ಮಡಿಕೇರಿ ಫೆ.4 : ಮಡಿಕೇರಿ ನಗರದ ಆಯುರ್ ಜೀವನ್ ಆಯುರ್ ವೇದ ಆಸ್ಪತ್ರೆಯ ಮಾಲೀಕ ಸಿಲ್ವಿ ಜೋಸೆಫ್ (52) ಅವರು ಇಂದು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಭಾನುವಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಲೇಖಕ: admin
ವಿರಾಜಪೇಟೆ ಫೆ.4 : ಅರಣ್ಯ ಇಲಾಖೆ ಹಾಗೂ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗ್ರಾಮದ ವ್ಯಾಪ್ತಿಯ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕೇರಳದಿಂದ ಕಸವನ್ನು ತಂದು ಸುರಿಯುತ್ತಿದ್ದ ವಾಹನವನ್ನು ತಡೆದು ಚಾಲಕರಿಗೆ ದಂಡ ವಿಧಿಸಿದ್ದಾರೆ. ಶನಿವಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಸುರಿಯುತ್ತಿದ್ದ ವಿನೋದ್ ಹಾಗೂ ಬಿಜು ಎಂಬುವವರಿಗೆ ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಪಾಷ ಎಂಬಾತನಿಗೂ ಅಧಿಕಾರಿಗಳು ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಸರಕು ಸಾಗಾಣಿಕೆಯ ವಾಹನಗಳ ಕೆಲ ಚಾಲಕರು ರಾಜ್ಯದಿಂದ ಕೇರಳಕ್ಕೆ ಸರಕನ್ನು ಸಾಗಿಸಿ ಹಿಂದಿರುಗಿ ಬರುವಾಗ ಕೇರಳ ರಾಜ್ಯದಿಂದ ಹಣದ ಆಸೆಗಾಗಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ವಿಷಕಾರಿ ತ್ಯಾಜ್ಯಗಳು ಸೇರಿದಂತೆ…
ಮಡಿಕೇರಿ ಫೆ.4 : ಮಡಿಕೇರಿ ನಗರಸಭಾ ವ್ಯಾಪ್ತಿಯ 9, 2, 17, 18 ಮತ್ತು 21 ವಾರ್ಡ್‍ಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು. ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.09 ರಲ್ಲಿ ಅಂಬೇಡ್ಕರ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತೀಕರಣ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ. ವಾರ್ಡ್ ನಂ.02 ರಲ್ಲಿ 110 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ಲೇಔಟ್ ಬಡಾವಣೆಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ, ಕಾನ್ವೆಂಟ್ ಜಂಕ್ಷನ್‍ಗಾಗಿ ಮುತ್ತಪ್ಪ ಟೆಂಪಲ್ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.17 ರಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಕೂರ್ಗ್ ಇಂಟರ್‍ನ್ಯಾಷನಲ್ ಹೋಟೆಲ್ ಮುಂಭಾಗದ ರಸ್ತೆಯಿಂದ ಪಿಡಬ್ಲ್ಯೂಡಿ ಕಚೇರಿಗಾಗಿ ಮಾದೇಟಿರ ಉಷಾ…
ಮಡಿಕೇರಿ ಫೆ.4 : ಭತ್ತದ ಚೀಲಗಳನ್ನು ಸಾಗಾಟ ಮಾಡುತ್ತಿದ್ದ ಟಿಲ್ಲರ್ ಮಗುಚಿ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದಲ್ಲಿ ನಡೆದಿದೆ. ಬೆಸಗೂರು ಗ್ರಾಮದ ನಿವಾಸಿ ಸಣ್ಣಕ್ಕಿ ಎಂಬುವವರೆ ಸಾವನ್ನಪ್ಪಿರುವ ದುರ್ದೈವಿ. ಶನಿವಾರ ಬೆಳಗ್ಗೆ ಭತ್ತದ ಚೀಲಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭ, ನಿಯಂತ್ರಣ ತಪ್ಪಿದ ಟಿಲ್ಲರ್ ಮಗುಚಿಕೊಂಡಿದೆ. ಈ ಸಂದರ್ಭ ಚಾಲಕ ಸಣ್ಣಕ್ಕಿ ವಾಹನದ ಕೆಳ ಭಾಗ ಸಿಲುಕಿಕೊಂಡು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಫೆ.4 : ವಿಶ್ವದಲ್ಲಿ ಅಪಘಾತದಿಂದ ಹೆಚ್ಚಿನ ಸಾವು-ನೋವುಗಳು ಕಂಡುಬರುತ್ತಿವೆ. ಹಾಗೆಯೇ ಎರಡನೇಯದಾಗಿ ಕ್ಯಾನ್ಸರ್ ರೋಗದಿಂದ ಹೆಚ್ಚಿನ ಜನರು ಮೃತಪಡುತ್ತಿದ್ದಾರೆ. ಆದ್ದರಿಂದ ಕ್ಯಾನ್ಸರ್ ರೋಗ ಬರದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ‘ವಿಶ್ವ ಕ್ಯಾನ್ಸರ್ ದಿನಾಚರಣೆ’ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಅತಿಯಾದರೆ ಅಮೃತವು ವಿಷ’ ಎಂಬುದನ್ನು ಮರೆಯಬಾರದು. ಆದ್ದರಿಂದ ಕ್ಯಾನ್ಸರ್‍ನಿಂದ ಸಂಭವಿಸುವ ಅಪಾಯವನ್ನು ಕಡಿಮೆ ಮಾಡಲು ಆರೋಗ್ಯಕರ ‘ಜೀವನ ಶೈಲಿ’ ಮತ್ತು ವಯಸ್ಸಿಗೆ ತಕ್ಕಂತೆ ‘ಆಹಾರ ಪದ್ಧತಿ’ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ರಕ್ತದ ಮೂಲಕ ಕ್ಯಾನ್ಸರ್ ಬೇಗ ಹರಡುತ್ತದೆ. ಆದ್ದರಿಂದ ಪ್ರತೀ ನಿತ್ಯ ವ್ಯಾಯಾಮ, ಯೋಗ ಮಾಡಬೇಕು. ದೇಹಕ್ಕೆ ಆಯಾಸ ಆಗುವ ರೀತಿ ಕೆಲಸ ಮಾಡಬೇಕು ಎಂದು ಡಾ.ಬಿ.ಸಿ.ಸತೀಶ ಅವರು ಅಭಿಪ್ರಾಯಪಟ್ಟರು. ಜಿಲ್ಲಾಸ್ಪತ್ರೆಯ…
ಮಡಿಕೇರಿ ಫೆ.4 : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಎಂ.ಎನ್.ರಾವುಫ್ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಸಂಬಂಧ ಸಭೆ ನಡೆಯಿತು. ನಗರದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ಅವರು, ಮುಂದಿನ ದಿನಗಳಲ್ಲಿ ಬೂತ್ ಸಮಿತಿಗಳನ್ನು ರಚಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಾಗುವುದು, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗುವುದು ಎಂದರು. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ಕಾರ್ಯಕರ್ತರಲ್ಲಿದ್ದು, ಮುಖಂಡರು ಕೂಡ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು. ಪಕ್ಷದ ನಗರ ಉಪಾಧ್ಯಕ್ಷ ಯಾಕುಬ್, ಪ್ರಮುಖರಾದ ಹಫೀಜ್, ರೆಹಮಾನ್, ಕೌಸರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಬೇಕಾಗುವ ಪದಾರ್ಥಗಳು : ಚಿಕನ್ – ಅರ್ಧ ಕೆಜಿ, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿಣ ಪುಡಿ- ಸ್ವಲ್ಪ, ಸೋಯಾ ಸಾಸ್ – ಕಾಲು ಚಮಚ, ವಿನೇಗರ್- 2 ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6, ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು), ಅಚ್ಚ ಖಾರದ ಪುಡಿ- 2 ಚಮಚ, ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ. ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್, ಉಪ್ಪು, ವಿನೇಗರ್, ಅರಿಶಿಣದ ಪುಡಿ, ಸೋಯಾ ಸಾಸ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪಾತ್ರೆಯನ್ನು ಒಲೆಯ ಮೇಲಿಟ್ಟು, ಚಿಕನ್ ಬೇಯಲು ಬಿಡಿ. ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಹಾಕಿ. ಕಾದ ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಅಚ್ಚ ಖಾರದ…
ಮಡಿಕೇರಿ ಫೆ.4 : ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶನಿವಾರಸಂತೆಯ ಗುಡುಗಳಲೆ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮನೆಹಳ್ಳಿ ಮಠದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ, ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸಬೇಕು. ಈ ರೀತಿಯ ಸಾಮಾಜಿಕ ಕಳಕಳಿಯ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ. ಆದ್ದರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ರಕ್ತದ ಅಭಾವವನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಮುಂದಿನ ದಿನಗಳಲ್ಲಿಯು ಈ ರೀತಿಯ ಆರೋಗ್ಯ ಶಿಬಿರ ಮತ್ತು ಜನೋಪಯೋಗಿ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ವೇದಿಕೆಯ ನಿರ್ದೇಶಕ ರಕ್ಷಿತ್ ಶನಿವಾರಸಂತೆ, ನಿವೃತ್ತ ಯೋಧ ಪಿ.ಹೆಚ್.ಮಹೇಶ್, ಭರತ್ ಮತ್ತಿತರರು ಉಪಸ್ಥಿತರಿದ್ದರು. ಗೌರವ…
ಮಡಿಕೇರಿ ಫೆ.4 : ಹಿಂದೂ ಸಂಘಟನೆಗಳ ಇಬ್ಬರು ಪ್ರಮುಖರ ವಿರುದ್ಧ ಗಡಿಪಾರು ಪ್ರಸ್ತಾಪ ಮಾಡಿರುವ ಕ್ರಮವನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖರು ಕವನ್ ಕಾವೇರಪ್ಪ ಹಾಗೂ ವಿನಯ್ ಕುಮಾರ್ ವಿರುದ್ಧದ ಗಡಿಪಾರು ಪ್ರಸ್ತಾಪವನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ರಂಜನ್ ಗೌಡ ಮಾತನಾಡಿ ದೇಶದ್ರೋಹದಂತಹ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದೇಶಭಕ್ತ ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದೆ. ಕೇಸರಿ ಮುಖವಾಡ ತೊಟ್ಟಿರುವ ಕೆಲವರು ಹಿಂದೂ ಸಂಘಟನೆಗಳ ಧ್ವನಿಯನ್ನು ದಮನ ಮಾಡಲು ನೋಡುತ್ತಿವೆ ಎಂದು ಆರೋಪಿಸಿದರು. ಭ್ರಷ್ಟಾಚಾರವನ್ನು ನಿಗ್ರಹಿಸಲಾಗದವರು ದೇಶಭಕ್ತ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖರಾದ ಬೋಜೇಗೌಡ, ಸುಭಾಷಿಮ್ಮಯ್ಯ, ಉಮೇಶ್, ಸುನಿಲ್ ಮಾದಪ್ಪ, ತಾಲೂಕು ಪದಾಧಿಕಾರಿಗಳಾದ…
ಚೆನ್ನೈ : ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನರಾಗಿದ್ದಾರೆ. ತಮಿಳುನಾಡಿನ ಚೆನ್ನೈನ ತಮ್ಮ ಮನೆಯಲ್ಲಿ ವಾಣಿ ಜಯರಾಂ ಕೊನೆಯುಸಿರೆಳೆದಿದ್ದಾರೆ. ವಾಣಿಜಯರಾಂ ಅವರು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಒಡಿಯಾ ಹಾಗೂ ಬಂಗಾಳಿ ಭಾಷೆಯಲ್ಲಿ ಸುಮಾರು 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.






