ವಿರಾಜಪೇಟೆ ಏ.9 NEWS DESK : ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಅನ್ನಮ್ಮ ಪಿ.ಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಧನೆಯನ್ನು ಮಾಡಿದ್ದು, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 49 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣ ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 48 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 78 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣ ರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜೆಸಿಕಾ ಎನ್. ಎಸ್. ಶೇ.97.67 ಅಂಕಗಳೊಂದಿಗೆ ಪ್ರಥಮ ಸ್ಥಾನ, ಪಿ.ಕೆ.ರಕ್ಷಿತ್ 95.83% ದ್ವಿತೀಯ ಸ್ಥಾನ, ಹಾಗೂ ತೇಜಸ್ವಿನಿ ಟಿ.ಎಂ ಶೇ.95.33 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನಿಶಿಕ ದೇಚಮ್ಮ ಎಂ.ಎಲ್. ಶೇ.98 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ, ಕೆ. ಜೆ. ಮೇಘ ಶೇ.97.33 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಹರ್ಷಿತಾ ಎಸ್ …
ಲೇಖಕ: admin
ಮಡಿಕೇರಿ ಏ.9 NEWS DESK : ಮಡಿಕೇರಿ ನಗರದ ಕನ್ನಂಡಬಾಣೆ ನಿವಾಸಿಗಳು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿ ತಡೆಗೋಡೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು. ಕನ್ನಂಡಬಾಣೆಗೆ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಹಿನ್ನಲೆಯಲ್ಲಿ ಧನ್ಯವಾದಗಳನ್ನು ಸಲ್ಲಿಸಿದ ನಿವಾಸಿಗಳು ರಸ್ತೆಯ ಅಂಚಿನಲ್ಲಿ(ಕನ್ನಂಡಬಾಣೆ ಕೃಷ್ಣ ಲೈನ್ ದಾರಿ) ಅಪಾಯಕಾರಿ ತಿರವು ಇದ್ದು ವಾಹನಗಳು ಗುಂಡಿಗೆ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ತಡಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಮನವಿಯನ್ನು ಆಲಿಸಿದ ಶಾಸಕರು ಈ ವರ್ಷದ ತಮ್ಮ ಶಾಸಕರ ನಿಧಿಯಿಂದ ತಡೆಗೋಡೆ ನಿರ್ಮಿಸಿಕೊಡುವ ಭರವಸೆ ನೀಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರೊಂದಿಗೆ ತೆರಳಿದ ನಿಯೋಗದಲ್ಲಿ ದೇವಯ್ಯ, ಪಿ.ಎಂ.ಜಗದೀಶ್,ಬಾಳಾಡಿ ಪ್ರತಾಪ್ ಕುಮಾರ್,ಪ್ರಸನ್ನ, ಭರತ್, ಯತೀನ್ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ಏ.9 NEWS DESK : ನಗರದ ನಗರಸಭೆ ಆವರಣದಲ್ಲಿರುವ ಹಳೆಯ ಕಾವೇರಿ ಕಲಾಕ್ಷೇತ್ರ(ಟೌನ್ ಹಾಲ್) ಕಟ್ಟಡವನ್ನು ತೆರವುಗೊಳಿಸಿ ಸುಸಜ್ಜಿತವಾದ ಎರಡು ಅಂತಸ್ತಿನ ವಾಹನ ನಿಲುಗಡೆ ಹಾಗೂ 450 ಆಸನ ಒಳಗೊಂಡ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್, ಎಂ.ಸಿ.ನಾಣಯ್ಯ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರೀರ ಮೋಹನ್‍ದಾಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಾಳಚಂಡ ಅಪ್ಪಣ್ಣ, ಎಸ್.ಸಿ.ಸತೀಶ್, ಅರುಣ್ ಶೆಟ್ಟಿ, ಶಾರದಾ ನಾಗರಾಜ್, ನಗರಸಭೆ…
ಮಡಿಕೇರಿ ಏ.9 NEWS DESK : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನು ಅಭಿನಂದಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವಿಜಯ್, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿವಾಕರ, ಭೂ ದಾಖಲೆಗಳ ಉಪ ನಿರ್ದೇಶಕರು, ತಹಶಿಲ್ದಾರರು ಇತರರು ಈ ಸಂದರ್ಭದಲ್ಲಿ ಇದ್ದರು.
ಮಡಿಕೇರಿ ಏ.9 NEWS DESK : ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಏ.14ರಂದು ಗೋಣಿಕೊಪ್ಪನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ವಸಂತ ಋತು ಫೆ.15 ರಿಂದ ಆರಂಭಗೊಂಡು ಏ.14ಕ್ಕೆ ಕೊನೆಗೊಳ್ಳುವ “ಎಡ್ಮ್ಯಾರ್” ನ್ನು ಸಿಎನ್‍ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 32ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಏಪ್ರಿಲ್ 14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಆರ್‍ಎಂಸಿ ಯಾರ್ಡ್ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡವರು ಪ್ರತ್ಯೇಕ ಮೂಲವಂಶಸ್ಥ ಜನಾಂಗವಾಗಿದ್ದು,…
ಮಡಿಕೇರಿ ಏ.9 NEWS DESK : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ 3 ಸ್ಥಾನ ಪಡೆದು ಉತ್ತಮ ಸಾಧನೆ ತೋರಿದೆ. ಕಳೆದ ಬಾರಿ ಶೇ.83.84 ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದರೆ, ಈ ಬಾರಿ ಶೇ.92.34 ಫಲಿತಾಂಶದೊಂದಿಗೆ 3ನೇ ಸ್ಥಾನಕ್ಕೇರಿದೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ 4745 ವಿದ್ಯಾರ್ಥಿಗಳ ಪೈಕಿ 1898 ಗಂಡು ಹಾಗೂ 2847 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಈ ಪೈಕಿ ಒಟ್ಟು 4380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಒಟ್ಟು 13 ಪಿ.ಯು ಕಾಲೇಜುಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. *ಕಲಾ ವಿಭಾಗ* ಕಲಾ ವಿಭಾಗದಲ್ಲಿ ಶನಿವಾರಸಂತೆ ಭಾರತಿ ಪದವಿ ಪೂರ್ವ ಕಾಲೇಜಿನ ಫಾತಿಮಾ ಎಸ್.ಎ.(592) ಪ್ರಥಮ, ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ನಂದಿತಾ(584) ದ್ವಿತೀಯ ಸ್ಥಾನ, ಮೂರ್ನಾಡು ಪಿ.ಯು ಕಾಲೇಜು ಮೂರ್ನಾಡುವಿನ ಕೆ.ಎಂ.ಜುಹಾರ(570) ತೃತೀಯ ಸ್ಥಾನ…
ಮಡಿಕೇರಿ ಏ.9 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.9ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಮುಕ್ಕಾಟಿರ (ಕಡಗದಾಳು) ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ 9 ವಿಕೆಟ್‍ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ತಂಡ 6 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 29 ರನ್ ಗಳನ್ನು ಗಳಿಸಿತು. ಕನ್ನಂಡ ಕೇವಲ 2.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 30 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು. ಮಂಡೀರ (ನೆಲಜಿ) ಮತ್ತು ಕೆಚ್ಚೆಟ್ಟಿರ (ಬೇಗೂರು) ನಡುವಿನ ಪಂದ್ಯದಲ್ಲಿ ಮಂಡೀರ 3 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡೀರ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೆಚ್ಚೆಟ್ಟಿರ…
ಮಡಿಕೇರಿ ಏ.9 NEWS DESK : ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಹಾಲೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಹಾಲೇರಿ ಗ್ರಾಮದ ನಿವಾಸಿ ರವಿ ರೈ(67) ಎಂಬುವವರೇ ಮೃತ ದುರ್ದೈವಿ. ಮನೆ ಬಳಿಯ ತೋಟದಲ್ಲಿನ ಮರವನ್ನೇರಿ ಕೊಂಬೆಗಳನ್ನು ಕಡಿಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಏ.9 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.10ರಂದು ಆಯೋಜಿಸಿರುವ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಆಚೆಯಡ ಮತ್ತು ಕರಿನೆರವಂಡ, 10ಕ್ಕೆ ಬೊಳ್ಳೆಪಂಡ ಮತ್ತು ಕಾಟಿಮಾಡ, 11ಕ್ಕೆ ಐಚಂಡ (ದೇವಣಗೇರಿ) ಮತ್ತು ಅಣ್ಣಳಮಾಡ (ಬಿರುನಾಣಿ), ಮಧ್ಯಾಹ್ನ 12ಕ್ಕೆ ಬೊಪ್ಪಡ್ತಂಡ ಮತ್ತು ಕೋಳೆರ ಹಾಗೂ 1 ಗಂಟೆಗೆ ಚೇರಂಡ ಮತ್ತು ಕಾಯಪಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಬೋಂದ ಮುಕ್ಕಾಟಿರ ಮತ್ತು ಕಂಬೀರಂಡ, 10ಕ್ಕೆ ಬೊಟ್ಟೋಳಂಡ ಮತ್ತು ಕುಂಜಿಯಂಡ, 11ಕ್ಕೆ ಗೌಡಂಡ (ಸೂರ್ಲಬಿ) ಮತ್ತು ಕೊಟ್ಟಂಗಡ, ಮಧ್ಯಾಹ್ನ 12ಕ್ಕೆ ಕೊಟ್ರಮಾಡ ಮತ್ತು ಬುಟ್ಟಿಯಂಡ ಹಾಗೂ 1 ಗಂಟೆಗೆ ಕೋಣಿಯಂಡ ಮತ್ತು ನಾಗಂಡ
ಮಡಿಕೇರಿ ಏ.8 NEWS DESK : 66/11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್2 ಶಾಂತಳ್ಳಿ ಫೀಡರ್‍ನಲ್ಲಿ ಏಪ್ರಿಲ್, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಕುಡಿಗಾಣ, ಕೊತ್ನಳ್ಳಿ, ತೋಳೂರು ಶೆಟ್ಟಳ್ಳಿ, ಕೂತಿ, ಹೊಸಬೀಡು, ನಗರಳ್ಳಿ, ಯಡೂರು, ಹೆಗ್ಗಡಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.






