ಲೇಖಕ: admin

ಮಡಿಕೇರಿ ಸೆ.9 : ವನ್ಯಜೀವಿಗಳಿಂದ ಜೀವ ಕಳೆದುಕೊಂಡವರಿಗೆ ಕೊಡಗು ರೈತ ಸಂಘ, ಕಾರ್ಮಿಕ ಸಂಘಟನೆ ಮತ್ತು ಆದಿವಾಸಿಗಳು ಒಗ್ಗೂಡಿ ಸೆ.11 ರಂದು ಗೌರವ ಸಲ್ಲಿಸುವ ಮೂಲಕ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಪ್ರಕೃತಿಯನ್ನು ಪೂಜಿಸುತ್ತಾ, ಕಾಡ್ಗಿಚ್ಚನ್ನು ನಿಯಂತ್ರಿಸುತ್ತಾ ಅರಣ್ಯ ಹಾಗೂ ಪರಿಸರವನ್ನು ರಕ್ಷಿಸುತ್ತಾ ಬಂದು ಕಾಡುಪ್ರಾಣಿಗಳ ದಾಳಿಯಿಂದ ಮೃತರಾದ ಆದಿವಾಸಿಗಳು, ಬುಡಕಟ್ಟು ಜನಾಂಗದವರು, ರೈತರು, ಕಾರ್ಮಿಕರು, ಗ್ರಾಮವಾಸಿಗಳನ್ನು ಕೂಡ ಹುತಾತ್ಮರೆಂದು ಪರಿಗಣಿಸಬೇಕು. ಸರ್ಕಾರ ಅರಣ್ಯ ಸಿಬ್ಬಂದಿಗಳನ್ನು ಮಾತ್ರ ಹುತಾತ್ಮರು ಎಂದು ಪರಿಗಣಿಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು. ಸೆ.11 ರಂದು ನಡೆಯುವ ಅರಣ್ಯ ಹುತಾತ್ಮರ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಅಂದು ಅರಣ್ಯ ಭವನದಲ್ಲಿ ಕೊಡಗು ರೈತ ಸಂಘ, ಕಾರ್ಮಿಕ ಸಂಘಟನೆ ಹಾಗೂ ಆದಿವಾಸಿಗಳು ಒಗ್ಗೂಡಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರೆಲ್ಲರೂ ಹುತಾತ್ಮರೆಂದು ಪರಿಗಣಿಸಿ ಪುಷ್ಪ ನಮನ ಸಲ್ಲಿಸಿಸಲಾಗುವುದು ಎಂದರು.…

Read More

ವಿರಾಜಪೇಟೆ ಸೆ.9 : ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿರಾಜಪೇಟೆಯ ಗೋಜೂ ರ‍್ಯೂ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊಯಂಬತ್ತೂರಿನ ಸೂಲೂರಿನಲ್ಲಿ ಆರ್.ವಿ.ಎಸ್ ಗ್ರೂಫ್ ಸಂಸ್ಥೆಗಳು ಮತ್ತು ಐ.ಎಂ.ಜಿ.ಕೆ.ಎ ಇಂಡಿಯ ವತಿಯಿಂದ ಆಯೋಜಿಸಲಾದ 16ನೇ ಈ.ಎಂ.ಜಿ.ಕೆ.ಎ ಏಷ್ಯನ್ ಒಪನ್ ಚಾಂಪಿಯನ್ಸ್ ಕರಾಟೆ ಡೂ ಚಾಂಪಿಯನ್-2023 ಸ್ಪರ್ಧೆಯ ಕತ್ತಾ, ಕುಮಿತೆ, ಟೀಂ ಕತ್ತಾ ವಿಭಾಗದಲ್ಲಿ ವಿರಾಜಪೇಟೆ ನಗರದ ಗೋಜೂ ರ‍್ಯೂ ಕರಾಟೆ ತರಬೇತಿ ಶಾಲೆಯ ಒಟ್ಟು 18 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ 17 ಚಿನ್ನದ ಪದಕ, 11 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಸೇರಿದಂತೆ ಪ್ರಶಸ್ತಿಪತ್ರ ಪಡೆದುಕೊಂಡು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಸನ್‍ಸಾಯಿ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪರ್ಧೆಯಲ್ಲಿ ಏಷೀಯ ಉಪ ಖಂಡಗಳಾದ ಭಾರತ, ಶ್ರೀಲಂಕ, ಖಾಜಕಿಸ್ಥಾನ್, ನೇಪಾಲ್ ದೇಶಗಳಿಂದ ಸುಮಾರು 1400 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು.…

Read More

ಮಡಿಕೇರಿ ಸೆ.9 : ಸೈನಿಕರ ರಕ್ಷಣಾ ವಿಭಾಗ ಇಸಿಎಚ್‍ಎಸ್ ಮತ್ತು ಸಿಎಸ್‍ಡಿ ಕ್ಯಾಂಟಿನ್‍ಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸಿಎಚ್‍ಎಸ್ ಮತ್ತು ಸಿಎಸ್‍ಡಿಗಳಲ್ಲಿ ಮಾಜಿ ಸೈನಿಕರಿಗೆ ಶೇ.70 ರಷ್ಟು ಮೀಸಲಾತಿಯಿದೆ. ಆದರೆ, ಮಾಜಿ ಸೈನಿಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇತರರಿಗೆ ಹುದ್ದೆಯನ್ನು ನೀಡಲಾಗುತ್ತಿದ್ದು, ನಾಮಕಾವಸ್ಥೆಗೆ ಸಂದರ್ಶನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಇತರರಿಗೆ ಹುದ್ದೆ ನೀಡುವ ಮೂಲಕ ಮಾಜಿ ಸೈನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಮುಂದಿನ ಒಂದು ತಿಂಗಳೊಳಗೆ ಸರಿಪಡಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಉಪಾಧ್ಯಕ್ಷ ಎಸ್.ಸುಧೀರ್ ಮಾತನಾಡಿ, ನಾವು ಯಾರ ವಿರುದ್ಧವು ಇಲ್ಲ, ಸರ್ಕಾರದ ವಿರುದ್ಧವು ಇಲ್ಲ. ನಮಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯ ಕೇಳುತ್ತಿದ್ದೇವೆ. ಕ್ಯಾಂಟಿನ್‍ನಲ್ಲಿ ಗುಮಾಸ್ತ ಹುದ್ದೆ ಮತ್ತು ಇಸಿಎಚ್‍ಎಸ್‍ನಲ್ಲಿ ಪರಿಚಾರಕ ಹುದ್ದೆಯಲ್ಲಿ ನಮಗೆ ಇರುವ ಅವಕಾಶವನ್ನು ನಮಗೆ…

Read More

ಮಡಿಕೇರಿ ಸೆ.9 :  ಮಡಿಕೇರಿ ದಸರಾ ಸಂಬಂಧ ಸೆ.11 ರಂದು  ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಸಂಪ್ರದಾಯದಂತೆ ನಗರದ ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ, ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ  ಸಭೆ ನಡೆಯಲಿದ್ದು,  ದಸರಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಜನಪ್ರತಿನಿಧಿಗಳು, ದಶಮಂಟಪ ಮತ್ತು ಕರಗ ಸಮಿತಿಯವರು ಸಾರ್ವಜನಿಕಕರು, ಪತ್ರಕರ್ತರು ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಯಲ್ಲಪ್ಪ  ಕೋರಿದ್ದಾರೆ.

Read More

ಮಡಿಕೇರಿ ಸೆ.9 : ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಸ್.ಸರೋಜ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಐ.ಎ.ಅಕ್ಕಮ್ಮ, ಕಾರ್ಯದರ್ಶಿಯಾಗಿ ಕೆ.ಸಿ.ಇಂದಿರಾ, ಸಹ ಕಾರ್ಯದರ್ಶಿ ಕೆ.ಆರ್.ಸುಜಾತ, ಖಜಾಂಚಿ ಹೆಚ್.ಕೆ.ಉಮಾವತಿ, ವೃತ್ತದ ನಾಯಕಿಯರಾಗಿ ಬಿ.ಬಿ.ಜಯಂತಿ, ಹೆಚ್.ಎಸ್.ಸವಿತ, ಕೆ.ಎಸ್.ಮುತ್ತಮ್ಮ, ಕೆ.ಬಿ.ಧರಣಿ ಹಾಗೂ ಕೆ.ಆರ್.ಅನಿಲ ನೇಮಕಗೊಂಡಿದ್ದಾರೆ. ಈ ಹಿಂದೆ ಇದ್ದ ಸಂಘಟನೆಯಿಂದ ಹೊರ ಬಂದ ಸದಸ್ಯರು ನೂತನ ಸಂಘವನ್ನು ರಚಿಸಿಕೊಂಡಿರುವುದಾಗಿ ಅಧ್ಯಕ್ಷೆ ಡಿ.ಎಸ್.ಸರೋಜ ತಿಳಿಸಿದ್ದಾರೆ.

Read More

ಹುಬ್ಬಳ್ಳಿ ಸೆ.9 : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಯ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು. ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ : ಜೆಡಿಎಸ್ , ಬಿಜೆಪಿಯ ಬಿ ಟೀಂ ಎಂಬುದು ಸತ್ಯವಾಗುತ್ತಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ನಾನು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿದಾಗ ಅವರು ನನ್ನ ಮೇಲೆ ಸಿಟ್ಟಾಗಿದ್ದರು. ಜನತಾ ದಳ ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿರುವ ಪಕ್ಷ ಕೋಮುವಾದಿಗಳ ಜೊತೆ ಒಂದಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಯಾವ ಕಾರಣಕ್ಕೂ ಬೇರೆ…

Read More

ಸುಂಟಿಕೊಪ್ಪ ಸೆ.9 : ಕ್ಯಾಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮ ಜನ್ಮದಿನೋತ್ಸವದ ಅಂಗವಾಗಿ ದಿವ್ಯ ಅಡಂಬರ ಬಲಿಪೂಜೆಯನ್ನು ಧರ್ಮಗುರುಗಳು ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಯನ್ನು ಮೈಸೂರು ವಲಯ ಶೇಷ್ಠಗುರುಗಳಾದ ರೇ.ಮೆ.ಅಲ್ಪೆರ್ಡ್ ಜಾನ್ ಮೆಂಡೋನ್ಸಾ ಹಾಗೂ ಹಿರಿಯ ಗುರುಗಳಾದ ಡೆನ್ನಿಸ್ ಡಿಸೋಜ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಅರುಳ್ ಸೆಲ್ವಕುಮಾರ್  ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ನಂತರ ಮಾತೆ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ಪುಷ್ಪನಮನ ಸಲ್ಲಿಸಲಾಯಿತು. ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ವಿಶ್ವದದ್ಯಾಂತ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ನಡೆಯುವ 9 ದಿನಗಳ ದಿವ್ಯ ಬಲಿಪೂಜೆ ಹಾಗೂ ನೊವೇನಾ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯು ಆ.30 ರಿಂದ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು…

Read More

ರಬಾತ್‌: ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮರ್ರಾಕೆಚ್‌ನ ನೈಋತ್ಯಕ್ಕೆ 71 ಕಿ.ಮೀಟರ್‌ ದೂರದಲ್ಲಿ ಭೂಮಿಯಿಂದ 18 ಕಿ,ಮೀಟರ್‌ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ತಿಳಿಸಿದೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ.

Read More

ಮಡಿಕೇರಿ ಸೆ.9 :  ಮಕ್ಕಳ ಪೋಷಣೆಯಲ್ಲಿ ತಾಯಂದಿರ ಜವಾಬ್ದಾರಿ ಹೆಚ್ಚಾಗಿದ್ದು, ಭವ್ಯ ಭಾರತದ ಭವಿಷ್ಯ ಹಾಗೂ ಉತ್ತಮ ಸಮಾಜದ ನಿರ್ಮಾಣ ಜವಾಬ್ದಾರಿ ಪೋಷಕರ ಕೈಯಲ್ಲಿದೆ. ಮಕ್ಕಳಿಗೆ ಆಸ್ತಿ  ಮಾಡುವ ಬದಲು ಮಕ್ಕಳನ್ನೇ ಈ ದೇಶದ ಆಸ್ತಿಯನ್ನಾಗಿ ಮಾಡುವಂತಾಗಬೇಕು ಎಂದು ಕೊಡಗು ಪತ್ರಕರ್ತ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ  ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ ನೀಡಿದರು. ಮಡಿಕೇರಿಯ ಹೊಸ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ ಮಾಸಾಚರಣೆಯ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ನಡೆ ನುಡಿ ಸಂಸ್ಕಾರವನ್ನು ಕಲಿಸಬೇಕಿದೆ. ಇದರಲ್ಲಿ ಪೋಷಕರ ಜವಾಬ್ದಾರಿ ಅಧಿಕ, ಅದರಲ್ಲೂ ತಾಯಂದಿರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇಡಬೇಕೆಂದು ಕರೆ ನೀಡಿದರು. ಸಣ್ಣ ವಯಸ್ಸಿನಿಂದಲೇ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು, ಪೋಷಕರು  ತಾವು ಕಲಿತಿರುವ ದುಶ್ಚಟಗಳನ್ನು ಮಕ್ಕಳ ಮುಂದೆ ಪ್ರದರ್ಶನ ಮಾಡಬೇಡಿ ಇದನ್ನು ಅವರು ಹಿಂಬಾಲಿಸುತ್ತಾರೆ ಎಂದರು. ಅಂಗನವಾಡಿ…

Read More

ಕಡಂಗ ಸೆ.9 :  ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಎಸ್‌ಎಸ್‌ಎಫ್ 50ನೇ ವರ್ಷಾಚರಣೆ “ಗೋಲ್ಡನ್ ಫಿಫ್ಟಿ” ಐತಿಹಾಸಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಎಸ್‌ಎಸ್‌ಎಫ್   ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಹಾಗೂ ಗೋಲ್ಡನ್ ಫಿಫ್ಟಿ ಸಂದೇಶ ವಾಹನ ಜಾಥಾ ನಡೆಯಿತು. ಜಿಲ್ಲಾಧ್ಯಕ್ಷ  ಝುಬೈರ್ ಸಅದಿ ಉಸ್ತಾದರ ಪ್ರಾರ್ಥನೆಯೊಂದಿಗೆ ಪೊನ್ನಂಪೇಟೆ ಪಟ್ಟಣದಿಂದ‌ ಪ್ರಾರಂಭಗೊಂಡ ವಾಹನ ಜಾಥಾ ಗೋಣಿಕೊಪ್ಪ, ವಿರಾಜಪೇಟೆ, ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಯಹುದಿಕೇರಿ, ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಮಡಿಕೇರಿ, ಮೂರ್ನಾಡು, ಮಾರ್ಗವಾಗಿ ಬಂದು ನಾಪೋಕ್ಲುವಿನಲ್ಲಿ ವಾಹನ ಜಾಥಾ ಸಮಾಪ್ತಿಗೊಂಡಿತು. ಮಾದಕ ವ್ಯಸನದ ವಿರುದ್ಧ ಹಾಗೂ ಗೋಲ್ಡನ್ ಫಿಫ್ಟಿ ಸಮ್ಮೇಳನದ ಕುರಿತು ಭಾಷಣ ನಡೆಸಿದರು. ಭಾಷಣಗಾರರಾಗಿ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ವಿರಾಜಪೇಟೆ ಡಿವಿಷನ್ ಅದ್ಯಕ್ಷ ಕಮರುದ್ದೀನ್ ಅನ್ವಾರಿ ಅಹ್ಸನಿ, ಮಡಿಕೇರಿ ಸೆಕ್ಟರ್ ಅಧ್ಯಕ್ಷ  ಅಬ್ದುಲ್ಲಾ ಹಿಮಮಿ ಸಖಾಫಿ  ಪಾಲ್ಗೊಂಡು,  ಗೋಲ್ಡನ್ ಫಿಫ್ಟಿ…

Read More