ಬೆಂಗಳೂರುನ.1- ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವು ಒಂದು ಪ್ರತಿಜ್ಞೆ ಮಾಡೋಣ. ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಕರೆ ನೀಡಿದರು. ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ…
ಲೇಖಕ: admin
ಮಡಿಕೇರಿ ನ.1 : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಅಚರಿಸಲಾಯಿತು. ನಗರದ ಗಾಂಧಿ ಮೈದಾನದ ರಂಗಮಂದಿರ ಬಳಿ ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಸಂಘಟನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಬೇಬಿ ಮ್ಯಾಥ್ಯು, ಅಂಬೇಕಲ್ ನವೀನ್, ಪ್ರಕಾಶ್ ಆಚಾರ್ಯ, ಪುದಿಯನೆರವನ ರಿಷಿತ್ ಹಾಜರಿದ್ದರು.
ಮಡಿಕೇರಿ ನ.1 : ಮೇಕೇರಿ ಗ್ರಾಮಸ್ಥರಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೇಕೇರಿ ಬಿಳಿಗೇರಿ ಬಳಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಮಾಜಿ ಸೈನಿಕರಾದ ಎಂ.ಟಿ.ಚಿಣ್ಣಪ್ಪ, ಚೊಟ್ಟೆಯಂಡ ಅಪ್ಪಾಜಿ, ಕ್ಯಾಪ್ಟನ್ ತುಂತಜ್ಜೀರ ದಯಾನಂದ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು ಹನೀಫ್, ತಾ.ಪಂ ಮಾಜಿ ಸದಸ್ಯ ಮಂಜ್ಞೀರ ಸಾಬಾ ತಿಮ್ಮಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಸಮೀಪದಲ್ಲೇ ನೂತನವಾಗಿ ನಿರ್ಮಿಸಲಾದ ಧ್ವಜಸ್ಥಂಬವನ್ನು ಉದ್ಘಾಟಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಮಾತನಾಡಿದ ಮಾಜಿ ಯೋಧ ಚೊಟ್ಟೆಯಂಡ ಅಪ್ಪಾಜಿ, ಸ್ಥಳೀಯರ ಪ್ರಯತ್ನದಿಂದ ನೂತನ ಸಾರ್ವಜನಿಕ ಬಸ್ ತಂಗುದಾಣವನ್ನು ನಿರ್ಮಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬಸ್ ತಂಗುದಾಣ ಶುಚಿತ್ವ ಕಾಪಾಡುವಂತೆ ಕರೆ ನೀಡಿದರು. ಮಾಜಿ ಸೈನಿಕರಾದ ಎಂ.ಟಿ.ಚಿಣ್ಣಪ್ಪ ಹಾಗೂ ಕ್ಯಾಪ್ಟನ್ ತುಂತಜ್ಜೀರ ದಯಾನಂದ, ಮೇಕೇರಿ ಗ್ರಾ.ಪಂ ಪಿಡಿಓ ಶ್ರೀಧರ್ ಸ್ಥಳಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಳಿಗೇರಿ, ಅರ್ವತ್ತೋಕ್ಲು, ಕುಂಬಳದಾಳು, ಹೊದವಾಡ ಗ್ರಾಮಕ್ಕೆ ಮೇಕೇರಿ ಬಿಳಿಗೇರಿ ಜಂಕ್ಷನ್ ನಿಂದ ತೆರಳಬಹುದಾಗಿದ್ದು, ಈ ಭಾಗದ…
ಮಡಿಕೇರಿ ನ.1 : ಕರ್ನಾಟಕ ಸರ್ಕಾರದಿಂದ ಆಚರಿಸಲ್ಪಡುತ್ತಿರುವ “ಕರ್ನಾಟಕ ಸಂಭ್ರಮ-50″ರ ಪ್ರಯುಕ್ತ ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದಿಂದ “ನುಡಿನಮನ ಗೀತಗಾಯನ” ವಿಶೇಷ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಗೀತಗಾಯನಕ್ಕೆ ಸೂಚಿಸಿದ್ದ ಹಾಡುಗಳನ್ನು ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾವ ತುಂಬಿ ಹಾಡಿದರು. ಕಾರ್ಯಕ್ರಮವನ್ನು ಸೈಂಟ್ ಆನ್ಸ್ ವಿದ್ಯಾಸಂಸ್ಥೆಗಳ ನಿಕಟ ಪೂರ್ವ ವ್ಯವಸ್ಥಾಪಕ ಹಾಗೂ ಎಂಡಿಇಎಸ್ ನ ಆರ್ಥಿಕ ಅಧಿಕಾರಿ ರೆ.ಫಾ. ಮದಲೈ ಮುತ್ತು ಉದ್ಘಾಟಿಸಿದರು. ಸೈಂಟ್ ಆನ್ಸ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ರಾಜ್ಯೋತ್ಸವ ಶುಭಾಶಯ ಕೋರಿದರು. ಪದವಿ ವಿಭಾಗದ ಕನ್ನಡ ಭಾಷಾ ಮುಖ್ಯಸ್ಥ ಅರ್ಜುನ್ ಮೌರ್ಯ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ವಿಭಾಗದ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಹೇಮಂತ್ ಕುಮಾರ್, ಸೈಂಟ್ ಆನ್ಸ್ ಪದವಿ ಹಾಗೂ ಪ.ಪೂ. ಕಾಲೇಜಿನ ಎಲ್ಲಾ ಬೋಧಕ ವೃಂದ…
ವಿರಾಜಪೇಟೆ ನ.1 : ಜನತೆ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುವುದು ನಾಡಿನ ಏಳಿಗೆ ಮತ್ತು ಅಭಿವೃದ್ಧಿಯನ್ನು ಪಡಿಸುವುದಕ್ಕಾಗಿ, ಶಾಸಕ ಒಬ್ಬನೇ ಏನನ್ನೂ ಮಾಡಲು ಸಾದ್ಯವಿಲ್ಲ, ಎಲ್ಲರೂ ಕೈಜೋಡಿಸಿ ನಾಡಿನ ಅಭಿವೃದ್ಧಿಗೆ ಪೂರಕವಾಗಿ ಜವಬ್ದಾರಿ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕಲ್ಲುಬಾಣೆ ನಾಗರೀಕ ವೇದಿಕೆ ಹಾಗೂ ಕಲ್ಲುಬಾಯ್ಸ್ ತಂಡದ ವತಿಯಿಂದ ಕಲ್ಲುಬಾಣೆಯ ಬದ್ರಿಯ ಶಾಲಾ ಆವರಣದಲ್ಲಿ ನಡೆದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಜಾಪ್ರಭುತ್ವವೆಂದರೆ ಸಾಮೂಹಿಕ ನಾಯಕತ್ವದಲ್ಲಿ ನಡೆಯಬೇಕಾಗಿರುವುದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸದಾ ನಾನು ಬದ್ಧನಾಗಿರುತ್ತೇನೆ. ನಾನು ಗೆದ್ದರೆ ಸ್ವಚ್ಛ ಆಡಳಿತವನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಅದೇ ರೀತಿ ನಡೆಯುವವನಿದ್ದೇನೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರೆಂಟಿ ಕಾರ್ಡ್ ಬಗ್ಗೆ ಯಾವುದೇ ಗೊಂದಲ ಬೇಡ. ನಮ್ಮ ಸರ್ಕಾರ ಮಾಡಿರುವ ಅಷ್ಟು ಗ್ಯಾರೆಂಟಿ ಯೋಜನೆಗಳು ಸಂವಿಧಾನಬದ್ಧವಾಗಿದ್ದು, ರಾಜ್ಯದ ಜನತೆಯನ್ನು ತಲುಪಿದೆ ಎಂದರು. ಚುನಾವಣೆ ಪೂರ್ವದಲ್ಲಿಕಲ್ಲುಬಾಣೆಗೆ ಭೇಟಿ ನೀಡಿದ…
ವಿರಾಜಪೇಟೆ ನ.1 : ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತೀ ಮುಖ್ಯವಾಗಿದೆ ಎಂದು ವಿರಾಜಪೇಟೆ ಉಪ ಖಜಾನೆಯ ಪ್ರಥಮ ದರ್ಜೆ ಸಹಾಯಕ ಬಲರಾಮೇಗೌಡ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಆಚರಿಸಲಾದ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿರು. ಭ್ರಷ್ಟಾಚಾರದ ನಿಯಂತ್ರಣ ದೇಶದ ಯುವ ಜನರ ಕೈಯಲಿದ್ದು ಅದನ್ನು ಬುಡ ಸಮೇತ ತೊಡೆದು ಹಾಕಬೇಕು. ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತವಾಗಿ ಸಮಾಜದ ಸ್ವಾಸ್ತ್ಯ ಕೆಡುತ್ತಿದೆ ಎಂದರು. ಭ್ರಷ್ಟಾಚಾರವು ಪ್ರಜಾಪ್ರಭುತ್ವಕ್ಕೆ ಸವಾಲಾಗಿದ್ದು, ಅದನ್ನು ನಿಯಂತ್ರಿಸದಿದ್ದರೆ ಭವ್ಯ ರಾಷ್ಟ್ರದ ನಿರ್ಮಾಣ ಸಾಧ್ಯವಿಲ್ಲ. ಭ್ರಷ್ಟಾಚಾರದ ಸ್ವರೂಪ, ನಿಯಂತ್ರಣ ಕಾಯಿದೆಗಳನ್ನು ಉದಾಹರಣೆ ಸಮೇತ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಭ್ರಷ್ಟಾಚಾರ ಜಾಗೃತಿ ಸಪ್ತಾಹದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದು,್ದ ಭ್ರಷ್ಟಾಚಾರ ನಿವಾರಣೆಯಲ್ಲಿ ಯುವ ಜನರ ಪಾತ್ರ ಅಪಾರವಾಗಿದೆ. ರಾಷ್ಟ್ರಕ್ಕೆ ಹಾಗೂ ರಾಷ್ಟ್ರದ ವ್ಯವಸ್ಥೆಗೆ ಭ್ರಷ್ಟಾಚಾರ ಮಾರಕವಾಗಿದ್ದು, ಅದನ್ನು ನಿಯಂತ್ರಿಸದಿದ್ದರೆ ಆಡಳಿತ…
ಮಡಿಕೇರಿ ನ.1 : ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಕುವೆಂಪು ಉದ್ಯಾನವನದಲ್ಲಿ ವಿಷ್ಣು ಸೇನಾ ಜಿಲ್ಲಾಧ್ಯಕ್ಷ ರಫೀಕ್ (ದಾದಾ )ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ದಿನದ ಮಹತ್ವ ಕುರಿತು ತಿಳಿಸಿದರು. ಮೂಡ ಅಧ್ಯಕ್ಷ ಮುನೀರ್ ಅಹ್ಮದ್ ಅವರು ಧ್ವಜಾರೋಹಣವನ್ನು ನೆರವೇರಿಸಿ, ಶುಭಹಾರೈಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಕವಿತಾ ಪ್ರಸಾದ್ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ನವೆಂಬರ್ ಒಂದಕ್ಕೆ ಕನ್ನಡ ರಾಜ್ಯೋತ್ಸವ ಸೀಮಿತವಾಗದೆ ಪ್ರತಿನಿತ್ಯವೂ ಕನ್ನಡವನ್ನು ಉಳಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ತಾಲೂಕು ಅಧ್ಯಕ್ಷ ರವಿಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಭಾಷಾ, ಕೋಟೆ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ಪ್ರಭುರೈ, ವೀರಭದ್ರ ಮುನೇಶ್ವರ ದೇವಾಲಯದ ಗೌರವ ಅಧ್ಯಕ್ಷ ಪಿ.ಜಿ.ಮಂಜುನಾಥ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ಮುನೀರ್ ಮಾಚರ್,…
ಸೋಮವಾರಪೇಟೆ ನ.1 : ಪಟ್ಟಣದ ಸಿ.ಎಸ್.ಐ ಜಾನ್ ಚರ್ಚ್ ನಲ್ಲಿ ಫಲೋತ್ಸವ ಸಂಭ್ರಮದಿಂದ ನಡೆಯಿತು. ಪ್ರಥಮ ಬೆಳೆಯನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು. ಸದರನ್ ಡಯಾಸಿಸ್ ಉಪಾಧ್ಯಕ್ಷ ವಿಕ್ಟರ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಸ್ಥಳೀಯ ಸಭಾಪಾಲಕರಾದ ಸ್ಯಾಮುವೆಲ್, ಸಹಾಯಕ ಸಭಾಪಾಲಕರಾದ ಪ್ರಿಯದರ್ಶಿನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರರಾದ ಎಲಿಜಬೆತ್ ಸಾಲೋಮನ್ ಅವರನ್ನು ಸನ್ಮಾನಿಸಲಾಯಿತು. ನಂತರ ಪ್ರಿಯದರ್ಶಿನಿ, ಸುಜಾತ ಜೋಸೆಫ್, ನಮಿತಾ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಡಯಾಸಿಸ್ ಕೌನ್ಸಿಲ್ ಸದಸ್ಯ ಸಾಲೋಮನ್ ಡೇವಿಡ್, ಏರಿಯಾ ಕೌನ್ಸಿಲ್ ಸದಸ್ಯ ಅನಿಲ್ ಮತ್ತು ಕಾರ್ಯದರ್ಶಿ ಎಬ್ನೆಜರ್ ಚಾರ್ಲಿ ಇದ್ದರು.
ಮಡಿಕೇರಿ ನ.1 : ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಕೋಶಾಧಿಕಾರಿ ಕೆ.ತಿಮ್ಮಪ್ಪ, ಟ್ರಸ್ಟಿ ವಿ.ಪಿ.ಸುರೇಶ್, ಸಿಬ್ಬಂದಿಗಳಾದ ಯಮುನಾ, ಸವಿತಾ, ರಾಜೇಶ್, ಉದ್ಯಮಿಗಳಾದ ಅಬ್ದುಲ್ ರೆಹಮಾನ್, ಅಶ್ರಫ್, ರಾಮಣ್ಣ, ಲೀಲಾವತಿ, ಬೊಟ್ಟೋಳಂಡ.ಜಿ.ಗಣೇಶ್, ಪುಟಾಣಿಗಳಾದ ಮೌಲ್ಯ ಬಜೆಕೋಡಿ, ತರುಣ್ ಬಜೆಕೋಡಿ, ಚರಿತಾ ಮುಂತಾದವರು ಭಾಗವಹಿಸಿದ್ದರು.
ಸೋಮವಾರಪೇಟೆ ನ.1 : ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 39ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ತಾಲ್ಲೂಕು ಸೇವಾದಳದ ಅಧ್ಯಕ್ಷ ಬಿ.ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಸಿ.ವೆಂಕಟೇಶ್, ಶೀಲಾ ಡಿಸೋಜ, ಸಂಘದ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಪ್ರಮುಖರಾದ ಮಹಮ್ಮದ್ ಬೇಟು, ಸುನಿಲ್, ಎಂ.ಬಿ. ಜಮೀರ್, ಕೆ.ಪಿ. ದಿನೇಶ್, ಕೆ.ಕೆ. ಸ್ವಾಮಿ, ಸಂದ್ಯಾ ಪ್ರಕಾಶ್, ಪಳನಿ ಇದ್ದರು.






