢೀಕರಿಸಿದ ಪ್ರತಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನ.27 ಕೊನೆ ದಿನವಾಗಿದೆ. ನಂತರ ಬಂದಂತಹ ಅರ್ಜಿಯನ್ನು ಪರಿಗಣಿಸುವುದಿಲ್ಲ. ಮುಂದೆ ಹಾಜರು ಪಡಿಸಬಹುದಾದಂತಹ ಅಗತ್ಯ ದಾಖಲಾತಿಗಳನ್ನು ಒದಗಿಸುವ ಷರತ್ತಿಗೆ ಕಡ್ಡಾಯವಾಗಿ ಒಳಪಡಿಸಿದೆ ಎಂದು ನಗರಸಭೆ…
ಮಡಿಕೇರಿ ನ.15 : ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಸಹಾಯಧನ ನೀಡಿ ತನ್ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸಾಂಸ್ಕೃತಿಕ ವಾತಾವರಣ ಉಂಟುಮಾಡುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 2023-24ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡಲು ಸೇವಾಸಿಂಧು sevasindhu.karnataka.gov.in ಮುಖಾಂತರ ಡಿ.13 ರವರೆಗೆ ಕಾಲಾವಕಾಶ ನೀಡಿ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್‍ಸೈಟ್ www.kannadasiri.karnataka.gov.in ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 080-22279954/ 9986837037/ 8792662814/ 8792662816/ 08022213530 ಹಾಗೂ ಆಯಾಯ ಜಿಲ್ಲೆಯ ವ್ಯವಸ್ಥಾಪಕರು, ಸೇವಾ ಸಿಂಧು ಇವರನ್ನು ಸಂಪರ್ಕಿಸಬಹುದು. ನಿಗದಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅರ್ಜಿಯನ್ನು ನೇರವಾಗಿ ಇಲಾಖೆಯಲ್ಲಿ ಸ್ವೀಕರಿಸುರುವುದಿಲ್ಲ) ಎಂದು ಕನ್ನಡ ಮತ್ತು…






