ಲೇಖಕ: admin

ಸುಂಟಿಕೊಪ್ಪ,ಸೆ.25 : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ 59ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮಹಿಳೆಯರು ಮತ್ತು ಯುವತಿಯರಿಗೆ ರಂಗೋಲಿ, ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ ಕಲ್ಯಾಣ ಮಂಟಪದಲ್ಲಿ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಮಹಿಳೆಯರು ಮತ್ತು ಯುವತಿಯರಿಗೆ ರಂಗೋಲಿ, ಮ್ಯೂಸಿಕಲ್‍ಚೇರ್, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು ಯುವತಿಯರು ಉತ್ಸಾಹದಿಂದ ಭಾಗವಹಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ರಶ್ಮಿ ಪ್ರಥಮ, ಕೆ.ಪಿ.ಭವ್ಯ ದ್ವಿತೀಯ, ದಿವ್ಯ ಸುನಿಲ್, ರಂಜನಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ರಮ್ಯ ಪ್ರಥಮ, ಕಾವೇರಿ ದಿನು ದ್ವಿತೀಯ, ತೃತೀಯ ಸ್ಥಾನವನ್ನು ಮೇಘನ ಸುನಿಲ್ ಪಡೆದುಕೊಂಡರು. ಮೂಸಿಕಲ್ ಚೇರ್ ಕಾಲೇಜು ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವರ್ಷ, ದ್ವಿತೀಯ ಸ್ಥಾನವನ್ನು ಸುನೀತ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೀರಾ, ದ್ವಿತೀಯ ಸ್ಥಾನವನ್ನು ಶೀಲಾ ಪಡೆದುಕೊಂಡರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ಕ್ರೀಡೆ ಹಾಗೂ ವಿವಿಧ ಬಣ್ಣಗಳಿಂದ…

Read More

ಮಡಿಕೇರಿ ಸೆ.25 : ಕಕ್ಕಬ್ಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾಲಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1 ರಿಂದ 4ನೇ ತರಗತಿ ವಿಭಾಗದ ಛದ್ಮವೇಶ ಸ್ಪರ್ಧೆಯಲ್ಲಿ ಆಕಾಶ್ ಉತ್ತಪ್ಪ ಪ್ರಥಮ, ಧಾರ್ಮಿಕ ಪಠಣದಲ್ಲಿ ಆರ್.ಸಿರಿ ಪ್ರಥಮ, ಭಕ್ತಿಗೀತೆಯಲ್ಲಿ ನಂದಿನಿ ಪ್ರಥಮ, ಲಘು ಸಂಗೀತದಲ್ಲಿ ಆರ್.ಸಿರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಚಿತ್ರಕಲೆ ಸ್ಪರ್ಧೆಯಲ್ಲಿ ಸಜನ್ ದ್ವಿತೀಯ, ಅಭಿನಯ ಗೀತೆಯಲ್ಲಿ ನಂದಿನಿ ದ್ವಿತೀಯ, ಮಣ್ಣಿನ ಮಾದರಿಯಲ್ಲಿ ದರ್ಶನ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ. 5 ರಿಂದ 7ನೇ ತರಗತಿ ವಿಭಾಗದ ಧಾರ್ಮಿಕ ಪಠಣದಲ್ಲಿ ಕೆ.ಜಿ.ಕವನ ಪ್ರಥಮ, ಛದ್ಮವೇಶದಲ್ಲಿ ಅಮೂಲ್ಯ ದ್ವಿತೀಯ, ಮಿಮಿಕ್ರಿಯಲ್ಲಿ ರಾಜೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಕೇವಲ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು…

Read More

ಮಡಿಕೇರಿ ಸೆ.25 : ಕೊಡಗು ಜಿಲ್ಲಾ ಮಟ್ಟದ ಅಂತರ ಪ್ರಾಥಮಿಕ ಶಾಲಾ 14 ವಯೋಮಿತಿಯ ಬಾಲಕಿಯರ ಫುಟ್‍ಬಾಲ್ ಕ್ರೀಡಾಕೂಟದಲ್ಲಿ ಮಡಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಗೆಲುವು ಸಾಧಿಸಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮೂರ್ನಾಡು ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಬಾಲಕಿಯರು ಲಿಟಲ್ ಫ್ಲವರ್ ಶಾಲೆ ಗೋಣಿಕೊಪ್ಪ, ವಿರಾಜಪೇಟೆ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಗೆಲುವು ಸಾಧಿಸಿತು. ಕೆ.ಎನ್.ವಿಧಿತ ಮತ್ತು ಫಿದಾ ಫಾತಿಮಾ ತಲಾ ಒಂದು ಗೋಲು ಹೊಡೆಯುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ಮುಂದೆ ಮಂಗಳೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಈ ತಂಡ ಆಯ್ಕೆಯಾಗಿದೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಲ್.ಸಂದೇಶ್ ತರಬೇತಿ ನೀಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಡಿ.ಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ. 

Read More

ಮಡಿಕೇರಿ ಸೆ.25 : ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದ್ದಾರೆ. ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯು ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಎಸ್‍ಪಿ, ಶಿಕ್ಷಣದಿಂದ ಮಾನಸಿಕ ಬಲ ಮತ್ತು ಕ್ರೀಡೆಯಿಂದ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಹಾಗೂ ಅಂತರರಾಷ್ಟ್ರೀಯ ಕರಾಟೆಪಟು ಜಮ್ಮಡ ಜಯ ಜೋಯಪ್ಪ, ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ರಕ್ಷಣೆಗಾಗಿ ಕರಾಟೆ ಅತ್ಯವಶ್ಯಕ. ಕರಾಟೆಯನ್ನು ಕರಗತ ಮಾಡಿಕೊಂಡರೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಖ್ಯಾತಿ ಗಳಿಸಲು ಅವಕಾಶವಿದೆ ಎಂದರು. ಶಿಕ್ಷಣ ಇಲಾಖೆ ಕ್ರೀಡಾ ಮುಖ್ಯಸ್ಥ ಡಾ.ಸದಾಶಿವಯ್ಯ ಪಲ್ಲೆದ್ ಮಾತನಾಡಿ, ಇಲಾಖೆ ನಡೆಸುವ ಕ್ರೀಡಾಕೂಟಗಳ ಕುರಿತು ಮಾಹಿತಿ ನೀಡಿದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು…

Read More

ಸಿದ್ದಾಪುರ  ಸೆ.25 :  ಶಾಂತಿ ಸಹ ಬಾಳ್ವೆ ಸಹೋದರತ್ವ ಸಾರುವ ಮಹಮ್ಮದ್ ಪೈಗಂಬರ್ ಅವರ ಸಂದೇಶವನ್ನು ಹಂಚಿಕೊಳ್ಳಲು ಸುನ್ನಿ ಯುವಜನ ಸಂಘಟನೆ ಜಿಲ್ಲೆಯಾದಂತ ಸಂದೇಶ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಕ್ಕಿಂಜೆಯ ಅಬ್ದುಲ್ ರಶೀದ್ ಝೈನಿ ಹೇಳಿದರು. ಸುನ್ನಿ ಯುವಜನ ಸಂಘದ ವತಿಯಿಂದ ಸಿದ್ದಾಪುರದಲ್ಲಿ ನಡೆದ ಈದ್ ಮಿಲಾದ್ ಸಂದೇಶ ಸಾರುವ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನಿ ಯುವಜನ ಸಂಘಟನೆ ಪ್ರವಾದಿಯವರ ಸಂದೇಶ ಸಾರುವ ಮೂಲಕ ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಎಸ್.ಎಸ್.ಎಫ್ ಸಂಘಟನೆಯ ಸಂಚಾಲಕ ಕೆ.ಎಂ.ಬಾವ ಮಾತನಾಡಿ, ಮಿಲಾದ್ ಸಂದೇಶ ಜಾಥ ಜಿಲ್ಲೆಯ ಗೋಣಿಕೊಪ್ಪಲು, ವಿರಾಜಪೇಟೆ, ನಾಪೋಕ್ಲು, ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಸಂಚರಿಸಲಿದ್ದು, ಸಮುದಾಯ  ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ  ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ  ಜಿಲ್ಲಾಧ್ಯಕ್ಷ ಜುಬೈರ್ ಸಾಹದಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ,…

Read More

ಮಡಿಕೇರಿ ಸೆ.25 : ಶಾಂತಿನಿಕೇತನ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 45ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಅಶ್ವಿನಿ ಗಣಪತಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದ ಸಂಘದ ಸದಸ್ಯ ಹಾಗೂ ಮಾಜಿ ಕ್ರೀಡಾಪಟು ಪಿ.ಎ.ರವಿ ಪಂದ್ಯಾವಳಿಗೆ ಚಾಲನೆ ನೀಡಿದರು. ಶಾಂತಿನಿಕೇತನದಲ್ಲಿ ನಡೆದ ಕ್ರೀಡಾಕೂಟದ ಕಾರ್ಯಕ್ರಮವನ್ನು ವ್ಯಾಂಡಮ್ ಎಂಟರ್ ಪ್ರೈಸಸ್ ನ ಮಾಲೀಕ ಕೆ.ಕೆ.ದಾಮೋದರ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಚಿತ್ತಾರ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ, ಶಾಂತಿನಿಕೇತನ ಯುವಕ ಸಂಘ ಅಂದು ಬಾಲ ಗಂಗಾಧರನಾಥ ತಿಲಕರ ಗಣೇಶೋತ್ಸವದ ಉದ್ದೇಶವನ್ನು ಇಂದಿಗೂ ಯಥಾವತ್ತಾಗಿ ಪಾಲಿಸಿಕೊಂಡು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದರು. ಮಡಿಕೇರಿ ದಸರಾದ 11ನೇ ಮಂಟಪ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಮಂಟಪ ಎನ್ನುವ ಹೆಗ್ಗಳಿಕೆ ಇದೆ. ಸಂಘದ ಅಧ್ಯಕ್ಷ ಚೇತನ್ ಹಾಗೂ ತಂಡದ ಶ್ರಮ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಗೌರವ ಸಲಹೆಗಾರ ಮನು…

Read More

ವಿರಾಜಪೇಟೆ ಸೆ.25 :  ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸಿ.ದಯಾನಂದ  ಅಭಿಪ್ರಾಯಪಟ್ಟರು. ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್. ಎಸ್. ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ರಾಷ್ಟ್ರದ ಪ್ರಗತಿಗೆ ಶ್ರಮಸಬೇಕೆಂದರು. ಶಿಸ್ತು ಬದ್ದ ಜೀವನ, ಉತ್ತಮ ನಡತೆ, ಪ್ರಾಮಾಣಿಕತೆ ಇವು ಸ್ವಯಂ ಸೇವಕರ ಪ್ರಮುಖ ಲಕ್ಷಣ ಎಂದು ತಿಳಿಸಿದರು.  ನಮ್ಮ ಕರ್ತವ್ಯವನ್ನು ನಾವು ಮಾಡಿದಾಗ ಮಾತ್ರ ಇತರರಿಗೆ ಮಾದರಿಗಳಾಗುತ್ತೇವೆ ಎಂದು ನುಡಿದರು. ಕಾರ್ಯಕ್ರಮದ ಸಾನಿಧ್ಯ ವನ್ನು ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಕರ್  ಪ್ರತಿಜ್ಞಾ ವಿಧಿಯನ್ನು ಭೋದಿಸಿ, ಎನ್. ಎಸ್. ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಕಾರ್ಯ ಒಂದೇ ಆಗಿದ್ದು ಅದು ಸಮಾಜದ ಸೇವೆಯಾಗಿದೆ. ಈ ಎರಡೂ ಘಟಕಗಳು…

Read More

ಮಡಿಕೇರಿ ಸೆ.25 : ವಿಶಿಷ್ಟ ಸಂಸ್ಕೃತಿಯ ಮೂಲಕ ಕೊಡವರು ತಮ್ಮನ್ನು ಗುರುತಿಸಿಕೊಂಡಿದ್ದು, ಇವರ ಮೂಲಭೂತ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಸರ್ವರು ಪ್ರಯತ್ನ ಮಾಡಬೇಕೆಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಕರೆ ನೀಡಿದ್ದಾರೆ. ನಗರದ ತ್ರಿವೇಣಿ ಆಂಗ್ಲ ಮಾದ್ಯಮ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಆಯೋಜಿಯ ವಿರಾಜಪೇಟೆ ಕೊಡವ ಸಮಾಜದ ನೂರರ ಸಂಭ್ರಮ ‘ನೂರಾಂಡ್ ನಮ್ಮೆ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಾಜಕೀಯ ಎಂಬುದು ಪ್ರಜಾಪ್ರಭುತ್ವದ ಒಂದು ಭಾಗ. ಆದರೆ ಇದೇ ರಾಜಕೀಯದಿಂದಾಗಿ ಭಿನ್ನಮತ, ಸಂಘರ್ಷಗಳು ಉಂಟಾಗಿ ಜನಾಂಗದ ನಡುವೆ ಬಾಂಧವ್ಯ ಕಳೆದುಕೊಳ್ಳುತ್ತೇವೆ. ಆದರೆ, ಸಮಸ್ಯೆಗಳಿಗೆ ರಾಜಕೀಯ ರಹಿತವಾಗಿ ಒಗ್ಗೂಡಿ ಹೋರಾಟ ಮಾಡಿದಲ್ಲಿ ಮಾತ್ರ ಸಂಘಟನೆಯು ಬಲವೃದ್ಧಿಯಾಗುತ್ತದೆ ಎಂದು ಹೇಳಿದರು. ಕೊಡಗು-ಮೈಸೂರು ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಕೊಡವ ಜನಾಂಗವು ತನ್ನ ಮೂಲ ನೆಲೆಯನ್ನು ಬಿಟ್ಟು ಇತರೆಡೆಗಳಲ್ಲಿ ವಾಸ ಮಾಡುವುದರಿಂದ ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸಿಕೊಂಡು ಬರುತ್ತಿದೆ. ಕೊಡವರು ವಿಶಿಷ್ಟವಾದ ವೀರ ಪರಂಪರೆಯನ್ನು ಹೊಂದಿದ್ದು, ಇತರ ಸಮುದಾಯಗಳಿಗಿಂತ ಭಿನ್ನವಾಗಿದ್ದಾರೆ.…

Read More

ವಿರಾಜಪೇಟೆ ಸೆ.25 :   ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು. ವಿರಾಜಪೇಟೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೆಸ್ಕಾಮ್ ಉಪವಿಭಾಗದ ಪಿ.ಎಸ್. ಸುರೇಶ್ ಮಾತನಾಡಿ,  ಗ್ರಾಮೀಣ ಪ್ರದೇಶದಲ್ಲಿ  ಗಣೇಶೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದು ಜನರಲ್ಲಿ ಐಕ್ಯತೆ ಮೂಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮನೋಭಾವನೆ ಮೂಡಿಸುತ್ತದೆ ಎಂದರು. ಚೆಸ್ಕಾಮ್ ಲೈನ್ ಮ್ಯಾನ್ ಗಳನ್ನು ಗುರುತಿಸಿ ದೇವಸ್ಥಾನದ ಆಡಳಿತ ಮಂಡಳಿಯವರು ಸನ್ಮಾನಿಸುತಿರುವುದು ಗಮನಾರ್ಹವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ರಾಮಕೃಷ್ಣ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಸಂತಸ. ಪ್ರತೀ ವರ್ಷವೂ ದೇವಸ್ಥಾನದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು,  ಆ ಮೂಲಕ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಆಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಬೇಟೋಳಿ ವಿಭಾಗದ ಚೆಸ್ಕಾಮ್ ನ ಲೈನ್ ಮ್ಯಾನ್…

Read More

ಮಡಿಕೇರಿ ಸೆ.25 : ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಮವಸ್ತ್ರ ಮತ್ತು ಶೂ ವಿತರಿಸಿದರು. ನಂತರ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ಪುಟಾಣಿಗಳಿಗೆ ಸಿಹಿ ಹಂಚಿ ಮಕ್ಕಳೊಂದಿಗೆ ಮಕ್ಕಳಾದರು. ಈ ಸಂದರ್ಭ ಕೆ.ನಿಡುಗಣೆ ಗ್ರಾ.ಪಂ ಸದಸ್ಯರಾದ ಜಾನ್ಸನ್ ಪಿಂಟೋ, ಅನಿತಾ ಸ್ಥಳೀಯರಾದ ಪ್ರೇಮ್ ಕುಮಾರ್, ಕೃಷ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ, ಅಂಗನಾವಡಿ ಸಹಾಯಕಿ ಜಯಂತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Read More